ಗಿಚ್ಚಿ ಗಿಲಿಗಿಲಿ ಶೋಯಿಂದ ಹೊರ ಬರಲು ಕಾರಣ ಬಿಚ್ಚಿಟ್ಟ ಮಂಜು ಪಾವಗಡ; ಹೇಳಿಕೆ ವೈರಲ್!

Published : Jun 20, 2023, 10:45 AM ISTUpdated : Jun 20, 2023, 10:47 AM IST
ಗಿಚ್ಚಿ ಗಿಲಿಗಿಲಿ ಶೋಯಿಂದ ಹೊರ ಬರಲು ಕಾರಣ ಬಿಚ್ಚಿಟ್ಟ ಮಂಜು ಪಾವಗಡ; ಹೇಳಿಕೆ ವೈರಲ್!

ಸಾರಾಂಶ

ಕಿರಿಕ್ ಮಾಡಿಕೊಂಡು ಶೋಯಿಂದ ಹೊರ ಬಂದ್ರಾ ಮಂಜು ಪಾವಡಗ? ಸಂಭಾವನೆ ಡಿಮ್ಯಾಂಡ್ ನಿಜವೇ?

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗಿಚ್ಚಿ ಗಿಲಿಗಿಲಿ ರಿಯಾಲಿಟಿ ಶೋ ಸೀಸನ್ 1 ಮತ್ತು ಸೀಸನ್ 2 ಯಶಸ್ವಿಯಾಗಿ ಮುಗಿಸಿದೆ. ಸೃಜನ್ ಲೋಕೇಶ್, ನಟಿ ಶ್ರುತಿ ಹಾಗೂ ಕಾಮಿಡಿ ಕಿಂಗ್ ಸಾಧು ಕೋಕಿಲಾ ನೇನೃತ್ವದಲ್ಲಿ ಮೂಡಿ ಬಂದ ಈ ಶೋಗೆ ಆರಂಭದಲ್ಲಿ ಮಂಜು ಪಾವಗಡ ನಿರೂಪಣೆ ಮಾಡುತ್ತಿದ್ದರು ಇದ್ದಕ್ಕಿದ್ದಂತೆ ಹೊರ ಬಂದು ನಿರಂಜನ್ ದೇಶಪಾಂಡೆ ಎಂಟ್ರಿ ಕೊಟ್ಟರು. ಆಗ ಸಿಕ್ಕಾಪಟ್ಟೆ ಗಾಸಿಪ್ ಹಬ್ಬಿತ್ತು ಸಂಭಾವನೆ ಕಿರಿಕ್, ನಿರೂಪಣೆ ಚೆನ್ನಾಗಿಲ್ಲ ಹಾಗೆ ಹೀಗೆ ಅಂತೆ. ಈ ಬಗ್ಗೆ ಸ್ವತಃ ಮಂಜು ಕ್ಲಾರಿಟಿ ಕೊಟ್ಟಿದ್ದಾರೆ. 

ಕಲರ್ಸ್‌ನಲ್ಲಿ ಮತ್ತೊಂದು ಫ್ಯಾಮಿಲಿ ರಿಯಾಲಿಟಿ ಶೋ ಫ್ಯಾಮಿಲಿ ಗ್ಯಾಂಗ್‌ಸ್ಟರ್ ಆರಂಭವಾಗಿದೆ. ಈ ಶೋನಲ್ಲಿ ಪ್ರತಿಯೊಂದು ಸೀರಿಯಲ್‌ ಒಂದೊಂದು ತಂಡವಾಗಿ ಸ್ಪರ್ಧಿಸಲಿದ್ದಾರೆ. ಅಂತರ್ಪಟ ಧಾರಾವಾಹಿಯಲ್ಲಿ ತಂದೆಯಾಗಿರುವ ಮಂಜು ಪಾವಗಡ ಫ್ಯಾಮಿಲಿ ಗ್ಯಾಂಗ್‌ಸ್ಟರ್‌ನಲ್ಲಿ ಟೀಂ ಲೀಡ್ ಆಗಿದ್ದಾರೆ. ಶೋ ಗ್ರ್ಯಾಂಡ್ ಓಪನಿಂಗ್ ವೇಳೆ ಮಂಜು ಮಾತನಾಡಿದ್ದಾರೆ.  

