ಪತ್ನಿಯನ್ನು ಪ್ರಾಣಿಗೆ ಹೋಲಿಸಿದ ತಾಂಡವ್​: ಭಾಗ್ಯಲಕ್ಷ್ಮಿ ಸೀರಿಯಲ್​ ವಿರುದ್ಧ ನೆಟ್ಟಿಗರ ಭಾರಿ ಆಕ್ರೋಶ

By Suchethana D  |  First Published May 28, 2024, 5:11 PM IST

ಭಾಗ್ಯಲಕ್ಷ್ಮಿ ಸೀರಿಯಲ್​ನಲ್ಲಿ ಹೆಂಡತಿಯನ್ನು ಪ್ರಾಣಿಗೆ ಹೋಲಿಸಿರುವ ಬಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ಭಾರಿ ಟೀಕೆ ವ್ಯಕ್ತವಾಗುತ್ತಿದ್ದು, ಪ್ರೇಕ್ಷಕರು ಏನು ಹೇಳಿದ್ದಾರೆ ಕೇಳಿ...
 


ಕಲರ್ಸ್​  ಕನ್ನಡದಲ್ಲಿ ಪ್ರಸಾರ ಆಗ್ತಿರೋ ಭಾಗ್ಯಲಕ್ಷ್ಮಿ ಸೀರಿಯಲ್​ ನಾಯಕಿಯ ಅಳುಮುಂಜಿ ಪಾತ್ರಕ್ಕೆ ಇದಾಗಲೇ ಅಭಿಮಾನಿಗಳು ರೋಸಿ ಹೋಗಿದ್ದಾರೆ. ಆರಂಭದಲ್ಲಿ ಅತ್ತೆ-ಸೊಸೆಯ ಮಧುರ ಬಾಂಧವ್ಯದ ಕುರಿತು ತೋರಿಸಲಾಗಿತ್ತು. ಇದನ್ನು ಫ್ಯಾನ್ಸ್​ ಅಪಾರವಾಗಿ ಮೆಚ್ಚಿಕೊಂಡು ಇದ್ದರೆ ಇಂಥ ಸೀರಿಯಲ್​ ಇರಬೇಕು ಎನ್ನುತ್ತಿದ್ದರು. ಮಗ ತಾಂಡವ್​ನನ್ನು ಎದುರು ಹಾಕಿಕೊಂಡು ಸೊಸೆಯ ಪರವಾಗಿ ನಿಂತ ಕುಸುಮಾಳು ಎಲ್ಲರಿಗೂ ಮಾದರಿ ಎನ್ನುತ್ತಿದ್ದರು. ಆದರೆ ಇತ್ತೀಚಿನ ಕೆಲವು ಎಪಿಸೋಡ್​ಗಳಲ್ಲಿ ಭಾಗ್ಯಳ ವಿಪರೀತ ಪೆದ್ದುತನ ಒಂದೆಡೆಯಾದರೆ, ತಾಂಡವ್​ ಮಾತು ಮಾತಿಗೂ ಪತ್ನಿಯನ್ನು ಹೀಯಾಳಿಸುವುದನ್ನು ವೀಕ್ಷಕರು ಅದರಲ್ಲಿಯೂ ಹೆಚ್ಚಾಗಿ ಮಹಿಳೆಯರು ಸಹಿಸುತ್ತಿಲ್ಲ.

