ಗಂಡನ ಬಾಯಿ ಮುಚ್ಚಿಸೋದು ಅಂತ ಹೇಳಿಕೊಟ್ಟ ವೀಣಾ ಅತ್ತಿಗೆಗೆ ಸಿಕ್ತು ಹೊಸ ಬಿರುದು

Published : Feb 22, 2025, 09:36 AM IST
ಗಂಡನ ಬಾಯಿ ಮುಚ್ಚಿಸೋದು ಅಂತ ಹೇಳಿಕೊಟ್ಟ ವೀಣಾ ಅತ್ತಿಗೆಗೆ ಸಿಕ್ತು ಹೊಸ ಬಿರುದು

ಸಾರಾಂಶ

Lakshmi Nivasa Veena Role: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಜಿಪುಣ ಗಂಡನಿಗೆ ಹೆಂಡತಿ ವೀಣಾ ಹೇಗೆ ಪಾಠ ಕಲಿಸುತ್ತಾಳೆ ಎಂಬುದನ್ನು ಈ ಲೇಖನ ವಿವರಿಸುತ್ತದೆ. ವೀಕ್ಷಕರು ವೀಣಾ ಅತ್ತಿಗೆಯ ಚಾಣಾಕ್ಷತನವನ್ನು ಮೆಚ್ಚಿ, ಹೊಸ ಬಿರುದನ್ನು ನೀಡಿದ್ದಾರೆ.

Lakshmi Nivasa Serial: ಕನ್ನಡ ಕಿರುತೆರೆಯ ಟಾಪ್ ಧಾರಾವಾಹಿಗಳಲ್ಲಿ ಒಂದಾಗಿರುವ ಲಕ್ಷ್ಮೀ ನಿವಾಸ ಕರುನಾಡಿನ ಪ್ರತಿಯೊಂದು ಮನೆಯನ್ನು ತಲುಪಿದೆ. ರಾತ್ರಿ 8 ಗಂಟೆ ಆಗುತ್ತಿದ್ದಂತೆ ಜನರು ಟಿವಿ ಮುಂದೆ ಬಂದು ಕುಳಿತುಕೊಳ್ಳುವಂತೆ ಮಾಡಿದೆ. ಶ್ರೀನಿವಾಸ್ ಮತ್ತು ಲಕ್ಷ್ಮೀ ಕುಟುಂಬದ ಕಥೆಯೇ ಈ ಧಾರಾವಾಹಿ.  ಶ್ರೀನಿವಾಸ್ ಮತ್ತು ಲಕ್ಷ್ಮೀ ದಂಪತಿಗೆ ವೆಂಕಿ ಸೇರಿದಂತೆ ಒಟ್ಟು ಆರು ಮಕ್ಕಳು. ಆರು ಮಕ್ಕಳು ಒಬ್ಬರಿಗಿಂತ ಒಬ್ಬರು ಭಿನ್ನ. ಅದರಲ್ಲಿಯೂ ಹಿರಿಯ ಮಗ ಸಂತೋಷ್ ವರ್ತನೆ ಅತಿರೇಕ ಅನ್ನಿಸಿದ್ರೆ, ಮತ್ತೊಮ್ಮೆ ನಗು ತೋರಿಸುತ್ತದೆ. ಸಂತೋಷ್‌ನಾಗಿ ಎರಡು ಶೇಡ್‌ಗಳಲ್ಲಿ ನಟಿಸಿರುವ ನಟ ಮಧು ಹೆಗಡೆ ಪಾತ್ರಕ್ಕೆ ಜೀವ ತುಂಬಿದ್ದಾರೆ. ಕೋಪಿಷ್ಟ ಮತ್ತು ಜಿಪುಣನಾಗಿರುವ ಸಂತೋಷ್‌ನ ಪತ್ನಿ ವೀಣಾ ಪಾತ್ರದಲ್ಲಿ ನಟಿ  ಲಕ್ಷ್ಮೀ ಹೆಗಡೆ ನಟಿಸಿದ್ದಾರೆ. ಉತ್ತಮ ಗಾಯಕಿಯೂ ಆಗಿರುವ ಲಕ್ಷ್ಮೀ ಹೆಗಡೆ ಈ ಧಾರಾವಾಹಿಯಿಂದ ವೀಣಾ ಅತ್ತಿಗೆಯಾಗಿ ಜನಪ್ರಿಯರಗಿದ್ದಾರೆ. 

