ಇಬ್ಬರು ಪವರ್ ಗರ್ಲ್ಸ್ ಮಾತನಾಡುವುದನ್ನು ನಿಲ್ಲಿಸಿದ್ದರು ಆದರೆ ಬಿಗ್ ಬಾಸ್ ಒಂದು ಮಾಡಿರುವುದು ನಿಜಕ್ಕೂ ಆಶ್ಚರ್ಯ. ಯಾವ ಕಾರಣಕ್ಕೆ ಮಾತು ಬಿಟ್ಟಿದ್ದರು ಗೊತ್ತಾ?
ಬಿಗ್ ಬಾಸ್ ಸೀಸನ್ 11ರಿಂದ ಐಶ್ವರ್ಯ ಶಿಂಧೋಗಿ ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಕಣ್ಣೀರಿಡುತ್ತ ಹೊರ ಬಂದ ಐಶ್ವರ್ಯಳಿಗೆ ತವರು ಮನೆ ಎಂದು ಧೈರ್ಯ ಕೊಟ್ಟಿದ್ದು ಬಿಗ್ ಬಾಸ್. ಸದ್ಯ ಹೊಸ ವರ್ಷವನ್ನು ಖುಷಿಯಿಂದ ಬರ ಮಾಡಿಕೊಂಡಿರುವ ಐಶ್ವರ್ಯರನ್ನು ಕರ್ನಾಟಕದ ಮಗಳು ಎಂಬ ಬಿರುದು ನೀಡಿದ್ದಾರೆ ವೀಕ್ಷಕರು. ತಂದೆ ತಾಯಿ ಇನ್ನ ಅನ್ನೋ ನೋವು ಬೇಡ ಎಂದು ಸಪೋರ್ಟ್ ಕೊಡುತ್ತಿದ್ದಾರೆ. ಈ ಸಮಯದಲ್ಲಿ ಐಶ್ವರ್ಯ ಮುರಿದು ಬಿದ್ದಿದ್ದ ಸ್ನೇಹದ ಬಗ್ಗೆ ಮಾತನಾಡಿದ್ದಾರೆ. ಯಾವ ಕಾರಣಕ್ಕೆ ನಮತ್ರಾ ಜೊತೆ ಮಾತುಬಿಟ್ಟಿದ್ದು? ಟ್ರಿಪ್‌ನಲ್ಲಿ ಏನು ಜಗಳ ಆಯ್ತು ಎಂದಿದ್ದಾರೆ.
ಬಿಗ್ ಬಾಸ್ ಸೀಸನ್ 10ರ ಸ್ಪರ್ಧಿ ನಮತ್ರಾ ಗೌಡ ಸೀಸನ್ 11ರಲ್ಲಿ ಗೆಸ್ಟ್ ಎಂಟ್ರಿ ಕೊಟ್ಟಿದ್ದರು. ಮಾತುಬಿಟ್ಟಿದ್ದ ಐಶ್ವರ್ಯ ಮತ್ತು ನಮತ್ರಾ ಮತ್ತೆ ಮಾತನಾಡುವಂತೆ ಆಯ್ತು. ಆದರೆ ಯಾವ ಕಾರಣಕ್ಕೆ ಮನಸ್ಥಾಪ ಆಗಿತ್ತು ಎಂದು ಹಂಚಿಕೊಂಡಿದ್ದಾರೆ. 