ಟೊಮ್ಯಾಟೋ ಮಾರೋ ಹುಡ್ಗಿ ಅಲ್ವಾ.. ಸ್ಕೂಲ್ ಫೋಟೋ ಹಂಚಿಕೊಂಡ ಅನುಶ್ರೀಗೆ ಕಾಮೆಂಟ್ಸ್‌ ಸುರಿಮಳೆ

By Santosh Naik  |  First Published Jul 14, 2023, 6:40 PM IST

ಪಟಪಟನೆ ಮಾತಾಡುವ ಮೂಲಕ ಅಚ್ಚರಿಗೆ ನೂಕುವ ಈ ನಿರೂಪಕಿ ಹೆಚ್ಚೂಕಡಿಮೆ ಸಿನಿಮಾ ಸ್ಟಾರ್‌ಗಳಿಗಿಂತ ಜನಪ್ರಿಯ. ಟಿವಿ ಶೋಗಳು ಈ ನಿರೂಪಕಿಯಿಲ್ಲದೆ ನಡೆಯೋದೇ ಇಲ್ಲ ಎನ್ನುವಂಥಾಗಿದೆ. ಅವರು ಹಂಚಿಕೊಂಡ ಶಾಲಾದಿನದ ಫೋಟೋ ಇನ್ಸ್‌ಟಾಗ್ರಾಮ್‌ನಲ್ಲಿ ವೈರಲ್‌ ಆಗಿದೆ.


ಬೆಂಗಳೂರು (ಜು.14): ಅರಳು ಹುರಿದಂತೆ ಮಾತನಾಡುವ, ಮಾತಲ್ಲೇ ಜನರನ್ನು ಮೋಡಿ ಮಾಡುವ ಈ ನಿರೂಪಕಿ ಇಂದು ಮನೆಮನೆಗೂ ಫೇಮಸ್‌. ಈಕೆ ಇಲ್ಲದೆ ಟಿವಿಗಳಲ್ಲಿ ಯಾವುದೇ ಶೋಗಳು ಕೂಡ ನಡೆಯೋದಿಲ್ಲವೇನೋ ಎನ್ನುವಷ್ಟು ಜನಪ್ರಿಯರಾಗಿದ್ದಾರೆ. ಅದಕ್ಕೆ ತಕ್ಕಂತೆ ಆಕೆಯ ಮಾತನಾಡುವ ಶೈಲಿ, ವಿಷಯವನ್ನು ವಿವರಿಸುವ ಶೈಲಿ ಫುಲ್‌ ಫೇಮಸ್‌. ಸೋಶಿಯಲ್‌ ಮೀಡಿಯಾದಲ್ಲೂ ಫುಲ್‌ ಆಕ್ಟೀವ್‌ ಆಗಿರುವ ಈಕೆ ಇನ್ಸ್‌ಟಾಗ್ರಾಮ್‌ನಲ್ಲಿ ತಮ್ಮ ಶಾಲಾದಿನದ ಫೋಟೋ ಹಂಚಿಕೊಂಡಿದ್ದಾರೆ. ಇದಕ್ಕೆ ಸಾಕಷ್ಟು ತಮಾಷೆಯ ಕಾಮೆಂಟ್‌ಗಳೂ ಕೂಡ ಬಂದಿವೆ. ಹೌದು.. ನಟಿ ಹಾಗೂ ನಿರೂಪಕಿ ಅನುಶ್ರಿ ತಮ್ಮ ಶಾಲಾದಿನದ ಐಡಿ ಕಾರ್ಡ್‌ನ ಫೋಟೋವನ್ನು ಹಂಚಿಕೊಂಡಿದ್ದು, 'ಈ ಹುಡುಗಿ ಯಾರೆಂದು ಗೊತ್ತಾ? ಸ್ಟೂಡೆಂಟ್‌ ಲೈಫ್‌ ಈಸ್‌ ಗೋಲ್ಡನ್‌ ಲೈಫ್‌ ಅಂತಾರೆ. ನಿಜ ಬೆಲೆ ಕಟ್ಟಲು ಅಸಾಧ್ಯ. ನಿಮ್ಮ ಸ್ಟೂಡೆಂಟ್‌ ಲೈಫ್‌ ಹೇಗಿತ್ತು ಕಾಮೆಂಟ್‌ ಮಾಡಿ' ಎಂದು ಫೋಸ್ಟ್‌ ಹಂಚಿಕೊಂಡಿದ್ದಾರೆ. ಫೋಟೋ ಹಂಚಿಕೊಳ್ಳುವಾಗಲೂ ಎಚ್ಚರಿಕೆ ವಹಿಸಿರುವ ಅನುಶ್ರಿ ಮಂಗಳೂರಿನ ಯಾವ ಶಾಲೆಯಲ್ಲಿ ಓದಿದ್ದು ಎನ್ನುವುದನ್ನು ಕ್ರಾಪ್‌ ಮಾಡಿದ್ದಾರೆ. ಮಂಗಳೂರಿನ ಅತ್ತಾವರದ ಶಾಲೆ ಇದಾಗಿದ್ದು, ಈ ಚಿತ್ರ ಪೋಸ್ಟ್‌ ಮಾಡಿದ್ದ ಕೆಲವೇ ನಿಮಿಷದಲ್ಲಿ 18 ಸಾವಿರಕ್ಕೂ ಅಧಿಕ ಲೈಕ್ಸ್‌ ಪಡೆದುಕೊಂಡಿದೆ.