ಧಾರಾವಾಹಿಯಲ್ಲಿನ ಸಂತೋಷ್ ಮತ್ತು ವೀಣಾ ಜೋಡಿಯ ಕೋಳಿ ಜಗಳ ಮತ್ತು ಇವರಿಬ್ಬರ ನಡುವಿನ ಹಾಸ್ಯ ಸಂಭಾಷಣೆ ನೋಡುಗರಿಗೆ ಇಷ್ಟವಾಗುತ್ತಿದೆ. ಕಳೆದ ಸಂಚಿಕೆಯಲ್ಲಿ ಜಿಪುಣ ಗಂಡ ಕೂಡಿಟ್ಟ ಹಣವನ್ನು ವೀಣಾ ಕದ್ದು, ಕಷ್ಟದಲ್ಲಿರುವ ಮಾವನಿಗೆ ನೀಡಿದ್ದಳು. ನಿಮ್ಮ ಮಗನೇ ಈ ಹಣ ಕೊಟ್ಟಿರೋದ ಎಂದು ವೀಣಾ ಸುಳ್ಳು ಹೇಳಿದ್ದಳು. ಹಣ ಕದಿಯುವಾಗಲೂ ಸಂತೋಷ್ ಎಂಟ್ರಿ ಕೊಟ್ಟಿದ್ದನು. ಆದ್ರೆ ಜಾಣೆ ವೀಣಾ, ತಮ್ಮ ಮಾತುಗಳಿಂದ ಪಾರಾಗಿದ್ದಳು. ಒಳ್ಳೆಯ ಕೆಲಸಕ್ಕಾಗಿ ನನ್ನ ಗಂಡನ ಹಣವನ್ನೇ ಕದ್ದಿದ್ದೇನೆ ದೇವರೇ, ಕ್ಷಮಿಸಪ್ಪಾ ಎಂದು ದೇವರಿಗೆ ಅಪ್ಲಿಕೇಷನ್ ಹಾಕಿದ್ದಳು. 

ಜಿಪುಣ ಸಂತೋಷ್ ಡ್ಯುಟಿ ಮುಗಿಸಿ  ಮನೆಗೆ ಬರುತ್ತಿದ್ದಂತೆ ವೀಣಾಗೆ ಶಾಕ್ ನೀಡಿದ್ದನು. ಬೆಡ್‌ರೂಮ್‌ಗೆ ಹೋಗಿ ಹಣದ ಸೂಟ್‌ಕೇಸ್ ಕೆಳಗೆ ಇಳಿಸುವಂತೆ ವೀಣಾಗೆ ಹೇಳುತ್ತಾನೆ. ಇದರಿಂದ ಶಾಕ್ ಆದ ಒಂದು ಕ್ಷಣ ಶಾಕ್ ಆದ ವೀಣಾ, ಈಗ್ಯಾಕೆ? ಬೆಳಗ್ಗೆಯೇ ಎರಡು ಬಾರಿ ಹಣ ಎಣಿಸಿ ಹೋಗಿದ್ದೀರಿ ಎಂದು ಕೇಳುತ್ತಾಳೆ. ಇದಕ್ಕೆ ಗಂಡ ಸಂತೋಷ್ ಮತ್ತೊಮ್ಮೆ ಹಣ  ಎಣಿಸುತ್ತೇನೆ ಎಂದು ಹೇಳುತ್ತಾನೆ. ಈ ವೇಳೆ ಕಿಲಾಡಿ ವೀಣಾ, ನೀವು ಹೀಗೆ ಕಿರಿಕಿರಿ ಮಾಡಿದ್ರೆ, ಅತ್ತೆ-ಮಾವನೊಂದಿಗೆ ನಾನು ಸಹ ಜಾಹ್ನವಿ ಮನೆಗೆ ಹೋಗುತ್ತೇನೆ. ನಾನು ಹೋದ್ಮೇಲೆ ಒಬ್ಬರೇ ಕುಳಿತು, ಸೂಟ್‌ಕೇಸ್ ಇಳಿಸೋದು  ಹಣ ಎಣಿಸೋದು ಮಾಡುತ್ತಾ ಕುಳಿತುಕೊಳ್ಳಿ ಎಂದು ಗದರುತ್ತಾಳೆ. ಹೆಂಡತಿ ಗದರುತ್ತಿದ್ದಂತೆ, ಸಂತೋಷ್ ಬಾಯಿ ಮುಚ್ಕೊಂಡು ಸುಮ್ಮನಾಗುತ್ತಾನೆ. ನೀನು ನನ್ನ ಹೆಂಡ್ತಿನಾ ಅಥವಾ ನನ್ನ ಅಪ್ಪ-ಅಮ್ಮನಿಗೆ ಸೊಸೆ ಮಾತ್ರನಾ ಎಂದು ಸಂತೋಷ್ ಸಂದೇಹ ವ್ಯಕ್ತಪಡಿಸುತ್ತಾನೆ. 

