'ಒಲವಿನ ನಿಲ್ದಾಣ' ಇದು ಕಲರ್ಸ್ ಕನ್ನಡದ ಹೊಸ ಸೀರಿಯಲ್ ಹೆಸರು. ಈ ಸೀರಿಯಲ್ ಪ್ರೋಮೋ ಹೊರಬಿದ್ದಿದೆ. ಹಾಗಿದ್ರೆ ವೈಂಡ್‌ಅಪ್ ಆಗೋ ಸೀರಿಯಲ್ ಯಾವುದು ಅಂತ ಗೆಸ್ಸಿಂಗ್ ಶುರುವಾಗಿದೆ.
'ಒಲವಿನ ನಿಲ್ದಾಣ' (Olavina Nildana) ಇದು ಹೊಸ ಕಥೆ. ಕಲರ್ಸ್ ಕನ್ನಡ(Colors Kannada)ದಲ್ಲಿ ಯಾವಾಗಿಂದ ಯಾವ ಟೈಮಲ್ಲಿ ಈ ಸೀರಿಯಲ್ ಬರಬಹುದು ಅನ್ನೋದು ಸದ್ಯದ ಕುತೂಹಲ. ಈ ಡೀಟೇಲ್ಸ್(Details) ಸಿಕ್ಕರೆ ಈಗಿರುವ ಸೀರಿಯಲ್‌ಗಳಲ್ಲಿ ಯಾವ ಧಾರಾವಾಹಿ ವೈಂಡ್ ಅಪ್(windup) ಆಗಬಹುದು ಅನ್ನೋದರ ಬಗ್ಗೆ ಕ್ಲಿಯರ್ ಪಿಕ್ಚರ್ ಸಿಗುತ್ತೆ. 'ಒಲವಿನ ನಿಲ್ದಾಣ' ಅನ್ನೋ ಸೀರಿಯಲ್ ನ ಪ್ರೋಮೋ(Promo)ವನ್ನು ಕಲರ್ಸ್ ಚಾನೆಲ್ ಹೊರಬಿಟ್ಟಿದೆ. ಪ್ರೊಮೋದಲ್ಲಿ ಹೇಳಿರುವಂತೆ ಇದು ತಾರಿಣಿ (Tharini) ಅನ್ನೋ ನಾಯಕಿಯ ಮೇಲೆ ನಿಂತಿರುವ ಸೀರಿಯಲ್. ಅಲ್ಲಿಗೆ ನಾಯಕಿ ಪ್ರಧಾನವಾದ ಇನ್ನೊಂದು ಸೀರಿಯಲ್ ಬರ್ತಿದೆ ಅಂತ ಖುಷಿ ಪಡಬಹುದು. ಈ ಸೀರಿಯಲ್ ನಾಯಕಿಯೂ ಮಲೆನಾಡವಳೇ. ಹೀಗಂದಾಗ ಇದು ಯಾವ ಸೀರಿಯಲ್‌ಗೆ ಬದಲಾಗಿ ಬರ್ತಿರೋ ಸೀರಿಯಲ್ ಆಗಿರಬಹುದು ಅನ್ನೋದರ ಬಗ್ಗೆ ಮುಖ್ಯ ಹಿಂಟ್ (hint) ಸಿಗುತ್ತೆ. ಏಕೆಂದರೆ ಈಗಾಗಲೇ ಒಂದು ಮಲೆನಾಡ ಹುಡುಗಿಯ ಕಥಾಹಂದರ ಇರುವ ಸೀರಿಯಲ್ ಮುಕ್ತಾಯದತ್ತ ಸಾಗ್ತಿದೆ ಅನ್ನೋ ವಿಚಾರವನ್ನು ನಾವು ಕಳೆದ ವಾರವೇ ಹೇಳಿದ್ವಿ.
ಎರಡು ವರ್ಷಗಳ ನಂತರ ನನ್ನರಸಿ ರಾಧೆಯಲ್ಲಿ ಕಾಣಿಸಿಕೊಂಡ ಅಮೂಲ್ಯ ಗೌಡ!