ಇನ್ನು ಅನುಶ್ರಿ ಹಂಚಿಕೊಂಡಿರುವ ಫೋಟೋಗೆ ಕಾಮೆಂಟ್ಸ್‌ಗಳ ಸುರಿಮಳೆ ಬಂದಿದೆ. 'ಯಾರೋ ಟೊಮ್ಯಾಟೋ ಮಾರೋ ಹುಡ್ಗಿ ಇದ್ದ ಹಾಗೆ ಇದ್ದಾಳೆ..' ಎಂದು ಅಭಿಮಾನಿಯೊಬ್ಬರು ಕಾಲೆಳೆದಿದ್ದರೆ, ಇನ್ನೂ ಕೆಲವರು ನಿಮ್ಮ ಫೋಟೋವನ್ನೇ ಹಾಕಿ ಯಾರಿದು ಅಂತಾ ಪ್ರಶ್ನೆ ಕೇಳ್ತಿದ್ದೀರಲ್ಲ ನಿಮಗೆ ಏನ್‌ ಹೇಳೋಣ ಎಂದು ಪ್ರಶ್ನೆ ಮಾಡಿದ್ದಾರೆ. 'ನಮ್ಮನೆ ಪಕ್ಕದಲ್ಲಿರೋ ಶಾಂತಮ್ಮ ಅವರ ಎರಡನೇ ಮಗಳು..' ಎಂದು ಇನ್ನೊಬ್ಬರು ಬರೆದಿದ್ದಾರೆ.

Tap to resize

Latest Videos

'ಇವರು ಕನ್ನಡದ ಫೇಮಸ್‌ ಆಂಕರ್‌ ಅಲ್ವಾ..? ಎಂದು ಕಾಮೆಂಟ್‌ ಮಾಡಿದ್ದಾರೆ. ಇವ್ಳು ನಮ್‌ ಹುಡ್ಗಿ ನಮಗೆ ಗೊತ್ತಿಲ್ವಾ.. ಎಂದು ಇದೇ ಪೋಸ್ಟ್‌ನಲ್ಲಿ ಅನುಶ್ರೀಗೆ ಹೇಳಿದ್ದಾರೆ. 'ಈ ಹುಡುಗಿ ಬೆಂಗಳೂರಿನಲ್ಲಿ ಕಳೆದು ಹೋಗಿದ್ದಾಳೆ. ದಯವಿಟ್ಟು ಯಾರಿಗಾದರೂ ಕಂಡರೆ ಹತ್ತಿರದ ಪೊಲೀಸ್‌ ಸ್ಟೇಷನ್‌ಗೆ ಒಪ್ಪಿಸಿ' ಎಂದು ಇನ್ನೊಬ್ಬರು ಬರೆದಿದ್ದಾರೆ. 'ನಿಮ್ಮ ಮದುವೆ ಆಗಿದೆಯಾ ಹಣೆಯಲ್ಲಿ ಕುಂಕುಮ ಇದೆ..' ಎಂದು ಇನ್ನೊಬ್ಬರು ಪ್ರಶ್ನೆಯನ್ನೂ ಮಾಡಿದ್ದಾರೆ.

