‘ಅಮೃತಧಾರೆ’ ಕ್ಲೈಮ್ಯಾಕ್ಸ್‌ನಲ್ಲಿ ಕಾಣಿಸಿಕೊಳ್ಳದಿರಲು ಇದೇ ಕಾರಣ; ಕೊನೆಗೂ ಮೌನ ಮುರಿದ ನಟಿ ಮೇಘಾ ಶೆಣೈ!

Pavna Das   | ANI
Published : Nov 18, 2026, 04:16 PM IST
Megha Shenoy

ಸಾರಾಂಶ

Megha Shenoy: ಅಮೃತಧಾರೆ ಧಾರಾವಾಹಿಯಲ್ಲಿ ಸುಧಾ ಪಾತ್ರದ ಮೂಲಕ ಗಮನ ಸೆಳೆದ ನಟಿ ಮೇಘಾ ಶೆಣೈ ಕೊನೆಗೂ ತಾವು ಕೊನೆಗೆ ಕ್ಲೈಮಾಕ್ಸ್ ಶೂಟಿಂಗ್ ನಲ್ಲಿ ಯಾಕೆ ಭಾಗವಹಿಸಿಲ್ಲ, ಹಾಗೂ ಧಾರಾವಾಹಿಯ ಕುರಿತು ತಮ್ಮ ಮನದಾಳದ ಮಾತುಗಳನ್ನು ಬಿಚ್ಚಿಟ್ಟಿದ್ದಾರೆ. ನಟಿ ಏನು ಹೇಳಿದ್ದಾರೆ ನೋಡಿ.

ಅಮೃತಧಾರೆ ಧಾರಾವಾಹಿ ಕುರಿತು ಮೇಘಾ ಶೆಣೈ ಮನದಾಳದ ಮಾತು

ಇತ್ತೀಚೆಗಷ್ಟೇ ಅಂತ್ಯಗೊಂಡ ಕನ್ನಡದ ಜನಪ್ರಿಯ ಧಾರಾವಾಹಿ ‘ಅಮೃತಧಾರೆ’. ಇದರಲ್ಲಿ ಗೌತಮ್ ದಿವಾನ್ ತಂಗಿ ಸುಧಾ ಪಾತ್ರದ ಮೂಲಕ ಗಮನ ಸೆಳೆದವರು ಮೇಘಾ ಶೆಣೈ. ಪ್ರತಿ ಧಾರಾವಾಹಿಯಲ್ಲಿ ವಿಲನ್ ಆಗಿ, ಮಾಡರ್ನ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದ ಮೇಘಾ ಶೆಣೈಗೆ ಇದು ಚಾಲೆಂಜಿಂಗ್ ರೋಲ್ ಆಗಿತ್ತು.ಕಾರಣ ಈ ಧಾರಾವಾಹಿಯಲ್ಲಿ ಹಳ್ಳಿ ಮುಗ್ಧತೆಯನ್ನು ಹೊಂದಿರುವ ಮಹಿಳೆಯಾಗಿ ಮೇಘಾ ನಟಿಸಿದ್ದರು. ಆದರೆ ಇವರ ಪಾತ್ರವನ್ನು ಜನರಂತೂ ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದರು. ಇದೀಗ ಧಾರಾವಾಹಿ ಅಂತ್ಯವಾದ ಬಳಿಕ, ನಟಿ ಧಾರಾವಾಹಿ ಕುರಿತು, ಕ್ಲೈಮಾಕ್ಸ್ ದೃಶ್ಯಗಳಲ್ಲಿ ಭಾಗಿಯಾಗಲು ಸಾಧ್ಯವಾಗದ ಕುರಿತು ಮನ ಬಿಚ್ಚಿ ಮಾತುಗಳನ್ನಾಡಿದ್ದಾರೆ. ಈ ಕುರಿತು ನಟಿ ಹೇಳಿದ್ದೇನು ನೋಡಿ.

ಅಮೃತಧಾರೆ ಕ್ಲೈಮಾಕ್ಸ್ ದೃಶ್ಯಗಳಲ್ಲಿ ಮೇಘಾ ಶೆಣೈ ಯಾಕೆ ನಟಿಸಿಲ್ಲ? ನಟಿ ಹೇಳಿದ್ದೇನು?

ಅಮೃತಧಾರೆ ಧಾರಾವಾಹಿಯ ಸೆಟ್‌ನಿಂದ ಕೆಲವು ಸುಂದರ ನೆನಪುಗಳು. ಅಮೃತಧಾರೆ ಧಾರಾವಾಹಿ ಯಾವಾಗಲೂ ನನ್ನ ಹೃದಯಕ್ಕೆ ತುಂಬಾ ಹತ್ತಿರವಾಗಿರುತ್ತದೆ. ನನ್ನ ವೈಯಕ್ತಿಕ ಕೆಲಸಗಳ ಕಾರಣದಿಂದ ಧಾರಾವಾಹಿಯ ಕೊನೆಯ ಕೆಲವು ಕ್ಲೈಮ್ಯಾಕ್ಸ್ ಎಪಿಸೋಡ್‌ಗಳಲ್ಲಿ ಭಾಗಿಯಾಗಲು ಸಾಧ್ಯವಾಗಲಿಲ್ಲ. ಆದರೆ, ಇಂತಹ ಸುಂದರ ಕಥೆಯನ್ನು ನಮಗೆ ನೀಡಿದ ಮತ್ತು ಪ್ರೇಕ್ಷಕರಿಂದ ಅಪಾರ ಪ್ರೀತಿ ಹಾಗೂ ಮನ್ನಣೆ ಗಳಿಸಿದ ಈ ತಂಡಕ್ಕೆ ಧನ್ಯವಾದ ಹೇಳಬೇಕೆಂಬ ಆಸೆ ಯಾವಾಗಲೂ ಇತ್ತು.

