ಡೈರೆಕ್ಟರ್​ ಸಾಹೇಬ್ರೇ ನಾವು ಅಂದುಕೊಂಡಂಗೆ ಮಾಡ್ಲಿಲ್ವಲ್ಲಾ, ಥ್ಯಾಂಕ್ಸ್​ ನಿಮ್ಗೆ ಅಂತಿರೋದ್ಯಾಕೆ ಅಮೃತಧಾರೆ ಫ್ಯಾನ್ಸ್​?

Published : Apr 10, 2024, 12:57 PM IST
ಡೈರೆಕ್ಟರ್​ ಸಾಹೇಬ್ರೇ ನಾವು ಅಂದುಕೊಂಡಂಗೆ ಮಾಡ್ಲಿಲ್ವಲ್ಲಾ, ಥ್ಯಾಂಕ್ಸ್​ ನಿಮ್ಗೆ ಅಂತಿರೋದ್ಯಾಕೆ ಅಮೃತಧಾರೆ ಫ್ಯಾನ್ಸ್​?

ಸಾರಾಂಶ

ಶಕುಂತಲಾದೇವಿಯ ಸತ್ಯವನ್ನು ಭೂಮಿಕಾ ಎದುರು ಮಲ್ಲಿ ತೆರೆದಿಟ್ಟಿದ್ದಾಳೆ. ಆದರೆ ಬೇರೆಯದ್ದೇ ಆಗುತ್ತದೆ ಎಂದುಕೊಂಡಿದ್ದ ಅಮೃತಧಾರೆ ಫ್ಯಾನ್ಸ್​ಗೆ ಖುಷಿಯಾಗಿದೆ. ಅಷ್ಟಕ್ಕೂ ಆಗಿದ್ದೇನು?  

ಭೂಮಿಕಾ ಅತ್ತೆ ಶಕುಂತಲಾದೇವಿಯ ಕುತಂತ್ರ ಮಲ್ಲಿ ಎದುರು ಬಯಲಾಗಿದೆ.  ಗೌತಮ್​ ಮತ್ತು ಭೂಮಿಕಾ ಹತ್ತಿರವಾಗುತ್ತಿರುವ ವಿಷಯ ತಿಳಿಯುತ್ತಲೇ ಶಕುಂತಲಾ ದೇವಿ  ಜ್ಯೋತಿಷಿಯನ್ನು ಕರೆತಂದು ಆತನ ಬಾಯಲ್ಲಿ ಸುಳ್ಳು ಹೇಳಿಸಿದ್ದಾಳೆ. ಜ್ಯೋತಿಷಿಯೊಬ್ಬ ಮನೆಗೆ ಬಂದು ಗೌತಮ್​ ಮತ್ತು ಭೂಮಿಕಾ ಪತಿ-ಪತ್ನಿಯಂತೆ ದೈಹಿಕ ಸಂಪರ್ಕ ಹೊಂದಿದರೆ ಭೂಮಿಕಾ ಜೀವಕ್ಕೆ ಅಪಾಯವಿದೆ ಎಂದಿದ್ದಾನೆ. ಇದನ್ನು ಕೇಳಿ ಗೌತಮ್​ಗೆ ಶಾಕ್​ ಆಗಿದೆ. ಶಕುಂತಲಾ ದೇವಿ ಕೂಡ ಶಾಕ್​ ಆದಂತೆ ನಟಿಸಿದ್ದಾಳೆ.  ಗೌತಮ್​ ಅಂತೂ ಚಿಕ್ಕಮ್ಮನ ಮೇಲೆ ಅಭಿಮಾನ, ಪ್ರೀತಿಯನ್ನೇ ಇಟ್ಟವ. ಯಾವುದೇ ಕಾರಣಕ್ಕೂ ಆಕೆಯ ವಿರುದ್ಧ ಅನುಮಾನ ಬರಲು ಸಾಧ್ಯವೇ ಇಲ್ಲ.  ಈ ವಿಷಯವನ್ನು ಗೌತಮ್​ ಗೆಳೆಯ ಆನಂದ್​ಗೆ ಹೇಳಿದ್ದಾನೆ ಬಿಟ್ಟರೆ ಪತ್ನಿಗೆ ಹೇಳಲಿಲ್ಲ. ಆತನಿಗೆ ಈಗ ಭೂಮಿಕಾ ಬೇಕು. ಯಾವುದೇ ಕಾರಣಕ್ಕೂ ಭೂಮಿಕಾಳನ್ನು ಕಳೆದುಕೊಳ್ಳಲು ಇಷ್ಟವಿಲ್ಲ. 

