
ಕನ್ನಡದ ಜನಪ್ರಿಯ ಯೂಟ್ಯೂಬರ್‌ಗಳ ಪೈಕಿ ಮಧು ಗೌಡ (Madhu Gowda) ಕೂಡ ಒಬ್ಬರು. ಸಣ್ಣ ಪುಟ್ಟ ಪರ್ಸನಲ್ ವ್ಲಾಗ್‌ಗಳ ಮೂಲಕ ಯೂಟ್ಯೂಬ್ ಜರ್ನಿ ಆರಂಭಿಸಿದ ಮಧು ಗೌಡ, ಇದೀಗ ಲಕ್ಷಾಂತರ ಸಬ್‌ಸ್ಕ್ರೈಬರ್‌ಗಳನ್ನು ಹೊಂದಿದ್ದಾರೆ. ಯೂಟ್ಯೂಬ್ ಮಾತ್ರವಲ್ಲದೆ ಇನ್‌ಸ್ಟಾಗ್ರಾಮ್‌ನಲ್ಲೂ ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ನಟಿ ಭವ್ಯಾ ಗೌಡ ಅವರ ಆಪ್ತ ಸ್ನೇಹಿತೆಯಾಗಿರುವ ಮಧು ಗೌಡ, ಒಂದು ಕಾಲದಲ್ಲಿ ಭವ್ಯಾ ಅವರೊಂದಿಗೆ ಟಿಕ್‌ಟಾಕ್ ವಿಡಿಯೋಗಳನ್ನು ಮಾಡುತ್ತಾ ಗಮನ ಸೆಳೆದಿದ್ದರು. ಇದೀಗ ತಮ್ಮದೇ ಆದ ಯೂಟ್ಯೂಬ್ ಕಂಟೆಂಟ್ ಮೂಲಕ ಜನಪ್ರಿಯತೆ ಗಳಿಸಿರುವ ಅವರು, ತಮ್ಮ ತಂಡದ ಸದಸ್ಯನಿಗೆ ನೀಡಿರುವ ದುಬಾರಿ ಉಡುಗೊರೆಯಿಂದಾಗಿ ಸುದ್ದಿಯಾಗಿದ್ದಾರೆ.
ಮಧು ಗೌಡ ಅವರ ಯೂಟ್ಯೂಬ್ ಚಾನೆಲ್‌ನ ವಿಡಿಯೋಗಳ ಹಿಂದೆ ಸಾಕಷ್ಟು ಜನರ ಪರಿಶ್ರಮವಿದೆ. ಅದರಲ್ಲೂ ವಿಡಿಯೋ ಎಡಿಟರ್ ವಿನೋದ್ ಅವರು ಮಧು ಗೌಡ ಅವರ ಕಂಟೆಂಟ್ ಕೆಲಸದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ವಿನೋದ್ ಅವರ 27ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಮಧು ಗೌಡ ವಿಶೇಷ ಸರ್ಪ್ರೈಸ್ ನೀಡಲು ನಿರ್ಧರಿಸಿದ್ದಾರೆ. ಬರೋಬ್ಬರಿ 10 ಲಕ್ಷ ರೂಪಾಯಿ ಆಸುಪಾಸಿನ ಮೌಲ್ಯದ ಹೊಸ ಕಾರನ್ನು ಉಡುಗೊರೆಯಾಗಿ ನೀಡಲು ಮುಂದಾಗಿದ್ದಾರೆ. ಈ ಕುರಿತು ತಮ್ಮ ಹಿಂದಿನ ವಿಡಿಯೋದಲ್ಲೇ ಮಧು ಗೌಡ ಸುಳಿವು ನೀಡಿದ್ದರು. ಆದರೆ ಯಾವ ಗಿಫ್ಟ್ ಕೊಡಲಿದ್ದಾರೆ ಎಂಬುದನ್ನು ಬಹಿರಂಗಪಡಿಸಿರಲಿಲ್ಲ. ಇದರಿಂದ ಅಭಿಮಾನಿಗಳು ಐಫೋನ್, ಬೈಕ್ ಅಥವಾ ಕಾರು ಇರಬಹುದು ಎಂದು ಊಹಿಸಿದ್ದರು.
ಅಂತಿಮವಾಗಿ ಸರ್ಪ್ರೈಸ್ ಏನು ಎಂಬುದು ಶೋರೂಮ್‌ಗೆ ಹೋದ ಬಳಿಕ ವಿನೋದ್‌ಗೆ ಗೊತ್ತಾಗಿದೆ. ಮಧು ಗೌಡ ತಮ್ಮ ಕುಟುಂಬದೊಂದಿಗೆ ವಿನೋದ್ ಅವರನ್ನು ಕಾರು ಶೋರೂಮ್‌ಗೆ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ಮಾತನಾಡಿದ ಮಧು ಗೌಡ, ವಿನೋದ್‌ಗೆ 27 ವರ್ಷವಾಗಿರುವ ಹಿನ್ನೆಲೆಯಲ್ಲಿ ಜವಾಬ್ದಾರಿ ಹೆಚ್ಚಲಿ ಎಂಬ ಉದ್ದೇಶದಿಂದ ಕಾರು ಗಿಫ್ಟ್ ನೀಡುತ್ತಿರುವುದಾಗಿ ತಿಳಿಸಿದ್ದಾರೆ. ತಾವೇ ಕಾರನ್ನು ಆಯ್ಕೆ ಮಾಡುವ ಬದಲು, ವಿನೋದ್‌ಗೆ ಇಷ್ಟವಾದ ಕಾರನ್ನೇ ಆಯ್ಕೆ ಮಾಡಿಕೊಳ್ಳಲಿ ಎಂಬ ಕಾರಣಕ್ಕೆ ಅವರನ್ನು ಶೋರೂಮ್‌ಗೆ ಕರೆದುಕೊಂಡು ಬಂದಿದ್ದಾರೆ.
