Ganavi Lakshman: ತೆಲಗುವಿನ ರುದ್ರಂಗಿಯಲ್ಲಿ 'ಮಗಳು ಜಾನಕಿ': ವಿಡಿಯೋ ಶೇರ್​ ಮಾಡಿದ ನಟಿ

Published : Jul 15, 2023, 12:15 PM IST
Ganavi Lakshman: ತೆಲಗುವಿನ ರುದ್ರಂಗಿಯಲ್ಲಿ 'ಮಗಳು ಜಾನಕಿ': ವಿಡಿಯೋ ಶೇರ್​ ಮಾಡಿದ ನಟಿ

ಸಾರಾಂಶ

ಮಗಳು ಜಾನಕಿ ಮೂಲಕ ಖ್ಯಾತಿ ಪಡೆದ ನಟಿ ಗಾನವಿ ಲಕ್ಷ್ಮಣ ಅವರು ಈಗ ತೆಲುಗು ಚಿತ್ರದಲ್ಲಿ ಮಿಂಚುತ್ತಿದ್ದು, ಅದರ ವಿಡಿಯೊ ಶೇರ್​ ಮಾಡಿದ್ದಾರೆ.  

ಕಲರ್ಸ್​ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಟಿ. ಎನ್‌ ಸೀತಾರಾಮ್‌ ನಿರ್ದೇಶನದ ಮಗಳು ಜಾನಕಿ ಧಾರಾವಾಹಿಯ ಜಾನಕಿಯ ಮುದ್ದು ಮೊಗ ಮನೆಮನಗಳನ್ನು ಗೆದ್ದಿತ್ತು. ಈ ಜಾನಕಿಯ ಅಸಲಿ ಹೆಸರು ಗಾನವಿ ಲಕ್ಷ್ಮಣ. ಈ ಧಾರಾವಾಹಿ ಅರ್ಧಕ್ಕೆ ನಿಂತೂ ಜಾನಕಿ ಪಾತ್ರದ ಮೂಲಕ ಮನೆ ಮನ ಗೆದ್ದಿದ್ದಾರೆ ಜಾನಕಿ. ಅಂದಹಾಗೆ ಈಕೆಯ ನಿಜವಾದ ಹೆಸರು  ಗಾನವಿ ಲಕ್ಷ್ಮಣ್ (Ganavi Lakshman). ಈಕೆ ಹಿರಿತೆರೆಯಲ್ಲೂ ಸಾಕಷ್ಟು ಹೆಸರು ಮಾಡಿದ್ದಾರೆ. ಶಿವರಾಜ್‌ ಕುಮಾರ್‌, ರಿಷಭ್‌ ಶೆಟ್ಟಿಯಂತಹ ಟಾಪ್‌ ನಟರ ಜೊತೆಯೂ ತೆರೆ ಹಂಚಿಕೊಂಡು ಸ್ಯಾಂಡಲ್‌ವುಡ್ (Sandalwood) ಬ್ಯೂಟಿ ಆಗಿ ಮೆರೆದಿದ್ದಾರೆ. ಕಳೆದ ಡಿಸೆಂಬರ್​ನಲ್ಲಿ ಗಾನವಿ ಲಕ್ಷ್ಮಣ್  ಶಿವರಾಜ್​ಕುಮಾರ್​  ಜೊತೆ ವೇದಾ ಚಿತ್ರದಲ್ಲಿ ತೆರೆ ಹಂಚಿಕೊಂಡು ಸಕತ್​ ಫೇಮಸ್​ ಆದರು.  ಈ ಸಿನಿಮಾ ಕನ್ನಡ, ತೆಲುಗು, ತಮಿಳಿನಲ್ಲಿ ರಿಲೀಸ್ ಆಯಿತು. ಇಂತಿಪ್ಪ ನಟಿ  ಕಳೆದ ತಿಂಗಳು  ಬೋಲ್ಡ್ ಫೋಟೋಶೂಟ್‌ನಲ್ಲಿ ಮಿಂಚಿ ಎಲ್ಲರ ಹುಬ್ಬೇರಿಸಿದ್ದರು.