ಇನ್ನು ಅನುಶ್ರೀ ಎಚ್ಚರಿಕೆಯಿಂದ ತಮ್ಮ ಐಡಿ ಕಾರ್ಡ್‌ಅನ್ನು ಕ್ರಾಪ್‌ ಮಾಡಿದ್ದರೂ, ಕೆಲವರು ಅವರು ಓದಿದ್ದು ಯಾವ ಶಾಲೆ/ಕಾಲೇಜು ಅನ್ನೋದನ್ನ ಬಹಿರಂಗಪಡಿಸಿದ್ದಾರೆ. 'ಇದು ಅತ್ತಾವರದ ಸರೋಜಿನಿ ಮಧುಸೂಧನ್‌ ಖುಷಿ ಕಾಲೇಜು' ಎಂದು ಬರೆದಿದ್ದಾರೆ. 'ಈ ಮುಖ ಎಲ್ಲೋ ನೋಡಿರೋ ಹಾಗಿದೆ..' 'ಅಲ್ರೀ ನಿಮ್ದೆ ಫೋಟೋ ಹಾಕಿ.. ಯಾರಂತ ಕೆಲ್ತಿರಲ್ಲ......ಎಲ್ಲೋ ಎಳಸು ಅಂತ ಕಾಣತ್ತೆ..' ಎಂದೂ ಕಾಮೆಂಟ್‌ಗಳು ಬಂದಿವೆ. 'ಇವ್ಳು ನನ್‌ ಡವ್‌, ಟೊಮ್ಯಾಟೋ ಮಾರೋ ಹುಡ್ಗಿ' ಎಂದು ಇನ್ನೊಬ್ಬ ಬರೆದುಕೊಂಡಿದ್ದಾನೆ.

ಪಟಪಟ ಮಾತನಾಡುವ ಸಿಕ್ರೆ ಸಾಕಾ? ಮದ್ವೆಯಾಗುವ ಹುಡುಗನ ಬಗ್ಗೆ ಅನುಶ್ರೀ ಹೇಳಿದ್ದೇನು?

ತಮ್ಮ ಮಾತುಗಳಿಂದ ಜನಪ್ರಿಯವಾಗಿರುವ ಬ್ಯೂಟಿ ಅನುಶ್ರೀ ಸದ್ಯ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋಗಳ ನಿರೂಪಕಿಯಾಗಿದ್ದಾರೆ. ತಮ್ಮ ವಿಶೇಷ ನಿರೂಪಣೆಯ ಮೂಲಕವೇ ಅಭಿಮಾನಿಗಳನ್ನು ಹೆಚ್ಚೆಚ್ಚು ತಲುಪುತ್ತಿದ್ದಾರೆ. ಸ್ಟಾರ್‌ ನಟರ ಸಿನಿಮಾಗಳ ಪ್ರಮೋಷನ್‌ ಕಾರ್ಯಕ್ರಮಕ್ಕೂ ಇವರ ನಿರೂಪಣೆಯೇ ಬೇಕು ಎನ್ನುವಷ್ಟರ ಮಟ್ಟಿಗೆ ಡಿಮಾಂಡ್‌ ಪಡೆದುಕೊಂಡಿದ್ದಾರೆ. ಸಿನಿಮಾ ನಟಿಯಾಗಿ ಗೆಲ್ಲಲು ವಿಫಲವಾಗಿದ್ದರೂ, ನಿರೂಪಕಿಯಾಗಿ ಅದಕ್ಕಿಂತ ಹೆಚ್ಚಿನ ಮನ್ನಣೆ ಪಡೆದುಕೊಂಡಿದ್ದಾರೆ.

ಯಾರ್ಯಾರನ್ನೋ ಮದ್ವೆ ಮಾಡಿಕೊಳ್ಳಲು ಆಗಲ್ಲ, ಕೊರಗಜ್ಜನ ಮೇಲೆ ಬಿಡ್ತೀನಿ: ಲೈವ್‌ನಲ್ಲಿ ಅನುಶ್ರೀ ಸ್ಪಷ್ಟ

 

 

 

click me!