ರಾಮಾಚಾರಿ ಕಿಡ್ನ್ಯಾಪ್ ಪ್ಲಾನ್, ಮೃತ್ಯುಂಜಯ ಮಂತ್ರ ಪಠಿಸುತ್ತಿರುವ ಚಾರು; ಮಿಕ್ಸರ್‌ ಸೌಂಡ್ ಕೆಲಸ ಕೆಡಿಸಿತಾ!?

Published : Dec 25, 2023, 03:49 PM ISTUpdated : Dec 25, 2023, 06:53 PM IST
ರಾಮಾಚಾರಿ ಕಿಡ್ನ್ಯಾಪ್ ಪ್ಲಾನ್, ಮೃತ್ಯುಂಜಯ ಮಂತ್ರ ಪಠಿಸುತ್ತಿರುವ ಚಾರು; ಮಿಕ್ಸರ್‌ ಸೌಂಡ್ ಕೆಲಸ ಕೆಡಿಸಿತಾ!?

ಸಾರಾಂಶ

ರಾಮಾಚಾರಿಯ ಬೈಕು ಕೆಟ್ಟು ಹೋಗಿದ್ದು, ಆತ ಕಿಡ್ನ್ಯಾಪ್ ಮಾಡಲು ಬಂದವರ ಸಮೀಪದಲ್ಲೇ ಇದ್ದಾನೆ. ಕಿಡ್ನ್ಯಾಪರ್ಸ್ ಕಾಲ್ ಮಾಡಲು ಪಿಕ್ ಮಾಡಿದ ರಾಮಾಚಾರಿಗೆ ಅವರು ಲೊಕೇಶನ್ ಕಳಿಸಲು ಹೇಳುತ್ತಾರೆ. 

ರಾಮಾಚಾರಿ ಟೂ ವ್ಹೀಲರ್‌ನಲ್ಲಿ ಹೋಗುತ್ತಿದ್ದಾನೆ. ಇತ್ತ ಚಾರು (Charu) ದೇವರಮನೆಯಲ್ಲಿ ಫೋಟೋ ಮುಂದೆ ನಿಂತು 'ಓಂ ತ್ರಯಂಬಕಂ ಯಜಾಮಹೇ, ಸುಗಂಧಿಂ ಪುಷ್ಠಿ ವರ್ಧನಂ, ಊರ್ವಾರುಕ ಮಿವ ಮಂಧನಾನ್, ಮೃತ್ಯೋರ್‌ ಮುಕ್ಷೀಯ ಮಾಮೃತಾತ್..' ಎಂಬ ಮೃತ್ಯಂಜಯ ಮಂತ್ರವನ್ನು ತನ್ನ ಗಂಡ ರಾಮಾಚಾರಿ ಸಾಯದಿರಲೆಂದು ಭಕ್ತಿಯಿಂದ ಪಠಿಸುತ್ತಿದ್ದಾಳೆ. ಅದನ್ನು ನೋಡಿ ರಾಮಾಚಾರಿ ಅತ್ತೆಯ ಮಗಳಿಗೆ ಆತಂಕ ಶುರುವಾಗಿದೆ. ಏಕೆಂದರೆ ರಾಮಾಚಾರಿ ಕಿಡ್ನಾಪ್ ಮಾಡಲು ಆಕೆಯೇ ಸುಫಾರಿ ಕೊಟ್ಟಿದ್ದಾಳೆ. 

'ಈ ಚಾರುವನ್ನು ತುಂಬಾ ಈಸಿಯಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ. ಇವಳ ಪೂಜೆಯನ್ನು ಹೇಗಾದರೂ ಮಾಡಿ ಕೆಡಿಸಲೇ ಬೇಕು. ಈ ಮೊದಲು ಇದೇ ಥರ ಎನೋ ಪೂಜೆ ಮಾಡಿ ಸಾಯೋದ್ರಲ್ಲಿದ್ದ ಮಾವನ್ನ ಹೇಗೋ ಬದುಕಿಸಿಕೊಂಡು ಬಿಟ್ಟಿದ್ಳು. ಈಗ ನೋಡಿದ್ರೆ ಮತ್ತೆ ಏನೋ ಪೂಜೆ, ಮಂತ್ರ ಶುರು ಮಾಡ್ಕೊಂಡಿದಾಳೆ. ಹೇಗಾದ್ರೂ ಮಾಡಿ ಅಚ್ಳ ಪೂಜೆನ ನಿಲ್ಲಿಸ್ತೀನಿ' ಎಂದು ಮನಸ್ಸಿನಲ್ಲೇ ಅಂದುಕೊಂಡು ಮಿಕ್ಸಿ ಆನ್ ಮಾಡಿ ಜೋರಾಗಿ ಸೌಂಡ್ ಮಾಡುತ್ತಾಳೆ. ಆದರೆ ಚಾರು ಅದಕ್ಕೆಲ್ಲ ಬಗ್ಗದೇ ತನ್ನ ಮಂತ್ರಪಠಣವನ್ನು ಮುಂದುವರೆಸಿದ್ದಾಳೆ. 

