ಮದುವೆ, ಸಂಬಂಧದ ಕುರಿತು ಬಿಗ್​ಬಾಸ್​ ಖ್ಯಾತಿಯ ನಮ್ರತಾ ಗೌಡ ಓಪನ್​ ಮಾತಿದು...

Published : May 28, 2024, 04:34 PM ISTUpdated : May 28, 2024, 06:07 PM IST
ಮದುವೆ, ಸಂಬಂಧದ ಕುರಿತು ಬಿಗ್​ಬಾಸ್​ ಖ್ಯಾತಿಯ ನಮ್ರತಾ ಗೌಡ ಓಪನ್​ ಮಾತಿದು...

ಸಾರಾಂಶ

ತಮ್ಮ ಮದುವೆ ಮತ್ತು ಸಂಬಂಧದ ಕುರಿತು ಬಿಗ್​ಬಾಸ್​ ಖ್ಯಾತಿಯ ನಮ್ರತಾ ಗೌಡ ಓಪನ್ನಾಗಿ ಮಾತನಾಡಿದ್ದಾರೆ. ಅವರು ಹೇಳಿದ್ದೇನು?  

ಸೆಲೆಬ್ರಿಟಿಗಳ ಮದುವೆ ಬಗ್ಗೆ ಅಭಿಮಾನಿಗಳ ಕಣ್ಣು ಸದಾ ನೆಟ್ಟಿರುತ್ತದೆ. ಅದೇ ನಟ-ನಟಿಯರು ಸ್ವಲ್ಪ ಫೇಮಸ್​ ಆಗಿ ಬಿಟ್ಟರಂತೂ ಮುಗಿದೇ ಹೋಯ್ತು. ಹೋದಲ್ಲಿ, ಬಂದಲ್ಲಿ ಮದುವೆಯದ್ದೇ ಮಾತು. ಇದೀಗ ಬಿಗ್​ಬಾಸ್​ ಖ್ಯಾತಿಯ ನಮ್ರತಾ ಗೌಡ ಅವರಿಗೂ ಹೋದಲ್ಲಿ, ಬಂದಲ್ಲಿ ಇದೇ ಪ್ರಶ್ನೆ ಎದುರಾಗುತ್ತಿದೆಯಂತೆ. ಈ ಕುರಿತು ಅವರು ಓಪನ್ನಾಗಿ ಹೇಳಿಕೊಂಡಿದ್ದಾರೆ. ಆ್ಯಂಕರ್​   ರ‍್ಯಾಪಿಡ್ ರಶ್ಮಿ ಅವರ ಯೂಟ್ಯೂಬ್​ ಚಾನೆಲ್​ನಲ್ಲಿ ಮಾತನಾಡಿರುವ ನಮ್ರತಾ ಗೌಡ, ಮದುವೆ, ಸಂಬಂಧಗಳ ಕುರಿತು ಓಪನ್ನಾಗಿ ಹೇಳಿಕೊಂಡಿದ್ದಾರೆ. ಎಲ್ಲಿಯೇ ಹೋದರೂ ಮದುವೆಯ ಬಗ್ಗೆಗೇ ಕೇಳಲಾಗುತ್ತದೆ ಎನ್ನುತ್ತಲೇ ಈ ವಿಷಯ ಪ್ರಸ್ತಾಪಿಸಿದ ನಮ್ರತಾ ಅವರು, ನನಗೆ ಈಗ 28 ವರ್ಷ ವಯಸ್ಸು. 30 ಹತ್ತಿರ ಆಗುತ್ತಾ ಬಂತು. ಅದಕ್ಕಾಗಿ ಮದುವೆಯ ಬಗ್ಗೆ ಕೇಳಲಾಗುತ್ತದೆ ಎಂದರು. ನಿಜವಾಗಿಯೂ ಮದುವೆ ಎನ್ನೋದು ಬೇಕಾ ಎಂದು ಮರು ಪ್ರಶ್ನೆ ಹಾಕಿದರು. 

ನಮಗೆ ಏನೆನೋ ಕನಸುಗಳು ಇರುತ್ತವೆ, ಅಂದುಕೊಂಡಿದ್ದನ್ನು ಸಾಧಿಸುವ ಛಲವಿರುತ್ತದೆ. ಇಂಥ ಸಂದರ್ಭದಲ್ಲಿ ಮದುವೆ ಈಗಲೇ ಬೇಕಾ ಎಂದು ಪ್ರಶ್ನಿಸಿದ್ದಾರೆ. ಮೊದಲಿಗೆ  ಮ್ಯಾರೆಜ್​ ಸಿಸ್ಟಮ್​ ಅರ್ಥ ಮಾಡಿಕೊಳ್ಳಬೇಕು. ಏನೇನೋ ಅಡ್ಜಸ್ಟ್​ಮೆಂಟ್​ಗಳು ಇರುತ್ತವೆ. ಅದಕ್ಕಾಗಿಯೇ ಮದು ನನ್ನ ಲೈಫ್​ನಲ್ಲಿ ಬೇಕಾ ಎನ್ನುವುದೇ ಅರ್ಥವಾಗುತ್ತಿಲ್ಲ ಎಂದಿದ್ದಾನೆ. ಕೊನೆಯದಾಗಿ ಸದ್ಯಕ್ಕಂತೂ ಮದುವೆ ಯೋಚನೆ ಇಲ್ಲ. ಯಾರ ಜೊತೆ ಸಂಬಂಧವೂ ಇಲ್ಲ. ಮದುವೆ ಎನ್ನೋದು ನನ್ನ ಜೀವನದಲ್ಲಿ ಇದೆಯೋ ಇಲ್ಲವೋ ಗೊತ್ತಿಲ್ಲ ಎನ್ನುತ್ತಲೇ ಅವನು ಹುಟ್ಟಿದನಾ ಇಲ್ವಾ ಗೊತ್ತಿಲ್ಲ ಎಂದು ನಕ್ಕಿದ್ದಾರೆ. ಈ ಹಿಂದೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ನಟಿ, ಮದುವೆಯ ಬಗ್ಗೆ ಸಿಕ್ಕಾಪಟ್ಟೆ  ಆಸೆ ಇಟ್ಟುಕೊಂಡಿದ್ದೆ, ಆದರೆ ಈಗ ಇದರಲ್ಲಿ ಆಸಕ್ತಿ ಕಳೆದುಕೊಂಡಿದ್ದೇನೆ. ಸಾಧನೆ ಮಾಡಬೇಕು, ದೇಶ ಸುತ್ತಬೇಕು, ಅಪ್ಪ-ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದಿದ್ದರು.