ಇದನ್ನೂ ಓದಿ: ಎಲ್ಲರಿಗೂ ಅಚ್ಚುಮೆಚ್ಚಿನ ಲಕ್ಷ್ಮೀ ನಿವಾಸದ ವೀಣಾ ಅತ್ತಿಗೆ ಮನೇಲಿ ಹೇಗಿರ್ತಾರೆ, ಇವರ ರಿಯಲ್‌ ಅತ್ತೆ ಇವರ ಬಗ್ಗೆ ಏನಂತಾರೆ?

ಈ ಸನ್ನಿವೇಶ ನೋಡಿದ ವೀಕ್ಷಕರು, ಗಂಡನ ಬಾಯಿ ಮುಚ್ಚಿಸೋದು ಹೇಗೆ ಅಂತಾ ವೀಣಾ ಅತ್ತಿಗೆಯನ್ನು ನೋಡಿ ಕಲಿಯಬೇಕು ಎಂದು  ಹೇಳುತ್ತಿದ್ದಾರೆ. ಹೆಂಡತಿ ಊರಿಗೆ ಹೋಗ್ತಾಳೆ ಅಂದ್ರೆ ಎಂಥಾ ಗಂಡನಾದ್ರೂ ಸುಮ್ಮನಾಗುತ್ತಾನೆ.  ಇದು ಜಗದ ನಿಯಮ, ಇದನ್ನೇ ಧಾರಾವಾಹಿಯಲ್ಲಿಯೂ ಬಳಸಲಾಗಿದೆ. ಜಿಪುಣ ಗಂಡನಿಗೆ ಕಿಲಾಡಿ ಹೆಂಡತಿ  ಎಂಬ ಬಿರುದನ್ನು ವೀಣಾ ಅತ್ತಿಗೆಗೆ ನೀಡಲಾಗಿದೆ.

ಯಾರು ಈ ವೀಣಾ ಅತ್ತಿಗೆ?
ಉತ್ತರ ಕನ್ನಡ ಜಿಲ್ಲೆಯ ಶಿರಸಿ ಮೂಲದವರಾದ  ಲಕ್ಷ್ಮೀ ಹೆಗಡೆ, ಪದವಿವರೆಗೂ ಓದಿದ್ದು, ನಟನೆ ಜೊತೆಯಲ್ಲಿ ಉತ್ತಮ ಗಾಯಕಿಯಾಗಿದ್ದಾರೆ. ಲಕ್ಷ್ಮೀ ಹೆಗಡೆ  ಹಲವು ಸಿನಿಮಾಗಳಲ್ಲಿ, ಸೀರಿಯಲ್ ಗಳಲ್ಲೂ ಬಣ್ಣ ಹಚ್ಚಿದ್ದರೂ,  ಲಕ್ಷ್ಮಿ ನಿವಾಸ ಧಾರಾವಾಹಿಯ ಸೊಸೆ ವೀಣಾ ಪಾತ್ರ ದೊಡ್ಡಮಟ್ಟದ ಹೆಸರನ್ನು ತಂದುಕೊಟ್ಟಿದೆ.

ಇದನ್ನೂ ಓದಿ:  ಪವರ್ ಸ್ಟಾರ್ ಅಪ್ಪು ಜೊತೆಯಲ್ಲಿಯೂ ನಟಿಸಿದ್ದಾರೆ ಲಕ್ಷ್ಮೀ ನಿವಾಸದ ವೀಣಾ ಅತ್ತಿಗೆ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

2 ಸತ್ಯ ಬಯಲು ಮಾಡಿದ 'ಲಕ್ಷ್ಮೀ ನಿವಾಸ' ನಿರ್ದೇಶಕರು, ವೀಕ್ಷಕರು ಫುಲ್ ಹ್ಯಾಪಿ
BBK 12: ಟಾಸ್ಕ್ ಆಡದೇ ಈ ವಾರದ ‘ಕ್ಯಾಪ್ಟನ್’ ಆದ ಸ್ಪಂದನಾ.. ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್!