ಸೀತಾ ರಾಮ ಧಾರಾವಾಹಿಯಲ್ಲಿ ಪ್ರಿಯಾ ಪಾತ್ರದಲ್ಲಿ ನಟಿಸುತ್ತಿರುವ ಮೇಘನಾ ಶಂಕರಪ್ಪ ಸದ್ಯದಲ್ಲೇ ಮದುವೆಯಾಗಲಿದ್ದು, ಇದೀಗ ರೋಮ್ಯಾಂಟಿಕ್ ಪ್ರಿ ವೆಡ್ಡಿಂಗ್ ವಿಡಿಯೋ ಹಂಚಿಕೊಂಡಿದ್ದಾರೆ.
ಕನ್ನಡ ಕಿರುತೆರೆಯಲ್ಲಿ ಹಲವು ವರ್ಷಗಳಿಂದ ಮಿಂಚುತ್ತಿರುವ ನಟಿ ಮೇಘನಾ ಶಂಕರಪ್ಪ (Meghana Shankarappa) . ಸದ್ಯ ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಸೀತಾ ರಾಮ ಧಾರಾವಾಹಿಯಲ್ಲಿ ಸೀತಾಳ ಬೆಸ್ಟ್ ಫ್ರೆಂಡ್ ಹಾಗೂ ಅಶೋಕ್ ಪತ್ನಿ ಪ್ರಿಯಾ ಪಾತ್ರದಲ್ಲಿ ಮುದ್ದು ಮುದ್ದಾಗಿ ನಟಿಸುತ್ತಿದ್ದಾರೆ ಮೇಘನಾ. ಇತ್ತೀಚೆಗಷ್ಟೇ ನಟಿ ತಾವು ಶೀಘ್ರದಲ್ಲೇ ಮದುವೆಯಾಗುತ್ತಿರುವುದಾಗಿ ತಿಳಿಸಿದ್ದು, ಮದುವೆಯಾಗುವ ಹುಡುಗನ ಜೊತೆಗಿನ ವಿಡಿಯೋ ರಿವೀಲ್ ಮಾಡಿದ್ದರು ಕೂಡ. ಇದೀಗ ವಿಶೇಷ ವಿಡೀಯೋ ಒಂದನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ (Social Media) ಹಂಚಿಕೊಂಡಿದ್ದಾರೆ.
ಸೀತಾರಾಮ ಪ್ರಿಯಾ ಮದ್ವೆ ಖುಷಿಯಲ್ಲಿ ಹೀಗೆಲ್ಲಾ ನಡೆಯಿತು ನೋಡಿ ಬ್ಯಾಚುಲರ್ ಪಾರ್ಟಿ! ವಿಡಿಯೋ ವೈರಲ್
ಮೇಘನಾ ಕೆಲ ದಿನಗಳ ಹಿಂದೆ ಸುಂದರವಾದ ವಿಡಿಯೋ ಮೂಲಕ ತಮ್ಮ ಬಾಳಸಂಗಾತಿಯಾಗುವ ಹುಡುಗನನ್ನು ಪರಿಚಯಿಸಿದ್ರು. ನಟಿ ಶೇರ್ ಮಾಡಿಕೊಂಡ ವಿಡಿಯೋವನ್ನು ಅಭಿಮಾನಿಗಳು ಮೆಚ್ಚಿ ಶುಭ ಹಾರೈಸಿದ್ದರು. ಮೇಘನಾ ಮದುವೆಯಾಗುತ್ತಿರುವ ಹುಡುಗನ ಹೆಸರು ಜಯಂತ್ ಕುಮಾರಸ್ವಾಮಿ (Jayanth Kumaraswamy). ಇವರು ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದು, ಬೆಂಗಳೂರಿನಲ್ಲಿ ನೆಲೆಸಿರುವ ಇವರು, ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಮೇಘನಾ ಮತ್ತು ಜಯಂತ್ ಸ್ನೇಹಿತರಾಗಿದ್ದು, ಈ ಸ್ನೇಹ ಪ್ರೀತಿಗೆ ತಿರುಗಿ ಇಬ್ಬರು ಮದುವೆಯಾಗಲು ನಿರ್ಧರಿಸಿದ್ದರು. ಇತ್ತೀಚೆಗೆ ಈ ಜೋಡಿಯ ಮದುವೆ ಕಾಗದ ಬರೆಸುವ ಶಾಸ್ತ್ರ ಕೂಡ ಸಿಂಪಲ್ ಆಗಿ ನಡೆದಿದ್ದು, ನಟಿ ಆ ವಿಡಿಯೋವನ್ನು ತಮ್ಮ ಯೂಟ್ಯೂಬ್ ಚಾನೆಲ್ (Youtube Channel) ನಲ್ಲಿ ಹಂಚಿಕೊಂಡಿದ್ದರು.