ಹೊಸ ಸೀರಿಯಲ್‌ನ ಮತ್ತೊಂದು ಮುಖ್ಯ ಅಂಶ ಅಂದರೆ ಇದರಲ್ಲಿರೋದು ಪ್ರೇಮಕಥೆ. ಈಗಾಗಲೇ ರೊಮ್ಯಾಂಟಿಕ್ ಸೀರಿಯಲ್‌ಗಳು (Romantic Serials) ಕನ್ನಡ ಕಿರುತೆರೆಯನ್ನು ಆಳ್ತಿವೆ. ಅದರಲ್ಲಿ ಫ್ಯಾಮಿಲಿ ಸೆಂಟಿಮೆಂಟ್(Family sentiment), ಕ್ರೈಮ್(Crime) ಇತ್ಯಾದಿ ಮಸಾಲ ಬೆರೆಸಿ ಎಲ್ಲ ವರ್ಗದವರು, ಎಲ್ಲ ಲಿಂಗದವರೂ ನೋಡಬಹುದು ಅನ್ನೋ ಥರ ನಿರೂಪಿಸಿರೋದು ಚಾನೆಲ್ ಹಾಗೂ ಸೀರಿಯಲ್ ಟೀಮ್‌ನ ಜಾಣ್ಮೆಯನ್ನು ತೋರಿಸುತ್ತೆ. ಈ ಸೀರಿಯಲ್ಲೂ ಪ್ರೇಮಕಥೆ ಅಂದಾಗ ಹಲವು ಯುವ ಮನಸ್ಸುಗಳ ಹೊಟ್ಟೆಯಲ್ಲಿ ಚಿಟ್ಟೆ ಬಿಟ್ಟಂಗಾಗಿದೆ. ಈ ಸೀರಿಯಲ್‌ನ ನಾಯಕಿ ಹೆಸರು ತಾರಿಣಿ. ಅವಳು ಮಹಾನ್ ಲವಲವಿಕೆಯ ಹುಡುಗಿ, ಎಲ್ಲಕ್ಕಿಂತ ಹೆಚ್ಚಾಗಿ ಮಲೆನಾಡ ಸುಂದರಿ. ಕನಸು ಕಂಗಳ ಹುಡುಗಿ. ಈ ಸೀರಿಯಲ್ ಪ್ರೋಮೋ (Promo) ನೋಡಿದರೆ ಹುಡುಗರ ಎದೆಬಡಿತ ಏರಿಳಿಯೋದು ಗ್ಯಾರಂಟಿ. ಏಕೆಂದರೆ ಮುದ್ದಾದ ಹುಡುಗಿಯೊಬ್ಬಳು ತನ್ನ ಕನಸಿನ ಹುಡುಗನಿಗೆ ಕಾಯುವಂತೆ ಈ ಸೀರಿಯಲ್‌ನ ಕಥೆ ಆರಂಭವಾಗುತ್ತದೆ. ಜೋರು ಮಳೆ ಹೊಡೆಯುವಾಗ ಉಳಿದ ಊರವರೆಲ್ಲ ಮಳೆಯಿಂದ ತಪ್ಪಿಸಿಕೊಳ್ಳೋಕೆ ಓಡ್ತಿದ್ರೆ ಈ ಹುಡುಗಿ ಮಾತ್ರ ಚಪ್ಪಲಿ ಕಳಚಿಟ್ಟು ಮಳೆ ಹನಿ ಜೋರು ಬೀಳುವ ಕಡೆ ಓಡ್ತಾಳೆ.
Sathya Serial: ಫುಟ್ಬಾಲ್ ತರ ಸೇರಕ್ಕಿ ಒದ್ದಳಲ್ಲಾ ಸತ್ಯಾ, ಮದುಮಗಳು ಸೇರಕ್ಕಿ ಒದೆಯೋದ್ಯಾಕೆ?