ಮೊದಲಿಗೆ ಟೊಯೋಟಾ ಶೋರೂಮ್‌ಗೆ ತೆರಳಿದ ಮಧು ಗೌಡ ಮತ್ತು ವಿನೋದ್, ಫಾರ್ಚೂನರ್, ಲೆಜೆಂಡರ್, ಹೈರೈಡರ್ ಸೇರಿದಂತೆ ಹಲವು ಕಾರುಗಳನ್ನು ವೀಕ್ಷಿಸಿದ್ದಾರೆ. ಬಳಿಕ ತಮ್ಮ ಬಜೆಟ್ ಹಾಗೂ ವಿನೋದ್ ಅವರ ಅಗತ್ಯಕ್ಕೆ ಹೊಂದುವ ಕಾರಿನ ಹುಡುಕಾಟ ಮುಂದುವರಿಸಿದ್ದಾರೆ. ಟೊಯೋಟಾ ಗ್ಲಾನ್ಜಾ ಕೂಡ ಪರಿಶೀಲಿಸಲಾಗಿತ್ತು. ಆದರೆ ವಿನೋದ್ ಅವರಿಗೆ ಬೇಕಿದ್ದ ವೇರಿಯೆಂಟ್ ಆ ಸಮಯದಲ್ಲಿ ಸ್ಟಾಕ್‌ನಲ್ಲಿ ಲಭ್ಯವಿರದ ಹಿನ್ನೆಲೆಯಲ್ಲಿ ಮತ್ತೊಂದು ಶೋರೂಮ್‌ಗೆ ತೆರಳಿದ್ದಾರೆ. ನಂತರ ಮಾರುತಿ ಸುಜುಕಿ ಶೋರೂಮ್‌ನಲ್ಲಿ ಬಲೆನೋ ಮತ್ತು ಫ್ರಾಂಕ್ಸ್ ಸೇರಿದಂತೆ ವಿವಿಧ ಕಾರುಗಳನ್ನು ನೋಡಿದ್ದಾರೆ.
ಕಾರಿನ ಮೈಲೇಜ್, ಒಳಾಂಗಣದ ಸ್ಪೇಸ್ ಹಾಗೂ ಡ್ರೈವಿಂಗ್ ಕಂಫರ್ಟ್ ಸೇರಿದಂತೆ ಹಲವು ವಿಚಾರಗಳನ್ನು ಗಮನಿಸಿದ ವಿನೋದ್ ಅವರಿಗೆ ಮಾರುತಿ ಸುಜುಕಿ ಬಲೆನೋ ಆಟೋಮ್ಯಾಟಿಕ್ ವೇರಿಯೆಂಟ್ ಇಷ್ಟವಾಗಿದೆ. ಹೀಗಾಗಿ ವಿನೋದ್ ಅವರ ಆಯ್ಕೆಯಂತೆ ಕಾರಿನ ಮಾಡೆಲ್ ಹಾಗೂ ಬಣ್ಣವನ್ನು ಫೈನಲ್ ಮಾಡಲಾಗಿದೆ. ಶೋರೂಮ್‌ನಲ್ಲೇ ಕಾರಿನ ಬುಕ್ಕಿಂಗ್ ಪ್ರಕ್ರಿಯೆಯನ್ನೂ ಪೂರ್ಣಗೊಳಿಸಿ, ಆನ್‌ಲೈನ್ ಪೇಮೆಂಟ್ ಕೂಡ ಮಾಡಲಾಗಿದೆ.
ತಮ್ಮ ಕಷ್ಟದ ದಿನಗಳಿಂದಲೂ ಜೊತೆಯಾಗಿ ಕೆಲಸ ಮಾಡುತ್ತಿರುವ ವಿನೋದ್ ಅವರಿಗೆ ಮಧು ಗೌಡ ನೀಡಿರುವ ಈ ವಿಶೇಷ ಉಡುಗೊರೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿದೆ. ವಿಡಿಯೋ ಎಡಿಟಿಂಗ್ ಮೂಲಕ ಮಧು ಗೌಡ ಅವರ ಯೂಟ್ಯೂಬ್ ಜರ್ನಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ತಮ್ಮ ಎಡಿಟರ್‌ಗೆ ಹುಟ್ಟುಹಬ್ಬದ ಸಂದರ್ಭದಲ್ಲಿ ಇಷ್ಟು ದೊಡ್ಡ ಉಡುಗೊರೆ ನೀಡಿರುವುದಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಯೂಟ್ಯೂಬ್‌ನಲ್ಲಿ ಯಶಸ್ಸು ಗಳಿಸುವ ಹಿಂದೆ ಕ್ಯಾಮೆರಾ ಮುಂದೆ ಕಾಣಿಸಿಕೊಳ್ಳುವ ವ್ಯಕ್ತಿಯಷ್ಟೇ ಅಲ್ಲದೆ, ಕ್ಯಾಮೆರಾ ಹಿಂದೆ ಕೆಲಸ ಮಾಡುವ ತಂಡದ ಪರಿಶ್ರಮವೂ ಪ್ರಮುಖವಾಗಿರುತ್ತದೆ. ತಮ್ಮ ತಂಡದ ಸದಸ್ಯನ ಪರಿಶ್ರಮವನ್ನು ಗುರುತಿಸಿ ಮಧು ಗೌಡ ನೀಡಿರುವ ಈ ಸರ್ಪ್ರೈಸ್ ಇದೀಗ ಅವರ ಅಭಿಮಾನಿಗಳ ಗಮನ ಸೆಳೆದಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.