ಜೊತೆ ಜೊತೆಯಲಿ ಸೀರಿಯಲ್ ಇಂಟರೆಸ್ಟಿಂಗ್ ಘಟ್ಟ ಪ್ರವೇಶಿಸಿದೆ. ಅನು ಸಿರಿಮನೆ ಇದೀಗ ರಾಜನಂದಿನಿಯೇ ಆಗಿಬಿಟ್ಟಿದ್ದಾಳೆ. ಈ ಟ್ರಾನ್ಸಫಾರ್ಮೇಶನ್‌ಅನ್ನು ಮೇಘಾ ಶೆಟ್ಟಿ ಬಹಳ ಚೆನ್ನಾಗಿ ಕ್ಯಾರಿ ಮಾಡ್ತಿದ್ದಾರೆ. ಇದು ಈ ಸೀರಿಯಲ್ ನೋಡೋ ಪ್ರೇಕ್ಷಕರಿಗೂ ಇಷ್ಟವಾಗುತ್ತಿದೆ.
'ಜೊತೆ ಜೊತೆಯಲಿ' (Jothe Jotheyali) ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರೋ ಸೀರಿಯಲ್. ಇಲ್ಲೀಗ ಹೈ ಡ್ರಾಮಾ(High Drama) ನಡೀತಿದೆ. ಎಂದೋ ತೀರಿಕೊಂಡ ರಾಜನಂದಿನಿಯ ಅನು ಸಿರಿಮನೆ(Anu Sirimane) ಮೇಲೆ ಪ್ರಭಾವ ಬೀರಿದ್ದಾಳೆ. ಮುಗ್ಧ ಹುಡುಗಿಯಾಗಿದ್ದ ಅನು ಸಿರಿಮನೆ ಇದೀಗ ರಾಜನಂದಿನಿ(Rajanandini) ಯಾಗಿ ಬದಲಾಗಿದ್ದಾಳೆ. ಆಗಾಗ ಅನುವಾಗಿ ಆಗಾಗ ರಾಜನಂದಿನಿಯಾಗಿ ಬದಲಾಗುವ ಈ ಚಾಲೆಂಜಿಂಗ್ ಪಾತ್ರದಲ್ಲಿ ಮೇಘಾ ಶೆಟ್ಟಿ (Megha shetty) ಆಕ್ಟಿಂಗ್‌ಅನ್ನು ಜನ ಇಷ್ಟಪಡೋದಕ್ಕೆ ಶುರು ಮಾಡಿದ್ದಾರೆ. ಹಾಗೆ ನೋಡಿದರೆ ಇನ್ನೂ ಸತ್ಯ ಏನು ಅಂತ ಯಾರಿಗೂ ಗೊತ್ತಿಲ್ಲ. ರಾಜನಂದಿನಿಗೆ ತಿಳಿದಿರುವುದು ಸತ್ಯವೇ ಅಥವಾ ಸತ್ಯ ಬೇರೇನಾದರೂ ಇದೆಯಾ ಅನ್ನೋದು ಇನ್ಮೇಲೆ ತಿಳಿಯಬೇಕಷ್ಟೇ.
ಈ ಸೀರಿಯಲ್ ನೋಡಿದವರಿಗೆ ಅನು ಸಿರಿಮನೆ ಮತ್ತು ಆರ್ಯ ಸರ್ ಲವ್‌ಸ್ಟೋರಿ ಗೊತ್ತು. ಆರ್ಯವರ್ಧನ್ (Aryavardhan) ವರ್ಧನ ಕಂಪೆನಿಯ ಬಾಸ್. ಮಧ್ಯಮ ವರ್ಗದ ಅನು ಸಿರಿಮನೆ ಮುಗ್ಧ ಹುಡುಗಿ. ಆಕೆಗೆ ಆರ್ಯ ಸಾರ್ ಬಗ್ಗೆ ಆರಂಭದಿಂದಲೂ ಆಕರ್ಷಣೆ. ಕ್ರಮೇಣ ಅದು ಪ್ರೀತಿಯಾಗಿ ತಿರುಗುತ್ತದೆ. ಇನ್ನೂ ೨೦ರ ವಯಸ್ಸಿನ ಅನು 45ರ ಮಧ್ಯ ವಯಸ್ಕ ಆರ್ಯವರ್ಧನ್ ಮೇಲೆ ಲವ್ವಲ್ಲಿ(Love) ಬೀಳ್ತಾಳೆ. ಅನೇಕ ಅಡೆತಡೆಗಳನ್ನು ದಾಟಿ ಅವರಿಬ್ಬರ ಮದುವೆ ಆಗುತ್ತೆ. ಈವರೆಗಿನ ಎಪಿಸೋಡ್‌ಗಳಲ್ಲಿ ಅನು ಮತ್ತು ಆರ್ಯ ಜೋಡಿಯನ್ನು ಪ್ರೇಕ್ಷಕರು ಬಹಳ ಇಷ್ಟ ಪಟ್ಟರು. ಈ ಜೋಡಿಗೆ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಫ್ಯಾನ್ ಫಾಲೋವಿಂಗ್ ಹುಟ್ಟಿಕೊಂಡಿತು. ಆದರೆ ಇವರಿಬ್ಬರ ಮದುವೆ ಆದ ಕೆಲವೇ ದಿನಕ್ಕೆ ಆರ್ಯವರ್ಧನ್‌ನ ಮತ್ತೊಂದು ಮುಖ ಕಾಣಲಾರಂಭಿಸಿತು. ರಾಜನಂದಿನಿ ಎಂಬ 20 ವರ್ಷಗಳ ಕೆಳಗೆ ತೀರಿಕೊಂಡ ಆರ್ಯವರ್ಧನ್ ಮೊದಲ ಹೆಂಡತಿ ಎಂಟ್ರಿ(Entry)ಯಿಂದ ಆರ್ಯವರ್ಧನ್ ಬಗ್ಗೆ ಮತ್ತೊಂದು ಸತ್ಯ ಹೊರಗೆ ಬರಲಾರಂಭಿಸಿತು. ಇದ್ದಕ್ಕಿದ್ದಂತೆ ಇಲ್ಲೀವರೆಗೆ ಅತೀ ಒಳ್ಳೆಯ ವ್ಯಕ್ತಿಯಾಗಿದ್ದ ಆರ್ಯ ವಿಲನ್ ಆಗಿ ಕಾಣಿಸಿಕೊಳ್ಳಲಾರಂಭಿಸುತ್ತಾನೆ. ಅನುಗೆ ಕನಸಿನಲ್ಲಿ ಸುಪ್ತ ಮನಸ್ಸಿನಲ್ಲಿ ಕಾಣಿಸಿಕೊಳ್ಳುವ ರಾಜನಂದಿನಿ ತನಗಾದ ಅನ್ಯಾಯವನ್ನು, ತನ್ನ ಕುಟುಂಬಕ್ಕೆ ಆರ್ಯ ಮಾಡುವ ದ್ರೋಹವನ್ನು ಅನುಗೆ ಹೇಳುತ್ತಾಳೆ. ಜೊತೆಗೆ ಈಗ ಅನು ಸಿರಿಮನೆ ಆಗಿರುವವಳು ಮತ್ಯಾರೂ ಅಲ್ಲ. ಅದು ಸ್ವತಃ ರಾಜನಂದಿನಿಯೇ ಅನ್ನೋದು ತಿಳಿಯುವ ಹಾಗೆ ಮಾಡ್ತಾಳೆ. ಮೊದ ಮೊದಲು ಕನಸಿನಲ್ಲಿ, ಯಾರೂ ಇಲ್ಲದಿರುವಾಗ ಕಾಣಿಸಿಕೊಳ್ಳುತ್ತಿದ್ದ ರಾಜ ನಂದಿನಿ ಇದೀಗ ಅನುವಿನೊಳಗೇ ಸೇರಿಕೊಂಡಿದ್ದಾಳೆ.
Sathya Serial: ಫುಟ್ಬಾಲ್ ತರ ಸೇರಕ್ಕಿ ಒದ್ದಳಲ್ಲಾ ಸತ್ಯಾ, ಮದುಮಗಳು ಸೇರಕ್ಕಿ ಒದೆಯೋದ್ಯಾಕೆ?
