ದಿ ಕೇರಳ ಸ್ಟೋರಿಯ ಬಳಿಕವೀಗ ಕೇರಳ ಫೈಲ್ಸ್​: ವೇಶ್ಯೆ ಸುತ್ತ ಸುತ್ತುತ್ತೆ ಈ ಸಿನಿಮಾ...

Published : Jun 28, 2023, 03:38 PM IST
ದಿ ಕೇರಳ ಸ್ಟೋರಿಯ ಬಳಿಕವೀಗ ಕೇರಳ ಫೈಲ್ಸ್​: ವೇಶ್ಯೆ ಸುತ್ತ ಸುತ್ತುತ್ತೆ ಈ ಸಿನಿಮಾ...

ಸಾರಾಂಶ

ದಿ ಕೇರಳ ಫೈಲ್ಸ್ ಎಂಬ ಹೊಸ ವೆಬ್​ ಸೀರೀಸ್ ಶುರುವಾಗಿದ್ದು, ವೇಶ್ಯೆಯ ಕೊಲೆಯ ಸುತ್ತ ಇದೆ ಇದರ ಸ್ಟೋರಿ. ಏನಿದು ಹೊಸ ಸ್ಟೋರಿ?  

ಇಸ್ಲಾಂ ಯುವತಿಯನ್ನು ತನ್ನ ರೂಮ್​ಮೇಟ್ಸ್​ಗಳನ್ನು ಹೇಗೆ ಮತಾಂತರದ ಕುರಿತು ಬ್ರೇನ್​ವಾಷ್​ ಮಾಡಿ ಅವರ ಮನಸ್ಸನ್ನು ಪರಿವರ್ತನೆ ಮಾಡುತ್ತಾಳೆ ಎನ್ನುವ ನೈಜ ಘಟನೆಯುಳ್ಳ ದಿ ಕೇರಳ ಸ್ಟೋರಿ ಸಿನಿಮಾ ಸೃಷ್ಟಿಸಿದ ವಿವಾದ ಎಲ್ಲರಿಗೂ ತಿಳಿದದ್ದೇ. ಆಸೀಫಾ  ಎಂಬ ಯುವತಿ ರೂಮ್​ಮೇಟ್ಸ್​ ನರ್ಸಿಂಗ್​ ಕಲಿಯಲು ಪ್ರತಿಷ್ಠಿತ ಕಾಲೇಜಿಗೆ ಸೇರಿಕೊಂಡಿರೋ  ಶಾಲಿನಿ ಉನ್ನಿಕೃಷ್ಣನ್ (Shalini Unnikrishnan), ಗೀತಾಂಜಲಿ, ನಿಮ್ಹಾ ಮ್ಯಾಥ್ಯುಸ್. ಆಸೀಫಾ  ಈ  ಮೂವರು ಹುಡುಗಿಯರ ಬ್ರೇನ್ ವಾಷ್ ಹೇಗೆ ಮಾಡುತ್ತಾಳೆ, ಅವರ ಬದುಕನ್ನು  ವ್ಯವಸ್ಥಿತವಾಗಿ ಪ್ಲ್ಯಾನ್ ಮಾಡಿ ನಾಶ ಮಾಡುತ್ತಾಳೆ, ಐಸಿಸ್​ ಉಗ್ರ ಸಂಘಟನೆಗೆ ಸೇರಿಸುತ್ತಾಳೆ ಎಂಬ ಸತ್ಯ ಘಟನೆಯನ್ನು ಈ ಚಿತ್ರ ಒಳಗೊಂಡಿದ್ದರೆ, ಈಗ ಅದೇ ಹೆಸರಿನ ಇನ್ನೊಂದು ವೆಬ್​ಸೀರೀಸ್​ ಶೀಘ್ರದಲ್ಲಿ ಶುರುವಾಗಲಿದೆ. ಆದರೆ ಇದು ದಿ ಕೇರಳ ಸ್ಟೋರಿಯ ರೀತಿಯ ಕಥೆಯಲ್ಲ, ಇದರ ಹೆಸರು ದಿ ಕೇರಳ ಫೈಲ್ಸ್​. ಇದು ವೇಶ್ಯೆಯೊಬ್ಬಳ ಸುತ್ತ ಸುತ್ತುವ ಕಥೆಯಾಗಿದೆ.

