
ಕರ್ನಾಟಕದ ಎರಡು ದೊಡ್ಡ ಶೋಗಳು ಮಜಾ ಟಾಕೀಸ್ ಮತ್ತು Boys Vs Girls. ಈ ಎರಡು ಶೋಗಳ ʼಮಹಾ ಮಿಲನʼ ಕಲರ್ಸ್ ಕನ್ನಡದಲ್ಲಿ ಶನಿವಾರ ಮತ್ತು ಭಾನುವಾರ (ಫೆಬ್ರವರಿ 22, 23) ರಾತ್ರಿ 7:30 ಕ್ಕೆ ಪ್ರಸಾರವಾಗಲಿದೆ. ಈ ಶೋನಲ್ಲಿ ಹನುಮಂತ ಅವರ ಬಗ್ಗೆ ಯೋಗರಾಜ್ ಭಟ್ ಹಾಡಿ ಹೊಗಳಿದ್ದಾರೆ.
ಯೋಗರಾಜ್ ಭಟ್ ಹೇಳಿದ್ದೇನು?
“ಹನುಮಂತ ಅವನದ್ದೇ ಆದ ಒಂದು ವ್ಯಕ್ತಿತ್ವ, ಭಾರ ಇದೆ. ಅಂದಿನಿಂದ ಇಂದಿನವರೆಗೂ ಗೆದ್ದುಮೇಲೂ ಕಾಪಾಡಿಕೊಂಡು ವಿಶೇಷ ಇದೆ. ನೀನು ಹೀಗೆ ಇರು ಗುರು, ನಿನಗೆ ನನ್ನ ಸೆಲ್ಯೂಟ್” ಎಂದು ಯೋಗರಾಜ್ ಭಟ್ ಅವರು ಹೇಳಿದ್ದಾರೆ.
Boys v/s Girls ಶೋನಿಂದ ಮರೆಯಾಗಿದ್ದ Bigg Boss ಹನುಮಂತ ಮತ್ತೊಂದು ಭಾರೀ ಟ್ವಿಸ್ಟ್ ಕೊಟ್ರು! ಏನದು?
ಆರು ಗಂಟೆಗಳ ಮನರಂಜನೆ
ವೀಕ್ಷಕರಿಗೆ UNLIMITED MAJA ಮತ್ತು NON-STOP ENTERTAINMENT ಕೊಡಲಿದೆ. ವಾರಾಂತ್ಯದಲ್ಲಿ ಒಟ್ಟು 6 ಗಂಟೆಗಳ ಕಾಲ ಅಪರಿಮಿತ ಮಜಾ ಮತ್ತು ಕೊನೆಯೇ ಇಲ್ಲದಂತೆ ನಕ್ಕು ನಗಿಸುವ ಮನರಂಜನೆ ಕೊಡುವ ಈ 'ಮಹಾ ಮಿಲನ'ದಲ್ಲಿ ಅನೇಕ ವಿಶೇಷಗಳಿವೆ.
ಮಹಾ ಶಿವರಾತ್ರಿ ವಿಶೇಷ ಇದೆ!
ಯೋಗರಾಜ್ ಭಟ್ ಮತ್ತು ಸೃಜನ್ ಕಾರ್ಯಕ್ರಮದ ಜಡ್ಜ್ ಆಗಿ ಹೊಸ ಬಗೆಯ ತೀರ್ಪು ಬರೆಯಲಿದ್ದಾರೆ. ಅನುಪಮಾ ಗೌಡ ನಿರೂಪಣೆಯಲ್ಲಿ, ಎರಡೂ ಶೋಗಳ ದೈತ್ಯ ಪ್ರತಿಭೆಗಳು ತಮ್ಮ ಸ್ಕಿಟ್ಸ್, ಗಿಮಿಕ್, ಡಾನ್ಸ್ ಮೂಲಕ ಜನರ ಮನ ಕದಿಯಲಿದ್ದಾರೆ. 'ಮಹಾ ಶಿವರಾತ್ರಿ' ವಿಶೇಷವಾಗಿ ಚಂದನಾ, ಐಶ್ವರ್ಯಾ ಸಿಂಧೋಗಿ ಮತ್ತು ಪ್ರಿಯಾಂಕಾ ಕಾಮತ್ ಇವರು ಕ್ರಮವಾಗಿ ಸತಿ, ಪಾರ್ವತಿ, ಕಾಳಿಯಾಗಿ ನರ್ತಿಸಲಿದ್ದಾರೆ.
ಯಾರು ಯಾರು ಸ್ಪರ್ಧಿಗಳು?
'ಅಣ್ಣಯ್ಯ' ಸಿನೆಮಾದ ಕಾಮಿಡಿ ಅಣಕವನ್ನು ಹಾಲಿವುಡ್‌ನ "ಅವತಾರ್' ಚಿತ್ರದ ಮಾದರಿಯಲ್ಲಿ ತೋರಿಸಿ ಮನರಂಜಿಸಿರುವುದು ಚಂದ್ರಪ್ರಭ, ಪ್ರಶಾಂತ್, ವಿವೇಕ್, ಮಿಮಿಕ್ರಿ ಗೋಪಿ. ಇನ್ನೊಂದು ವಿಶೇಷವೆಂದರೆ, ʼನೊಂದ ಗಂಡಂದಿರ ಸಂಘ' ಸ್ಕಿಟ್. ಇದರಲ್ಲಿ ತುಕಾಲಿ - ಪತ್ನಿ ಮಾನಸ, ಪಾವಗಡ ಮಂಜು -ಪತ್ನಿ ನಂದಿನಿ ಮತ್ತು ಕುರಿ ಪ್ರತಾಪ್ ಪ್ರೇಕ್ಷಕರಿಗೆ ಮನರಂಜನೆಯ ಮಹಾಪೂರವನ್ನೇ ಹರಿಸಲಿದ್ದಾರೆ. ಜೊತೆಗೆ ಹಲವಾರು ಸ್ಕಿಟ್‌ಗಳು, ಡಾನ್ಸ್ ಮತ್ತು ಆಟಗಳಿಂದ ಆರು ಗಂಟೆಗಳ ಈ ಮಹಾಮಿಲನ ಕಲರ್ಸ್ ಕನ್ನಡ ವಾಹಿನಿಯ ವೀಕ್ಷಕರಿಗೆ ಅಪರೂಪದ ವಿಶೇಷ ಆನಂದದ ಹಬ್ಬವಾಗಿರುವುದಂತೂ ನಿಜ.
ಬಾಯ್ಸ್ v/s ಗರ್ಲ್ಸ್ ಶೋನಲ್ಲಿ ಹನುಮಂತ ಅವರು ಎರಡು ಎಪಿಸೋಡ್‌ಗಳು ಗೈರಾಗಿದ್ದರು. ಈಗ ಮತ್ತೆ ಅವರು ಈ ಶೋಗೆ ಬಂದಿರೋದು ವೀಕ್ಷಕರಿಗೆ ಖುಷಿ ಕೊಟ್ಟಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.