ರೊಮ್ಯಾಂಟಿಕ್ ಹಾಡು ಬರೆಯುವಾಗ ಅವಳನ್ನು ನೆನಪಿಸಿಕೊಳ್ಳುತ್ತಾರೆ; ಯೋಗರಾಜ್‌ ಭಟ್ರು ಪತ್ನಿ ಶಾಕಿಂಗ್ ಹೇಳಿಕೆ

Published : Feb 21, 2025, 03:57 PM ISTUpdated : Feb 21, 2025, 04:09 PM IST
ರೊಮ್ಯಾಂಟಿಕ್ ಹಾಡು ಬರೆಯುವಾಗ ಅವಳನ್ನು ನೆನಪಿಸಿಕೊಳ್ಳುತ್ತಾರೆ; ಯೋಗರಾಜ್‌ ಭಟ್ರು ಪತ್ನಿ ಶಾಕಿಂಗ್ ಹೇಳಿಕೆ

ಸಾರಾಂಶ

ಸೃಜನ್ ಲೋಕೇಶ್ ನಿರೂಪಣೆಯ ಮಜಾ ಟಾಕೀಸ್ ಕಾರ್ಯಕ್ರಮದಲ್ಲಿ ಯೋಗರಾಜ್ ಭಟ್ ಕಾಮಿಡಿ ಕಿಂಗ್ ಆಗಿ ಭಾಗವಹಿಸಿದರು. ಭಟ್ ಅವರ ಹಾಸ್ಯ ಪ್ರಜ್ಞೆ ಹಾಗೂ ಅವರ ಪತ್ನಿಯ ಚತುರ ಉತ್ತರಗಳು ವೀಕ್ಷಕರನ್ನು ರಂಜಿಸಿದವು. ಶಾಪಿಂಗ್, ಹಾಡುಗಳ ರಚನೆ ಕುರಿತಂತೆ ಸೃಜನ್ ಪ್ರಶ್ನೆಗಳಿಗೆ ಭಟ್ ಹಾಗೂ ಅವರ ಪತ್ನಿ ತಮಾಷೆಯಾಗಿ ಉತ್ತರಿಸಿದರು. ಭಟ್ಟರ ಕಾಲ್ಪನಿಕ ಕಾವ್ಯಾ ಕನ್ನಿಕೆಯ ಕುರಿತ ಮಾತುಗಳು ನಗೆ ಉಕ್ಕಿಸಿದವು.

ಸೃಜನ್ ಲೋಕೇಶ್‌ ಮಜಾ ಟಾಕೀಸ್ ಕಾರ್ಯಕ್ರಮ ಶುರುವಾಗಿದೆ. ಕಾಮಿಡಿ ಕಿಂಗ್ ಆಗಿ ಯೋಗರಾಜ್‌ ಭಟ್ರು ಕುಳಿತುಕೊಳ್ಳುತ್ತಾರೆ. ಓಪನಿಂಗ್ ದಿನವೇ ಭಟ್ರು ಸೆನ್ಸ್‌ ಆಫ್‌ ಹ್ಯೂಮರ್‌ಗೆ ವೀಕ್ಷಕರು ಬೋಲ್ಡ್‌ ಆಗಿಬಿಟ್ಟರು. ಅಲ್ಲದೆ ಭಟ್ರು ಕಾಮಿಡಿಗೆ ಅವರ ಪತ್ನಿ ಕಾಮಿಡಿ ಇನ್ನೂ ಸೂಪರ್ ಆಗಿತ್ತು. ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಸಖತ್ ಕೂಲ್ ಆಗಿ ಉತ್ತರಿಸಿದ್ದರು.

ಸೃಜನ್: ಶಾಪಿಂಗ್ ಮಾಡುವಾಗ ನಿಮ್ಮ ಹೆಂಡತಿ ಕೈಯನ್ನು ಹಿಡಿದುಕೊಂಡು ಹೋಗುತ್ತಿದ್ರಿ...ಹೆಂಗೆ ನೀವು ಇಷ್ಟೋಂದು ರೊಮ್ಯಾಂಟಿಕ್?

ಯೋಗರಾಜ್‌ ಭಟ್ರು: ಕೈ ಬಿಟ್ರೆ ಅಂಗಡಿಯೊಳಗೆ ನುಗ್ಗಿ ಬಿಡುತ್ತಾಳೆ ಅದಿಕ್ಕೆ ಕೈ ಹಿಡಿದುಕೊಂಡಿರುವುದು.