ಹೌದು. ದಿ ಕೇರಳ ಎಂದಾಕ್ಷಣ ಕೇರಳ ಸ್ಟೋರಿಯೇ (The Kerala Story) ನೆನಪಾಗುತ್ತದೆ. ಅದೇ ರೀತಿ ಫೈಲ್ಸ್​ ಎಂದಾಕ್ಷಣ ಕಾಶ್ಮೀರಿ ಪಂಡಿತರನ್ನು ಹತ್ಯೆಗೈದಿದ್ದ ಅಮಾನುಷ ಕೃತ್ಯವನ್ನು ಬಿಂಬಿಸುವ ದಿ ಕಾಶ್ಮೀರಿ ಫೈಲ್ಸ್​ ನೆನಪಾಗುತ್ತದೆ. ಇವೆರಡು ಹೆಸರುಗಳ ಸಮ್ಮಿಶ್ರಣವುಳ್ಳ ವೆಬ್​ಸೀರೀಸ್​ ಒಂದು ಈಗ ಬಹಳ ಸದ್ದು ಮಾಡುತ್ತಿದೆ. ಅದೇ ದಿ ಕೇರಳ ಫೈಲ್ಸ್​.  ಆದರೆ ಇದು ದಿ ಕೇರಳ ಸ್ಟೋರಿಯ ಕಥಾಹಂದರವನ್ನೂ ಹೊಂದಿಲ್ಲ, ಕಾಶ್ಮೀರಿ ಫೈಲ್ಸ್​ ಕಥೆಯೂ ಇದರಲ್ಲಿ ಇಲ್ಲ. ಇದರಲ್ಲಿ ಇರುವ ಅಂಶವೇ ಬೇರೆ.

ಅದೇನೆಂದರೆ, ದಿ ಕೇರಳ ಫೈಲ್ಸ್​ (Kerala Crime Files) ಸುತ್ತುವುದು ವೇಶ್ಯೆಯ ಸುತ್ತ. ಆಕೆಯ ಕೊಲೆಯ ಸುತ್ತ. ಹೌದು. ಲಾಡ್ಜ್ ಒಂದರಲ್ಲಿ ವೇಶ್ಯೆ ಒಬ್ಬಳ ಕೊಲೆ ಆಗುತ್ತದೆ. ಆ ಲಾಡ್ಜ್​ನ ಬಾತ್​ರೂಂನಲ್ಲಿ ಆಕೆಯ ಹೆಣ ಸಿಗುತ್ತದೆ. ಯಾರು ಈ ವೇಶ್ಯೆ, ಆಕೆಯ ಕೊಲೆ ಆದದ್ದು ಹೇಗೆ ಎಂಬ ಕಥಾ ಹಂದರವನ್ನು ದಿ ಕೇರಳ ಫೈಲ್ಸ್​ ಹೊಂದಿದೆ. ಆರಂಭದಲ್ಲಿ ವೇಶ್ಯೆಯ ಕೊಲೆ ಆಗುವುದರಿಂದಲೇ  ಕಥೆ ಆರಂಭಗೊಳ್ಳುತ್ತದೆ. ಇದನ್ನು ನೋಡಿದ ಲಾಡ್ಜ್​ ರಿಸೆಪ್ಶನಿಸ್ಟ್ ಪೊಲೀಸರಿಗೆ ಮಾಹಿತಿ ನೀಡುತ್ತಾನೆ.  ಈ ಕೊಲೆಯ ಹಿಂದಿನ ಕಾರಣ ಏನು? ಕೊಲೆಗಾರ ಹೇಗೆ ತಪ್ಪಿಸಿಕೊಳ್ಳುತ್ತಾನೆ? ಪೊಲೀಸರು ಹೇಗೆಲ್ಲ ಕಷ್ಟಪಡುತ್ತಾರೆ ಅನ್ನೋದು ಈ ಸೀರಿಸ್​ನಲ್ಲಿದೆ.  ಈ ಕೊಲೆಯ ಹಿಂದಿನ ಕಾರಣದ ಬಗ್ಗೆ ವಿವರವಾಗಿ ಇದರಲ್ಲಿ ತೋರಿಸಲಾಗಿದ್ದು, ಈ ವೆಬ್​ಸೀರಿಸ್​ ಥ್ರಿಲ್ಲರ್​ ಎನಿಸುತ್ತದೆ.

ಹಲವರ ನಿದ್ದೆಗೆಡಿಸಲು 'ಕೇರಳ ಸ್ಟೋರಿ' ತಂಡದ ಮತ್ತೊಂದು ಸತ್ಯಾಧಾರಿತ ಸಿನಿಮಾ ರೆಡಿ!

