ಬೀದಿಯಲ್ಲಿ ನಿಂತು ಕನ್ನಡ ಕೆಲಸ ಮಾಡುವೆ; ಕಪ್ ಗೆದ್ದಿಲ್ಲ ಜನರನ್ನು ಗೆದ್ದಿರುವೆ: ಬಿಗ್ ಬಾಸ್ ರೂಪೇಶ್ ರಾಜಣ್ಣ

Published : Jan 01, 2023, 11:21 AM IST
ಬೀದಿಯಲ್ಲಿ ನಿಂತು ಕನ್ನಡ ಕೆಲಸ ಮಾಡುವೆ; ಕಪ್ ಗೆದ್ದಿಲ್ಲ ಜನರನ್ನು ಗೆದ್ದಿರುವೆ: ಬಿಗ್ ಬಾಸ್ ರೂಪೇಶ್ ರಾಜಣ್ಣ

ಸಾರಾಂಶ

100 ದಿನಗಳ ಬಿಗ್ ಬಾಸ್ ಜರ್ನಿ ಪೂರೈಸಿ ಹೊರ ಬಂದಿರುವ ರೂಪೇಶ್ ರಾಜಣ್ಣ. ಅಭಿಮಾನಿಗಳ ಜೈಕಾರ ನೋಡಿ ಫುಲ್ ಖುಷ್....

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಬಿಗ್ ಬಾಸ್ ಸೀಸನ್ 9 ರಿಯಾಲಿಟಿ ಶೋ ನಿನ್ನೆ ಅದ್ಧೂರಿಯಾಗಿ ಫಿನಾಲೆ ಕಾರ್ಯಕ್ರಮ ಮಾಡುವ ಮೂಲಕ ಈ ಸೀಸನ್ ಅಂತ್ಯವಾಗಿದೆ. ವಿನ್ನರ್ ಟ್ರೋಪಿ ರೂಪೇಶ್ ಶೆಟ್ಟಿ ಕೈ ಸೇರಿದೆ, ಎರಡನೇ ಸ್ಥಾನ ರಾಕೇಶ್ ಅಡಿಗ, ಮೂರನೇ ಸ್ಥಾನ ದೀಪಿಕಾ ದಾಸ್ ಹಾಗೂ ನಾಲ್ಕನೇ ಸ್ಥಾನವನ್ನು ರೂಪೇಶ್ ರಾಜಣ್ಣ ಪಡೆದುಕೊಂಡಿದ್ದಾರೆ. ಬಿಗ್ ಬಾಸ್ ಮನೆಯಿಂದ ಹೊರ ಬರುತ್ತಿದ್ದಂತೆ ಅಭಿಮಾನಿಗಳ ಜೊತೆ ರಾಜಣ್ಣ ಸಂಭ್ರಮಿಸಿದ್ದಾರೆ.

ರಾಜಣ್ಣ ಮಾತು:

'ಕನ್ನಡಿಗರ ಧ್ವನಿಯಾಗಿ ನಾನು ಬಿಗ್ ಬಾಸ್ ಮನೆಗೆ ಹೋಗಿದ್ದು. ಸಾಮಾಜಿಕ ಜಾಲತಾಣದಲ್ಲಿ ನನ್ನ ಕನ್ನಡದ ಪರ ಹೋರಾಟ ನಡೆಯುತ್ತಿತ್ತು ನಮ್ಮ ವಿಚಾರಗಳು ಬಿಗ್ ಬಾಸ್‌ ಮೂಲಕ ಜನರಿಗೆ ಹೆಚ್ಚಿಗೆ ತಲುಪಿಸಬಹುದು ಅನ್ನೋ ಉದ್ದೇಶವಿತ್ತು. ಬಿಗ್ ಬಾಸ್‌ ಮನೆಯಿಂದ ಹೊರ ಬರುವಾಗ ನಾನು ಫೈನಲಿಸ್ಟ್‌ ಅಂತ ನಾನು ಹೇಳಿಕೊಳ್ಳುವುದಿಲ್ಲ ಇಲ್ಲಿ ಇರುವವರು ನನ್ನ ಪ್ರಕಾರ ಫೈನಲಿಸ್ಟ್‌ಗಳು. ಮನೆಯಲ್ಲಿ ಇದ್ದಷ್ಟು ಸಮಯದಲ್ಲಿ ನಾನು ನನ್ನ ಕನ್ನಡ ಬರಹದ ಟೀ-ಶರ್ಟ್‌ ಧರಿಸಿ ಬಿಗ್ ಬಾಸ್ ಆಟವಾಡಿರುವೆ. ಬಿಗ್ ಬಾಸ್ ಹೋಗಿ ಬಂದ್ಮೇಲೆ ರಾಜಣ್ಣ ಕನ್ನಡ ಕೆಲಸ ಮಾಡಲ್ಲ ಅಂತ ಜನರು ಅಂದುಕೊಂಡಿರಬಹುದು ತಲೆ ಕೆಡಿಸಿಕೊಳ್ಳುವುದಿಲ್ಲ ಎಷ್ಟು ಮಾಡಿದ್ದೀವಿ ಈಗ ಅದರ ಡಬಲ್ ಕೆಲಸಗಳು ಇನ್ನು ಮುಂದೆ ಪ್ರಾರಂಭವಾಗುತ್ತದೆ. ನಮ್ಮ ಕನ್ನಡಿಗರಿಗೆ ನಮ್ಮ ಕರ್ನಾಟಕಕ್ಕೆ ಏನೇ ಧಕ್ಕೆಯಾದ್ದರೂ ಇಲ್ಲಿಂದ ಹುಬ್ಬಳ್ಳಿ ಧಾರವಾಡ ಗದಗ ಯಾವ ಭಾಗಕ್ಕೆ ಇದ್ದರೂ ನಾವು ಹೋಗುತ್ತೇವೆ. ಹೇಗೆ ಬೀದಿಯಲ್ಲಿ ನಿಂತುಕೊಂಡು ಕನ್ನಡ ಕೆಲಸ ಮಾಡುತ್ತಿದ್ದೆ ನಾನು ಬದುಕಿರುವವರೆಗೂ ನನ್ನ ಉಸಿರು ಕನ್ನಡ ನಮ್ಮ ಜೀವನ ಕನ್ನಡ' ಎಂದು ಖಾಸಗಿ ಮಾಧ್ಯಮದಲ್ಲಿ ರಾಜಣ್ಣ ಮಾತನಾಡಿದ್ದಾರೆ.

'ನನ್ನ ಜೀವನದಲ್ಲಿ ಯಾವ ಬದಲಾವಣೆನೂ ಇಲ್ಲ. ನಾನು ಬಿಗ್ ಬಾಸ್‌ ಮನೆಗೆ ಕಾಲಿಟ್ಟ ಆರಂಭದಲ್ಲಿ ಅಂದ್ರೆ ಮೊದಲು ಎರಡು ವಾರಗಳ ಆಟ ನೋಡಿ ಎಲ್ಲರಿಗೂ ಅನಿಸಿರುತ್ತದೆ ಇಲ್ಲಿಗೆ ಕಥೆ ಕ್ಲೋಸ್‌ ಇವರದ್ದು ಅಂತ ನನಗೂ ಹಾಗೆ ಅನಿಸಿತ್ತು. ಎರಡನೇ ವಾರ ನಾನು ಜೈಲಿಗೆ ಹೋಗಿ ಕುಳಿತುಕೊಂಡಾಗ ಒಂದು ನಿರ್ಧಾರ ತೆಗೆದುಕೊಳ್ಳುವೆ...ಅಲ್ಲಿಂದ ನಾನು ಯಾಕೆ ಹೊಸ ಆಟಗಾರನಾಗಿ ರೂಪಗೊಳ್ಳಬಾರದು ಎಂದು ಕಿಚ್ಚು ನನ್ನ ಹುಟ್ಟಿಕೊಳ್ಳುತ್ತದೆ.' ಎಂದು ರಾಜಣ್ಣ ಹೇಳುತ್ತಾರೆ.