ಮಳೆ (Rain) ಅಂದರೆ ಅವಳಿಗೆಷ್ಟು ಇಷ್ಟ ಅನ್ನೋದು ಅವಳ ವರ್ತನೆ ನೋಡಿದ್ರೆ ಗೊತ್ತಾಗುತ್ತೆ. ಹೀಗೆ ಚೆಂದದ ಹುಡುಗಿಯೊಬ್ಬಳು ಮುಂಗಾರು ಮಳೆ ಸ್ಟೈಲ(Style)ಲ್ಲಿ ಮಳೆ ನೀರಲ್ಲಿ ನೆನೆಯುತ್ತಿರುವಾಗ ಇನ್ನೊಂದು ಕಡೆ ಬೈಕ್‌ನಿಂದಿಳಿಯೋ ಹೀರೋ. ಆತ ಇನ್ನೇನು ಹೆಲ್ಮೇಟ್ ತೆಗೀಬೇಕು, ಇವಳು ಅವನ ಮುಖ ನೋಡಬೇಕು ಅನ್ನುವಾಗ ಯಾರೋ ಎಬ್ಬಿಸುತ್ತಿದ್ದಾರೆ. ಅಂದರೆ ಇದೆಲ್ಲ ನಡೀತಿರೋದು ಹುಡುಗಿಯೊಬ್ಬಳ ಕನಸಿನಲ್ಲಿ. ಕನಸಿಂದ ಏಳುವ ಅವಳು ಎಬ್ಬಿಸಿರೋ ಸುಮತಿ ಅಮ್ಮನಿಗೆ ಯಾಕೆ ಎಬ್ಬಿಸಿದಿರಿ, ಕನಸು ಕಾಣ್ತಿದ್ದೆ. ಇನ್ನೇನು ಹೀರೋ ಮುಖ ಕಾಣ್ಬೇಕಿತ್ತು. ಅಷ್ಟರಲ್ಲಿ ಎಬ್ಬಿಸಿ ಬಿಟ್ರಿ ಅಂತಾಳೆ. ಸುಮತಿ ಅಮ್ಮ ಇದಕ್ಕೆ ಸಾರಿ ಅಂದರೆ, 'ಇವತ್ತು ಆ ಹುಡುಗನನ್ನು ರಿಯಲ್ಲಾಗಿಯೇ ನೋಡ್ತೀನಿ' ಅಂತಾಳೆ ತಾರಿಣಿ. ಅವಳ ಹುಡುಗಿ ಯಾರು ಅನ್ನೋದು ಸದ್ಯಕ್ಕೆ ಸಸ್ಪೆನ್ಸ್(Suspence).
ಹೀಗೆ ಮಳೆ, ಹುಡುಗಿ, ಕನಸು ಇತ್ಯಾದಿ ರಮ್ಯ ಕತೆ ಬರೋ ಹಿಂಟ್‌ಅನ್ನು ಮಳೆಗಾಲ ಶುರುವಾಗೋ ಮೊದಲೇ ನೀಡಿ ಆಗಿದೆ. ಈ ಸೀರಿಯಲ್ ಹೇಗಿದೆ ಅನ್ನೋದರ ಮೇಲೆ ಈ ಸಲದ ಮುಂಗಾರು ಹುಡುಗ ಹುಡುಗಿಯರ ಪಾಲಿಗೆ ಹೇಗಿರಲಿದೆ ಅನ್ನೋದನ್ನೂ ನಿರ್ಧರಿಸಬಹುದೇನೋ.
ಶಾಮಿಯಾನ, ಕರ್ಟನ್, ಟವಲ್ ರೀತಿ ಬ್ಲೌಸ್ ಧರಿಸುವ ಶಾಲಿನಿ; ಫನ್ನಿ ವಿಡಿಯೋ ವೈರಲ್!
ಅದ್ಸರಿ, ಈ ಸೀರಿಯಲ್ ಬರಬೇಕಿದ್ದರೆ ಇನ್ನೊಂದು ಸೀರಿಯಲ್ ನಿಲ್ಲಬೇಕು. ಆ ನಿಲ್ಲುವ ಸೀರಿಯಲ್ 'ಕನ್ನಡತಿ' ಆಗದೇ ಇರಲಿ, 'ಮಂಗಳಗೌರಿ' ಆಗಿರಲಿ ಅಂತ ಅನೇಕರು ಸೋಷಿಯಲ್ ಮೀಡಿಯಾದಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಆದರೆ ಸದ್ಯದ ಸ್ಥಿತಿ ನೋಡಿದರೆ ಅವರಿಗೆ ನಿರಾಸೆ ಆಗಬಹುದು. ಈಗಿರುವ ಮಾಹಿತಿ ಪ್ರಕಾರ ಮುಂದೆ ವೈಂಡ್‌ಅಪ್ ಆಗ್ತಿರುವ ಸೀರಿಯಲ್ 'ಕನ್ನಡತಿ'. ಅದಾಗಿ ಅದೇ ಕನಸು ಕಣ್ಣುಗಳ ಮಲೆನಾಡ ಹುಡುಗಿಯ ಕತೆಯುಳ್ಳ ಹೊಸ ಧಾರಾವಾಹಿ 'ಒಲವಿನ ನಿಲ್ದಾಣ'.