ಸಾಮಾನ್ಯವಾಗಿ ವೆಬ್ ಸೀರಿಸ್ ಎಂದಾಗ ಹತ್ತಾರು ಎಪಿಸೋಡ್ ಇರುತ್ತವೆ. ಪ್ರತಿ ಎಪಿಸೋಡ್ ಅವಧಿ ಮುಕ್ಕಾಲು ಗಂಟೆ ಅಥವಾ ಒಂದು ಗಂಟೆಯನ್ನೂ ಮೀರಿರುತ್ತದೆ. ಆದರೆ, ಡಿಸ್ನಿ ಪ್ಲಸ್ ಹಾಟ್ ಸ್ಟಾರ್​ನಲ್ಲಿ (Disney plus Hot Star) ಕಾಣಿಸಿಕೊಳ್ಳಲಿರುವ ‘ದಿ ಕೇರಳ ಫೈಲ್ಸ್’  ಹಾಗಲ್ಲ. ಇಲ್ಲಿ ಇರೋದು  ಆರು ಎಪಿಸೋಡ್​ಗಳು ಮಾತ್ರ. ಪ್ರತೀ ಎಪಿಸೋಡ್​ನ ಅವಧಿ ಅರ್ಧ ಗಂಟೆ.  ಸಸ್ಪೆನ್ಸ್ ಜೊತೆ ಭಾವನಾತ್ಮಕ ವಿಚಾರಗಳನ್ನು ಕೂಡ ಸೇರಿಸಲಾಗಿದೆ ಎಂದಿದೆ ಚಿತ್ರ ತಂಡ.  

ಅಂದಹಾಗೆ ಇದು ಮೂಲ ಮಲಯಾಳ (Malayalam) ಭಾಷೆಯ ವೆಬ್ ಸೀರಿಸ್ ಆಗಿದೆ. ಉಳಿದ ಭಾಷೆಗಳಿಗೆ ಹೋಲಿಕೆ ಮಾಡಿದರೆ ಮಲಯಾಳಂನಲ್ಲಿ ವೆಬ್ ಸೀರಿಸ್​​ಗಳು ಕಡಿಮೆಯೇ. ಆದರೂ ಇದೀಗ ಭಾರಿ ಸದ್ದು ಮಾಡುತ್ತಿದೆ. ಈ ಸೀರಿಸ್ ಜೂನ್​ 23ರಂದು ರಿಲೀಸ್ ಆಗಿದ್ದು,  ಇದೀಗ  ಕನ್ನಡ, ತೆಲುಗು ಮೊದಲಾದ ಭಾಷೆಗಳಲ್ಲೂ ಡಬ್​ ಮಾಡಲಾಗಿದೆ.  ‘ಕೇರಳ ಕ್ರೈಮ್ ಫೈಲ್ಸ್​’ ಸೀರಿಸ್​ನಲ್ಲಿ ಅಜು ವರ್ಗೀಸ್ ಅವರು ಮುಖ್ಯ ಪಾತ್ರದಲ್ಲಿ  ಕಾಣಿಸಿಕೊಂಡಿದ್ದಾರೆ. ಇತರ ತಾರಾ ಬಳಗವೆಂದರೆ, ಲಾಲ್, ಶ್ರೀಜಿತ್ ಮಹದೇವನ್ ಮುಂತಾದವರು. ಹೇಷಮ್ ಅಬ್ದುಲ್ ವಹಾಬ್ ಅವರು ಈ ಸೀರಿಸ್​ಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಹಿನ್ನೆಲೆ ಸಂಗೀತದ ಮೂಲಕ ಅವರು ಹೆಚ್ಚು ಅಂಕ ಗಿಟ್ಟಿಸಿಕೊಳ್ಳುತ್ತಾರೆ.  ಅಹ್ಮದ್ ಕಬೀರ್ ಅವರು ಇದನ್ನು ನಿರ್ದೇಶನ ಮಾಡಿದ್ದಾರೆ. ಯಾವುದೇ ಹೆಚ್ಚಿನ ಡ್ರಾಮಾಗೆ ಜಾಗ ನೀಡದೇ ಸೀರಿಸ್ ರಚಿಸಿದ್ದಾರೆ. 

ಬಾಕ್ಸ್‌ ಆಫೀಸ್‌ ಕೊಳ್ಳೆ ಹೊಡೆದ ದಿ ಕೇರಳ ಸ್ಟೋರಿಗೆ OTT ’ಷಡ್ಯಂತ್ರ’ದ ಶಾಕ್‌!
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಏನೂ ಮಾಡದೆ ಸ್ಪಂದನಾ ಸೋಮಣ್ಣ Bigg Boss ಮನೇಲಿ ಇರೋದು ಹೇಗೆ? ಕಿಚ್ಚ ಸುದೀಪ್‌ ಬಿಚ್ಚಿಟ್ಟ ಸತ್ಯ ಏನು?
Bigg Boss: ದುಷ್ಮನ್‌ಗೂ ಯಾರೂ ಹೀಗೆ ಮಾಡಲ್ಲ- ಕೊನೆಗೂ ರಿವೀಲ್‌ ಆಯ್ತು ರಘು ದ್ವೇಷದ ಕಾರಣ