ಕಲರ್ಸ್ ಕನ್ನಡ ಅನುಬಂಧ ಆಯ್ತು ಈಗ ಝೀ ಕನ್ನಡ ಕುಟುಂಬ ಅವಾರ್ಡ್ಸ್ ಸರದಿ. ಝೀ ಕನ್ನಡ, ನಾಮಿನೇಷನ್ ರೆಡ್ ಕಾರ್ಪೆಟ್ ಪ್ರೋಮೋವನ್ನು ಇನ್ಸ್ಟಾದಲ್ಲಿ ಹಂಚಿಕೊಂಡಿದೆ. ನಾಮಿನೇಷನ್ ನಲ್ಲಿ ಕೆಲ ಕಲಾವಿದರು ಮಿಸ್ ಆಗಿದ್ದು, ಫ್ಯಾನ್ಸ್ ಕೋಪಗೊಂಡಿದ್ದಾರೆ. ಯಾರಿಗೆ ಅವಾರ್ಡ್ ಎಂಬ ಪ್ರಶ್ನೆ ಫ್ಯಾನ್ಸ್ ಕಾಡ್ತಿದೆ.
ಕನ್ನಡ ಚಾನೆಲ್ ಗಳ ಅವಾರ್ಡ್ ಫಂಕ್ಷನ್ (Kannada channel Award function) ಗಳು ಅದ್ಧೂರಿಯಾಗಿ ನಡೆಯುತ್ವೆ. ಸಿನಿ ತಾರೆಯರನ್ನು ಒಂದೇ ವೇದಿಕೆಯಲ್ಲಿ ನೋಡುವ ಅವಕಾಶ ಫ್ಯಾನ್ಸ್ ಗೆ ಸಿಗುತ್ತೆ. ಆದ್ರೆ ಝೀ ಕನ್ನಡ ಅವಾರ್ಡ್ ಫಂಕ್ಷನ್ ಗೂ ಮೊದಲು ನಾಮಿನೇಷನ್ ಪಾರ್ಟಿಯನ್ನೇ ಬೆಕ್ಕಸ ಬೆರಗಾಗುವಂತೆ ಮಾಡಿದೆ. ಇನ್ನು ಅವಾರ್ಡ್ ಫಂಕ್ಷನ್ ಹೇಗಿರಬಹುದು ಎಂಬ ಕುತೂಹಲ ವೀಕ್ಷಕರಲ್ಲಿ ಮನೆ ಮಾಡಿದೆ.
ಝೀ ಕನ್ನಡ (Zee Kannada) ಪ್ರತಿ ವರ್ಷದಂತೆ ಈ ವರ್ಷವೂ ಝೀ ಕುಟುಂಬ ಅವಾರ್ಡ್ ಫಂಕ್ಷನ್ ನಡೆಸ್ತಿದೆ. ಇದೇ ಶನಿವಾರ, ಝೀ ಕನ್ನಡ ಕುಟುಂಬ ಅವಾರ್ಡ್ಸ್ 24 Nomination Party Red Carpet ಪ್ರಸಾರವಾಗಲಿದೆ. ನೆಚ್ಚಿನ ಕಲಾವಿದರು ಬಣ್ಣ ಬಣ್ಣದ ಡ್ರೆಸ್ ನಲ್ಲಿ ರೆಡ್ ಕಾರ್ಪೆಟ್ ನಲ್ಲಿ ಮಿಂಚಿದ್ದು, ಅದನ್ನು ನೋಡಲು ಫ್ಯಾನ್ಸ್ ಕಾತುರರಾಗಿದ್ದಾರೆ. ಯಾರೆಲ್ಲ ನಾಮಿನೇಟ್ ಆಗ್ತಿದ್ದಾರೆ ಎಂಬುದನ್ನು ನೋಡೋ ಆತುರದಲ್ಲಿ ಫ್ಯಾನ್ಸ್ ಇದ್ದಾರೆ.
undefined
ಸೀತಾ ರಾಮಂಗೆ ಮುತ್ತು ಕೊಡೋಕೆ ಬಂದ್ಲು, ಅಷ್ಟರಲ್ಲಿ ಹಿಂಗಾಗ್ಬಿಡೋದಾ!
