ಸ್ಪರ್ಧಿಗಳ ಹೆದರಿಕೆ, ಅವರ ಮುಖದಲ್ಲಿ ಮೂಡುವ ಆತಂಕ ಇವೆಲ್ಲವೂ ಬಿಗ್ ಬಾಸ್ ಮನೆಯ ಆಸ್ತಿ. ಈ ಕಾರಣಕ್ಕೆ ಎರಡು ಎಲಿಮಿನೇಶನ್ ನಾಟಕ ಆಡಲಾಗಿದೆ. ಮೈಕೇಲ್ ಅಜಯ್ ಎಲಿಮಿನೇಟ್ ಆಗಿಲ್ಲ ಎನ್ನಲಾಗುತ್ತಿದೆ.
ಬಿಗ್ ಬಾಸ್ ಕನ್ನಡ ಸೀಸನ್ 10ರಲ್ಲಿ ನಿನ್ನೆ, ಅಂದರೆ 24 ಡಿಸೆಂಬರ್ 2023ರಂದು ವೀಕೆಂಡ್ ಭಾನುವಾರದ ಸಂಚಿಕೆಯಲ್ಲಿ ಡಬಲ್ ಎಲಿಮಿನೇಶನ್ ನಡೆದಿದೆ ಎಂದುಕೊಳ್ಳಲಾಗಿತ್ತು. ಕಾರಣ, ಕಿಚ್ಚ ಸುದೀಪ್ ಸಂಚಿಕೆಯಲ್ಲಿ ಇಲ್ಲದ ಕಾರಣ, ನಿನ್ನೆ ವಿಭಿನ್ನವಾಗಿ ಸಂಚಿಕೆ ಪ್ರಸಾರವಾಗಿತ್ತು. ಬಿಗ್ ಬಾಸ್ ಮನೆಯ ಗಾರ್ಡನ್ ಏರಿಯಾದಲ್ಲಿ ಎರಡು ಕಾರುಗಳನ್ನು ನಿಲ್ಲಿಸಲಾಗಿತ್ತು. ಒಂದು ಕಾರಿನಲ್ಲಿ ಅವಿನಾಶ್ ಹಾಗು ಇನ್ನೊಂದು ಕಾರಿನಲ್ಲಿ ಮೈಕೇಲ್ ಅವರುಗಳನ್ನು ಕೂಡ್ರಿಸಿ ಹೊರಗೆ ಕಳಿಸಲಾಗಿತ್ತು. ಎಲ್ಲರೂ ಡಬಲ್ ಎಲಿಮಿನೇಶನ್ ಆಗಿದೆ ಎಂದೇ ಭಾವಿಸಿದ್ದರು.
ಆದರೆ ಸತ್ಯ ಬೇರೆಯೇ ಇದೆ ಎನ್ನಲಾಗುತ್ತಿದೆ. ನಿನ್ನೆ ಕಾರಿನಲ್ಲಿ ಹೋಗಿದ್ದ ಮೈಕೇಲ್ ಅಜಯ್ ಇಂದು ಮನೆಯೊಳಗೆ ಮತ್ತೆ ಬಂದಿದ್ದು ಗೇಮ್‌ನಲ್ಲಿ ಭಾಗಿಯಾಗಿದ್ದಾರೆ. ಹಾಗಿದ್ದರೆ ಮೈಕೇಲ್ ಎಲಿಮಿನೇಶನ್ ಪೇಕಾ? ಹೌದು ಎನ್ನುತ್ತಿವೆ ಮೂಲಗಳು. ಸುಮ್ಮನೇ ಮನೆಯಲ್ಲಿ ಇರುವವರನ್ನು ಹೆದರಿಸಲಿಕ್ಕೋಸ್ಕರ ಮಾಡಿರುವ ಗೋಲ್‌ಮಾಲ್ ಇದು ಎನ್ನಲಾಗುತ್ತಿದೆ. ಕಾರಣ, ಇನ್ನೇನು ಕೇವಲ 22 ದಿನಗಳು ಮಾತ್ರ ಫೈನಲ್‌ಗೆ ಇವೆ. ಈ ಸಮಯದಲ್ಲಿ ಡಬ್ಬಲ್ ಎಲಿಮಿನೇಶನ್ ಮಾಡಿದ್ದು ನೋಡಿದರೆ ಸಹಜವಾಗಿಯೇ ಸ್ಪರ್ಧಿಗಳು ಹೆದರಿಕೊಳ್ಳುತ್ತಾರೆ. +
ಭಾರೀ ಸಮಸ್ಯೆಯ ಸುಳಿಯಲ್ಲಿ ಡ್ರೋನ್ ಪ್ರತಾಪ್; ಪ್ಲಾನ್ ಮಾಡಿದ್ರಾ ಮನೆಯ ಸದಸ್ಯರು!
