ಮಕ್ಕಳಿಗೂ ಇಷ್ಟ, ದೊಡ್ಡವರಿಗೂ ರುಚಿ: ಫಟಾಫಟ್​ ಮೆಂತ್ಯ ಸಣ್ಣ ಕಡುಬು ರೆಸಿಪಿ ತಿಳಿಸಿಕೊಟ್ಟ ಅದಿತಿ ಪ್ರಭುದೇವ

By Suvarna News  |  First Published Feb 7, 2024, 11:22 AM IST

ನಟಿ ಅದಿತಿ ಪ್ರಭುದೇವ ಅವರ ಅಮ್ಮ ಮತ್ತು ಅತ್ತೆ ಸೇರಿ ಫಟಾಫಟ್​ ಮಾಡುವ ಮೆಂತ್ಯ ಸಣ್ಣ ಕಡುಬು  ರೆಸಿಪಿ ಹೇಳಿಕೊಟ್ಟಿದ್ದಾರೆ. ಅದರ ವಿಡಿಯೋ ಇಲ್ಲಿದೆ...
 


 ಇತ್ತೀಚೆಗಷ್ಟೇ ಅಮ್ಮ ಆಗ್ತಿರೋ ಗುಡ್​ನ್ಯೂಸ್​ ಕೊಟ್ಟಿದ್ದರು ನಟಿ ಅದಿತಿ ಪ್ರಭುದೇವ.  ‘ಧೈರ್ಯಂ’, ‘ಬಜಾರ್’, ‘ಸಿಂಗ್’, ‘ಬ್ರಹ್ಮಚಾರಿ’, ‘ಒಂಬತ್ತನೆ ದಿಕ್ಕು’, ‘ತೋತಾಪುರಿ’, ‘ತ್ರಿಬಲ್ ರೈಡಿಂಗ್’ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿರುವ  ನಟಿ ಅದಿತಿ ಅವರು ಸದ್ಯ ಅಲೆಕ್ಸಾ ಚಿತ್ರದ ಖುಷಿಯಲ್ಲಿದ್ದಾರೆ.  ಅಂದಹಾಗೆ, ಸ್ಯಾಂಡಲ್​ವುಡ್​ ನಟಿ  ಅದಿತಿ ಪ್ರಭುದೇವ  , ಈಗ ಕೇವಲ ಚಿತ್ರನಟಿ ಮಾತ್ರವಲ್ಲದೇ ಅಪ್ಪಟ ಗೃಹಿಣಿ ಕೂಡ. ಕಿರುತೆರೆ ನಟಿಯಾಗಿ ಬಣ್ಣದ ಬದುಕಿಗೆ ಪದಾರ್ಪಣೆ ಮಾಡಿದ ನಟಿ,  ಸ್ಯಾಂಡಲ್‌ವುಡ್​ನಲ್ಲಿ ಬೇಡಿಕೆ ಇರುವಾಗಲೇ ಹಸೆಮಣೆ ಏರಿದರು. ಅದಿತಿ, ಕೂರ್ಗ್ ಮೂಲದ ಉದ್ಯಮಿ ಯಶಸ್ ಜೊತೆ ದಾಂಪತ್ಯ ಬದುಕನ್ನು ಎಂಜಾಯ್ ಮಾಡ್ತಿದ್ದಾರೆ. ಇದೀಗ ಅವರು ಅಮ್ಮ ಆಗುತ್ತಿದ್ದು, ಈಚೆಗಷ್ಟೇ ತಮ್ಮ ಕೊನೆಯ ಸಿಂಗಲ್​  ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು.

ಇದೀಗ ಅದಿತಿ ಅವರ ಅಮ್ಮ ಮತ್ತು ಅತ್ತೆ. ಮನೆಗೆ ಬಂದಿದ್ದರು. ಈ ಸಂದರ್ಭದಲ್ಲಿ ಈಚೆಗಷ್ಟೇ ಗರ್ಭಿಣಿ ಮಗಳಿಗೆ ಸೂಪರ್​ ಟೇಸ್ಟಿಯಾಗಿರುವ ಉತ್ತರ ಕರ್ನಾಟಕ ಶೈಲಿಯ ಮಾದಲಿ ಮಾಡಿಕೊಟ್ಟಿದ್ದರು ಅಮ್ಮ. ಇದೀಗ ಅಮ್ಮ ಮತ್ತು ಅತ್ತೆ ಸೇರಿ ಫಟಾಫಟ್​ ಮಾಡುವ ಮೆಂತ್ಯ ಸಣ್ಣ ಕಡುಬು ರೆಸಿಪಿ ಹೇಳಿಕೊಟ್ಟಿದ್ದಾರೆ. 

Tap to resize

Latest Videos

undefined

ಗರ್ಭಿಣಿ ಅದಿತಿ ಪ್ರಭುದೇವ ಅಮ್ಮ ಕಲಿಸಿಕೊಟ್ರು ಮುತ್ತಜ್ಜಿಯ ರೆಸಿಪಿ ಸೂಪರ್​, ಟೇಸ್ಟಿ 'ಮಾದಲಿ'!