ಹೀನಾಯ ಕಳಪೆ ಪಟ್ಟ ಪಡೆದ ಭಾರತದ ಟಿವಿ ಶೋ; ಅಮೆರಿಕಾ ನಂಟಿನಿಂದ ಇಂಡಿಯಾದಲ್ಲಿ ಗಂಟುಮೂಟೆ ಕಟ್ಟಿತಾ?

ಅಷ್ಟರಲ್ಲಿ ಅಲ್ಲಿಗೆ ಬರುವ ಚಾರು ಅತ್ತೆ ಆ ಶಬ್ದ ಮಾಲಿನ್ಯ ನೋಡಿ ಆಕೆಗೆ ಹೇಳಿ ಮಿಕ್ಸಿ ಸೌಂಡ್ ನಿಲ್ಲಿಸಲು ಹೇಳಿ ಕೈ ಮುಗಿದು ನಿಲ್ಲಲು ಹೇಳುತ್ತಾಳೆ. ಅದನ್ನು ಕಂಡು ಚಾರು ವಿಲನ್ ರೂಪದಲ್ಲಿದ್ದ ಆಕೆಗೆ ಕೋಪ ಬರುತ್ತದೆ. ಆದರೆ ಏನೂ ಹೇಳುವಂತಿಲ್ಲ. ಕಾರಣ, ಅತ್ತೆಯ ಮುಂದೆ ನಾಟಕ ಆಡಲೇಬೇಕಲ್ಲ! ಆದರೆ, ತನ್ನ ಪ್ಲಾನ್ ಪ್ರಕಾರ ರಾಮಾಚಾರಿ (Ramachari) ಇನ್ನೂ ಕಿಡ್ನಾಪ್ ಆಗಿಲ್ಲ ಎಂಬ ಆತಂಕ ಅವಳನ್ನು ಕಾಡುತ್ತದೆ. ಆದರೆ, ಅಲ್ಲಿ ರಾಮಾಚಾರಿಯ ಬೈಕು ಕೆಟ್ಟು ಹೋಗಿದ್ದು, ಆತ ಕಿಡ್ನ್ಯಾಪ್ ಮಾಡಲು ಬಂದವರ ಸಮೀಪದಲ್ಲೇ ಇದ್ದಾನೆ.

ಭಾರೀ ಸಮಸ್ಯೆಯ ಸುಳಿಯಲ್ಲಿ ಡ್ರೋನ್ ಪ್ರತಾಪ್; ಪ್ಲಾನ್‌ ಮಾಡಿದ್ರಾ ಮನೆಯ ಸದಸ್ಯರು!

ಕಿಡ್ನ್ಯಾಪರ್ಸ್ ಕಾಲ್ ಮಾಡಲು ಪಿಕ್ ಮಾಡಿದ ರಾಮಾಚಾರಿಗೆ ಅವರು ಲೊಕೇಶನ್ ಕಳಿಸಲು ಹೇಳುತ್ತಾರೆ. ಹಾಗಿದ್ದರೆ ರಾಮಾಚಾರಿ ಲೊಕೇಶನ್ ಕಳಿಸಿದನೇ? ಅವರು ರಾಮಾಚಾರಿಯನನ್ಉ ಕಿಡ್ನ್ಯಾಪ್ ಮಾಡಿದರಾ? ಚಾರು ಮಂತ್ರಪಠಣದ ಶಕ್ತಿ ಕೆಲಸ ಮಾಡಲಿಲ್ಲವೇ? ಮುಂದೇನು ಗತಿ ರಾಮಾಚಾರಿಗೆ? ಎಲ್ಲದಕ್ಕೂ ಇಂದಿನ ಹಾಗೂ ಮುಂದಿನ ಸಂಚಿಕೆಗಳು ಉತ್ತರ ನೀಡಲಿವೆ. ಅಂದಹಾಗೆ, ರಾಮಾಚಾರಿ ಸೀರಿಯಲ್ ಕಲರ್ಸ್‌ ಕನ್ನಡದಲ್ಲಿ ಸೋಮವಾರದಿಂದ ಶುಕ್ರವಾರ ರಾತ್ರಿ 9.00ಕ್ಕೆ ಪ್ರಸಾರವಾಗಲಿದೆ. 

ಬೊಂಬಾಟ್ ಭೋಜನ ಸಾವಿರದ ಸಂಚಿಕೆಗೆ ಕನಸಿನ ರಾಣಿ ಮಾಲಾಶ್ರೀ ಆಗಮನ!

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕಾಲುಂಗುರ ಧರಿಸಿದ ನಟಿ ರಜಿನಿ ಪತಿ…. ಪ್ರಶ್ನಿಸಿದವರಿಗೆ ಏನಂದ್ರು ನೋಡಿ
BBK 12: ಮದುವೆ ಮನೆಯಿಂದ ಗಿಲ್ಲಿ ನಟನನ್ನು ಆಚೆ ಹಾಕಿ, ರಸ್ತೆಗೆ ನೂಕಿದ್ರು: ಗೊತ್ತಿಲ್ಲದ ವಿಷಯ ಬಿಚ್ಚಿಟ್ಟ ತಾಯಿ