ಬಿಗ್​ಬಾಸ್​ ಮನೆ ಹೊಕ್ಕ ಮುಸುಕುಧಾರಿಗಳು! ಸಾಮಗ್ರಿಗಳೆಲ್ಲಾ ಪೀಸ್​ ಪೀಸ್​: ಸ್ಪರ್ಧಿಗಳ ಚೀರಾಟ- ಕೂಗಾಟ

By Suchethana D  |  First Published Oct 11, 2024, 12:09 PM IST

ಬಿಗ್​ಬಾಸ್​ ಮನೆಯೊಳಗೆ ಹೊಕ್ಕ ಮುಸುಕುಧಾರಿಗಳು ಸಾಮಗ್ರಿಗಳೆಲ್ಲಾ ಪೀಸ್​ ಪೀಸ್​ ಮಾಡಿದ್ದಾರೆ. ಮುಂದೇನಾಯ್ತು ನೋಡಿ!
 


ಕನ್ನಡದ ಬಿಗ್​ಬಾಸ್​ ಸೀಸನ್​ 11 ಹೊಸ ಕಾನ್ಸೆಪ್ಟ್​ ಜೊತೆ ವೀಕ್ಷಕರ ಮನಸ್ಸನ್ನು ರಂಜಿಸುತ್ತಿದೆ. ಈ ಬಾರಿಯ ಹೈಲೈಟೇ ಸ್ವರ್ಗ ಮತ್ತು ನರಕ. ಒಂದಿಷ್ಟು ಮಂದಿಯನ್ನು ಸ್ವರ್ಗಕ್ಕೆ, ಮತ್ತೊಂದಿಷ್ಟು ಮಂದಿಯನ್ನು ನರಕಕ್ಕೆ ಕಳುಹಿಸಲಾಗಿತ್ತು. ಪ್ರತಿ ಬಾರಿಯಂತೆ ಕೂಗಾಟ, ಕಿರುಚಾಟ, ರೊಮಾನ್ಸ್​ ಎಲ್ಲವೂ ಈ ಬಾರಿಯೂ ಮುಂದುವರೆದಿದೆ. ಬಿಗ್​ಬಾಸ್​​ ಅಂದರೇನೇ ಏನು ಎಂಬ ಬಗ್ಗೆ ಇದಾಗಲೇ ವೀಕ್ಷಕರಿಗೆ ಅರಿವಾಗಿದ್ದರೂ, ಅಲ್ಲಿ ನಡೆಯುವುದೆಲ್ಲಾ ಸತ್ಯ ಎಂಬಂತೆ ನೋಡುವ ದೊಡ್ಡ ವರ್ಗವೇ ಇದೆ ಎನ್ನುವುದಕ್ಕೆ ಇದರ ಟಿಆರ್​ಪಿ ರೇಟ್​ ನೋಡಿದರೆ ತಿಳಿಯುತ್ತದೆ. ಎಲ್ಲಾ ರಿಯಾಲಿಟಿ ಷೋ, ಸೀರಿಯಲ್​ಗಳನ್ನು ಹಿಂದಿಕ್ಕಿ ಈ ಬಾರಿಯೂ ಬಿಗ್​ಬಾಸ್​​ ವಿನ್​ ಆಗಿರುವ ಬಗ್ಗೆ ಇದಾಗಲೇ ಸುದೀಪ್​ ಅವರು ಸೋಷಿಯಲ್​  ಮೀಡಿಯಾದಲ್ಲಿ ಶೇರ್​ ಮಾಡಿಕೊಂಡಿದ್ದಾರೆ.  ಎಲ್ಲಾ ಭಾಷೆಗಳ ಬಿಗ್​ಬಾಸ್​ ನಲ್ಲಿ ಇರುವಂತೆಯೇ ಒಂದಿಷ್ಟು ಸಿದ್ಧ ಸೂತ್ರಗಳೇನೂ ಬದಲಾಗಿಲ್ಲ. ಆದರೂ ಈ ಬಾರಿಯ ಹೊಸ ವಿಷಯ ಎಂದರೆ ಸ್ವರ್ಗ ಮತ್ತು ನರಕ.

ಆದರೆ ಇದೀಗ, ಇವೆರಡೂ ಇರುವುದಿಲ್ಲವಾ ಎನ್ನುವ ಸಂಶಯ ಬಿಗ್​ಬಾಸ್​ ಪ್ರೇಮಿಗಳನ್ನು ಕಾಡುತ್ತಿದೆ. ಇದಕ್ಕೆ ಕಾರಣ, ಮಧ್ಯರಾತ್ರಿ ನುಗ್ಗಿದ ಮುಸುಕುಧಾರಿಗಳು. ಅಲ್ಲಿದ್ದ ಸ್ಪರ್ಧಿಗಳು ಭಯ ಪಟ್ಟುಕೊಂಡಂತೆ ವರ್ತಿಸಿರುವುದನ್ನು  ಈಗ ಬಿಡುಗಡೆ ಮಾಡಿರುವ ಪ್ರೊಮೋದಲ್ಲಿ ನೋಡಬಹುದು. ಮುಸುಕುಧಾರಿಗಳು ಬಂದು ನರಕದ ಎಲ್ಲಾ ಸಾಮಗ್ರಿ, ಸರಕರಣೆಗಳನ್ನು ಪೀಸ್​ ಪೀಸ್​​ ಮಾಡಿದ್ದಾರೆ. ಇವರು ಒಳಗೆ ಹೊಕ್ಕುತ್ತಿದ್ದಂತೆಯೇ ಎಚ್ಚರಿಕೆಯ ಗಂಟೆ ಸೈರನ್​ ಬಾರಿಸಿದೆ. ಮೇಲಿನಿಂದ ಏನೋ ಒಂದು ವಸ್ತು ಕೆಳಕ್ಕೆ ಬಂದಿದೆ. ಅದನ್ನು ನೋಡಿ ಸ್ಪರ್ಧಿಗಳು ಹೆದರುವಂತೆ ಮಾಡಿದ್ದಾರೆ. 

