
ಬೆಂಗಳೂರು: ಬಿಗ್‌ಬಾಸ್ 13 (Bigg Boss 13) ಮನೆಯಲ್ಲಿ ಈಗ ಎಲಿಮಿನೇಷನ್ ಕುರಿತು ಗಾಬರಿ ಹುಟ್ಟಿಸಿರುವ ನಡುವೆಯೇ ಆಗಾಗ್ಗೆ ಹಾಸ್ಯದ ಮಾತುಕತೆಗಳೂ ನಡೆಯುತ್ತಿರುತ್ತವೆ. ಸ್ಪರ್ಧಿಗಳಾಗಿರುವ ಕಾರಣದಿಂದ ಸಹಜವಾಗಿ ಗೆಲ್ಲುವ ಸಲುವಾಗಿ ಗಲಾಟೆ, ಕಚ್ಚಾಟ, ಕೂಗಾಟ ಇದ್ದದ್ದೇ. ಇಂಥವುಗಳು ಇದ್ದರೆ ಮಾತ್ರ ವೀಕ್ಷಕರು ಆಸ್ವಾದಿಸುವ ಕಾರಣದಿಂದ ಟಿಆರ್ಪಿಗಾಗಿ ಇಂಥ ಸನ್ನಿವೇಶವನ್ನು ಖುದ್ದು ಬಿಗ್‌ಬಾಸ್ ಹುಟ್ಟಿಸುತ್ತಾರೆ ಎಂದು ಇದಾಗಲೇ ಸ್ಪರ್ಧಿಗಳು ಹೇಳಿದ್ದಾರೆ ಕೂಡ. ಕಳೆದ ಸೀಸನ್ ರೀತಿಯಲ್ಲಿ ಈ ಬಾರಿಯ ಸೀಸನ್ ಅಷ್ಟೊಂದು ಹವಾ ಸೃಷ್ಟಿಸ್ತಿಲ್ಲವಾದರೂ, ಬಿಗ್‌ಬಾಸ್ ನೋಡುವವರಂತೂ ಒಂದಷ್ಟು ಮಂದಿ ಇದ್ದೇ ಇದ್ದಾರೆ. ಇದರ ನಡುವೆಯೇ, ಮಂಜ ಮತ್ತು ಸೌಂದರ್ಯ ಅವರ ಮದುವೆ ಮಾಡಿಸಲು ಅವಿನಾಶ್ ರೆಡಿಯಾಗಿ ನಿಂತಿದ್ದಾರೆ.
ಅಷ್ಟಕ್ಕೂ ಸೌಂದರ್ಯ ಶೆಟ್ಟಿ (Soundarya Shetty) ಮತ್ತು ʻಮಾಡ್ರನ್ ಮಹಾಕವಿʼ ಮಂಜ ಜಗಳವಾಡಿ ಜೈಲುವಾಸ ಅನುಭವಿಸಿದ್ದರು. ಆದರೆ, ಇವರಿಬ್ಬರನ್ನೂ ಒಂದುಮಾಡಲು ಅವಿನಾಶ್ ಮದುವೆಯನ್ನೂ ಮಾಡಿಸಿ ಮಗುವನ್ನೂ ಹುಟ್ಟಿಸಿಬಿಟ್ಟಿದ್ದಾರೆ! ಟಾಸ್ಕ್ ಒಂದರ ವೇಳೆ ಸೌಂದರ್ಯ ಮತ್ತು ಮಂಜ ಅವರ ನಡುವೆ ವಾಗ್ವಿವಾದ ನಡೆದಿತ್ತು. ಕೈ ಕೈ ಮಿಲಾಯಿಸುವ ಹಂತಕ್ಕೂ ಇವರ ಗಲಾಟೆ ಹೋಗಿ ಕೊನೆಗೆ ಸೌಂದರ್ಯಗೆ ʻಬಿಗ್ ಬಾಸ್ʼ ಜೈಲು ಶಿಕ್ಷೆ ನೀಡಿದ್ದರು.
ಆದರೆ, ಕೊನೆಗೆ ಇಬ್ಬರೂ ಒಂದಾಗಿದ್ದು, ಈಗ ಮದುವೆ ಮಾತುಕತೆ ನಡೆಯುತ್ತಿದೆ. ಅತ್ಯಂತ ಕೆಟ್ಟದ್ದಾಗಿ ಮಾತನಾಡಿದ್ದ ಮಂಜು ಕೊನೆಗೆ ಸೌಂದರ್ಯ ಅವರನ್ನು ತಬ್ಬಿಕೊಂಡು ಕಣ್ಣೀರು ಹಾಕಿದದ್ದರು. “ನನಗೂ ಅಕ್ಕ-ತಂಗಿಯರಿದ್ದಾರೆ, ಕೋಪದಲ್ಲಿ ಹಾಗೆ ಮಾತನಾಡಿದ್ದು ತಪ್ಪಾಯ್ತು, ಕ್ಷಮಿಸಿ" ಎಂದು ಕ್ಷಮೆ ಯಾಚಿಸಿದ್ದರು. ಸೌಂದರ್ಯ ಕೂಡ ಓಕೆ ಬಿಡಿ ಎಂದಿದ್ದರು.
ಇದರ ನಡುವೆ ಸೌಂದರ್ಯ, ಮಂಜ ಹಾಗೂ ಅವಿನಾಶ್ ಒಟ್ಟಿಗೆ ಕುಳಿತು ಮಾತನಾಡುತ್ತಿದ್ದಾಗ, ಅವಿನಾಶ್, ಇಬ್ಬರ ಕಾಲೆಳೆದಿದ್ದಾರೆ. “ನೀವಿಬ್ರೂ ಮದುವೆಯಾಗಿ ಮಗು ಆದ್ರೆ ಚೆನ್ನಾಗಿರುತ್ತೆ. ನನ್ನ ಪ್ರಕಾರ, ನೀವಿಬ್ಬರೂ ಮದುವೆಯಾಗಿ, ಚೆನ್ನಾಗಿರಿ ಅಂತ ಆಶಿಸುತ್ತೇನೆ. ನಿಮ್ಮಿಬ್ಬರಿಗಿಂತ ಕುತೂಹಲ, ನಿಮ್ಮಿಬ್ಬರಿಗೂ ಹುಟ್ಟೋ ಮಗು ಮೇಲೆ” ಎಂದು ಚೇಷ್ಟೆ ಮಾಡಿದರು. ಮಗು ಹೆಸರು ಕೇಳುತ್ತಲೇ ನಾಚಿಕೆಯಿಂದ ಸೌಂದರ್ಯ ಛೀ ಎಂದಿದ್ದಾರೆ. ಅವಿನಾಶ್ ಅವರ ಈ ತಮಾಷೆಯ ಮಾತನ್ನ ಕೇಳಿ ಸೌಂದರ್ಯ ಶೆಟ್ಟಿ ಮತ್ತು ಮಂಜ ಇಬ್ಬರೂ ಸ್ಟನ್ ಆಗಿ ʻಅರೇ.. ಬೇಡʼ ಎಂದಿದ್ದಾರೆ. ಇದರ ಪ್ರೊಮೋ ಅನ್ನು ಕಲರ್ಸ್ ವಾಹಿನಿ ಬಿಡುಗಡೆ ಮಾಡಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.