
ಬ್ಯಾಂಕ್ ಸಾಲ ಕಟ್ಟಲಿಲ್ಲ ಎನ್ನುವ ಕಾರಣಕ್ಕೆ, ಸೀತಾಳ ಮನೆ ಹರಾಜಾಗಿದೆ. ಆದರೆ ರಾಮನ ದಯೆಯಿಂದ ಅದೇ ಮನೆಯಲ್ಲಿ ಬಾಡಿಗೆಗೆ ಉಳಿದುಕೊಳ್ಳುವ ಅವಕಾಶ ಸೀತಾಳಿಗೆ ಸಿಕ್ಕಿದೆ. ಅದಕ್ಕಾಗಿ ಆಕೆ ಭಗವಂತ ಶ್ರೀರಾಮನಿಗೆ ಕೃತಜ್ಞತೆ ಸಲ್ಲಿಸುತ್ತಿದ್ದಾಳೆ. ಅಸಲಿಗೆ ಇದಕ್ಕೂ ಕಾರಣ ಈ ರಾಮನೇ ಎನ್ನುವುದು ಆಕೆಗೆ ತಿಳಿದಿಲ್ಲ. ಆದರೂ ತನ್ನ ಮನೆಯಲ್ಲಿಯೇ ಉಳಿದುಕೊಳ್ಳುವ ಅವಕಾಶ ಸಿಕ್ಕಿದ್ದಕ್ಕೆ ಎಲ್ಲರೂ ತುಂಬಾ ಖುಷಿಯಲ್ಲಿ ಇದ್ದಾರೆ. ಸೀತಾಳ ಬ್ಯಾಂಕ್ ಸಾಲವನ್ನು ತೀರಿಸುವುದು ರಾಮ್‌ಗೆ ಚಿಟಿಕೆ ಹೊಡೆಯುವಷ್ಟು ಸುಲಭ. ಆದರೆ ಸ್ವಾಭಿಮಾನಿ ಸೀತಾ ಇದನ್ನೆಲ್ಲಾ ಸಹಿಸುವವಳಲ್ಲ. ಅದಕ್ಕೆ ತನ್ನದೇ ಆದ ರೀತಿಯಲ್ಲಿ ನೆರವು ನೀಡಿದ್ದಾನೆ ರಾಮ್.
ಅದೇ ಇನ್ನೊಂದೆಡೆ, ಮನಸ್ಸಿನಿಂದ ಏನನ್ನೂ ಯೋಚನೆ ಮಾಡಬೇಡಿ, ಹೃದಯದಿಂದ ಯೋಚಿಸಿ, ಇವರು ನಿಮ್ಮ ಬಾಸ್ ಎನ್ನೋದನ್ನು ಮನಸ್ಸಿನಿಂದ ತೆಗೆದುಹಾಕಿ ಎಂದು ಸೀತಾಳಿಗೆ ಹಾಗೂ ಹೃದಯದಲ್ಲಿ ಏನಿದೆ ಎಲ್ಲವನ್ನೂ ಹೇಳಿಬಿಡಿ, ಮನಸ್ಸಿಯಲ್ಲಿಯೇ ಇಟ್ಟುಕೊಳ್ಳಬೇಡಿ ಎಂದು ರಾಮ್‌ಗೆ ಕ್ರೇಜಿಸ್ಟಾರ್ ರವಿಚಂದ್ರನ್ ಕೊಟ್ಟ ಟಿಪ್ಸ್ನಿಂದ ಸದ್ಯ ಸೀತಾ ಮತ್ತು ರಾಮ ಒಂದಾಗಿದ್ದಾರೆ. ಸೀತಾಳನ್ನು ಸಿಕ್ಕಾಪಟ್ಟೆ ಲವ್ ಮಾಡುತ್ತಿರೋ ರಾಮ್, ಅದನ್ನು ಆಕೆಗೆ ಹೇಳಲೂ ಆಗದೇ, ಬಿಡಲೂ ಆಗದೇ ಒದ್ದಾಡುವುದರಿಂದ ಹೊರಕ್ಕೆ ಬಂದಿದ್ದಾನೆ. ತನ್ನ ಪ್ರೀತಿಯನ್ನು ಸೀತಾಳಿಗೆ ಹೇಳಿಕೊಂಡಿದ್ದಾನೆ. ರಾಮ್ ಈ ಪರಿ ತನ್ನನ್ನು ಪ್ರೀತಿಸುತ್ತಿರುವ ವಿಷಯ ಸೀತಾಳಿಗೂ ತಿಳಿಯತೊಡಗಿದೆ.
