ಬೆಡ್‌ವೆಟ್ ಮಾಡಿಕೊಳ್ತಿದ್ದ ಪುಟ್ಟ ಧ್ರುವ ಸರ್ಜಾ, ಚಿರು ಹೆಲ್ಪ್ ನೆನೆದು ಕಣ್ಣೀರು!

By Suvarna NewsFirst Published May 30, 2022, 1:18 PM IST
Highlights

ಡ್ಯಾನ್ಸಿಂಗ್ ಚಾಂಪಿಯನ್ ವೇದಿಕೆ ಮೇಲೆ ಅಣ್ಣ ಚಿರು ಅತ್ತಿಗೆ ಮೇಘನಾ ಬಗ್ಗೆ ಮಾತನಾಡಿದ ಧ್ರುವ ಸರ್ಜಾ. ಬಾಲ್ಯ ಹೀಗಿತ್ತಂತೆ.

ಡ್ಯಾನ್ಸಿಂಗ್ ಚಾಂಪಿಯನ್ ಗ್ರ್ಯಾಂಡ್ ಫಿನಾಲೆ ಕಾರ್ಯಕ್ರಮಕ್ಕೆ ಧ್ರುವ ಸರ್ಜಾ ಸ್ಪೆಷಲ್ ಗೆಸ್ಟ್‌ ಆಗಿ ಭಾಗಿಯಾಗಿದ್ದರು. ಈ ವೇಳೆ ಅಣ್ಣ ಚಿರಂಜೀವಿ ಜೊತೆಗಿನ ಬಾಲ್ಯ, ಅತ್ತಿಗೆ ಮೇಘನಾ ಬಂದ ಮೇಲೆ ಆದ ಬದಲಾವಣೆಗಳ ಬಗ್ಗೆ ಮಾತನಾಡಿದ್ದಾರೆ.

'ಧ್ರುವ ನನ್ನ ಬ್ರದರ್. ನನ್ನ ಲಿಟಲ್ ಬ್ರದರ್ ನನ್ನ ಬೇಬಿ ಬ್ರದರ್. ಧ್ರುವಗೆ ಮಗುವಿನ ಮನಸ್ಸು. ಎಲ್ಲರಿಗೂ ಧ್ರುವ ವ್ಯಕ್ತಿತ್ವ ಅರ್ಥ ಆಗೋಲ್ಲ ಹತ್ತಿರದಿಂದ ನೋಡಿದವರಿಗೆ ಮಾತ್ರ ಗೊತ್ತಾಗುವುದು. ಕೆಲವರು ಅಂದುಕೊಳ್ಳುತ್ತಾರೆ ಏನಪ್ಪ ಒಂದು ಸಲ ಮಾತನಾಡಿಸುತ್ತಾರೆ ಮತ್ತೊಂದು ಸಲ ನೋಡುವುದು ಇಲ್ಲ ಅಂತ. ಎಲ್ಲರಿಗೂ ಒಂದೊಂದು ಅಭಿಪ್ರಾಯ ಇರುತ್ತೆ ಆದರೆ ಧ್ರುವ ಹೇಗೆ ಅಂತ ನನಗೆ ಗೊತ್ತು. ಧ್ರುವಗೆ ಇರುವುದು ಒಂದೇ ಗುಣ ಆ ಗುಣ ಬರೀ ಧ್ರುವ ಮನಸ್ಸಿಗೆ ಹತ್ತಿರ ಇರುತ್ತಾರೆ ಅವರಿಗ ಅರ್ಥ ಆಗುತ್ತೆ.' ಎಂದು ಮೇಘನಾ ರಾಜ್ ಮಾತನಾಡಿದ್ದಾರೆ. 