ಒಂದು ಬೌಲ್​ ನೀರಿಗೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕುದಿಯಲು ಇಡಬೇಕು. ಇನ್ನೊಂದು ಕಡೆ 2 ಟೀ ಸ್ಪೂನ್​ ಜೀರಿಗೆ ನಾಲ್ಕು ಟೀ ಸ್ಪೂನ್​ ಮೆಂತ್ಯನ ಸ್ವಲ್ಪ ಫ್ರೈ ಮಾಡಿಕೊಳ್ಳಬೇಕು. ಅದೇ ಬೌಲ್​ನ ಅರ್ಧ ಅಕ್ಕಿ ಹಿಟ್ಟು ಹಾಕಿ ಅದಕ್ಕೆ ನೀರು ಹಾಕಿ ಕಲಸಿಕೊಳ್ಳಬೇಕು. ಅಕ್ಕಿಹಿಟ್ಟಿನ ಮಿಶ್ರಣವನ್ನು ಕುದಿಯುತ್ತಿರುವ ನೀರಿಗೆ ಹಾಕಬೇಕು. ಹಾಕಿಕೊಳ್ಳುವಾಗ ಗಂಟಾಗದಂತೆ ತಿರುಗಿಸಿಕೊಳ್ತಾ ಇರಬೇಕು. ಜೀರಿಗೆ- ಮೆಂತ್ಯ ಪುಡಿ ಮಾಡಿಕೊಳ್ಳಬೇಕು. ಈ ಪೌಡರ್​ ಹಾಕಿಕೊಳ್ಳಬೇಕು. ಅರ್ಧ ಟೀ ಸ್ಪೂನ್​ ಅರಿಶಿಣದ ಹಿಟ್ಟು ಹಾಕಿಕೊಳ್ಳಬೇಕು. ಸ್ವಲ್ಪ ಅಕ್ಕಿ ಹಿಟ್ಟು ಹಾಕಿಕೊಳ್ಳಬೇಕು. ರೊಟ್ಟಿಯ ಹದಕ್ಕೆ ಬರಬೇಕು. ಒಂದು ಸ್ಪೂನ್​ ತುಪ್ಪು ಹಾಕಿಕೊಂಡರೆ ಕೈಗೆ ಅಂಟಲ್ಲ. ಒಂದು ಪ್ಲೇಟ್​ಗೆ ಹಾಕಿಕೊಂಡು ಹದಕ್ಕೆ ಕಲಸಿಕೊಳ್ಳಬೇಕು. ಬೇಕಿದ್ದರೆ ಅಕ್ಕಿಹಿಟ್ಟು ಹಾಕಿಕೊಳ್ಳಬೇಕು. ಏನು ಶೇಪ್​ ಬೇಕು ಅದನ್ನು ಹಾಕಿಕೊಳ್ಳಬೇಕು. ಕಡಬಿನ ಪಾತ್ರೆಗೆ ನೀರು ಹಾಕಿ 10-15 ನಿಮಿಷ ಬೇಯಿಸಿದರೆ ಮೆಂತ್ಯ ಸಣ್ಣ ಕಡುಬು ರೆಡಿ. 

ಅಂದಹಾಗೆ ಅದಿತಿ ಅವರು ದಾವಣಗೆರೆ ಮೂಲದವರು. ಅಲ್ಲಿ ಜನಿಸಿದ ಇವರು ಇಂಜಿನಿಯರಿಂಗ್ ಪದವಿ ಮುಗಿಸಿ ಮ್ಯಾನೇಜ್‍ಮೆಂಟ್ ನಲ್ಲಿ ಮಾಸ್ಟರ್ಸ್‌ ಮಾಡಿದ್ದಾರೆ.  ನಿರೂಪಕಿಯಾಗಿ ವೃತ್ತಿಜೀವನ ಪ್ರಾರಂಭಿಸಿದ ನಟಿ,  ‘ಗುಂಡ್ಯಾನ್ ಹೆಂಡ್ತಿ’ ಧಾರಾವಾಹಿಯ ಮೂಲಕ ಕಿರುತೆರೆಗೆ ಪ್ರವೇಶಿಸಿದರು.  2017 ರಲ್ಲಿ ನಟ ಅಜಯ್ ರಾವ್ ಜೊತೆ ‘ಧೈರ್ಯಂ’ ಚಿತ್ರದಲ್ಲಿ ನಟಿಸುವ ಮೂಲಕ ಬಿಗ್‌ ಸ್ಕ್ರೀನ್‌ಗೆ ಪದಾರ್ಪಣೆ ಮಾಡಿದರು.  ಆದಿತಿ ಪ್ರಭುದೇವ 2022ರ ನವೆಂಬರ್ 28ರಂದು ಉದ್ಯಮಿ ಯಶಸ್ (ಯಶಸ್ವಿ) ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. 

ಕಂಗನಾ ರಣಾವತ್​ ಬ್ರೇಕಪ್​ಗೆ ಕಾರಣವಾಯ್ತಾ ಕಪ್ಪೆ? ಮಾಜಿ ಲವರ್​ ಬಗ್ಗೆ ನಟಿ ಹೇಳಿದ್ದೇನು?
 

click me!