ಜನರ ಮಾತಿನಿಂದ ಬೇಸರವಾಗುತ್ತದೆ; ಮಗನ ಪತ್ರ ಓದಿ ಕಣ್ಣೀರಿಟ್ಟ ಮಾಸ್ಟರ್ ಅನಂದ್

Published : Jan 01, 2023, 03:21 PM ISTUpdated : Jan 01, 2023, 03:22 PM IST
ಜನರ ಮಾತಿನಿಂದ ಬೇಸರವಾಗುತ್ತದೆ; ಮಗನ ಪತ್ರ ಓದಿ ಕಣ್ಣೀರಿಟ್ಟ ಮಾಸ್ಟರ್ ಅನಂದ್

ಸಾರಾಂಶ

ಗುರುಕುಲದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಪುತ್ರ ಬರೆದ ಪತ್ರವನ್ನು ಓದಿ ಭಾವುಕರಾದ ಮಾಸ್ಟರ್ ಅನಂದ್. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ನಟನ ಮಾತು...  

ಕನ್ನಡ ಚಿತ್ರರಂಗದ ಜನಪ್ರಿಯ ನಟ, ನಿರ್ದೇಶಕ ಹಾಗೂ ನಿರೂಪಕ ಮಾಸ್ಟರ್ ಆನಂದ್ ಹುಟ್ಟುಹಬ್ಬವನ್ನು ಈ ವರ್ಷ ಜೀ ಕುಟುಂಬ ಹೊಸ ವರ್ಷದ ಸಂಭ್ರಮ ಮಹಾಸಂಗಮದಲ್ಲಿ ಆಚರಿಸಲಾಗಿದೆ. ಇನ್ನಿತ್ತರ ಕಿರುತೆರೆ ಕಲಾವಿದರು ವೇದಿಕೆ ಮೇಲೆ ಆಗಮಿಸಿ ಆನಂದ್ ಅವರಿಗೆ ಬಿಗ್ ಸರ್ಪ್ರೈಸ್ ಕೊಟ್ಟಿದ್ದಾರೆ. ಆನಂದ್‌ಗೆ ಖುಷಿಯಾಗಬೇಕು ಎಂದು ಅಪ್ಪ ಐ ಲವ್ ಯು ಅನ್ನೋ ಹಾಡಿಗೆ ಪುತ್ರನ ಜೊತೆಗಿರುವ ವಿಡಿಯೋ ಪ್ಲೇ ಮಾಡಿದ್ದಾರೆ. ಇದನ್ನು ನೋಡಿ ಆನಂದ್ ಕಣ್ಣೀರಿಟ್ಟಿದ್ದಾರೆ.

'ನನ್ನ ಮಗ ಓದುತ್ತಿರುವುದು ಹಾಸ್ಟಲ್‌ನಲ್ಲಿ ಹೀಗಾಗಿ ಆತನನ್ನು ಭೇಟಿ ಮಾಡಲು ತುಂಬಾ ಕಡಿಮೆ ಸಮಯ ಸಿಗುತ್ತದೆ' ಎಂದು ಆನಂದ್ ಮಾತನಾಡುತ್ತಿದ್ದಂತೆ ಪುತ್ರ ಬರೆದ ಪತ್ರವನ್ನು ಕೈಗೆ ನೀಡುತ್ತಾರೆ. ಪತ್ರ ನೋಡುತ್ತಲೇ ಆನಂದ್ ಭಾವುಕರಾಗುತ್ತಾರೆ.

'ಹರಿ ಓಂ ಅಪ್ಪ. ಹುಟ್ಟುಹಬ್ಬದ ಶುಭಾಶಯಗಳು.ನಾನು ನಿಮ್ಮ ಜೊತೆ ಸಮಯ ಕಳೆಯುತ್ತಿದ್ದೆ. ಗುರುಕುಲಕ್ಕೆ ಬಂದ ಕಾರಣದಿಂದ ನಿಮ್ಮ ಜೊತೆ ಸಮಯ ಕಳೆಯಲಾಗಲಿಲ್ಲ. ಪ್ರತಿ ವರ್ಷ ನಿಮ್ಮ ಹುಟ್ಟುಹಬ್ಬಕ್ಕೆ ಇರುತ್ತಿದ್ದೆ. ನನಾಉ ಗುರುಕುಲದ ಅಧ್ಯಾಯನ ಮುಗಿಯುವವರೆಗೂ ನಿಮ್ಮ ಹುಟ್ಟುಹಬ್ಬಕ್ಕೆ ಇರಲಾಗುವುದಿಲ್ಲ. ಹಾಗೆ ನಿಮಗೆ 'ಹೊಸ ವರ್ಷದ ಶುಭಾಶಯಗಳು'. ನಾನು ನಿಮ್ಮನ್ನು ಆಗಾಗ ನೆನಪಿಸಿಕೊಳ್ಳುತ್ತಿರುತ್ತೇನೆ. ಮನೆಯಲ್ಲಿ ನಾನು ನಿಮ್ಮ ಜೊತೆ ವಿಡಿಯೋ ಗೇಮ್ಸ್‌ ಆಡುತ್ತಿದ್ದಾಗ ಸಿಗುತ್ತಿದ್ದ ಖುಷಿ ಈಗ ಸಿಗುವಿದಿಲ್ಲ. ಐ ಲವ್ ಯು ಅಪ್ಪ' ಎಂದು ಆನಂದ್ ಪುತ್ರ ಪತ್ರ ಬರೆದಿದ್ದಾರೆ.