Habibi Come to Dubai! ದುಬೈ ಪ್ರವಾಸ ಎಂಜಾಯ್ ಮಾಡುತ್ತಿರುವ ಮಂಜು ಪಾವಗಡ

'ಗಿಚ್ಚಿ ಗಿಲಿಗಿಲಿ ರಿಯಾಲಿಟಿ ಶೋನಿಂದ ನಾನು ಹೊರ ಬಂದಿರುವ ವಿಚಾರ ಎಲ್ಲರಿಗೂ ಗೊತ್ತಿದೆ ಕಾರಣ ಮಾತ್ರ ಆಪ್ತರಿಗೆ ಗೊತ್ತು ಎಲ್ಲರಿಗೂ ಹೇಳುವ ಸಮಯ ಸಿಕ್ಕಿರಲಿಲ್ಲ. ಪ್ರಮುಖ ಕಾರಣ ಏನೆಂದರೆ ಕೈಯಲ್ಲಿ ದೊಡ್ಡ ದೊಡ್ಡ ಸಿನಿಮಾಗಳಿತ್ತು ಅದರಿಂದ ಡೇಟ್ ಕ್ಲಾಶ್ ಆಗುತ್ತಿತ್ತು. ನಿರೂಪಣೆ ಲೋಕಕ್ಕೆ ನಾನು ಹೊಸಬ್ಬ ನಿರಂತರ ಪ್ರಾಕ್ಟೀಸ್ ನಡೆಯುತ್ತಿತ್ತು ಯಾವುದಕ್ಕೂ ಸರಿಯಾಗಿ ಸಮಯ ಸಿಗುತ್ತಿರಲಿಲ್ಲ. ಸಿನಿಮಾ ತಂಡದವರು ಕೊಡುವ ಟೈಂ ಹೇಗಿರುತ್ತದೆ ಎಂದು ಗೊತ್ತಿದೆ ಅಲ್ವಾ ಈ ಕಾರಣಕ್ಕೆ ನಾನು ಹೊರ ಬಂದೆ. ಸುಮಾರು ಜನ ಬೇರೆ ಬೇರೆ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಜನರು ಮಾತನಾಡುತ್ತಿರುವುದು ನಿಜವಾದರೆ ನಾನು ಯಾಕೆ ಮತ್ತೆ ಇದೇ ಚಾನೆಲ್‌ನಲ್ಲಿ ಶೋ ಒಪ್ಪಿಕೊಂಡು ಕೆಲಸ ಮಾಡುವೆ? ಕಲರ್ಸ್ ಕನ್ನಡ ನಮ್ಮ ಚಾನೆಲ್ ಯಾವಾಗ ಬೇಕಿದ್ದರೂ ಬರುತ್ತೀವಿ ಯಾವಗ ಬೇಕಿದ್ದರೂ ಹೋಗುತ್ತೀವಿ ಚಾನೆಲ್ ಬಗ್ಗೆ ನನಗೆ ಯಾವತ್ತೂ ಬೇಸರ ಇರಲಿಲ್ಲ. ಸಿನಿಮಾ ಕೈಯಲ್ಲಿತ್ತು ಸಿನಿಮಾ ಮುಗಿಸಬೇಕು ಎಂದು ಹೊರ ಬಂದಿರುವುದು' ಎಂದು ಸುವರ್ಣ ನ್ಯೂಸ್ ಡಿಜಿಟಲ್ ಟೀಂಗೆ ಕ್ಲಾರಿಟಿ ಕೊಟ್ಟಿದ್ದಾರೆ. 

ಆಪ್ತ ಗೆಳೆಯನ ಜೊತೆ ಬಿಗ್ ಬಜೆಟ್‌ ಸಿನಿಮಾ ಒಪ್ಪಿಕೊಂಡ ಬಿಗ್ ಬಾಸ್ ಮಂಜು ಪಾವಗಡ!

ಗೆದ್ದರೆ 50 ಕೋಟಿ?

'ಫ್ಯಾಮಿಲಿ ಗ್ಯಾಂಗ್‌ಸ್ಟರ್‌ ರಿಯಾಲಿಟಿ ಶೋ ಗೆದ್ದರೆ 50 ಕೋಟಿ ಕೊಡಬಹುದು ಎಂದು ಹೇಳಿರುವುದು ಸುಮ್ಮನೆ ತಮಾಷೆಗೆ ಅನಿಸುತ್ತದೆ. ಬಿಗ್ ಬಾಸ್ ಗೆದ್ದರೂ ಅಷ್ಟು ಕೊಟ್ಟಿಲ್ಲ. 50 ಕೋಟಿ ಸಿಕ್ಕಿದೆ ಗೆದ್ದಿರುವೆ ಎಂದು ಖುಷಿ ಪಟ್ಟರೂ ಟ್ರಾನ್ಸ್‌ಫರ್ ಆಗುವುದಕ್ಕೆ 2 ದಿನ ಬೇಕಾಗುತ್ತದೆ. 50 ಕೋಟಿ ಹೇಳಿಕೊಳ್ಳುವಷ್ಟು ಕೆಲಸ ಮಾಡಿಕೊಳ್ಳುತ್ತೀನಿ ರಿವೀಲ್ ಮಾಡುವುದಿಲ್ಲ ನಮ್ಮನ್ನು ಮತ್ತೊಬ್ಬರು ಕಾಪಿ ಮಾಡಬಾರದು' ಎಂದು ಮಂಜು ಹೇಳಿದ್ದಾರೆ.  

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Bigg Boss ಮನೆಯಿಂದ ಹೊರಕ್ಕೆ ಬರುತ್ತಿದ್ದಂತೆಯೇ ಕುತೂಹಲದ ಪೋಸ್ಟ್​ ಹಾಕಿದ ಸೂರಜ್​ ಸಿಂಗ್​
ಮೃತಪಟ್ಟ ಅಜ್ಜಿಯನ್ನೂ ಬಿಡದ Bigg Boss ಗಿಲ್ಲಿ ನಟ: ಶ್ರದ್ಧಾಂಜಲಿ ಬ್ಯಾನರ್​ನಲ್ಲಿ ನಟಿಯ ಕಣ್ಣು-ಬಾಯಿ!