ಮಗಳು ವಂಶಿಕಾಗೆ ಟ್ಯಾಲೆಂಟ್‌ ಬಂದಿರೋದು ನನ್ನಿಂದ ಅಂತಾರೆ ಆದರೆ ಅವರಮ್ಮ ಕೂಡ ಬೆಸ್ಟ್ ಡ್ಯಾನ್ಸರ್: ಮಾಸ್ಟರ್ ಆನಂದ್

ಭಟ್ರು ಪತ್ನಿ: ಇದು ನಿಜಕ್ಕೂ ಸುಳ್ಳು. ಅಂಗಡಿಯೊಳಗೆ ನುಗ್ಗುವುದು ಇವರು. ಹುಚ್ಚುಚ್ಚಂಗೆ ಶಾಪಿಂಗ್ ಮಾಡುತ್ತಾರೆ. 

ಯೋಗರಾಜ್‌ ಭಟ್ರು: ಸೃಜನ್ ಕೂಡ ಸಂಸಾರಸ್ತ ಅವನಿಗೂ ಇದರಲ್ಲಿ ಅನುಭವ ಇದೆ. ಲೇಡಿಸ್ ಶಾಪಿಂಗ್‌ನಲ್ಲಿ ಇರುವುದು ಎರಡು ವಿಧ. ಈ ಕಲರ್ಸ್‌ನಲ್ಲಿ ಬೇರೆ ಡಿಸೈನ್‌ ಇಲ್ವಾ? ಅಥವಾ ಈ ಡಿಸೈನ್‌ನಲ್ಲಿ ಬೇರೆ ಕಲರ್ ಇಲ್ವಾ?

ಸೃಜನ್: ಇದುವರೆಗೂ ನೀವು ಬರೆದಿರುವ ಹಾಡುಗಳಲ್ಲಿ ಯಾವ ಹಾಡನ್ನು ನಿಮ್ಮ ಮನೆಯವರನ್ನು ನೆನಪಿಸಿಕೊಂಡು ಬರೆದಿರುವುದು?

ಅಯ್ಯೋ ದೇವ್ರೆ.....ವಿಜಯಲಕ್ಷ್ಮಿ ಧರಿಸಿರುವ ಈ ಸೀರೆ ಬೆಲೆಗೆ ಒಂದು ಮನೆ ಲೀಸ್‌ಗೆ ಹಾಕೋಬೋದಿತ್ತು ನೋಡಿ!

ಯೋಗರಾಜ್‌ ಭಟ್ರು: ನಾನು ಮನೆಗೆ ಹೋಗೋದಿಲ್ಲ.....

ಭಟ್ರು ಪತ್ನಿ: ನನ್ನನ್ನು ನೆನಪಿಸಿಕೊಂಡು ರೊಮ್ಯಾಂಟಿಕ್ ಸಾಂಗ್ ಬರೆಯುತ್ತಾರೆ ಅನ್ನೋದು ಸುಳ್ಳು. ರೊಮ್ಯಾಂಟಿಕ್ ಸಾಂಗ್ ಯಾರನ್ನು ನೆನೆಪಿಸಿಕೊಂಡು ಬರೆಯುತ್ತಾರೆ ಅಂತ ಕೇಳಬೇಕು. 

ಯೋಗರಾಜ್‌: ಒಬ್ಬಳು ಕಾವ್ಯಾ ಕನ್ನಿಕೆ ಬರುತ್ತಾಳೆ ಅವಳಿಗೆ ಮುಖ ಕಾಣಿಸುವುದಿಲ್ಲ..ನನಗೆ ಬೇಕಿರುವ ರೀತಿಯಲ್ಲಿ ಕಾಣಿಸುತ್ತಾಳೆ. ಐಟಂ ಸಾಂಗ್ ಬರೆಯುವಾಗ ತುಂಡು ಉಡುಗೆ ಧರಿಸುತ್ತಾಳೆ,ಶೃಂಗಾರ ಪೌರಾಣಿಕ ಹಾಡು ಬರೆಯಬೇಕು ಅಂದ್ರೆ ರೇಶ್ಮೆ ಸೀರೆ ಧರಿಸುತ್ತಾಳೆ. ಅವಳು ನನ್ನ ಹೆಂಡತಿ ಅಲ್ಲ. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಪದೇ ಪದೇ ಕಿಚ್ಚ ಸುದೀಪ್‌ ಹೇಳ್ತಿರುವಂತೆ ರಜತ್‌ ವೈರಲ್ ವಿಡಿಯೋ ಅಸಲಿ ವಿಷಯ ಏನು? ಅಂಥದ್ದೇನಿದೆ?
ಏನೂ ಮಾಡದೆ ಸ್ಪಂದನಾ ಸೋಮಣ್ಣ Bigg Boss ಮನೇಲಿ ಇರೋದು ಹೇಗೆ? ಕಿಚ್ಚ ಸುದೀಪ್‌ ಬಿಚ್ಚಿಟ್ಟ ಸತ್ಯ ಏನು?