BBK9 ತಪ್ಪು ಒಪ್ಪಿಕೊಳ್ಳಲು ಕಷ್ಟವಾಗುತ್ತೆ; ರೂಪೇಶ್ ರಾಜಣ್ಣಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ ಸುದೀಪ್

'9 ನವೀನರು ಹಾಗೂ 9 ಪ್ರವೀಣರು ಇದ್ದರು...ಪ್ರವೀಣರಲ್ಲಿ ಉಳಿದುಕೊಂಡ ಒಬ್ಬ ಸ್ಪರ್ಧಿ ಅಂದ್ರೆ ರೂಪೇಶ್ ರಾಜಣ್ಣ. ಬಿಗ್ ಬಾಸ್ ಅಷ್ಟು ಸುಲಭವಲ್ಲ...ಇದು ಸ್ಕ್ರಿಪ್ಟ್‌ ಯಾರೋ ಹೇಳಿಕೊಡುತ್ತಾರೆ ಹಾಗೇ ಹೀಗೆ ಅಂತಾರೆ ಅದೆಲ್ಲ ಸುಳ್ಳು...ನನ್ನ ತಲೆಯಲ್ಲೂ ಇದೇ ಇತ್ತು. ಜನರ ಜೊತೆ ಒಂದು ಮನೆಯಲ್ಲಿ ಹೇಗಿರುತ್ತೀವಿ ಎಂದು ತೋರಿಸುವುದೇ ಬಿಗ್ ಬಾಸ್. ರೂಪೇಶ್ ರಾಜಣ್ಣ ಫಿನಾಲೆ ಬರುವುದಿಲ್ಲ ಅಂದುಕೊಂಡಿದ್ದರು ಒಂದು ಖುಷಿ ವಿಚಾರ ಅಂದ್ರೆ 100 ದಿನವೂ ಮುಟ್ಟಿ ಹೊರಗಡೆ ಬಂದಿರುವೆ. ನನ್ನ ಪರವಾಗಿ ಕಾಮೆಂಟ್‌ಗಳಲ್ಲಿ ವಾದ ಮಾಡಿಕೊಂಡು ನಮ್ಮ ಹುಡುಗರು ಎಷ್ಟು ಕಷ್ಟ ಪಟ್ಟಿದ್ದಾರೆ ಅನ್ನೋದು ನಮಗೆ ಅರ್ಥವಾಗುತ್ತದೆ ಇವ್ರು ಮಾತ್ರ ಅಲ್ಲ ಅವ್ರು ಮನೆಯವರು ಸಪೋರ್ಟ್‌ ಮಾಡಿದ್ದಾರೆ ವೋಟ್ ಮಾಡಿದ್ದಾರೆ. ಕಪ್ ಗೆಲ್ಲುವುದಕ್ಕಿಂತ ಹೆಚ್ಚಾಗಿ ಇಷ್ಟು ಜನರ ಅಭಿಮಾನವನ್ನು ಗೆದ್ದಿರುವೆ. ಫಿನಾಲೆ ದಿನಕ್ಕೆ ಕರೆದುಕೊಂಡು ಬಂದಿರುವುದಕ್ಕೆ ಅವರ ಪಾದಕ್ಕೆ ನನ್ನ ನಮಸ್ಕಾರ ಕನ್ನಡಿಗರಿಗೆ ನಮಸ್ಕಾರ' ಎಂದಿದ್ದಾರೆ ರಾಜಣ್ಣ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಪದೇ ಪದೇ ಕಿಚ್ಚ ಸುದೀಪ್‌ ಹೇಳ್ತಿರುವಂತೆ ರಜತ್‌ ವೈರಲ್ ವಿಡಿಯೋ ಅಸಲಿ ವಿಷಯ ಏನು? ಅಂಥದ್ದೇನಿದೆ?
ಏನೂ ಮಾಡದೆ ಸ್ಪಂದನಾ ಸೋಮಣ್ಣ Bigg Boss ಮನೇಲಿ ಇರೋದು ಹೇಗೆ? ಕಿಚ್ಚ ಸುದೀಪ್‌ ಬಿಚ್ಚಿಟ್ಟ ಸತ್ಯ ಏನು?