'ನಮ್ರತಾ ಗೌಡ ಮತ್ತು ನಾನು ಸುಮಾರು ಒಂದು ವರ್ಷದಿಂದ ಮಾತನಾಡಿಲ್ಲ. ನಾವಿಬ್ಬರೂ ಒಟ್ಟಿಗೆ ಹೋಗಿದ್ದ ಟ್ರಿಪ್‌ನಲ್ಲಿ ಸ್ವಲ್ಪ ಭಿನ್ನಾಭಿಪ್ರಾಯ ಉಂಟಾಗಿರುತ್ತದೆ. ನಾವು ಅಲ್ಲಿಂದ ಹೊರಡುವ ಒಂದು ಹಿಂದಿನ ದಿನ ನಡೆದಿದ್ದು. ತುಂಬಾ ಸಿಲ್ಲಿ ಕಾರಣಕ್ಕೆ ಮಿಸ್ ಅಂಡರ್‌ಸ್ಟಾಂಡಿಂಗ್ ಆಗುತ್ತದೆ ಹೀಗಾಗಿ ಅಲ್ಲಿಂದ ಬಂದಾಗ ಇಬ್ಬರು ಮಾತನಾಡುವುದನ್ನು ನಿಲ್ಲಿಸಿ ಬಿಡುತ್ತೀವಿ. ಆಕೆಯ ಮನೆ ಗೃಹಪ್ರವೇಶಕ್ಕೂ ಕರೆದಿಲ್ಲ ನನ್ನ, ಮತ್ತೊಬ್ಬರ ಮೂಲಕ ನಾನು ವಿಶ್ ಮಾಡಿರುತ್ತೀನಿ ಆದರೆ ಕರೆದಿಲ್ಲ ಅನ್ನೋ ಬೇಸರ ತುಂಬಾ ಇರುತ್ತೆ' ಎಂದು ಖಾಸಗಿ ಟಿವಿ ಸಂದರ್ಶನದಲ್ಲಿ ಐಶ್ವರ್ಯಾ ಶಿಂಧೋಗಿ ಮಾತನಾಡಿದ್ದಾರೆ.
'ಬಿಗ್ ಬಾಸ್ ಮನೆಯಲ್ಲಿ ಸಂಬಂಧಗಳ ಬೆಲೆ ಚೆನ್ನಾಗಿ ಕಲಿಸಿ ಕೊಡುತ್ತದೆ. ಹೊರಗಡೆ ಇರುವ ಜನರು ನಮ್ಮ ಸ್ನೇಹಿತರು ಎಷ್ಟು ಕೇರ್ ಮಾಡ್ತಾರೆ ಅಂತ ತೋರಿಸಿ ಕೊಡುತ್ತದೆ. ಏರ್‌ಪೋರ್ಟ್‌ನಲ್ಲೂ ಮಾತನಾಡಿಸುತ್ತೀನಿ ಡ್ರಾಪ್ ಮಾಡ್ಲಾ? ಅಪ್ಪ ಅಮ್ಮ ಬರ್ತಾರಾ ಅಂತ ಮಾತನಾಡಿಸಿದ್ದೀನಿ ಅದಾದ ಮೇಲೆ ಸಪರೇಟ್ ಆಗ್ತೀವಿ. ಬಿಗ್ ಬಾಸ್ ಮನೆಯಲ್ಲಿ ಇಬ್ಬರು ತಬ್ಬಿಕೊಂಡು ಮಾತನಾಡುತ್ತೀವಿ ಮಿಸ್ ಮಾಡುತ್ತಿದ್ದೀವಿ ಅಂತ ಹೇಳಿಕೊಳ್ಳುತ್ತೀವಿ...ನಿಜಕ್ಕೂ ಅಕೆಯನ್ನು ತುಂಬಾ ಮಿಸ್ ಮಾಡಿಕೊಂಡಿದ್ದೀನಿ ಅಷ್ಟು ಒಳ್ಳೆಯ ಸ್ನೇಹಿತೆ ಅಕೆ. ನಿಜಕ್ಕೂ ನನ್ನ ಫ್ಯಾಮಿಲಿ ಅವರೇ ಬಂದಿದ್ದಾರೆ ಅನಿಸುತ್ತಿತ್ತು' ಎಂದ ಐಶ್ವರ್ಯಾ ಹೇಳಿದ್ದಾರೆ.
ಫಸ್ಟ್ ಸಿನಿಮಾದಲ್ಲಿ ಯಶ್ ಜೊತೆ ನಟಿಸಿದ ಐಶ್ವರ್ಯ; ರಮ್ಯಾ -ರಾಧಿಕಾ ಕೂಡ ಇದ್ದಾರೆ