ಇನ್ನೇನು ಇಬ್ಬರೂ ಒಂದಾಗುತ್ತಿದ್ದಾರೆ ಎನ್ನುವಾಗಲೇ, ಸಿಹಿಯನ್ನು ರಾಮ್ ಎತ್ತಿಕೊಂಡ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ಬಂದು ರಾಮ್ನ ಕೈಯನ್ನು ಚಾಕುವಿನಿಂದ ಇರಿದು ಹೋದ. ನಂತರ ಬೈಕ್ ಮೇಲೆ ಹತ್ತಿಕೊಂಡು ಹೋದ. ಚಾಕುವಿನ ಇರಿತಕ್ಕೆ ರಾಮ್ ವಿಲವಿಲ ಒದ್ದಾಡುತ್ತಿದ್ದರೂ, ಹೆಗಲ ಮೇಲಿದ್ದ ಸಿಹಿಯನ್ನು ಬೀಳಲು ಕೊಡಲಿಲ್ಲ. ಇದಕ್ಕೂ ಮುನ್ನ, ಸೀತಾ ಮತ್ತು ಸಿಹಿ ಹೋಗುತ್ತಿರುವ ಹೊತ್ತಿಗೆ ಓರ್ವ ಆಗಂತುಕ ಬೈಕ್ನಲ್ಲಿ ಬಂದು ಗಾಬರಿ ಹುಟ್ಟಿಸಿದ್ದ. ಇದಾದ ಬಳಿಕ ಸೀತಾ ತನ್ನ ವೇಲ್ ತುಂಡನ್ನು ಕತ್ತರಿಸಿ ರಾಮ್ ಕೈಗೆ ಕಟ್ಟಿದ್ದಾಳೆ. ಆದರೆ ಅಷ್ಟೊತ್ತಿಗಾಗಲೇ ಸಿಹಿಯ ಅಪಹರಣ ಮಾಡಿಕೊಂಡು ಬೈಕ್ನಲ್ಲಿ ಹೋಗಲಾಗಿದೆ.
ಅಸಲಿಗೆ ಯಾರೀತ? ಸೀತಾಳಿಗೂ ಈತನಿಗೂ ಏನು ಸಂಬಂಧ? ಅಷ್ಟಕ್ಕೂ ಸೀತಾಳ ಹಿನ್ನೆಲೆ ಏನು ಎನ್ನುವುದು ಇನ್ನೂ ರಹಸ್ಯವಾಗಿಯೇ ಉಳಿದಿದೆ. ಆ ಇತಿಹಾಸಕ್ಕೂ ಈ ಆಗಂತುಕನಿಗೂ ಏನಾದರೂ ಸಂಬಂಧದ ಇದೆಯಾ? ಅಥ್ವಾ ರಾಮ್ ಚಿಕ್ಕಮ್ಮನ ಕುತಂತ್ರವೋ ಕಾದು ನೋಡಬೇಕಿದೆ. ಹೆಚ್ಚಿನವರು ಈತ ಸೀತಾಳ ಮಾಜಿ ಗಂಡ ಇದ್ದಿರಬಹುದು ಎಂದು ಊಹಿಸಿದರೆ, ಇನ್ನುಕೆಲವರು ರಾಮ್ನ ಚಿಕ್ಕಮ್ಮನ ಕುತಂತ್ರ ಎನ್ನುತ್ತಿದ್ದಾರೆ. ರುದ್ರಪ್ರತಾಪನ ಕುತಂತ್ರ ಇದು ಇದ್ದಿರಬಹುದು ಎನ್ನುವುದು ಇನ್ನು ಕೆಲವು ಅಭಿಮಾನಿಗಳ ವಾದ. ಹಾಗಿದ್ದರೆ ನಿಜಕ್ಕೂ ಯಾರೀತ. ಬೈಕ್ನಲ್ಲಿ ಬಂದು ಆಗಾಗ್ಗೆ ಭಯ ಹುಟ್ಟಿಸುವ ಈತ ಸೀತಾಳ ಮಾಜಿ ಪತಿಯೇ ಇದ್ದಿರಬಹುದೆ ಎನ್ನುವ ಸಂದೇಹ ಹೆಚ್ಚುತ್ತಿದೆ.
ಚಿತ್ರ ಬಿಡುಗಡೆ ದಿನ ನಾಯಕಿಯ ಬೆಡ್ರೂಂ ದೃಶ್ಯಗಳೇ ಮಾಯ! ನಿರ್ಮಾಪಕರಿಗೆ ಶಾಕ್- ದೂರು ದಾಖಲು
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.