Latest Videos

'ಮದುವೆಯಾದ ಹೊಸತರಲ್ಲಿ ನಡೆದ ಘಟನೆ. ನಾನು ನನ್ನ ಅಣ್ಣ ಸಖತ್ ಕ್ಲೋಸ್. ಯಾವ ಲೆವೆಲ್‌ಗೆ ಅಂತ ಎಕ್ಸಪ್ರೆಸ್ ಮಾಡೋಕೆ ಆಗಲ್ಲ. ಮದುವೆ ಆದ್ಮೇಲೆ ಅದು ಶುರುವಾಗುತ್ತೆ. ಅಯ್ಯೋ ನಮ್ಮ ಅಣ್ಣ ನನ್ನ ಜೊತೆ ಟೈಂ ಸ್ಪೆಂಡ್ ಮಾಡ್ತಿಲ್ಲ. ಅದು ನಾನು ಹೇಳಲಿಲ್ಲ ಆದರೆ ಅಣ್ಣಂಗೆ ಅರ್ಥ ಆಯ್ತು. ಏನೋ ಕಡ್ಡಿ ನಾನು ನಿನ್ನ ಜೊತೆ ಇಲ್ಲ ಅಂತ ಒಂದು ತರ ಆಗ್ತಿದ್ಯಾ ಅಂತಿದ್ದ. ನನ್ನ ಅತ್ತಿಗೆ ಹುಟ್ಟುಹಬ್ಬ ದಿನ ಅಣ್ಣ ಮತ್ತು ಅಮ್ಮ ಬಂದು ಸ್ವೀಟ್ ಕೊಟ್ಟ ಅಣ್ಣ 'ಮಚ್ಚಾ ಇದು ನನ್ನ ಹೆಂಡ್ತಿ ನಿನಗೆ ಗೊತ್ತಲ್ಲ ಅಂದ ನಾನು ಫುಲ್ ಕನ್ಫ್ಯೂಷನ್‌ನಲ್ಲಿ ನಿಂತುಕೊಂಡೆ. ನನ್ನ ತಾಯಿ ನೋಡಪ್ಪ ಅತ್ತಿಗೆ ಅಂದ್ರೆ ತಾಯಿ ತರ ಇವರು ನಿನಗೆ ಎರಡನೇ ತಾಯಿ ಅಂತ ಪರಿಚಯ ಮಾಡಿಸಿಕೊಟ್ಟರು' ಎಂದು ಧ್ರುವ ಸರ್ಜಾ ಹೇಳಿದ್ದಾರೆ.

ಚಿರು ಇಲ್ಲದೆ ಮೌನ:

'ಕೆಲವು ಮಾತುಗಳನ್ನು ನಾವು ನಿಲ್ಲಿಸಿದ್ದೀವಿ. ಹೇಗಿದ್ದೀರಾ ಅಂತ ಕೇಳೋದು ನಿಲ್ಲಿಸಿದ್ದೀವಿ. ಚೆನ್ನಾಗಿದ್ದೀರಾ ಅಂತ ಕೇಳೋದು ನಿಲ್ಲಿಸಿದ್ದೀವಿ. ದಿನೇ ದಿನೇ ಅತ್ತಿಗೆ ಆಗಲಿ ನಾವು ಆಗಲಿ ಚೇತರಿಸಿಕೊಳ್ಳುತ್ತಿದ್ದೀವಿ. ಕಷ್ಟ ಅನ್ನೋದು ಎಲ್ಲರಿಗೂ ಬರುತ್ತೆ. ನಾನು ಅಣ್ಣ 6 ಕ್ಲಾಸ್‌ವರೆಗೂ ಬೋರ್ಡಿಂಗ್‌ನಲ್ಲಿ ಓದುತ್ತಿದ್ವಿ. ನಮಗೆ ವಾರಕ್ಕೆ ಒಂದು ಸಲ ಪಾಕೆಟ್ ಮನಿ ಕೊಡುತ್ತಾರೆ. ನನಗೆ 5 ರೂ ಅಣ್ಣ ದೊಡ್ಡವನು ಅವನಿಗೆ 20 ರೂ. ಅವನು ಹಣ ಇಟ್ಟಿಕೊಳ್ಳುತ್ತಿರಲಿಲ್ಲ ನನಗೆ ಕೊಟ್ಟು ನೀನು ತಗೋ ಅಂತ ಹೇಳುತ್ತಿದ್ದ'