ಇದೀಗ, ಒಂದು ಹೆಜ್ಜೆ ಮುಂದಕ್ಕೆ ಹೋಗಿರುವ ತಾಂಡವ್​ ಭಾಗ್ಯಳನ್ನು ಎಮ್ಮೆ ಎಂದು ಜರಿದಿದ್ದಾನೆ. ಭಾಗ್ಯ ಹೋಟೆಲ್​ನಲ್ಲಿ ಇದ್ದುದನ್ನು ತಾಂಡವ್​ ನೋಡಿದ್ದ. ಇತ್ತ ಭಾಗ್ಯ ಮನೆಯಲ್ಲಿ ಎಲ್ಲರಲ್ಲಿಯೂ ಸುಳ್ಳಿ ಹೇಳಿ ದೇವಸ್ಥಾನಕ್ಕೆ ಹೋಗುವುದಾಗಿ ಹೇಳಿ ಹೋಟೆಲ್​ಗೆ ಕೆಲಸಕ್ಕೆ ಹೋಗಿದ್ದಳು. ಅತ್ತ ಮಗ ಗುಂಡ ಕೈಸುಟ್ಟುಕೊಂಡಿದ್ದಾನೆ. ಭಾಗ್ಯ ಆತನಿಗೆ ಚಿಕಿತ್ಸೆ ನೀಡುತ್ತಿರುವಾಗ, ಭಾಗ್ಯ ಮನೆಯಲ್ಲಿ ಇಲ್ಲದ್ದನ್ನು ಕಂಡು ತಾಂಡವ್​ ಜೊತೆ ಹೋಗಿರುವ ಭಾಗ್ಯಳ ಅಮ್ಮ, ಮಗಳ ಮೇಲೆ ರೇಗಾಡಿದ್ದಾಳೆ. ಬೆಳಿಗ್ಗೆಯಿಂದ ಎಲ್ಲಿಗೆ ಹೋಗಿದ್ದಿ ಎಂದು ಕೇಳಿದ್ದಾಳೆ. ಭಾಗ್ಯಳಿಗೆ ಏನು ಹೇಳಬೆಕೋ ಗೊತ್ತಾಗುತ್ತಿಲ್ಲ.

Tap to resize

Latest Videos

ಅಲ್ಲೇ ಡ್ರಾ ಅಲ್ಲೇ ಬಹುಮಾನ: ಅತ್ತೆ ಚಾಪೆ ಕೆಳಗೆ ನುಸುಳಿದ್ರೆ ಈ ಸೊಸೆಗೆ ರಂಗೋಲಿ ಕೆಳಗೆ ನುಸುಳೋದು ಗೊತ್ತಿಲ್ವಾ?

ಅದೇ ಇನ್ನೊಂದೆಡೆ, ಭಾಗ್ಯಳನ್ನು ಹೋಟೆಲ್​ನಲ್ಲಿ ನೋಡಿದ್ದ ತಾಂಡವ್​, ಏ ಎಮ್ಮೆ... ಅಮ್ಮ ಮಾತನಾಡಿಸುವುದು ಕೇಳಿಸ್ತಿಲ್ವಾ? ಬೆಳಿಗ್ಗೆ ದೇವಸ್ಥಾನಕ್ಕೆ ಹೋಗಿದ್ಯೋ ಅಥವಾ ಎಂದಿದ್ದಾನೆ. ಇದನ್ನು ಕೇಳಿ ಭಾಗ್ಯಳಿಗೆ ಗಾಬರಿಯಾಗಿದೆ. ತನ್ನ ಗಂಡ ಹೋಟೆಲ್​ನಲ್ಲಿ ನೋಡಿಬಹುದು ಎಂಬ ಸಂದೇಹ ಮೂಡಿದೆ. ಅಷ್ಟರಲ್ಲಿಯೇ ಮಧ್ಯೆ ಪ್ರವೇಶಿಸುವ ಕುಸುಮಾ, ನೀನು ದೇವಸ್ಥಾನಕ್ಕೆ ಹೋಗಿರುವುದು ನನಗೆ ಗೊತ್ತು. ಯಾರಿಗೂ ಉತ್ತರ ಕೊಡಬೇಕಾಗಿಲ್ಲ. ಪಕ್ಕದ ಮನೆಯವರು ನಮ್ಮ ಮನೆಯ ತಂಟೆಗೆ ಬರಬೇಡಿ ಎಂದಿದ್ದಾಳೆ. ಅಷ್ಟರ ಮಟ್ಟಿಗೆ ಭಾಗ್ಯ ಬಚಾವ್​ ಆಗಿದ್ದಾಳೆ.  ಆದರೆ ಪತ್ನಿಯನ್ನು ಎಮ್ಮೆ ಎಂದು ಕರೆದಿರುವುದಕ್ಕೆ ಈಗ ಸೋಷಿಯಲ್​ ಮೀಡಿಯಾದಲ್ಲಿ ಭಾರಿ ಚರ್ಚೆ ಆಗುತ್ತಿದೆ. ಹೆಣ್ಣಿನ ಪಾತ್ರವನ್ನು ಅಳುಮುಂಜಿ ರೀತಿ ತೋರಿಸ್ತಿರೋದು ಸಾಲದು ಎಂಬುದಕ್ಕೆ ಈಗ ಹೆಂಡ್ತಿಯನ್ನು ಪ್ರಾಣಿಗಳಿಗೆ ಹೋಲಿಸಿ ಕರೆಯುವ ಸಂಸ್ಕಾರವನ್ನು ಕಲಿಸುತ್ತಿದ್ದೀರಾ ಎಂದು ಪ್ರಶ್ನಿಸುತ್ತಿದ್ದಾರೆ. ಇಂಥ ಸೀರಿಯಲ್​ಗಳನ್ನು ಬೈಕಾಟ್​ ಮಾಡಬೇಕು ಎನ್ನುತ್ತಿದ್ದಾರೆ ಹೆಚ್ಚಾಗಿ ಮಹಿಳಾ ಫ್ಯಾನ್ಸ್​.

ಇನ್ನು ಸೀರಿಯಲ್​ ವಿಷಯಕ್ಕೆ ಬರುವುದಾದರೆ, ಭಾಗ್ಯಳಿಗೆ ಯಾರದ್ದೋ ಹೆಸರಿನಲ್ಲಿ ಕೆಲಸ ಸಿಕ್ಕಿತ್ತು. ಅದು ತಿಳಿದು ಅವಳು ಕೆಲಸ ಕಳೆದುಕೊಂಡಿದ್ದಾಳೆ. ಅತ್ತೆ ಕುಸುಮಾ ಕೂಡ ಚಿಕ್ಕ ವಿಷಯಕ್ಕೆ ಗಲಾಟೆ ಮಾಡಿಕೊಂಡು ಹೋಟೆಲ್​ನಿಂದ ಹೊರಕ್ಕೆ ಬಂದಿದ್ದಾಳೆ. ಸದ್ಯ ಅತ್ತೆ-ಸೊಸೆ ನಿರುದ್ಯೋಗಿಗಳಾಗಿದ್ದಾರೆ. ಅದೇ ಇನ್ನೊಂದೆಡೆ ಕಪಾಟಿನಲ್ಲಿ ಮದುವೆಯ ಕಾರ್ಡ್​ ಹುಡುಕುತ್ತಿದ್ದ ತಾಂಡವ್​ ಸಿಕ್ಕಿ ಬಿದ್ದಿದ್ದಾನೆ. ತಂದೆ ಕೇಳಿದಾಗ ಚಿನ್ನದ ರಿಂಗ್​ ಇಟ್ಟಿದ್ದೆ. ಅದನ್ನೇ ಹುಡ್ತಾ ಇದ್ದೆ ಎಂದು ಸುಳ್ಳು ಹೇಳಿದ್ದಾನೆ. ತಾಂಡವ್​-ಶ್ರೇಷ್ಠಾ ಲಗ್ನ ಪತ್ರಿಕೆ ಮನೆಯವರ ಕೈಸೇರತ್ತಾ ನೋಡಬೇಕಿದೆ. 

ಇಂಥ ಹೆಂಡ್ತಿ ಇದ್ರೆ ಯಾವ ಗಂಡ ತಾನೇ ಸಹಿಸ್ತಾನೆ? ಅಯ್ಯೋ ಪಾಪ ಅಂತಿದ್ದವರೇ ಉಲ್ಟಾ ಹೊಡೆದುಬಿಟ್ರಲ್ಲಾ!

click me!