ಝೀ ಕನ್ನಡ ಇನ್ಸ್ಟಾದಲ್ಲಿ ಝೀ ಕುಟುಂಬ ಅವಾರ್ಡ್ ಫಂಕ್ಷನ್ ಝೀ ಕನ್ನಡ ಕುಟುಂಬ ಅವಾರ್ಡ್ಸ್24 Nomination Party Red Carpet ಫ್ರೋಮೋ ಬಿಡುಗಡೆ ಮಾಡಿದೆ. ಇದ್ರಲ್ಲಿ ಝೀ ಕುಟುಂಬದ ಕಲಾವಿದರನ್ನು ನೀವು ನೋಡ್ಬಹುದು. ರೆಡ್ ಕಾರ್ಪೆಟ್ ನ್ನು ಭರ್ಜರಿಯಾಗಿ ಸಿಂಗರಿಸಲಾಗಿದೆ. ಲೈಟ್, ಹೂಗಳ ಮಧ್ಯೆ ಕಲಾವಿದರು ಕ್ಯಾಟ್ ವಾಕ್, ಅವರ ತಮಾಷೆ, ಅವಾರ್ಡ್ ಗೆ ಮುತ್ತಿಟ್ಟ ಕ್ಷಣ, ಅವರ ಮಾತುಗಳನ್ನು ಫ್ರೋಮೋದಲ್ಲಿ ತೋರಿಸಲಾಗಿದೆ. ಇನ್ನು ಈ ವಿಡಿಯೋ ಪೋಸ್ಟ್ ಆಗ್ತಿದ್ದಂತೆ ಫ್ಯಾನ್ಸ್ ತಮ್ಮ ಅಭಿಪ್ರಾಯ ಹೇಳಲು ಶುರು ಮಾಡಿದ್ದಾರೆ. ಯಾರಿಗೆ ಯಾವ ಅವಾರ್ಡ್ ಸಿಗ್ಬೇಕು ಎಂಬ ಚರ್ಚೆ ಬಿರುಸು ಪಡೆದಿದೆ.
ಲಕ್ಷ್ಮೀ ನಿವಾಸದ ವೀಣಾಗೆ ಬೆಸ್ಟ್ ಸೊಸೆ ಹಾಗೂ ಲಕ್ಷ್ಮೀ ನಿವಾಸದ ವೆಂಕಿಗೆ ಬೆಸ್ಟ್ ಸಹೋದರ ಅವಾರ್ಡ್ ನೀಡ್ಬೇಕು. ಇಲ್ಲ ಅಂದ್ರೆ ಅವಾರ್ಡ್ ಫಂಕ್ಷನ್ ಮಾಡಿ ಪ್ರಯೋಜನವಿಲ್ಲ ಎಂದು ಅಭಿಮಾನಿಯೊಬ್ಬರು ಕಮೆಂಟ್ ಮಾಡಿದ್ದಾರೆ. ಅಮೃತ ಧಾರೆಯಲ್ಲಿ ಅಧ್ಬುತವಾಗಿ ನಟಿಸುತ್ತಿರುವ ಛಾಯಾ ಸಿಂಗ್ ಲುಕ್ ಗೆ ಫ್ಯಾನ್ಸ್ ಫುಲ್ ಮಾರ್ಕ್ಸ್ ನೀಡಿದ್ದಾರೆ. ಛಾಯಾ ಸಿಂಗ್ ತುಂಬಾ ಸುಂದರವಾಗಿ ಕಾಣ್ತಾರೆಂದು ಕಮೆಂಟ್ ಮಾಡಿದ್ದಾರೆ. ಜಯಂತ್ – ಜಾನ್ವಿ, ಸೀತಾ – ರಾಮ ಜೋಡಿಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಫ್ಯಾನ್ಸ್, ಗೌತಮ್ ಅವರನ್ನು ಮಿಸ್ ಮಾಡ್ಕೊಂಡಿದ್ದಾರೆ.