'ಒಂದು ದಿನ ಅವರು ಕ್ಲಾಸ್ ಪ್ರಮೋಟ್ ಆದ. ನಾವಿಬ್ಬರೂ ಒಟ್ಟಿಗೆ ಒಂದೇ ರೂಮ್‌ನಲ್ಲಿ ಇದ್ವಿ. ಆಗ ನನಗೆ ಕಷ್ಟ ಆಯ್ತು. ನನಗೆ ಹೊಡೆದರೂ ಪರ್ವಾಗಿಲ್ಲ ನನಗೆ ಅಣ್ಣಬೇಕು ಎನ್ನುತ್ತಿದ್ದೆ. ನಾನು ನಾಲ್ಕನೆ ಕ್ಲಾಸ್‌ವರೆಗೂ ಬೆಡ್‌ವೆಟ್‌ ಮಾಡಿಕೊಳ್ಳುತ್ತಿದ್ದೆ. ಮಾಡಿಕೊಂಡು ಅಣ್ಣನ ಪಕ್ಕ ಬಂದು ಮಲಗಿಕೊಳ್ಳುತ್ತಿದ್ದೆ. ಅವನು ಎದ್ದು ಇವತ್ತು ಮಾಡ್ಕೊಂಡಾ ಎಂದು ಹೇಳಿ ನನ್ನ ಬೆಡ್‌ಶೀಟ್‌ ಕ್ಲೀನ್‌ ಮಾಡಿ ಅಲ್ಲಿ ಹೋಗಿ ಮಲಗಿಕೊಳ್ಳುತ್ತಿದ್ದ. ಚಿಕ್ಕವಯಸ್ಸಿನಿಂದ ನಾನು ತಂದೆ ತಾಯಿ ಜೊತೆ ಇರಲಿಲ್ಲ ಆದರೆ ಅಣ್ಣನ ಜತೆ ಇಲ್ಲದ ದಿನನೇ ಇಲ್ಲ. ಈಗ ಅವನಿಲ್ಲದ ದಿನಗಳಿಂದ ಹೊರಗೆ ಬರುತ್ತಿದ್ದೀವಿ. ಅತ್ತಿಗೆ ಬಂದ್ರು ಲೈಫಲ್ಲಿ ಎಲ್ಲಾ ಚೆನ್ನಾಗಿತ್ತು ಆದರೆ ಈ ರೀತಿ ಆಯ್ತು' ಎಂದಿದ್ದಾರೆ ಧ್ರುವ.

ಅಪ್ಪ ಅಮ್ಮನಂತೆ ಆಡಲು ಮೈದಾನಕ್ಕಿಳಿದ ಜ್ಯೂ ಚಿರು ಸರ್ಜಾ

'ಲಾಕ್‌ಡೌನ್‌ ಸಮಯದಲ್ಲಿ ಅಣ್ಣ ನಾನು ನಮ್ಮ ಮನೆ ಪಕ್ಕ ಇದ್ದ ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿದ್ವಿ. ನಾವಿಬ್ಬರೂ ಸಖತ್ ಕ್ಲೋಸ್‌, ಮಾತನಾಡದ ವಿಚಾರನೇ ಇಲ್ಲ. ನಾವು ಕಾಫ್‌ ರೇಸ್‌ ಮಾಡುತ್ತಿದ್ವಿ ಆಗ ನೀನು ಮಾಡು ಅಂತ ಹೇಳುತ್ತಿದ್ದೆ. ನಾನು 150 ಆದ್ಮೇಲೆ ಆಗಲ್ಲ ಅಂತಿದ್ದೆ ಅವನು ಹಾಗೆ ಹೇಳುತ್ತಿದ್ದ. ಆಗ ನಾನು ಒಂದು ಮಾತು ಹೇಳಿದ್ದೆ. ಗುರು ನೀನು ಚಿಕ್ಕ ಹುಡುಗ ಆಗಿದ್ರೆ ಹಠ ಮಾಡ್ಸಿ ಮಾಡಿಸುತ್ತಿದ್ದೆ. ಆ ಮಾತಿಗೆ ದೇವರು ಹಸ್ತು ಅಂದಿರಬೇಕು ಗೊತ್ತಿಲ್ಲ ಈಗ ಚಿಕ್ಕ ಹುಡುಗನಾಗಿ ಅವರ ಮಗನಾಗಿ ಬಂದಿರಬೇಕು ಅನಿಸುತ್ತೆ. ಸ್ವಲ್ಪ ದಿನ ಆದ್ಮೇಲೆ ಜಿಮ್‌ಗೆ ಕರೆದುಕೊಂಡು ಹೋಗ್ತೀನಿ' ಎಂದು ಧ್ರುವ ಸರ್ಜಾ ಮಾತನಾಡಿದ್ದಾರೆ.

'ಧ್ರುವ ವರಪೂಜೆ ಸಮಯದಲ್ಲಿ ಚಿತ್ರೀಕರಣ ಮಾಡಿದ ವಿಡಿಯೋ ವೈರಲ್ ಆಯ್ತು. ನಾನು ಊಟಕ್ಕೆ ಕೂತ್ತಿದೆ ಧ್ರುವ ಹುಟ್ಟು ತರಲೆ. ನಾನು ಊಟ ಮಾಡುವಾಗ ಚಿರು ಸರಿ ಊಟ ಮಾಡು ಅಂತ ಹೇಳಿ ಹೋದರು ನಾನು ಚಿರು ಮುಖ ನೋಡ್ತಿದ್ದೀನಿ ಎಲೆ ತುಂಬಾ ಊಟ ತುಂಬಿಸುತ್ತಿದ್ದ ಧ್ರುವ. ಅದಿಕ್ಕೆ ಇಬ್ಬರನ್ನು ಕರೆದು ಬನ್ನಿ ತಿನ್ನಿ ಅಂತ ಹೇಳಿ ತಿನಿಸಿದ್ದು ವಿಡಿಯೋ ಇದು' ಮೇಘನಾ

ಡಾನ್ಸಿಂಗ್ ವೇದಿಕೆಯಲ್ಲಿ ಚಿರು ಪುತ್ರ; ಮಗನ ಬಾಯಲ್ಲಿ ಅಮ್ಮ ಪದ ಕೇಳಿ ಸಂಭ್ರಮಿಸಿದ ಮೇಘನಾ

'ಧ್ರುವ ತೋರಿಸಿಕೊಳ್ಳುವುದಿಲ್ಲ ಆದರೆ ಮನಸ್ಸು ತುಂಬಾ ಪ್ರೀತಿ ಇಟ್ಕೊಂಡಿರುತ್ತಾನೆ', 'ಇದು ಒಳ್ಳೆದು ಕೆಟ್ಟದು ಅಂತ ಗೊತ್ತಿಲ್ಲ ಆದರೆ ಧ್ರುವಗೆ ಕೋಪ ಜಾಸ್ತಿ. ಅದನ್ನು ತೋರಿಸಿಕೊಳ್ಳುವುದಿಲ್ಲ ಆದರೆ ಬಂದ್ರೆ ತಡೆಯೋಕೆ ಆಗೋಲ್ಲ',' ಧ್ರುವಗೆ ಒಂದು ಬುದ್ಧಿ ಇದೆ ಮಾಡಿ ತೋರಿಸುತ್ತಾನೆ ಮಾತನಾಡಿ ತೋರಿಸಿಕೊಳ್ಳವುದಿಲ್ಲ' ಎಂದು ಮೇಘನಾ ಧ್ರುವಗೆ ಮೂರು ಸಲ ಐಸ್‌ ಕ್ರೀಂ ತಿನಿಸಿ ಮೂರು ಗುಣಗಳ ಬಗ್ಗೆ ಮಾತನಾಡಿದ್ದಾರೆ.

'ಹೊರಗಡೆಯಿಂದ ಅತ್ತಿಗೆ ತುಂಬಾ ಸ್ಟ್ರಾಂಗ್ ಕಾಣಿಸುತ್ತಾರೆ ಆದರೆ ಒಳಗೆ ಅವರು ತುಂಬಾ ಎಮೋಷನಲ್‌. ಸುಲಭವಾಗಿ ನಮ್ಮವರು ಅಂತ ಯಾರನ್ನೂ ಸ್ವೀಕಾರ ಮಾಡುವುದಿಲ್ಲ ಒಂದು ಸಲ ಮಾಡಿದರೆ ಮುಗಿತ್ತು. ಸುಲಭವಾಗಿ ಕನೆಕ್ಟ್‌ ಆಗುತ್ತೆ ದೂರ ಹೋಗಲ್ಲ' ಎಂದು ಮೇಘನಾಗೆ ಧ್ರುವ ಐಸ್‌ ಕ್ರೀಮ್‌ ತಿನ್ನಿಸಿ ಮಾತನಾಡಿದ್ದಾರೆ.

click me!