ಇದೇ ಕಾರಣಕ್ಕೆ ಏನೇನೋ ನೆಪ ಮಾಡಿಕೊಂಡು ಪತ್ನಿಗಾಗಿ ಉರುಳು ಸೇವೆ ಮಾಡಿದ್ದಾನೆ, ನೆಲದ ಮೇಲೆ ಊಟ ಮಾಡಿದ್ದಾನೆ. ಭೂಮಿಕಾ ಇದೆಲ್ಲಾ ಏನು ಎಂದು ಕೇಳಿದಾಗ, ಮನೆಯವರಿಗಾಗಿ ಎಂದು ಗೌತಮ್​ ಹೇಳಿದ್ದಾನೆ. ಗೆಳೆಯ ಆನಂದ್​ಗೂ ಏನೂ ಹೇಳದ ಸ್ಥಿತಿ. ಪತಿಯ ಈ ಸ್ಥಿತಿ ಕಂಡು ಭೂಮಿಕಾ ಕಣ್ಣೀರಾಗಿದ್ದಾಳೆ.  ಆದರೆ ಅವಳಿಗೆ ವಿಷಯವೇ ಗೊತ್ತಿಲ್ಲ. 

ತುಳಸಿಗೆ ಥ್ಯಾಂಕ್ಸ್​ ಹೇಳುತ್ತಲೇ ಆಣೆ ಪಡೆದುಕೊಂಡ ಶಾರ್ವರಿ! ಅಷ್ಟಕ್ಕೂ ತುಳಸಿಗೆ ತಿಳಿದ ರಹಸ್ಯವೇನು?

ಆದರೆ ಈ ವಿಷಯವನ್ನು ಈಗ ಕದ್ದು ಮಲ್ಲಿ ಕೇಳಿಸಿಕೊಂಡಿದ್ದಳು. ಶಕುಂತಲಾ ದೇವಿ ತನ್ನ ಮಗಳ ಬಳಿ ತಾನು ಮಾಡಿದ ಕುತಂತ್ರದ ವಿಷಯ ಹೇಳಿದ್ದನ್ನು ಮಲ್ಲಿ ಕೇಳಿಸಿಕೊಂಡಿದ್ದಳು. ಇನ್ನೇನು ಮಲ್ಲಿ ಈ ವಿಷಯವನ್ನು ಭೂಮಿಕಾ ಬಳಿ ಹೇಳುತ್ತಾಳೆ ಎಂದುಕೊಳ್ಳುವಷ್ಟರಲ್ಲಿ ಅತ್ತೆ ಶಕುಂತಲನೋ ಅಥವಾ ಮಗ ಜೈದೇವನೋ ಮಲ್ಲಿಯನ್ನು ನೋಡಿ ಆಕೆ ಭೂಮಿಕಾ ಎದುರು ಸತ್ಯ ಹೇಳುವುದನ್ನು ತಪ್ಪಿಸುತ್ತಾಳೆ ಎಂದು ಹಲವು ಮಂದಿ ಸೀರಿಯಲ್​ ಪ್ರೊಮೋಗೆ ಕಮೆಂಟ್​ ಮಾಡಿದ್ದರು. ಎಲ್ಲರೂ ಸೇರಿ ಮಲ್ಲಿಯನ್ನು ಬ್ಲ್ಯಾಕ್​ಮೇಲ್​ ಮಾಡುತ್ತಾರೆ, ಮಲ್ಲಿ ಸತ್ಯವನ್ನು ಹೇಳಲೂ ಆಗದೇ, ಬಿಡಲೂ ಆಗದೇ ಒದ್ದಾಡುತ್ತಾಳೆ. ಗಂಡನ ಮಾತನ್ನೂ ಆಕೆ ಮೀರುವುದಿಲ್ಲ, ಇದರಿಂದ ಸತ್ಯ ಭೂಮಿಕಾಗೆ ಗೊತ್ತೇ ಆಗುವುದಿಲ್ಲ ಎಂದು ಕೆಲವರು ತಮ್ಮದೇ  ಆದ ರೀತಿಯಲ್ಲಿ ಈ ವಿಷಯವನ್ನು ಹೇಳಿದ್ದರು.