ಬಿಗ್‌ಬಾಸ್ ಕನ್ನಡದ ಮನೆಯಲ್ಲಿ ನಿಗೂಢವಾಗಿ ಒಡೆದು ಹೋಗುತ್ತಿದೆ ಊಟದ ತಟ್ಟೆ, ಸ್ಪರ್ಧಿಗಳಿಗೆ ದೆವ್ವ ಕಾಟದ ಭಯ!
ಇನ್ನು ಕೆಲ ಅಭಿಮಾನಿಗಳಿಗೆ ಝೀ ಕನ್ನಡ ನಾಮಿನೇಷನ್ ನಲ್ಲಿ ಕೆಲ ಕಲಾವಿದರನ್ನು ಮಿಸ್ ಮಾಡಿದ್ದು ಬೇಸರ ತಂದಿದೆ. ಝೀ ಕನ್ನಡ ಬಯಸಿದ ಬಾಗಿಲು ತೆರೆಯುವ ಅವಸರದಲ್ಲಿ ಬಾಗಿಲು ಮುಚ್ಚಿಕೊಂಡು ಹೋಗುತ್ತಿದೆ ಎನ್ನುತ್ತಿದ್ದಾರೆ ಫ್ಯಾನ್ಸ್. ಅತ್ತೆ ಸೊಸೆ ಪಟ್ಟಿಯಲ್ಲಿ ಬಂಗಾರಮ್ಮ ಹಾಗೂ ಬೆಸ್ಟ್ ಜೋಡಿಯಲ್ಲಿ ಸ್ನೇಹಾ ಕಂಠಿ ಇಲ್ಲದಿರೋದು ಇದಕ್ಕೆ ಕಾರಣ. ಕೆಲ ಅಧ್ಬುತ ಕಲಾವಿದರನ್ನು ಚಾನೆಲ್ ನಾಮಿನೇಟ್ ಮಾಡಿಲ್ಲ. ಚಾನೆಲ್ ನಂಬರ್ ಒನ್ ಎನ್ನುವ ಕಾರಣಕ್ಕೆ ಚಾನೆಲ್ ಗೆ ಕೊಬ್ಬು ಹೆಚ್ಚಾಗಿದೆ ಎಂದು ಫ್ಯಾನ್ಸ್ ಕಮೆಂಟ್ ಮಾಡ್ತಿದ್ದಾರೆ.
ಝೀ ಕನ್ನಡದಲ್ಲಿ ಸಾಕಷ್ಟು ಸೂಪರ್ ಹಿಟ್ ಧಾರಾವಾಹಿಗಳು ಪ್ರಸಾರವಾಗ್ತಿವೆ. ಅಮೃತಧಾರೆ, ಪುಟ್ಟಕ್ಕನ ಮಕ್ಕಳು, ಸೀತಾರಾಮ, ಲಕ್ಷ್ಮಿ ನಿವಾಸ, ಶ್ರೀರಸ್ತು ಶುಭಮಸ್ತು, ಶ್ರಾವಣಿ ಸುಬ್ರಹ್ಮಣ್ಯ, ಬ್ರಹ್ಮಗಂಟು, ಅಣ್ಣಯ್ಯ ಸೀರಿಯಲ್ ಮನೆಮಾತಾಗಿದ್ದು, ವೀಕೆಂಡ್ ನಲ್ಲಿ ರಿಯಾಲಿಟಿ ಶೋಗಳು ಅಭಿಮಾನಿಗಳನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿವೆ.