
ಕಲರ್ಸ್ ಕನ್ನಡ (Colors Kannada )ದಲ್ಲಿ ಪ್ರಸಾರ ಆಗ್ತಿರುವ ಯಜಮಾನ ಸೀರಿಯಲ್ (Yajamana Serial) ನಲ್ಲಿ ಝಾನ್ಸಿ ಹಾಗೂ ರಾಘು ಬಾತ್ ರೂಮಿ (Bathroom) ನಲ್ಲಿ ಬಂಧಿಯಾಗಿದ್ರು. ಸದ್ಯ ಸೀರಿಯಲ್ ನಲ್ಲಿ ಇದೇ ವಿಷ್ಯ ಚರ್ಚೆಯಲ್ಲಿದೆ. ರಾಘು, ತನ್ನ ಜೊತೆ ಸಮಯ ಕಳೆಯಲು ಈ ಪ್ಲಾನ್ ಮಾಡಿದ್ದಾನೆ ಅಂತ ಝಾನ್ಸಿ ತಿಳಿದ್ಕೊಂಡಿದ್ದಾಳೆ. ರಾಘು ಮೇಲೆ ಮತ್ತಷ್ಟು ಕೆಂಡ ಕಾರ್ತಿದ್ದಾಳೆ. ಈ ಸೀರಿಯಲ್ ನಲ್ಲಿ ಝಾನ್ಸಿ ಪಾತ್ರ ಮಾಡ್ತಿರುವ ಮಧುಶ್ರೀ ಭೈರಪ್ಪ (Madhushree Bhairappa) ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿದ್ದಾರೆ. ರೀಲ್ಸ್ ಮಾಡಿಯೇ ಛಾನ್ಸ್ ಗಿಟ್ಟಿಸಿಕೊಂಡಿರುವ ಮಧುಶ್ರೀ ಭೈರಪ್ಪ ಈಗ ಬಾತ್ ರೂಮ್ ದೃಶ್ಯ ಶೂಟ್ ಆಗಿದ್ದು ಹೇಗೆ ಎಂಬುದನ್ನು ಹಂಚಿಕೊಂಡಿದ್ದಾರೆ.
ಮಧುಶ್ರೀ ಭೈರಪ್ಪ ತಮ್ಮ ಇನ್ಸ್ಟಾ ಖಾತೆಯಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ರಾಘು ಅಲಿಯಾಸ್ ಹರ್ಷ ಹಾಗೂ ಮಧು ಬೈರಪ್ಪರನ್ನು ನೀವು ಬಾತ್ ರೂಮಿನಲ್ಲಿ ಕಾಣ್ಬಹುದು. ಡೈರೆಕ್ಟರ್ ಹೇಳಿದಂತೆ ಆಕ್ಟಿಂಗ್ ಮಾಡ್ತಿರುವ ಹರ್ಷನಿಗೆ, ಝಾನ್ಸಿಯನ್ನು ಹೇಗೆ ಹಿಡಿದುಕೊಳ್ಬೇಕು, ಹೇಗೆ ಎತ್ತಬೇಕು ಎಂಬೆಲ್ಲ ಟ್ರೈನಿಂಗ್ ನಡೆದಿದೆ. ಝಾನ್ಸಿ ಮೈಮೇಲೆ ಬೀಳ್ತಿದ್ದಂತೆ ಹರ್ಷ ಹಾ ಅಂತ ಕೂಗ್ತಾರೆ. ಜೊತೆಗೆ ನಿರ್ದೇಶಕರ ಮಾತು ಕೇಳಿ ಝಾನ್ಸಿ ಹಾಗೂ ರಾಘು ನಗೋದನ್ನು ನೀವು ಕಾಣ್ಬಹುದು. ಸೀರಿಯಲ್ ನಲ್ಲಿ ಈ ದೃಶ್ಯಗಳು ಗಂಭೀರವಾಗಿದ್ರೂ, ಶೂಟಿಂಗ್ ಮಾಡುವ ವೇಳೆ ಕಲಾವಿದರು ಸಖತ್ ಮಸ್ತಿ ಮಾಡಿದ್ದಾರೆ.
Lakshmi Nivasa Serial: ಜಾಹ್ನವಿ, ವಿಶ್ವ ಪ್ರಾಣ ತೆಗೆಯೋ ಸೂಚನೆ ಕೊಟ್ಟ ಜಯಂತ್!
ಕಲರ್ಸ್ ಕನ್ನಡದಲ್ಲಿ ಸದ್ಯ ಪ್ರಸಾರ ಆಗ್ತಿರುವ ಸೀರಿಯಲ್ ಗಳಲ್ಲಿ ಬೆಸ್ಟ್ ಸೀರಿಯಲ್ ಎನ್ನುವ ಪಟ್ಟ ಇದಕ್ಕೆ ಸಿಕ್ಕಂತಿದೆ. ಅತಿ ಬೇಗ ವೀಕ್ಷಕರನ್ನು ಈ ಸೀರಿಯಲ್ ಸೆಳೆದಿದೆ. ಝಾನ್ಸಿ ದರ್ಪ ಹಾಗೂ ರಾಘವೇಂದ್ರನ ಪ್ರಾಮಾಣಿಕತೆ ಎಲ್ಲರ ಮನಸ್ಸು ಗೆದ್ದಿದೆ.
ಮುಂದೇನು ಮಾಡ್ತಾನೆ ರಾಘು? : ಸೀರಿಯಲ್ ಪ್ರೋಮೋ ಮೂಲಕವೇ ಎಲ್ಲರ ಗಮನ ಸೆಳೆದಿತ್ತು. ನಟಿ ಶೃತಿ, ಧಾರಾವಾಹಿ ಕಥೆ ಹಿಡಿದು ಬಂದಿದ್ರು. ಆರಂಭದಿಂದಲೂ ಸಾಕಷ್ಟು ಟ್ವಿಸ್ಟ್ ಜೊತೆ ಸಾಗುತ್ತಿರುವ ಸೀರಿಯಲ್ ನಲ್ಲಿ ಈಗ ರಾಘು, ಅನಿತಾನಾ ಮದುವೆ ಆಗ್ತಾನಾ ಎಂಬುದೇ ದೊಡ್ಡ ಪ್ರಶ್ನೆಯಾಗಿದೆ. ಒಂದ್ಕಡೆ ರಾಘು ಜೊತೆ ನಿರಂತರ ಜಗಳ ಆಡಿದ್ರೂ ಆಸ್ತಿಗಾಗಿ ರಾಘುವನ್ನು ಜೊತೆಗಿಟ್ಟುಕೊಳ್ಳುವ ಪ್ಲಾನ್ ಮಾಡ್ತಿದ್ದಾಳೆ ಝಾನ್ಸಿ. ಇತ್ತ ಪಲ್ಲವಿ – ಮಿಥುನ್ ಬಾಳು ಸರಿ ಆಗ್ಬೇಕು ಅಂದ್ರೆ ರಾಘು ಕೊಟ್ಟ ಮಾತಿನಂತೆ ನಡೆಯಬೇಕು. ವಿಕಲಾಂಗೆ ಅನಿತಾಗೆ ತಾಳಿ ಕಟ್ಟಬೇಕು.
ಝಾನ್ಸಿ ಮೇಲೆ ರಾಘುಗೆ ಪ್ರೀತಿ ಇಲ್ಲವಾದ್ರೂ ಝಾನ್ಸಿ ಮನಸ್ಸನ್ನು ಆತ ಅರ್ಥ ಮಾಡಿಕೊಂಡಿದ್ದಾನೆ. ಹಾಗಂತ ಕೊಟ್ಟ ಮಾತನ್ನು ಮುರಿಯಲು ರಾಘುಗೆ ಇಷ್ಟವಿಲ್ಲ. ಆದ್ರೆ ಇಬ್ಬರು ಸಹೋದರಿಯರಿಗೆ ರಾಘು, ಅನಿತಾ ಮದುವೆ ಆಗೋದು ಇಷ್ಟವಿಲ್ಲ. ಪಲ್ಲವಿ ಜೀವನ ಸರಿ ಮಾಡುವ ಭರದಲ್ಲಿ ರಾಘು ತನ್ನ ಜೀವನ ಹಾಳು ಮಾಡಿಕೊಳ್ತಿದ್ದಾನೆ ಎಂಬ ನೋವು ಅವರಿಗಿದೆ. ಇದೇ ಕಾರಣಕ್ಕೆ ಅನಿತಾ ಹಾಗೂ ರಾಘು ಎಂಗೇಜ್ಮೆಂಟ್ ಮುರಿಯಲು ಅವರು ಮುಂದಾಗಿದ್ದಾರೆ. ಅನಿತಾಗೆ ಆಡಿಯೋ ರೆಕಾರ್ಡ್, ವಿಡಿಯೋ ಕಳುಹಿಸುವ ಪ್ರಯತ್ನ ನಡೆಸಿದ್ದಾರೆ. ಆದ್ರೆ ಪಲ್ಲವಿ ಕೈಗೆ ಈ ವಿಡಿಯೋ ಸಿಕ್ಕಿದ್ದು, ತನ್ನ ಲೈಫ್ ಹಾಳಾಗ್ಬಹುದು ಎನ್ನುವ ಆತಂಕ ಆಕೆಯನ್ನು ಕಾಡ್ತಿದೆ.
ಭಾಗ್ಯನಿಗೆ ಬಂದೇ ಬಿಡ್ತು ನೆನಪು: ಶಕುಂತಲಾ ಕಥೆ ಫಿನಿಷ್! ಅಮೃತಧಾ
ಪುರುಷರಂತೆ ನಾನು ಧೈರ್ಯವಂತೆ ಅದ್ಕೊಂಡಿದ್ದ ಝಾನ್ಸಿ ಕಿಡ್ನಪ್ ಆಗಿದ್ದಾಳೆ. ರೌಡಿಗಳು ಆಕೆಯನ್ನು ಕಿಡ್ನಪ್ ಮಾಡಿದ್ದು, ವಿಷ್ಯ ರಾಘುಗೆ ಗೊತ್ತಾಗಿದೆ. ರಾಘು, ಝಾನ್ಸಿಯನ್ನು ರಕ್ಷಿಸ್ತಾನಾ? ನಿಗದಿತ ದಿನವೇ ಅನಿತಾ – ರಾಘು ಎಂಗೇಜ್ಮೆಂಟ್ ಆಗುತ್ತಾ ? ಇದಕ್ಕೆ ಉತ್ತರ ಸಿಗ್ಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.