
ಬಿಗ್ ಬಾಸ್ (Bigg Boss) ಮನೆಯಲ್ಲಿ ಈಗ ಸೀಕ್ರೆಟ್ ರೂಮ್ ಟಾಸ್ಕ್ ನಡೀತಾ ಇದೆ. ಧ್ರುವಂತ್ ಹಾಗೂ ರಕ್ಷಿತಾ (Rakshita) ಬಿಗ್ ಬಾಸ್ ಮನೆಯಿಂದ ಹೊರ ಬಿದ್ದಿದ್ದಾರೆ ಅಂತ ಸ್ಪರ್ಧಿಗಳು ಭಾವಿಸಿದ್ದಾರೆ. ಆದ್ರೆ ಇಬ್ಬರನ್ನೂ ಬಿಗ್ ಬಾಸ್ ಮನೆ ಸೀಕ್ರೆಟ್ ರೂಮ್ ಗೆ ಹಾಕಲಾಗಿದೆ. ಬಿಗ್ ಬಾಸ್ ಮನೆಯಲ್ಲಿ ಜಾಲಿಯಾಗಿ ಆಟ ಆಡ್ತಾ, ಗಿಲ್ಲಿ ಹಾಗೂ ರಘು ಜೊತೆ ಎಹಚ್ಚು ಸಮಯ ಕಳೆಯುತ್ತಿದ್ದ ರಕ್ಷಿತಾರನ್ನು ಬಿಗ್ ಬಾಸ್ ಸ್ಪರ್ಧಿಗಳು ಮಿಸ್ ಮಾಡಿಕೊಳ್ತಿದ್ದಾರೆ. ರಕ್ಷಿತಾ ಹೋಗುವಾಗ ಎಲ್ಲರ ಕಣ್ಣಲ್ಲಿ ನೀರು ಬಂತು ಅಂತ ರಜತ್ ಕೂಡ ಹೇಳಿದ್ದಾರೆ. ಸದ್ಯ ಸೀಕ್ರೆಟ್ ರೂಮಿನಲ್ಲಿರುವ ರಕ್ಷಿತಾಗೆ ಸಣ್ಣ ರೂಮಿನಲ್ಲಿ ಕಾಲ ಕಳೆಯೋದಕ್ಕಿಂತ ಧ್ರುವಂತ್ ಜೊತೆ ಸಮಯ ಕಳೆಯೋದು ಕಷ್ಟವಾಗಿದೆ. ಈ ಮಧ್ಯೆ ರಕ್ಷಿತಾ ಬಿಗ್ ಬಾಸ್ ಮನೆಯಿಂದ ಹೊರಬಿದ್ದಿದ್ದಾರೆ ಅಂದ್ಕೊಂಡಿದ್ದ ಅನೇಕ ಅಭಿಮಾನಿಗಳು ಕಣ್ಣೀರಿಟ್ಟಿದ್ದಾರೆ.
ನಿನ್ನೆ ನಡೆದ ಎಲೆಮಿನೇಷನ್ ನಲ್ಲಿ ರಕ್ಷಿತಾ ಹಾಗೂ ಧ್ರುವಂತ್ ಮನೆಯಿಂದ ಹೊರಗೆ ಹೋಗಿದ್ದನ್ನು ತೋರಿಸಲಾಗಿತ್ತು. ಇದು ವೀಕ್ಷಕರಿಗೆ ಬಿಗ್ ಶಾಕ್ ನೀಡಿತ್ತು. ರಕ್ಷಿತಾ ಅವರನ್ನು ಕರ್ನಾಟಕದ ಮನೆ ಮಗಳು, ಪುಟ್ಟಿ ಅಂತಾನೇ ಕರೆಯಲಾಗುತ್ತೆ. ಗಿಲ್ಲಿ, ರಕ್ಷಿತಾರನ್ನು ವಂಶದ ಕುಡಿ ಅಂತ ಕರೆದಿದ್ದಾರೆ. ಮನೆ ಮಂದಿಗೆಲ್ಲ ರಕ್ಷಿತಾ ಇಷ್ಟವಾದಂತೆ, ಬಿಗ್ ಬಾಸ್ ಮನೆ ಹೊರಗೂ ರಕ್ಷಿತಾ ಸ್ಥಾನ ಪಡೆದಿದ್ದಾರೆ. ರಕ್ಷಿತಾ ಕಟ್ಔಟ್ ಕಾಣಸಿಗ್ತಿದೆ. ರಕ್ಷಿತಾ ಟಾಪ್ 5 ರಲ್ಲಿ ಬರಬೇಕು, ಬಿಗ್ ಬಾಸ್ ವಿನ್ನರ್ ಆಗ್ಬೇಕು ಎನ್ನುವವರು ಸಾಕಷ್ಟು ಮಂದಿ. ರಕ್ಷಿತಾ ಮನೆಯಿಂದ ಹೊರಗೆ ಹೋದಾಗ ಅಶ್ವಿನಿ ಗೌಡ, ಗಿಲ್ಲಿ ಸೇರಿದಂತೆ ಎಲ್ಲರೂ ಬೇಸರದಲ್ಲಿರೋದನ್ನು ನೀವು ಕಾಣ್ಬಹುದು. ರಕ್ಷಿತಾ ಅಂದ್ರೆ ಅನೇಕ ಅಮ್ಮಂದಿರಿಗೆ ಇಷ್ಟ. ರಕ್ಷಿತಾಗಾಗಿಯೇ ಬಿಗ್ ಬಾಸ್ ನೋಡುವವರಿದ್ದಾರೆ. ಈಗ ಅಂಥಹ ಅಮ್ಮನ ವಿಡಿಯೋ ಒಂದು ವೈರಲ್ ಆಗಿದೆ.
