ಕನ್ನಡತಿ ಹರ್ಷ ಭುವಿ ಕಿಸ್ ವೀಡಿಯೋ ವೈರಲ್‌! ಈಗ್ಯಾಕೆ?

Published : Jun 16, 2023, 12:58 PM IST
ಕನ್ನಡತಿ ಹರ್ಷ ಭುವಿ ಕಿಸ್ ವೀಡಿಯೋ ವೈರಲ್‌! ಈಗ್ಯಾಕೆ?

ಸಾರಾಂಶ

ಕನ್ನಡತಿ ಸೀರಿಯಲ್ ನಿಂತು ಯಾವ್ದೋ ಕಾಲ ಆಯ್ತು. ಆದರೆ ಈಗ ಈ ಜೋಡಿಯ ಕಿಸ್ಸಿಂಗ್ ಸೀನ್ ವೈರಲ್ ಆಗಿದೆ. ಅಷ್ಟಕ್ಕೂ ಆಗಿರೋದಾದ್ರೂ ಏನು?  

'ನೀವಿಬ್ರೂ ರಿಯಲ್ ಪೇರ್ ಆಗ್ಬಾರ್ದಾ?', 'ಬ್ಯೂಟಿಫುಲ್ ಪೇರ್', 'ರಿಯಲಿ ಮಿಸ್‌ ಯೂ ಕನ್ನಡತಿ', 'ಹರ್ವಿ ಫಾರೆವರ್‌'

ಹೀಗೆಲ್ಲ ನೂರಾರು ಕಮೆಂಟ್ಸ್‌, ಕಣ್ಣಲ್ಲಿ, ತುಟಿಯಲ್ಲಿ, ಇಡಿಯಾಗಿ ಹಾರ್ಟ್ ಸಿಂಬಲ್‌. ಸೋಷಿಯಲ್ ಮೀಡಿಯಾದಲ್ಲೊಂದು ವೀಡಿಯೋ ವೈರಲ್ ಆಗಿದೆ. ಅದಕ್ಕೆ ಮೇಲಿನ ರೀತಿಯ ನೂರಾರು ಕಮೆಂಟ್ಸ್ ಬಂದಿವೆ. ಹೀಗೆಲ್ಲ ಕಮೆಂಟ್ಸ್ ಬಂದಿದ್ದು ಇನ್‌ಸ್ಟಾದಲ್ಲಿ ಪೋಸ್ಟ್ ಆಗಿರುವ ಒಂದು ವೀಡಿಯೋಕ್ಕೆ. ಈ ವೀಡಿಯೋ ಸಖತ್ ವೈರಲ್ ಆಗಿದೆ. ಐವತ್ತು ಸಾವಿರಕ್ಕೂ ಅಧಿಕ ಮಂದಿ ಈ ವೀಡಿಯೋ ನೋಡಿ ಮೆಚ್ಚಿಕೊಂಡಿದ್ದಾರೆ. ಅಷ್ಟಕ್ಕು ಈ ವೀಡಿಯೋದಲ್ಲಿರುವ ವಿಚಾರವೂ ಅಷ್ಟೇ ಇಂಟರೆಸ್ಟಿಂಗ್. ಹರ್ಷ ಭುವಿ ಕಿಸ್ಸಿಂಗ್ ಸೀನ್ ಅದು. ಕನ್ನಡತಿ ನಿಂತು ಯಾವ್ದೋ ಕಾಲ ಆಯ್ತಲ್ಲಾ, ಈ ವೀಡಿಯೋ ಈಗೆಲ್ಲಿಂದ ಬಂತು, ಈ ಜೋಡಿ ಮತ್ತೆ ಕ್ಲೋಸ್ ಆಗಿದ್ದಾರಾ? ಅನ್ನೋ ಅನುಮಾನ ಎಲ್ಲ ಮನಸ್ಸಿಗೆ ಬರಬಹುದು. ಅದಕ್ಕೆ ಉತ್ತರ ಇಲ್ಲಿದೆ.

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಸೀರಿಯಲ್‌ 'ಕನ್ನಡತಿ'. ಈ ಸೀರಿಯಲ್ ಎಷ್ಟು ಜನಪ್ರಿಯವೋ, ಈ ಸೀರಿಯಲ್‌ನ ಹರ್ಷ ಭುವಿ ಜೋಡಿಯೂ ಅಷ್ಟೇ ಫೇಮಸ್. ಈ ಸೀರಿಯಲ್ ಮಾಮೂಲಿ ಸೀರಿಯಲ್‌ಗಿಂತ ಭಿನ್ನವಾಗಿತ್ತು. ಸೀರಿಯಲ್‌ ಅಂದರೆ ಅತ್ತೆ ಸೊಸೆ ಜಗಳ ಅಂತಿದ್ದ ಕಾಲದಲ್ಲಿ ಅತ್ತೆ ಸೊಸೆ ಸಂಬಂಧ ಎಷ್ಟು ಆತ್ಮೀಯವಾಗಿ ಇರಬಹುದು ಅನ್ನೋದನ್ನು ತೋರಿಸಿದ ಸೀರಿಯಲ್ ಇದು. ಸಿಟಿ ಹುಡುಗಿಯರ ಸ್ಟೈಲಿಶ್ ಲುಕ್ ಮೆರೆಯುತ್ತಿದ್ದಾಗ ಹಳ್ಳಿ ಹುಡುಗಿಯೊಬ್ಬಳು ನಗರಕ್ಕೆ ಬರುವ ಕಥೆ ಈ ಸೀರಿಯಲ್‌ನದು. ಅದಕ್ಕಿಂತ ಹೆಚ್ಚಾಗಿ ಇದರಲ್ಲಿ ಕನ್ನಡದ ಮಹತ್ವವನ್ನು ಸಾರಿ ಹೇಳಲಾಯಿತು. ಬದುಕಿನಲ್ಲಿ ಮಾತ್ರ ಅಲ್ಲ, ಸೀರಿಯಲ್‌ ಜಗತ್ತಿನಲ್ಲೂ ಕಲಬೆರಕೆ ಕನ್ನಡವೇ ಬಳಕೆ ಆಗುತ್ತಿತ್ತು. ಸ್ವಚ್ಛ ಕನ್ನಡ ಮಾತನಾಡಿದರೆ ಜನ ನಗುವಂಥಾ ಸ್ಥಿತಿ ಇತ್ತು.

ನಿವೇದಿತಾ ಗೌಡ ಅಡುಗೆ ತಿಂದು ಆಂಬ್ಯುಲೆನ್ಸ್‌ ಕೇಳಿದ ಕ್ಯಾಮೆರಾ ಮ್ಯಾನ್; ವಿಡಿಯೋ ವೈರಲ್!

ಅಷ್ಟಕ್ಕೂ ಎಷ್ಟೋ ಕನ್ನಡದ ಪದಗಳ ಪರಿಚಯ, ಸರಿಯಾದ ಉಚ್ಚರಣೆ, ಪದ ಬಳಕೆಯ ಬಗ್ಗೆ ಹೆಚ್ಚಿನವರಿಗೆ ತಿಳಿದೆ ಇರಲಿಲ್ಲ. ಈ ಧಾರಾವಾಹಿ ನೋಡಿ ತಮ್ಮ ಕನ್ನಡ ಸುಧಾರಿಸಿತು ಅಂದವರು ಅದೆಷ್ಟು ಮಂದಿಯೋ ಇದ್ದಾರೆ. ಕನ್ನಡತಿಯ ಮುಖ್ಯ ಪಾತ್ರದಲ್ಲಿದ್ದ ರತ್ನಮಾಲಾರನ್ನು ಬಹಳ ಮಂದಿ ಮನಸ್ಸಿಗೆ ಹಚ್ಚಿಕೊಂಡಿದ್ದರು. ಆ ಪಾತ್ರಕ್ಕೆ ಸಾವು ಬಂದಾಗ ನೊಂದು ಸಾಕಷ್ಟು ಮಂದಿ ಪ್ರತಿಕ್ರಿಯೆ ನೀಡಿದ್ದರು. ಅಂದರೆ ಈ ಸೀರಿಯಲ್‌ನ ಪ್ರತೀ ಪಾತ್ರವೂ ಜನರ ಮನಸ್ಸಿನಲ್ಲಿ ಅಷ್ಟು ಪರಿಣಾಮ ಬೀರಿತ್ತು.