ಅನು ಇದೀಗ ರಾಜನಂದಿನಿಯಾಗಿ, ಅನು ಸಿರಿಮನೆಯಾಗಿ ಎರಡೂ ಪಾತ್ರಗಳನ್ನೂ ನಿಭಾಯಿಸುತ್ತಿದ್ದಾಳೆ. ಆಫೀಸ್‌ನಲ್ಲಿ ನಡೆಯುತ್ತಿದ್ದ ಒಳ ವ್ಯವಹಾರಗಳನ್ನು ತನ್ನ ನಿಯಂತ್ರಣಕ್ಕೆ ತಗೊಂಡಿದ್ದಾಳೆ. ಇನ್ನೊಂದು ಕಡೆ ತನ್ನ ತಮ್ಮ ಹರ್ಷನಿಗೆ ಎಲ್ಲ ಅಧಿಕಾರ ಸಿಗುವಂತೆ ಮಾಡಲು ಹೊರಟಿದ್ದಾಳೆ. ಆ ಮನೆಯಲ್ಲಿ ಯಾರೂ ಹೊಗದ ರೂಮೊಂದಿದೆ. ಅದರಲ್ಲಿ ರಾಜ ಮನೆತನದವರ ಭಾವಚಿತ್ರ, ಅವರಿಗೆ ಸಂಬಂಧಿಸಿದ ವಸ್ತುಗಳೆಲ್ಲ ಇವೆ. ರಾಜ ನಂದಿನಿಯಾಗಿ ಮಾರ್ಪಟ್ಟಿರುವ ಅನು ಅದನ್ನೆಲ್ಲ ತಮ್ಮ ಹರ್ಷವರ್ಧನನಿಗೆ ತೋರಿಸುತ್ತಾಳೆ. ಆತನಿಗೆ ಈ ಬಗ್ಗೆ ಸತ್ಯ ತಿಳಿಯುವಂತೆ ಮಾಡುತ್ತಾಳೆ. ಇನ್ನೊಂದು ಕಡೆ ಆಕ್ಸಿಡೆಂಟ್(Accident) ಆಗಿ ಮಲಗಿರುವ ಆರ್ಯವರ್ಧನ್ ಬಗ್ಗೆ ಅವಳಿಗೆ ಪ್ರೀತಿ, ದ್ವೇಷ ಎರಡೂ ಇದೆ.
ಹೀಗೆ ಒಮ್ಮೆ ಅನು ಸಿರಿ ಮನೆಯಾಗಿ ಇನ್ನೊಮ್ಮೆ ರಾಜ ನಂದಿನಿಯಾಗಿ ಬದಲಾಗುವ ಪಾತ್ರವನ್ನು ಮೇಘಾ ಶೆಟ್ಟಿ ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದಾರೆ. ಹೆಚ್ಚು ಭಾವೋದ್ವೇಗ ಇಲ್ಲದೇ ತನ್ನ ತಣ್ಣನೆಯ ಆಕ್ಟಿಂಗ್(acting) ಮೂಲಕವೇ ಗಮನ ಸೆಳೆಯೋ ಈಕೆ ಈ ಟ್ರಾನ್ಸ್‌ಫಾರ್ಮೇಶನ್‌ಅನ್ನು ಸಹಜವಾಗಿ ಕ್ಯಾರಿ ಮಾಡಿದ್ದಾರೆ. ಒಂದು ಕಡೆ ತನ್ನ ಮುಗ್ಧ ಸೌಂದರ್ಯ ಇನ್ನೊಂದು ಕಡೆ ಆಕ್ಟಿಂಗ್ ಸ್ಕಿಲ್(skill) ಮೂಲಕ ಮೇಘಾ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಅವರೀಗ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಗಣೇಶ್(Golden Star Ganesh) ಜೊತೆ ತ್ರಿಬ್ಬಲ್ ರೈಡ್, ಡಾರ್ಲಿಂಗ್ ಕೃಷ್ಣ(Darling Krishna) ಜೊತೆಗೆ 'ದಿಲ್‌ಪಸಂದ್' ಮೊದಲಾದ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಆದರೆ ಮೇಘಾ ಶೆಟ್ಟಿಗೆ ಸೀರಿಯಲ್‌ನಲ್ಲಿ ಸಿಕ್ಕ ಫ್ಯಾನ್ ಫಾಲೋವಿಂಗ್ ದೊಡ್ಡದು. ಹಿಂದೊಮ್ಮೆ ಆಕೆ ಸೀರಿಯಲ್ ಟೀಮ್ ಜೊತೆಗೆ ಕಿರಿಕ್ ಮಾಡಿಕೊಂಡಾಗ ಅವರನ್ನು ಮತ್ತೆ ಸೀರಿಯಲ್ ಟೀಮ್ ಸೇರುವ ಹಾಗೆ ಮಾಡಿದ್ದೇ ಈ ಅಭಿಮಾನಿಗಳು. ಸದ್ಯಕ್ಕೀಗ ಎರಡೆರಡು ಪಾತ್ರಗಳ ಮೂಲಕ ಮೇಘಾ ಶೆಟ್ಟಿ ಭರ್ಜರಿ ಎಂಟರ್ ಟೈನ್ ಮೆಂಟ್(entertainment) ನೀಡ್ತಿರೋದು ಸುಳ್ಳಲ್ಲ.
ಅನುಪಮಾ ಗೌಡ ಈಗ ಓಪನ್ ವಾಟರ್ ಡೈವರ್! ಸಾಹಸಕ್ಕೆ ಸಿಗ್ತು ಸರ್ಟಿಫಿಕೇಟ್