Tap to resize

Latest Videos

undefined

ಬಿಗ್​ಬಾಸ್ ಮನೆಯೊಳ​ಗೆ ಸ್ಪರ್ಧಿಯಾಗಿ ಕತ್ತೆ ಎಂಟ್ರಿ! ಜನರಿಂದ ದೂರು ದಾಖಲು: ಪೇಟಾನಿಂದ ನೋಟಿಸ್ ಜಾರಿ...

ಆದರೆ ಅಸಲಿಗೆ,  ಕ್ರೇನ್​ ಮೂಲಕ ಮನೆ ಒಳಗೆ ಬಂದ ಮುಸುಕುಧಾರಿಗಳು   ನರಕದ ವಸ್ತುಗಳನ್ನೆಲ್ಲ ಪೀಸ್ ಪೀಸ್ ಮಾಡಿರುವ ಹಿನ್ನೆಲೆಯಲ್ಲಿ, ಇಲ್ಲಿಗೆ  ನರಕ ಹಾಗೂ ಸ್ವರ್ಗದ ಕಾನ್ಸೆಪ್ಟ್  ಪೂರ್ಣಗೊಂಡಿದೆ ಎಂದೇ ಹೇಳಲಾಗುತ್ತಿದೆ. ಮಾಮೂಲಿನ ಬಿಗ್​ಬಾಸ್​ನಂತೆ, ಎಲ್ಲರೂ ಒಟ್ಟಾಗಿ ಸ್ಪರ್ಧೆ ಮುಂದುವರಿಸುತ್ತಿದ್ದಾರೆ ಎನ್ನುವುದು ಸ್ಪಷ್ಟವಾಗುತ್ತಿದೆ. ಈ ಹಿಂದಿನ ಸೀಸನ್​ಗಳಲ್ಲಿ ಇದೇ ರೀತಿ ಸಮರ್ಥರು ಹಾಗೂ ಅಸಮರ್ಥರು ಹೆಸರಿನ ಎರಡು ಗುಂಪನ್ನು ಮಾಡಲಾಗಿತ್ತು. ಒಂದು ವಾರ ಈ ಆಟ ನಡೆದಿತ್ತು.  ಸಮರ್ಥರಿಗೆ ಮನೆಗಳನ್ನು ಬಳಕೆ ಮಾಡಲು  ಅವಕಾಶ ಕಲ್ಪಿಸಲಾಗಿತ್ತು ಮಾತ್ರವಲ್ಲದೇ  ಮನೆಯ ಎಲ್ಲಾ ಸೌಲಭ್ಯಗಳನ್ನು ನೀಡಲಾಗಿತ್ತು.  ಸಾಮಾನ್ಯ ಬಟ್ಟೆ ಹಾಕಿಕೊಳ್ಳಲು ಅವಕಾಶ ನೀಡಲಾಗಿತ್ತು.  

ಅದೇ ರೀತಿ ಅಸಮರ್ಥರು ತಂಡದವರಿಗೆ ಸಮವಸ್ತ್ರ ನೀಡಲಾಗಿತ್ತು. ಅದನ್ನು ಬಿಟ್ಟು ಅವರು ಬೇರೆಯದ್ದನ್ನು ಬಳಸುವಂತೆ ಇರಲಿಲ್ಲ.  ಅವರಿಗೆ ಮನೆಯ ಎಲ್ಲಾ ಸೌಲಭ್ಯಗಳನ್ನು ಬಳಕೆ ಮಾಡಲು ಅವಕಾಶ ಇರಲಿಲ್ಲ. ಎಲ್ಲರೂ ನಾಮಿನೇಟ್ ಆಗಿದ್ದು ಇದೇ ತಂಡದಿಂದಲೇ ಆಗಿತ್ತು. ಈ ಟಾಸ್ಕ್ ಒಂದೇ ವಾರಕ್ಕೆ ಮುಗಿದಿತ್ತು. ಅದಕ್ಕಿಂತ ಸ್ವಲ್ಪ ಭಿನ್ನ ಎಂದರೆ ಒಂದು ವಾರದ ಮಟ್ಟಿಗೆ ಸ್ವರ್ಗ ಮತ್ತು ನರಕ ಎನ್ನುವ ಕಾನ್ಸೆಪ್ಟ್​ ಈ ಬಾರಿ ಮಾಡಲಾಗಿತ್ತು. ಇದೀಗ ಮುಕ್ತಾಯಗೊಳ್ಳಲಿದೆಯೇ ಎಂಬ ಬಗ್ಗೆ ಪ್ರೊಮೋ ನೋಡಿದರೆ ತಿಳಿಯಬಹುದು. 

ಬಿಗ್​ಬಾಸ್​ನವ್ರು ಕರೆದಾಗ ಕದ್ದು ಮುಚ್ಚಿ ಶೂಟಿಂಗ್​ ಮಾಡಿ ಬರ್ತೇನೆ ಎಂದ ರಾಖಿ ಸಾವಂತ್​! ದುಬೈನಿಂದ ಸಂದರ್ಶನ


click me!