'ನಾವು ಗಟ್ಟಿಯಾಗಿರಬೇಕು. ಏನಂದ್ರೆ ಇದೆಲ್ಲಾ ವಯೋಧರ್ಮದ ಆಸೆಗಳು ಅಂತ ಹೇಳುತ್ತೀವಿ. ಅ ವಯಸ್ಸಿನಲ್ಲಿ ಅವನಿಗೆ ಈ ರೀತಿ ಆಸೆಗಳು ಇರುತ್ತದೆ..ಅವನ ಜೊತೆ ವಿಡಿಯೋ ಆಡುತ್ತ ಸಮಯ ಕೊಡಬಹುದು ಇಲ್ಲ ಅಂತಿಲ್ಲ ಆದರೆ ಅವನ ಒಳ್ಳೆಯ ಭವಿಷ್ಯಕ್ಕೆ ಕೆಲವೊಂದು ಕೆಲಸಗಳನ್ನು ಮಾಡಬೇಕಾಗುತ್ತದೆ. ಅವನು ಚೆನ್ನಾಗಿ ಓದಬೇಕು. ಖುಷಿ ಏನಂದರೆ ಅತನ ಬರೆವಣಿಗೆ ಇಷ್ಟೊಂದು ಚೆನ್ನಾಗಿ ಆಗಿದೆ. ಹ್ಯಾಂಡ್ ರೈಟಿಂಗ್ ಸುಧಾರಿಸಿದೆ ಅದು ಖುಷಿ ಆಯ್ತು ನನಗೆ. ಮಿಸ್ಸಿಂಗ್ ಏನು ಇಲ್ಲ. ನಾವು ಯಾವಾಗ ಸಮಯ ಮಾಡಿಕೊಳ್ಳುತ್ತೀವಿ ಅವಾಗ ಬರ್ತಡೇ ಯಾವಾಗ ಸಿಗುತ್ತೀವಿ ಅದೇ ಹೊಸ ವರ್ಷ ಕಳೆಯಲು ಸಮಯ ಸಿಕ್ಕರೆ ಅದೇ ವಿಡಿಯೋ ಗೇಮ್, ಅಲ್ಲಿ ತಿನ್ನೋ ಬನ್‌ನ ಬರ್ಗರ್ ಅಂದುಕೊಂಡರೆ ಜೀವನ ಚೆನ್ನಾಗಿರುತ್ತದೆ' ಎಂದು ಆನಂದ್ ಮಾತನಾಡಿದ್ದಾರೆ.

New Year 2023; 'ನಾನು ಅಮ್ಮನ ಬಾಲ, ಅಪ್ಪನ ಕೊಂಬು' ಎಂದ ವಂಶಿಕಾ

'ಮನೆಯಲ್ಲಿ ಎರಡು ಮಕ್ಕಳಿದ್ದಾಗ ನಾರ್ಮಲ್ ಆಗಿ ಹೊಲಿಸುತ್ತಾರೆ. ಅದರಲ್ಲೂ ಮಗಳು ಸ್ವಲ್ಪ ಹೆಸರು ಮಾಡಿದ್ದಾರೆ. ಈ ಹೊಲಿಕೆ ಒಂದು ಕರೆ ಆದ್ರೆ ಕೆಲವರು ನನಗೆ ಹೇಳುತ್ತಾರೆ ಆಕೆ ವಿದ್ಯಾಭ್ಯಾಸದ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ ಯಾವಾಗಲೂ ಆಕ್ಟಿಂಗ್‌ಗೆ ಕಳುಹಿಸುತ್ತೀನಿ ಅದು ಇದು ಅನ್ನೋ ತರ ಮಾತನಾಡುತ್ತಾರೆ. ಹೀಗೆ ಮಾತನಾಡುವವರು ನನ್ನ ಮಗನನ್ನು ನೋಡಿ ತಿಳಿದುಕೊಳ್ಳಬೇಕು ನನ್ನೊಳಗೆ ಒಬ್ಬ ಜವಾಬ್ದಾರಿ ಇರುವ ತಂದೆ ಇದ್ದಾನೆ ಎಂದು. ಎಲ್ಲಾದಕ್ಕಿಂತ ಮುಖ್ಯವಾಗಿ ನನ್ನ ಮಗಳು ಬಾಲನಟಿ ಆಗುವ ಮುಂಚೆ ನಾನು ಒಬ್ಬ ಬಾಲ ಕಲಾವಿದ ಆಗಿದ್ದೆ ಅನ್ನೋದು ಮರೆತು ಸಲಹೆ ಕೊಡುತ್ತಾರೆ. ಅದು ಬಹಳ ನೋವು ಕೊಡುತ್ತದೆ. ವಿದ್ಯಾಭ್ಯಾಸಕ್ಕೆ ಮೊದಲಿಂದಲ್ಲೂ ನಾನು ಆಧ್ಯತೆ ಕೊಟ್ಟಿರುವೆ...ಹಾಗೆ ನನ್ನ ಮಗಳಿಗೂ ಸಹ ನಾನು ಕೊಡುವೆ. ನನ್ನ ಮಗನಿಗೆ ಈಗ ಕೊಡುತ್ತಿರುವೆ. ಎಲ್ಲವೂ ಭಗವಂತನ ಇಚ್ಛೆ' ಎಂದ ಅನಂದ್ ಹೇಳಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಸ್ಪಂದನಾ ಸೋಮಣ್ಣ ಮುಂದೆ ಧ್ರುವಂತ್ ಅಸಭ್ಯ ಸನ್ನೆ ಮಾಡಿದ್ರು: ರಜತ್‌ ಗಂಭೀರವಾದ ಆರೋಪ
BBK 12: ಪದೇ ಪದೇ ಕಿಚ್ಚ ಸುದೀಪ್‌ ಹೇಳ್ತಿರುವಂತೆ ರಜತ್‌ ವೈರಲ್ ವಿಡಿಯೋ ಅಸಲಿ ವಿಷಯ ಏನು? ಅಂಥದ್ದೇನಿದೆ?