ಆದರೆ ಹಾಗೆ ಆಗಲಿಲ್ಲ. ಮಲ್ಲಿ ವಿಷಯವನ್ನು ಭೂಮಿಕಾಗೆ ತಿಳಿಸಿದ್ದಾಳೆ. ಅತ್ತೆಯ ಕುತಂತ್ರ ಭೂಮಿಕಾ ಎದುರು ಬಯಲಾಗಿದೆ. ತನ್ನ ಅಮ್ಮನಿಗೆ ಹುಷಾರು ಇಲ್ಲ ಎಂದುಕೊಂಡು ಗೌತಮ್​ ಕಷ್ಟಪಡುತ್ತಿದ್ದಾನೆ ಎಂದು ಭೂಮಿಕಾ ಅಂದುಕೊಂಡಿದ್ದಳು. ಆದರೆ ಅಸಲಿಗೆ ಗೌತಮ್​ ಭೂಮಿಕಾ ಸಲುವಾಗಿ ಹೀಗೆ ಮಾಡುತ್ತಿದ್ದ, ಅದೂ ಜ್ಯೋತಿಷಿಯ ಸುಳ್ಳು ಮಾತನ್ನು ಕೇಳಿಕೊಂಡು. ಇದೀಗ ಸತ್ಯ ಗೊತ್ತಾಗುತ್ತಿದ್ದಂತೆಯೇ ಭೂಮಿಕಾ ಸಿಟ್ಟು ನೆತ್ತಿಗೇರಿದೆ. ಇನ್ನು ಶಕುಂತಲಾದೇವಿಯ ಕೌಂಟ್​ಡೌನ್​ ಶುರುವಾದ ಹಾಗೆ ಕಾಣಿಸುತ್ತಿದೆ. ಅತ್ತೆಯ ಸುಳ್ಳನ್ನು ಭೂಮಿಕಾ ಹೇಗೆ ನಿಭಾಯಿಸುತ್ತಾಳೆ, ಈ ಸತ್ಯವನ್ನು ಗೌತಮ್​ ಎದುರು ಹೇಳುವಂತಿಲ್ಲ ಆಕೆ, ಹೇಳಿದರೂ ಆತ ನಂಬಲಾರ... ಅಮ್ಮನ ಮೇಲೆ ಅಷ್ಟು ಪ್ರೀತಿ. ಇನ್ನು ಸತ್ಯ ಅರಿತ ಭೂಮಿಕಾಳ ಮುಂದಿನ ಹೆಜ್ಜೆಯೇನು ಎನ್ನುವುದು ಈಗಿರುವ ಕುತೂಹಲ. 

'ರಾಮಾಯಣ'ಕ್ಕೆ ಸಂಭಾವನೆ ಬೇಡವೆಂದ ನಟ ಯಶ್​, ಆದ್ರೆ ಇಲ್ಲಿದೆ ಇನ್ನೊಂದು ಟ್ವಿಸ್ಟ್​, ಏನದು?


PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕಾಲುಂಗುರ ಧರಿಸಿದ ನಟಿ ರಜಿನಿ ಪತಿ…. ಪ್ರಶ್ನಿಸಿದವರಿಗೆ ಏನಂದ್ರು ನೋಡಿ
BBK 12: ಮದುವೆ ಮನೆಯಿಂದ ಗಿಲ್ಲಿ ನಟನನ್ನು ಆಚೆ ಹಾಕಿ, ರಸ್ತೆಗೆ ನೂಕಿದ್ರು: ಗೊತ್ತಿಲ್ಲದ ವಿಷಯ ಬಿಚ್ಚಿಟ್ಟ ತಾಯಿ