ಶಿವಣ್ಣಗೆ ಜೋಡಿಯಾಗಿ ನಟಿಸುವ ಮೂಲಕ ಮೋಡಿ ಮಾಡಿದ್ದ ಗಾನವಿ ನಯಾ ಲುಕ್‌ಗೆ ಅಭಿಮಾನಿಗಳು ಫಿದಾ ಆಗಿದ್ದರು.  `ಮಗಳು ಜಾನಕಿ’ ಧಾರಾವಾಹಿ ಮೂಲಕ ನಟನಾ ಕ್ಷೇತ್ರಕ್ಕೆ ಕಾಲಿಟ್ಟ ಮಲೆನಾಡು ಚಿಕ್ಕಮಗಳೂರಿನ ಸುಂದರಿ ಗಾನವಿ, ರಿಷಬ್ ಶೆಟ್ಟಿ (Rishab Shetty) ನಟನೆಯ `ಹೀರೋ’, ಮತ್ತು ಭಾವಚಿತ್ರ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿ, `ವೇದ’ ಚಿತ್ರದಲ್ಲಿ ಮೋಡಿ ಮಾಡಿದ್ದಾರೆ.  

ಸೈಕಾಲಜಿ ಉಪನ್ಯಾಸಕ ಮತ್ತು ಸೆಕ್ಸ್​ ವರ್ಕರ್ (sex worker) ನಡುವೆ ನಡೆಯುವ ಕಥೆಯನ್ನೊಳಗೊಂಡ ಗುಟ್ರುಗೂ ಕಿರುಚಿತ್ರದಲ್ಲಿ ಲೈಂಗಿಕ ವರ್ಕರ್ ಆಗಿ ಗಾನವಿ ಕಾಣಿಸಿಕೊಂಡಿದ್ದರು. ಯೂಟ್ಯೂಬ್ ನಲ್ಲಿ ಬಿಡುಗಡೆಯಾದ ಆ ಕಿರುಚಿತ್ರ ಸಾಕಷ್ಟು ಸದ್ದು ಮಾಡಿತ್ತು. ಜೊತೆಗೆ ಗಾನವಿ ನಟನೆಯೂ ಕೂಡಾ! ಇದೀಗ ಗಾನವಿ ಅಭಿನಯದ ರುದ್ರಂಗಿ ಸಿನಿಮಾ ಇದೇ 7ರಂದು ರಿಲೀಸ್​ ಆಗಿದ್ದು, ಸಕತ್​ ಸೌಂಡ್​ ಮಾಡುತ್ತಿದೆ. ಒಂದಾದ ಮೇಲೆ ಒಂದರಂತೆ ಕನ್ನಡ ಸಿನಿಮಾಗಳಲ್ಲಿ ನಟಿಸುವ ಅವಕಾಶ ಪಡೆಯುತ್ತಿರುವ ಗಾನವಿ ಇದೀಗ ಪರಭಾಷೆಯ ಸಿನಿರಂಗದಲ್ಲಿ ನಟನಾ ಕಂಪನ್ನು ಪಸರಿಸಲು ತಯಾರಾಗಿದ್ದಾರೆ. ಅಜಯ್ ಕುಮಾರ್ ಗೌನಿ ನಿರ್ದೇಶನದ ಗೆಲವು ಸಿನಿಮಾ ರುದ್ರಾಂಗಿಯಲ್ಲಿ ನಾಯಕಿಯಾಗಿ ನಟಿಸಲಿದ್ದಾರೆ ಗಾನವಿ.

'ರಾಧಾ ರಮಣ' ನಟಿಯ ಹೊಸ ಮನೆಗೆ ಕಿರುತೆರೆಯ 'ಪ್ರೀತು-ಅದಿತಿ' ದಂಪತಿ ಭೇಟಿ: ಸ್ಪೆಷಲ್​ ಗಿಫ್ಟ್​!

