ಅಮೃತಧಾರೆ ಜೋಡಿ ರಾಣವ್-ರಾಧಾ ಮದುವೆಗೆ ಮುಹೂರ್ತ ಫಿಕ್ಸ್; ಲಗ್ನ ಪತ್ರಿಕೆಯ ವಿಶೇಷ ಸಾಲುಗಳು ವೈರಲ್!

Pavna Das   | ANI
Published : Nov 18, 2026, 03:41 PM IST
Ranav Radha

ಸಾರಾಂಶ

ಅಮೃತಧಾರೆ ಧಾರಾವಾಹಿ ಮೂಲಕ ಖ್ಯಾತಿ ಪಡೆದ ಜೈದೇವ್ ಮತ್ತು ಮಲ್ಲಿ ಜೋಡಿ ಅಂದರೆ ರಾಣವ್ ಗೌಡ ಮತ್ತು ರಾಧಾ ಭಗವತಿ ಜೋಡಿ, ಶೀಘ್ರದಲ್ಲಿ ಹಸೆಮಣೆ ಏರಲಿದ್ದಾರೆ, ಈಗಾಗಲೇ ಡೇಟ್ ಫಿಕ್ಸ್ ಆಗಿದ್ದು, ಇದೇ ತಿಂಗಳು ಸತಿ ಪತಿಗಳಾಗಿ ಬಾಳ ಪಯಣ ನಡೆಸಲಿದ್ದಾರೆ ಜೋಡಿ.

ರಾಣವ್ ಗೌಡ- ರಾಧಾ ಭಗವತಿ ಮದುವೆ ಡೇಟ್ ಫಿಕ್ಸ್

ಜೀ ಕನ್ನಡದ ಜನಪ್ರಿಯ ಧಾರಾವಾಹಿ ಅಮೃತಧಾರೆ. ಈ ಧಾರಾವಾಹಿಯ ಪ್ರತಿಯೊಂದು ಪಾತ್ರಗಳು ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಅದರಲ್ಲಿ ಜೈದೇವ್ ಅಂತೂ ಜನರ ಮೆಚ್ಚುಗೆ ಪಡೆದು, ಪ್ರತಿವರ್ಷ ಬೆಸ್ಟ್ ವಿಲನ್ ಪ್ರಶಸ್ತಿಯನ್ನೂ ಸಹ ಗೆದ್ದಿದ್ದಾರೆ. ವಿಲನ್ ಪಾತ್ರದಲ್ಲೂ ಜೈದೇವ್ ರನ್ನು ಜನ ಇಷ್ಟಪಡೋದಕ್ಕೆ ಮುಖ್ಯ ಕಾರಣ ಅವರ ಸ್ಟೈಲ್, ಹಾಗೂ ಡೈಲಾಗ್ ಡೆಲಿವರಿ ಮತ್ತು ನಟನೆ. ಜೈದೇವ್ ಪಾತ್ರದಲ್ಲಿ ರಾಣವ್ ಗೌಡ ನಟನೆಗೆ ಸಖತ್ ಆಗಿ ಮೂಡಿ ಬಂದಿತ್ತು. ಕೊನೆಗೆ ಜೈದೇವ್ ಪಾತ್ರವನ್ನು ಎನ್ ಕೌಂಟರ್ ಮಾಡುವ ಮೂಲಕ ಧಾರಾವಾಹಿಯನ್ನು ಅಂತ್ಯ ಮಾಡಲಾಯಿತು. ಇದೀಗ ಧಾರಾವಾಹಿ ಮುಗಿಯುತ್ತಿದ್ದಂತೆ, ಗುಡ್ ನ್ಯೂಸ್ ಕೊಡೋದಕ್ಕೆ ರೆಡಿಯಾಗಿದ್ದಾರೆ ರಾಣವ್ ಗೌಡ.