ಸ್ಪರ್ಧಿಗಳ ಹೆದರಿಕೆ, ಅವರ ಮುಖದಲ್ಲಿ ಮೂಡುವ ಆತಂಕ ಇವೆಲ್ಲವೂ ಬಿಗ್ ಬಾಸ್ ಮನೆಯ ಆಸ್ತಿ. ಈ ಕಾರಣಕ್ಕೆ ಎರಡು ಎಲಿಮಿನೇಶನ್ ನಾಟಕ ಆಡಲಾಗಿದೆ. ಮೈಕೇಲ್ ಅಜಯ್ ಎಲಿಮಿನೇಟ್ ಆಗಿಲ್ಲ ಎನ್ನಲಾಗುತ್ತಿದೆ. ಸತ್ಯ ಏನೆಂದು ಗೊತ್ತಾಗಲು ಇನ್ನೇನು ತುಂಬಾ ಸಮಯ ಕಾಯಬೇಕಿಲ್ಲ. ಕಾರಣ, ಇಂದಿನ ಸಂಚಿಕೆಯ ಪ್ರಸಾರ ಆಗಲೇಬೇಕಲ್ಲ! ಇಂದಿನ ಎಪಿಸೋಡ್ ನೋಡಿದರೆ, ಮೈಕೇಲ್ ಮನೆಯಲ್ಲಿ ಇದ್ದಾರೋ ಹೋಗಿದ್ದಾರೋ ಎಂಬುದು ಅರ್ಥವಾಗುತ್ತದೆ. ಒಟ್ಟಿನಲ್ಲಿ, ಡಬ್ಬಲ್ ಎಲಿಮಿನೇಶನ್ ನಾಟಕವಾಡಿ ವೀಕ್ಷಕರನ್ನು ಒಂದು ದಿನದ ಮಟ್ಟಿಗೆ ಮಂಗ ಮಾಡಿದ್ದಂತೂ ಹೌದು ಎನ್ನಬಹುದು.
ರಾಮಾಚಾರಿ ಕಿಡ್ನ್ಯಾಪ್ ಪ್ಲಾನ್, ಮೃತ್ಯುಂಜಯ ಮಂತ್ರ ಪಠಿಸುತ್ತಿರುವ ಚಾರು; ಮಿಕ್ಸರ್ ಸೌಂಡ್ ಕೆಲಸ ಕೆಡಿಸಿತಾ!?
ಸಂಚಿಕೆ ಪ್ರಸಾರಕ್ಕೂ ಮೊದಲು ಕಲರ್ಸ್ ಕನ್ನಡ ಟಾಸ್ಕ್ ಪ್ರೊಮೋ ಬಿಡುಗಡೆ ಮಾಡಿದರೆ, ಅದರಲ್ಲಿ ಮೈಕೇಲ್ ಅವರೊಬ್ಬರನ್ನು ಮಾತ್ರ ಹೈಡ್ ಮಾಡದಿದ್ದರೆ ಸಂಚಿಕೆ ಪ್ರಸಾರಕ್ಕೂ ಮೊದಲೇ ಸತ್ಯ ಜಗತ್ತಿಗೇ ಗೊತ್ತಾಗಿಬಿಡುತ್ತದೆ. ಅಂದಹಾಗೆ, ಬಿಗ್ ಬಾಸ್ ಮನೆಯಲ್ಲಿ ಏನೇನು ನಡೆಯುತ್ತಿದೆ ಎಂಬುದನ್ನು ತಿಳಿಯಲು 'JioCinema'ದಲ್ಲಿ ಪ್ರಕಟವಾಗುತ್ತಿರುವ ಬಿಗ್‌ಬಾಸ್ ಕನ್ನಡ ನೇರಪ್ರಸಾರವನ್ನು ವೀಕ್ಷಿಸಬಹುದು. ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು JioCinemaದಲ್ಲಿ ಉಚಿತವಾಗಿ ನೋಡಬಹುದು. ಪ್ರತಿದಿನದ ಎಪಿಸೋಡ್‌ಗಳನ್ನು Colors Kannada ದಲ್ಲಿ ರಾತ್ರಿ 9.30ಕ್ಕೆ, ಶನಿವಾರ-ಭಾನುವಾರ ರಾತ್ರಿ 9.00 ಕ್ಕೆ ವೀಕ್ಷಿಸಬಹುದು.
ಹೀನಾಯ ಕಳಪೆ ಪಟ್ಟ ಪಡೆದ ಭಾರತದ ಟಿವಿ ಶೋ; ಅಮೆರಿಕಾ ನಂಟಿನಿಂದ ಇಂಡಿಯಾದಲ್ಲಿ ಗಂಟುಮೂಟೆ ಕಟ್ಟಿತಾ?