ಚಿತ್ರದಲ್ಲಿ ಜಗಪತಿ  ಬಾಬು (Jagapathi Babu) ಅಭಿನಯಿಸಿದ್ದಾರೆ.  ರಾಜಮನೆತನದ ಈ ಕಥೆಯಲ್ಲಿ ಗಾನವಿ ಸಿಂಪಲ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಬಗ್ಗೆ ಮಾತನಾಡಿರುವ ನಟಿ, ತೆಲುಗು ಇಂಡಸ್ಟ್ರಿ ಗೆ ನಾನು ಹೊಸಬಳು. ಮೊದಲ ಬಾರಿಗೆ ಟೈಟಲ್ ರೋಲ್​ನಲ್ಲಿ ನಟಿಸುವ ಅವಕಾಶ ದೊರೆತಿದ್ದು. ಆ ಸಂದರ್ಭದಲ್ಲಿ  ನಾನು ಸಕತ್​ ನರ್ವಸ್ ಆಗಿದ್ದೆ‌‌. ಆದರೆ ಶೂಟಿಂಗ್ ಶುರುವಾದ ನಾನು ಸಿನಿಮಾಕ್ಕೆ ಹೊಸಬಳು ಎಂದು ಎನಿಸಲೇ ಇಲ್ಲ. ನಾನು ಕೂಡಾ ಇವರಲ್ಲಿ ಒಬ್ಬಳು ಎನ್ನುವ ಅನುಭವ ಬಂದಿತು. ರುದ್ರಂಗಿ (Rundrangi) ಫಿಮೇಲ್ ಒರಿಯೆಂಟೆಡ್ ಸಿನಿಮಾವಾಗಿದ್ದು, ನಾನು ರುದ್ರಂಗಿ ಆಗಿ ಕಾಣಿಸಿಕೊಳ್ಳಲಿದ್ದೇನೆ ಎಂದಿದ್ದಾರೆ.

ಇದೀಗ ಅವರು ತಮ್ಮ  ಅಭಿನಯದ ಒಂದು ದೃಶ್ಯವನ್ನು ಇನ್‌ಸ್ಟಾಗ್ರಾಮ್ (Instagram) ಅಕೌಂಟ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.  ಇದನ್ನು ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ. ಇದರಲ್ಲಿರುವ  ದೃಶ್ಯದಲ್ಲಿ ಗಾನವಿ ತಾವು ಕಣ್ಣೀರು ಹಾಕೋದಲ್ಲದೇ , ಎದುರಿಗೆ ಕುಳಿತವರ  ಕಣ್ಣಲ್ಲೂ ನೀರು ಬರಿಸುವಂತಿದೆ. ಅಷ್ಟು ಭಾವುಕ ದೃಶ್ಯ ಇದಾಗಿದೆ.  

ಹೊಸ ಲುಕ್​ನಲ್ಲಿ 'ಪುಟ್ಟಕ್ಕನ ಮಕ್ಕಳು' ವಿಲನ್​ ರಾಜೇಶ್ವರಿ: ಸೋ ಸ್ವೀಟ್​, ನಮ್​ ಕ್ರಷ್​ ಎಂದ ಫ್ಯಾನ್ಸ್​

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೈವಾಹಿಕ ಜೀವನಕ್ಕೆ ಬಿಗ್ ಬಾಸ್ ಮಾಜಿ ಸ್ಪರ್ಧಿ, ಹಿಂದೂ ಮುಸ್ಲಿಂ ಸಂಪ್ರದಾಯದಂತೆ ಮದುವೆ
ಕಾಲುಂಗುರ ಧರಿಸಿದ ನಟಿ ರಜಿನಿ ಪತಿ…. ಪ್ರಶ್ನಿಸಿದವರಿಗೆ ಏನಂದ್ರು ನೋಡಿ