ಈ ಸೀರಿಯಲ್‌ನ ಕ್ಯೂಟ್‌ ಜೋಡಿ ಹರ್ಷ ಮತ್ತು ಭುವಿ. ಈ ಪಾತ್ರವನ್ನು ಕಿರಣ್ ರಾಜ್ ಮತ್ತು ರಂಜನಿ ರಾಘವನ್ ನಿರ್ವಹಿಸಿದ್ದರು. ಈ ಜೋಡಿ ಅದೆಷ್ಟು ಮುದ್ದಾಗಿತ್ತು ಅಂದರೆ ಜನ ಈ ರೀಲ್ ಜೋಡಿ ರಿಯಲ್‌ನಲ್ಲೂ ಜೋಡಿಯಾಗಲಿ ಅಂತ ಹಾರೈಸಿದರು. ಇವರಿಬ್ಬರಿಗೂ ಅತೀ ಹೆಚ್ಚು ಫ್ಯಾನ್ ಫಾಲೋವಿಂಗ್ ಇತ್ತು. ಆಗಾಗ ಈ ಜೋಡಿ ರಿಯಲ್‌ನಲ್ಲೂ ಕ್ಲೋಸ್‌ ಇದ್ದಾರೆ, ಜೊತೆಯಾಗಿ ಓಡಾಡ್ತಾರೆ ಅಂತೆ ಪೋಸ್ಟ್ ಹಾಕುತ್ತಿದ್ದರು.

ಆದರೆ ಒನ್‌ ಫೈನ್ ಡೇ ಈ ಸೀರಿಯಲ್ ಮುಕ್ತಾಯವಾಯಿತು. ಟಿಆರ್‌ಪಿ ಇದ್ದರೂ, ಕಥೆ ಚೆನ್ನಾಗಿದ್ದರೂ, ಜನರ ರೆಸ್ಪಾನ್ಸ್‌ ಚೆನ್ನಾಗಿದ್ದರೂ ಈ ಧಾರಾವಾಹಿಯನ್ನು ಅದ್ಯಾಕೆ ಸಡನ್ನಾಗಿ ನಿಲ್ಲಿಸಿದರೋ ಯಾರಿಗೂ ಗೊತ್ತಿಲ್ಲ. ಆದರೆ ಈ ಜೋಡಿಯನ್ನು ಜನ ಇನ್ನೂ ಮರೆತಿಲ್ಲ. ಅವರ ವೀಡಿಯೋವನ್ನು ಎಡಿಟ್ ಮಾಡಿ ರೀಲ್ಸ್ ಮಾಡಿ ಹಾಕುತ್ತಿರುತ್ತಾರೆ. ಇದೀಗ ಇಬ್ಬರ ಕಿಸ್ಸಿಂಗ್ ಸೀನ್ ವೈರಲ್ ಆಗಿದೆ. ಇದು ಸೀರಿಯಲ್‌ನ ಸೀನ್. ಎಡಿಟ್‌ ಮಾಡಿರುವ ರೀತಿಗೋ ಏನೋ ಗೊತ್ತಿಲ್ಲ. ಸೀನ್ ಅಂತೂ ಸಖತ್ ರೊಮ್ಯಾಂಟಿಕ್ ಆಗಿದೆ. ಜನ ಈ ಸೀನ್ ನೋಡಿ ಈ ಸೀರಿಯಲ್ ಜೋಡಿ ರಿಯಲ್‌ನಲ್ಲೂ ಒಂದಾಗಬಾರದಾ ಅಂತ ಈಗಲೂ ಹೇಳ್ತಿದ್ದಾರೆ. ಸದ್ಯಕ್ಕೆ ಇನ್‌ಸ್ಟಾದಲ್ಲಿ ಈ ಸೀನ್ ವೈರಲ್‌ ಅಂತೂ ಆಗಿದೆ.

ಗಟ್ಟಿಮೇಳಕ್ಕೆ ಅಭಿಷೇಕ್ ರಾಮ್ ದಾಸ್ ಗುಡ್ ಬೈ, ವಿಕ್ಕಿ ಪಾತ್ರಕ್ಕೇ ತೆರೆ ಎಳೆದ ಸೀರಿಯಲ್

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಬಿಗ್‌ಬಾಸ್‌ ಮನೆಯಿಂದ ಹೊರಬಂದ ಬೆನ್ನಲ್ಲಿಯೇ ಸ್ಪರ್ಧಿ ಮೇಲೆ ಗಂಭೀರ ಆರೋಪ ಮಾಡಿದ ಡಿಸೈನರ್‌!
Bigg Boss Kannada 12: ಏನೂ ಮಾಡಲ್ಲ, ವೇಸ್ಟ್ ಎಂದಿದ್ದ ಗಿಲ್ಲಿ ನಟ; ಠಕ್ಕರ್‌ ಕೊಡೋ ಕೆಲಸ ಮಾಡಿದ ಕಾವ್ಯ ಶೈವ!