ಬಿಗ್ ಬಾಸ್ ಖ್ಯಾತಿಯ ಸ್ನೇಹಾ ಆಚಾರ್ಯಗೆ ಗಂಡು ಮಗು: 10 ದಿನ ತಡವಾಗಿ ಜನಿಸಿದ ಮಗ

Published : Jun 19, 2023, 03:15 PM IST
ಬಿಗ್ ಬಾಸ್ ಖ್ಯಾತಿಯ ಸ್ನೇಹಾ ಆಚಾರ್ಯಗೆ ಗಂಡು ಮಗು: 10 ದಿನ ತಡವಾಗಿ ಜನಿಸಿದ ಮಗ

ಸಾರಾಂಶ

ಕನ್ನಡ ಕಿರುತೆರೆ ಜನಪ್ರಿಯ ನಟಿ ಹಾಗೂ ಬಿಗ್ ಬಾಸ್ ಕನ್ನಡ ಸೀಸನ್ 6ರ ಸ್ಪರ್ಧಿ ಸ್ನೇಹಾ ಆಚಾರ್ಯ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. 

ಕನ್ನಡ ಕಿರುತೆರೆ ಜನಪ್ರಿಯ ನಟಿ ಹಾಗೂ ಬಿಗ್ ಬಾಸ್ ಕನ್ನಡ ಸೀಸನ್ 6ರ ಸ್ಪರ್ಧಿ ಸ್ನೇಹಾ ಆಚಾರ್ಯ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಇತ್ತೀಚಿಗಷ್ಟೆ ತಾಯಿ ಆಗುತ್ತಿರುವ ವಿಚಾರವನ್ನು ತುಂಬಾನೇ ಸ್ಪೆಷಲ್ ಆಗಿ ಸೋಷಿಯಲ್ ಮೀಡಿಯಾದಲ್ಲಿ ಅನೌನ್ಸ್ ಮಾಡಿದ್ದರು. ಇದೀಗ ಸ್ನೇಹಾ ಮುದ್ದಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಅಂದುಕೊಂಡ ದಿನಕ್ಕಿಂತ 10 ದಿನ ತಡವಾಗಿ ಮಗು ಜನಿಸಿದೆ ಎಂದು ಬಹಿರಂಗ ಪಡಿಸಿದ್ದಾರೆ. ಈ ಬಗ್ಗೆ ಸ್ನೇಹಾ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. ಮಗುವಿನ ವಿಡಿಯೋವನ್ನು ಸಹ ಹಂಚಿಕೊಂಡಿದ್ದಾರೆ. ಜೊತೆಗೆ ಸ್ನೇಹಾ ದೀರ್ಘವಾದ ಪೋಸ್ಟ್ ಶೇರ್ ಮಾಡಿದ್ದಾರೆ. ಸ್ನೇಹಾಗೆ ಅಭಿಮಾನಿಗಳು ಮತ್ತು ಸ್ನೇಹಿತರು, ಆಪ್ತರು ಸಾಮಾಜಿಕ ಜಾಲತಾಣದ ಮೂಲಕ ಶುಭಹಾರೈಸುತ್ತಿದ್ದಾರೆ. 

ಈ ಬಗ್ಗೆ ಸ್ನೇಹ ಸಾಮಾಜಿಕ ಜಾಲತಾಣದಲ್ಲಿ, 'ಅದ್ಭುತವಾದ ಹೊಸ ಜಗತ್ತಿಗೆ ಕಾಲಿಟ್ಟಿದ್ದೇವೆ. ಬೇಬಿ ರಾಯಿಕ್ ನನಗೆ ತುಂಬ ಕ್ಲೋಸ್ ಆಗಿದ್ದಾನೆ, ನನಗೆ ಕೊಟ್ಟ ಡೇಟ್ ಮುಗಿದು 10 ದಿನಗಳ ಬಳಿಕ, ಅಪ್ಪಂದಿರ ದಿನ ಬರುವ ಸಮಯಕ್ಕೆ ಹುಟ್ಟಿದ್ದಾನೆ. ರಾಯಿಕ್ ಅಂದರೆ ಹೀರೋಯಿಕ್ ಎಂದೂ ಕೂಡ ಉಚ್ಛರಿಸಬಹುದು. ಬೆಳಕಿನ ಹೀರೋ' ಎಂದು ಬರೆದುಕೊಂಡಿದ್ದಾರೆ.

ಸದ್ದಿಲ್ಲದೇ ವಿದೇಶಿಗನ ಮದುವೆಯಾದ ಕನ್ನಡ ಬಿಗ್‌ಬಾಸ್‌ ಬೆಡಗಿ

ನಟಿ ಸ್ನೇಹಾ ಇತ್ತೀಚಿಗಷ್ಟೆ ಪ್ರೆಗ್ನೆನ್ಸಿ ಫೋಟೋ ಶೇರ್ ಮಾಡಿ ತಾಯಿಯಾಗುತ್ತಿರುವ ವಿಚಾರ ಹೇಳಿದ್ದರು. 'ನಮ್ಮ ಜೀವನದ ದೊಡ್ಡ ಅಡ್ವೆಂಜರ್ ಆರಂಭವಾಗಲಿದೆ' ಎಂದು ಬರೆದುಕೊಳ್ಳುವ ಮೂಲಕ ಸಿಹಿ ಸುದ್ದಿ ನೀಡಿದ್ದರು. ತರಹೇವಾರ್ ಫೋಟೋಶೂಟ್ ನಲ್ಲಿ ಸ್ನೇಹಾ ಮಿಂಚಿದ್ದರು. ಬಾತ್‌ ಟಬ್‌ನಲ್ಲಿ ಮಲಗಿ ಕ್ಯಾಮರಾಗೆ ಪೋಸ್ ನೀಡಿದ್ದರು. ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. 'ಸಮಯ ಮುಂದೂಡಬೇಕು ಆದಷ್ಟು ಬೇಗ ಮಗುವನ್ನು ಕೈಯಲ್ಲಿ ಹಿಡಿದುಕೊಳ್ಳಬೇಕು' ಎಂದು ಹೇಳಿದ್ದರು.

ಬಿಗ್ ಬಾಸ್ ಸ್ನೇಹಾ ಆಚಾರ್ಯ ಪ್ರೆಗ್ನೆಂಟ್; ಫೋಟೋ ನೋಡಿ ಬೆಚ್ಚಿಬಿದ್ದ ನೆಟ್ಟಿಗರು

ಬಿಗ್ ಬಾಸ್ ಮನೆಯಿಂದ ಹೊರ ಬಂದ ಮೇಲೆ ಸ್ನೇಹಾ ರಷ್ಯಾ ಮೂಲದ ರಾಯನ್ ಜೊತೆ ದಾಂಪತ್ಯಕ್ಕೆ ಕಾಲಿಟ್ಟರು. ಇವರದ್ದು ಲವ್ ಮ್ಯಾರೇಜ್. 2018ರಲ್ಲಿ ಹಿಂದು ಸಂಪ್ರದಾಯದ ಪ್ರಕಾರ ಮದುವೆಯಾಗಿದ್ದರು. ಈ ಮದುವೆಯಲ್ಲಿ ಇವರಿಬ್ಬರ ಕುಟುಂಬಸ್ಥರು, ಸ್ನೇಹಿತರು, ಆತ್ಮೀಯರು ಭಾಗಿಯಾಗಿದ್ದರು. ರಾಯನ್ ಅವರು ಅಮೆರಿಕದ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Bigg Boss ಗಿಲ್ಲಿ ಬಗ್ಗೆ ನಿಮ್ಗೆ ಗೊತ್ತಿಲ್ಲ, ರಘು ಚಪಾತಿ ಕೊಡದ ಕಾರಣ ನಾನ್​ ಹೇಳ್ತೀನಿ ಕೇಳಿ' ಎಂದ ಅಭಿಷೇಕ್
ಹೆಂಡ್ತಿಯನ್ನು ಹೇಗೆ ನೋಡಿಕೊಳ್ಳಬೇಕು? ಬೆಸ್ಟ್​ ಪತಿಯಾಗಲು ಮಾಳುಗೆ Bigg Boss ರಕ್ಷಿತಾ ಶೆಟ್ಟಿ ಏನೆಲ್ಲಾ ಟಿಪ್ಸ್​ ಕೊಟ್ರು ನೋಡಿ!