ನನ್ನ 15 ವರ್ಷಗಳ ಕಲಾ ಪಯಣದಲ್ಲಿ, ಅಮೃತಧಾರೆ ನನಗೆ ವಿಶೇಷವಾದ ಗುರುತನ್ನು ಮತ್ತು ಪ್ರೇಕ್ಷಕರಿಂದ ಅಪಾರ ಪ್ರೀತಿಯನ್ನು ತಂದುಕೊಟ್ಟಿದೆ. ನನ್ನ ಪಾಲಿಗೆ ಸುಧಾ ಯಾವಾಗಲೂ ಅತ್ಯಂತ ವಿಶೇಷವಾದ ಪಾತ್ರಗಳಲ್ಲಿ ಒಂದಾಗಿರುತ್ತಾಳೆ. ಈ ಪಾತ್ರ ಮತ್ತು ಅದರೊಂದಿಗಿನ ನೆನಪುಗಳು ಸದಾ ನನ್ನ ಹೃದಯದಲ್ಲಿ ಉಳಿಯುತ್ತವೆ. ನನ್ನ ಮೇಲೆ ನಂಬಿಕೆ ಇಟ್ಟು ಈ ಪಾತ್ರವನ್ನು ನೀಡಿದ ಜೀ ಕನ್ನಡ ವಾಹಿನಿಗೆ ಹೃತ್ಪೂರ್ವಕ ಧನ್ಯವಾದಗಳು. ಹಾಗೆಯೇ, ನನ್ನ ಎಲ್ಲಾ ಅದ್ಭುತ ಸಹಕಲಾವಿದರು, ಪ್ರತಿಭಾವಂತ ತಂತ್ರಜ್ಞರು ಮತ್ತು ಈ ಸುಂದರ ಪಯಣದ ಭಾಗವಾಗಿದ್ದ ಪ್ರತಿಯೊಬ್ಬ ಅಮೃತಧಾರೆ ತಂಡದ ಸದಸ್ಯರಿಗೂ ನನ್ನ ಪ್ರೀತಿಯ ಧನ್ಯವಾದಗಳು.

ಈ ಸುಂದರ ಪಯಣಕ್ಕೆ ತೆರೆ ಬೀಳುತ್ತಿರುವುದು ನಿಜಕ್ಕೂ ಭಾವುಕ ಕ್ಷಣ. ಆದರೆ, ಮುಂದಿನ ದಿನಗಳಲ್ಲಿ ಮತ್ತಷ್ಟು ಒಳ್ಳೆಯ ಪ್ರಾಜೆಕ್ಟ್‌ಗಳಲ್ಲಿ ನಾವೆಲ್ಲರೂ ಮತ್ತೆ ಒಂದಾಗುತ್ತೇವೆ ಎಂಬ ಭರವಸೆ ಇದೆ. ಎಲ್ಲರಿಗೂ ಮುಂದಿನ ಪಯಣಕ್ಕೆ ಹಾರ್ದಿಕ ಶುಭಾಶಯಗಳು.

ನನ್ನ ಗ್ಯಾಲರಿಯಲ್ಲಿದ್ದ ಕೆಲವು ಸುಂದರ ಫೋಟೋಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಈ ಜನರು, ಈ ಸೆಟ್‌ಗಳು ಮತ್ತು ಇಲ್ಲಿ ಕಳೆದ ಪ್ರತಿಯೊಂದು ಕೆಲಸದ ದಿನವೂ ನನಗೆ ಸದಾ ಅಮೂಲ್ಯ ನೆನಪುಗಳಾಗಿರುತ್ತವೆ. ನೆನಪುಗಳಿಗೆ, ಪ್ರೀತಿಗೆ ಮತ್ತು ನನ್ನ ಸುಧಾಗೆ ಧನ್ಯವಾದಗಳು ಅಮೃತಧಾರೆ!’ ಎಂದು ಬರೆದುಕೊಳ್ಳುವ ಮೂಲಕ ಮೇಘಾ ಶೆಣೈ ತಮ್ಮ ಧಾರಾವಾಹಿ ಹಾಗೂ ತಂಡದ ಬಗ್ಗೆ ಮನದಾಳದ ಮಾತುಗಳನ್ನು ಬಿಚ್ಚಿಟ್ಟಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅಮೃತಧಾರೆ ಜೋಡಿ ರಾಣವ್-ರಾಧಾ ಮದುವೆಗೆ ಮುಹೂರ್ತ ಫಿಕ್ಸ್; ಲಗ್ನ ಪತ್ರಿಕೆಯ ವಿಶೇಷ ಸಾಲುಗಳು ವೈರಲ್!
ಪ್ರೀತಿಯಿಂದ ವ್ಯಕ್ತಿ ಬದಲಾಗ್ತಾರೆ ಎನ್ನೋದು ಶುದ್ಧ ಸುಳ್ಳು: ದಾಂಪತ್ಯದ ರಹಸ್ಯ ತೆರೆದಿಟ್ಟ ನಟಿ ಸಂಜನಾ ಬುರ್ಲಿ