ಮದುವೆಯ ಮೊದಲ ಹೆಜ್ಜೆ 'ಲಗ್ನ ಕಳಿಸುವ ಕಾರ್ಯ'ದ ವಿಡಿಯೋ ಶೇರ್ ಮಾಡಿದ ಸೀತಾರಾಮ ಪ್ರಿಯಾ
ಫ್ರೆಬ್ರವರಿ ತಿಂಗಳಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡಲಿರುವ ಮೇಘನಾ, ಇದೀಗ ಜಯಂತ್ ಜೊತೆಗೆ ತುಂಬಾನೆ ಮುದ್ದಾದ, ರೋಮ್ಯಾಂಟಿಕ್ ಆಗಿರುವ ಪ್ರೀವೆಡ್ಡಿಂಗ್ ವಿಡಿಯೋ (pre wedding video) ಶೂಟ್ ಮಾಡಿದ್ದು ಅದನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಜೊತೆಗೆ ಶುಭಾರಂಭ ಎಂದು ಕ್ಯಾಪ್ಶನ್ ಕೂಡ ಕೊಟ್ಟಿದ್ದಾರೆ. ‘ನಾ ನಾನಾಗುವೆ ನಿನ್ನ ಜೊತೆ, ನೀ ನೀನಾಗಲು ಚೆಂದಾ ಕಥೆ’ ಎನ್ನುವ ರೊಮ್ಯಾಂಟಿಕ್ ಹಾಡಿಗೆ ಇಬ್ಬರು ಹೆಜ್ಜೆಹಾಕುತ್ತಾ ತುಂಬಾನೆ ಮುದ್ದಾಗಿ ವಿಡಿಯೋ ಮೂಡಿ ಬಂದಿದೆ. ಈ ವಿಡಿಯೋದಲ್ಲಿ ಮೇಘನಾ ಆಫ್ ವೈಟ್ ಲೆಹೆಂಗಾ ಧರಿಸಿದ್ರೆ, ಜಯಂತ್ ಕೂಡ ಆಫ್ ವೈಟ್ ಕುರ್ತಾದಲ್ಲಿ ಕಾಣಿಸಿಕೊಂಡಿದ್ದಾರೆ. ವಿಡಿಯೋದಲ್ಲಿ ದೇಗುವಲದ ಬ್ಯಾಕ್ ಗ್ರೌಂಡ್ ಸಿನಿಮಾದಂತೆ ತುಂಬಾನೆ ಸುಂದರವಾಗಿ ಮೂಡಿ ಬಂದಿದೆ ಈ ವಿಡಿಯೋ. ಅಭಿಮಾನಿಗಳು ಸಹ ವಿಡಿಯೋ ನೋಡಿ ಭಾರಿ ಮೆಚ್ಚುಗೆ ಸೂಚಿಸಿದ್ದಾರೆ. ಜೋಡಿ ಯಾವಾಗಲೂ ಹೀಗೆ ನಗು ನಗುತ್ತಾ, ಜೊತೆಯಾಗಿರಲಿ ಎಂದು ಹಾರೈಸಿದ್ದಾರೆ.
ಕೊನೆಗೂ ಭಾವಿ ಪತಿಯ ಪರಿಚಯಿಸಿದ ಸೀತಾರಾಮ ಪ್ರಿಯಾ: ವಿಶೇಷ ವಿಡಿಯೋ ಶೇರ್ ಮಾಡಿದ ನಟಿ
ಮೇಘನಾ ಹಲವು ಸಿನಿಮಾ ಹಾಗೂ ಸೀರಿಯಲ್ ಗಳಲ್ಲೂ ನಟಿಸಿದ್ದಾರೆ. ನಮ್ಮನೆ ಯುವರಾಣಿ (Nammane Yuvarani), ಕಿನ್ನರಿ, ಕೃಷ್ಣ ತುಳಸಿ, ರತ್ನಗಿರಿ ರಹಸ್ಯ, ದೇವಯಾನಿ, ಸಿಂಧೂರ ಹೀಗೆ ಹಲವಾರು ಧಾರಾವಾಹಿಗಳಲ್ಲಿ ಮೇಘನಾ ನಟಿಸಿದ್ದು, ಇತ್ತೀಚೆಗೆ ಡಿಕೆಡಿಯಲ್ಲೂ ಅದ್ಭುತವಾಗಿ ಡ್ಯಾನ್ಸ್ ಮಾಡುವ ಮೂಲಕ ಮಿಂಚಿದ್ದರು. ಸದ್ಯ ಸೀತಾ ರಾಮ ಧಾರಾವಾಹಿಯಲ್ಲಿ ಬಬ್ಲಿ ಗರ್ಲ್ ಪ್ರಿಯಾ ಆಗಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಸೀತಾ ರಾಮ ಸೀರಿಯಲ್ ನ (Seetha Rama Serial) ಗರ್ಲ್ಸ್ ಗ್ಯಾಂಗ್, ಅಂದ್ರೆ ವೈಷ್ಣವಿ ಗೌಡ, ಪೂಜಾ ಲೋಕೇಶ್, ಮೇಘನಾ ಹಾಗೂ ಸಿಂಧೂ ಜೊತೆಗೆ ಸೇರಿ ಚಿಕ್ಕಮಗಳೂರಿಗೆ ತೆರಳಿ ಅಲ್ಲಿ ಅದ್ಧೂರಿಯಾಗಿ ಬ್ಯಾಚುಲರೇಟ್ ಪಾರ್ಟಿ ಸಂಭ್ರಮಿಸಿದ್ದರು.