BBK 12: ಧ್ರುವಂತ್ ಹೆದರಬೇಕು- ಸೀಕ್ರೆಟ್ ರೂಮಲ್ಲಿ ಸಣ್ಣ ಪ್ರಶ್ನೆಗೆ ರಣಚಂಡಿಯಾದ ರಕ್ಷಿತಾ ಶೆಟ್ಟಿ
ಸೋಶಿಯಲ್ ಮೀಡಿಯಾದ koushxx ಹೆಸರಿನ ಇನ್ಸ್ಟಾಖಾತೆಯಲ್ಲಿ ವಿಡಿಯೋ ಒಂದನ್ನು ಪೋಸ್ಟ್ ಮಾಡಲಾಗಿದೆ. ಇಲ್ಲಿ ಮಗ ಕೌಶಿಕ್ ಅಮ್ಮನಿಗೆ ಪ್ರಾಂಕ್ ಮಾಡಿದ್ದಾರೆ. ಕೌಶಿಕ್ ಅಮ್ಮ ರಕ್ಷಿತಾ ಬಿಗ್ ಫ್ಯಾನ್. ಅವರು ಯೂಟ್ಯೂಬ್ ನಲ್ಲಿ ರಕ್ಷಿತಾ ವಿಡಿಯೋ ನೋಡ್ತಿರೋದನ್ನು ನೀವು ನೋಡ್ಬಹುದು. ಅಮ್ಮ ರಕ್ಷಿತಾ ಮನೆಯಿಂದ ಹೊರಗೆ ಬಂದಿದ್ದಾರೆ ಅಂತ ಕೌಶಿಕ್ ಹೇಳ್ತಿದ್ದಂತೆ ಅಮ್ಮ ಭಾವುಕರಾಗಿದ್ದಾರೆ. ರಕ್ಷಿತ್ ಹಾಗೂ ರಘು ಜೋಡಿ ನನಗೆ ಇಷ್ಟವಾಗಿತ್ತು ಎಂದ ಅಮ್ಮನ ಕಣ್ಣಲ್ಲಿ ನೀರು ಬರೋಕೆ ಶುರುವಾಗಿದೆ. ನೀನು ವೋಟ್ ಹಾಕ್ದೆ ರಕ್ಷಿತಾ ಹೊರಗೆ ಬಂದಿದ್ದು ಅಂತ ಮಗನಿಗೆ ಬೈದಿದ್ದಲ್ಲದೆ ಆಪ್ತರಿಗೆ ಕರೆ ಮಾಡಿ ಮಾಹಿತಿ ಪಡೆದಿದ್ದಾರೆ. ಆಗ ರಕ್ಷಿತಾ ಔಟ್ ಆಗಿಲ್ಲ, ಸೀಕ್ರೆಟ್ ರೂಮ್ ಸೇರಿದ್ದಾರೆ ಎಂಬುದು ಗೊತ್ತಾಗಿದೆ. ಇದನ್ನು ಕೇಳಿ ಅಮ್ಮನ ಮನಸ್ಸು ಶಾಂತವಾಗಿದೆ. ಇಷ್ಟೇ ಅಲ್ಲ ಸೋಶಿಯಲ್ ಮೀಡಿಯಾದಲ್ಲಿ ಮಗುವಿನ ವಿಡಿಯೋ ಕೂಡ ವೈರಲ್ ಆಗಿದೆ. ರಕ್ಷಿತಾ ಮನೆಯಿಂದ ಹೊರಗೆ ಹೋಗ್ತಿದ್ದಾರೆ ಅನ್ನೋದನ್ನು ಕೇಳಿ ಮಗು ಅಳುತ್ತಿದೆ. ಅವರ ಅಮ್ಮ, ಇಲ್ಲ ಅವರು ಸೀಕ್ರೆಟ್ ರೂಮಿಗೆ ಹೋಗ್ತಿದ್ದಾರೆ ಅಂತ ಸಾಮಾಧಾನ ಮಾಡೋದನ್ನು ನೀವು ನೋಡ್ಬಹುದು.
Bigg Boss Kannada: ಕರ್ಮ ರಿಟರ್ನ್ಸ್.. ಬಂದು ಹೊಡೆಯತ್ತೆ: ದೊಡ್ಮನೆಯ
ಸಿನಿಮಾ, ಸೀರಿಯಲ್, ಮೀಡಿಯಾ ಸೇರಿದಂತೆ ಯಾವುದೇ ಜನಪ್ರಿಯ ವಾಹಿನಿಯಲ್ಲಿ ಗುರುತಿಸಿಕೊಂಡು ಬಿಗ್ ಬಾಸ್ ಮನೆಗೆ ಬಂದ ಸ್ಪರ್ಧಿಗಳಿಗೆ ಸೋಶಿಯಲ್ ಮೀಡಿಯಾ ಮೂಲಕ ಪ್ರಸಿದ್ಧಿಪಡೆದಿರುವ ರಕ್ಷಿತಾ ಟಕ್ಕರ್ ನೀಡ್ತಿರೋದು ವೀಕ್ಷಕರಿಗೆ ಖುಷಿ ನೀಡಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.