ಸೀರಿಯಲ್ ಪತ್ನಿ ಜೊತೆ ಲವ್ವಲ್ಲಿ ಬಿದ್ದ ಜೈದೇವ್

ಅಮೃತಧಾರೆ ಧಾರಾವಾಹಿಯಲ್ಲಿ ಆರಂಭದ ದಿನಗಳಲ್ಲಿ ಜೈದೇವ್ ಪತ್ನಿ ಮಲ್ಲಿಯಾಗಿ ನಟಿಸಿದ ನಟಿ ರಾಧಾ ಭಗವತಿ ಜೊತೆ ಪ್ರೀತಿಯಲ್ಲಿ ಬಿದ್ದಿರುವ ರಾಣವ್ ಗೌಡ, ಕೆಲವು ತಿಂಗಳ ಹಿಂದೆ ಸದ್ದಿಲ್ಲದೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆ ಬಳಿಕವಷ್ಟೆ ಅವರಿಬ್ಬರು ಪ್ರೀತಿ ಮಾಡುತ್ತಿದ್ದ ವಿಚಾರ ಬಹಿರಂಗವಾಗಿತ್ತು. ವಿಲನ್ ಜೈದೇವ್ ಅವರ ನಿಜವಾದ ಒಳ್ಳೆ ಗುಣ ನೋಡಿ, ರಾಧಾ ಅವರೇ ಮೊದಲಿಗೆ ಲವ್ವಲ್ಲಿ ಬಿದ್ದು ಪ್ರಪೋಸ್ ಮಾಡಿದ್ದರಂತೆ. ರಾಣವ್ ಕೂಡ ಒಪ್ಪಿಗೆ ಸೂಚಿಸಿದ್ದರು. ಅಮೃತಧಾರೆ ಧಾರಾವಾಹಿಯಿಂದ ಅರ್ಥದಲ್ಲೇ ಹೊರ ಬಂದಿದ್ದ ರಾಧಾ ಬಳಿಕ ಕಲರ್ಸ್ ಕನ್ನಡದ ‘ಭಾರ್ಗವಿ ಎಲ್ ಎಲ್ ಬಿ’ ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸಿದ್ದರು. ಇದೀಗ ಶೀಘ್ರದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

ರಾಣವ್-ರಾಧಾ ಮದುವೆ ಯಾವಾಗ

ವೈರಲ್ ಆಗಿರುವ ಸುದ್ದಿಯ ಪ್ರಕಾರ ​ನವೆಂಬರ್ 25ರ ಬುಧವಾರದಂದು ಸಂಜೆ 6.30ರಿಂದ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ, ನವೆಂಬರ್ 26 ಗುರುವಾರ ಬೆಳಗ್ಗೆ 8.45 ರಿಂದ 9.45ರ ನಡುವಿನ ಶುಭ ಮುಹೂರ್ತದಲ್ಲಿ ಮದುವೆ ನಡೆಯಲಿದೆ. ಮದುವೆ ಬೆಂಗಳೂರಿನಲ್ಲೇ ನಡೆಯಲಿದೆ ಎನ್ನಲಾಗಿದೆ. ಇನ್ನು ಈ ಜೋಡಿಯ ಲಗ್ನ ಪತ್ರಿಕೆ ತುಂಬಾನೆ ವಿಶೇಷವಾಗಿದ್ದು, ಇದರಲ್ಲಿ ತಮ್ಮ ಅಮೃತಧಾರೆ ಧಾರಾವಾಹಿಯಿಂದ ಹುಟ್ಟಿದ ಪ್ರೀತಿಯ ಕುರಿತು ಕೂಡ ಮಾಹಿತಿ ಹಂಚಿಕೊಂಡಿದ್ದಾರೆ.

ಲಗ್ನ ಪತ್ರಿಕೆಯ ಸಾಲುಗಳು ಹೀಗಿವೆ “ಪ್ರೀತಿಯ ಅಮೃತಧಾರೆಯಲಿ, ಎರಡು ಜೀವ ಒಂದಾಯಿತಿಲ್ಲಿ, ಪ್ರೀತಿಯ ರಂಗಿನ ಓಕುಳಿ, ಪ್ರೀತಿಯೇ ಮಹತ್ತು ಬಾಳಲಿ, ಸೂರ್ಯನ ತೇಜಸ್ಸರಿಸಿರೋ ಈ ಯಾತ್ರೆಗೆ ಬೆಳದಿಂಗಳ ಶೀತಲ ಬದುಕಲಿ ನೆಲೆಯಾಗೆ ಜೀವನ ಸುಖಕರ” ಎಂದು ಸುಂದರ ಸಾಲುಗಳನ್ನು ಬರೆದಿದ್ದಾರೆ. ಆ ಮೂಲಕ ತಮ್ಮ ಪ್ರೀತಿಯ ಕಥೆಯನ್ನೂ ಸಹ ತೆರೆದಿಟ್ಟಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಪ್ರೀತಿಯಿಂದ ವ್ಯಕ್ತಿ ಬದಲಾಗ್ತಾರೆ ಎನ್ನೋದು ಶುದ್ಧ ಸುಳ್ಳು: ದಾಂಪತ್ಯದ ರಹಸ್ಯ ತೆರೆದಿಟ್ಟ ನಟಿ ಸಂಜನಾ ಬುರ್ಲಿ
ಹೊಸ ಮನೆಗೆ ಕಾಲಿಟ್ಟ 'ಆಸೆ' 'ರಾಮಾಚಾರಿ' ಧಾರಾವಾಹಿ ಖ್ಯಾತಿಯ ಅಭಿಜ್ಞಾ ಭಟ್..ಇಲ್ಲಿದೆ ಗೃಹಪ್ರವೇಶದ ಸಂಭ್ರಮದ ಫೋಟೋಗಳು