ಬ್ಯಾಂಕ್​ ಲೋನ್​ ಪಡೆಯಲು ನಟರಿಗೆ ಈ ಪರಿ ಕಷ್ಟನಾ? ಬಿಗ್​ಬಾಸ್​ ನಮ್ರತಾ ಗೌಡ ಬಿಚ್ಚಿಟ್ಟ ಕಹಿ ಅನುಭವ...

 ಆಗ ನೀಡಿದ್ದ ಸಂದರ್ಶನದಲ್ಲಿ ನಮ್ರತಾ,  ಮದುವೆಯಾಗುವ ಹುಡುಗ ಅಪ್ಪಟ ಕನ್ನಡದವನಾಗಿರಬೇಕು, ಅವಿಭಕ್ತ ಕುಟುಂಬದವನಾಗಿದ್ದರೆ ಒಳ್ಳೆಯದು ಎಂದಿದ್ದರು. ಇದೇ ವೇಳೆ, ನಾನು ಅಪ್ಪ-ಅಮ್ಮನ ಮುದ್ದಿನ ಮಗಳು. ಮದುವೆಯಾದರೆ ಅವರಿಂದ ದೂರವಾಗಬೇಕಾಗುತ್ತದೆ. ತಾಯಿ ಜೊತೆ ಇರೋಕೆ ಬಿಡಲ್ಲ ಎಂದು ನನಗೆ ಅನ್ಸುತ್ತೆ, ಅದೇ ಕಾರಣಕ್ಕೆ ಮದುವೆನೇ ಬೇಡ ಎಂದು ಎನಿಸುತ್ತದೆ ಎಂದಿದ್ದರು. 
 
ಬಿಗ್​ಬಾಸ್​ನಲ್ಲಿ ಇದ್ದಾಗ  ಸ್ನೇಹಿತ್ ಹಾಗೂ ನಮ್ರತಾ ನಡುವೆ ಆತ್ಮೀಯತೆ ಗಾಢವಾಗಿತ್ತು. ಅದಕ್ಕಾಗಿ ಇವರಿಬ್ಬರೂ ಲವ್​ ಮಾಡುತ್ತಿದ್ದಾರೆ ಎಂದೇ ಹೇಳಲಾಗುತ್ತಿತ್ತು. ಇದು ಬರೀ ಸ್ನೇಹಾನಾ ಅಥವಾ  ಪ್ರೀತಿನಾ ಎಂದು ಪ್ರೇಕ್ಷಕರು ಕೇಳಿದ್ದುಂಟು. ಅದೂ ಸಾಲು ಎಂಬುದಕ್ಕೆ ಬಿಗ್​ಬಾಸ್​ ಮನೆಯಿಂದ  ಸ್ನೇಹಿತ್ ಹೊರಕ್ಕೆ ಬಂದಾಗ  ನಮ್ರತಾ ಸಿಕ್ಕಾಪಟ್ಟೆ ಕಣ್ಣೀರು ಹಾಕಿದ್ದನ್ನು ನೋಡಿ ಇವರಿಬ್ಬರ ಬಗ್ಗೆ ಮತ್ತಷ್ಟು ಸುದ್ದಿಯಾಗಿತ್ತು. ಆದರೆ ಬರಬರುತ್ತಾ ಇವರಿಬ್ಬರ ನಡುವೆ,  ಸಂಬಂಧ ಹಳಸಿದೆ ಎಂದೇ ಸೋಷಿಯಲ್​  ಮೀಡಿಯಾದಲ್ಲಿ ಸದ್ದು ಮಾಡಿತ್ತು.

ಭೂತ-ಪ್ರೇತ ಕಾಣಿಸೋದು ರಾಶಿ ನಕ್ಷತ್ರಗಳ ಮೇಲೆ ಡಿಪೆಂಡಾ? ಖ್ಯಾತ ಘೋಸ್ಟ್​ ಹಂಟರ್​ ಇಮ್ರಾನ್​ ಹೇಳಿದ್ದೇನು?


PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಇಂಥ ಸಣ್ಣಬುದ್ಧಿ ಸರಿನಾ? ಗಿಲ್ಲಿ ನಟ ಬೇಡಿದರೂ, ಗೋಗರೆದರೂ ಕೇಳಲಿಲ್ಲ: ರಘು ವಿರುದ್ಧ ರೊಚ್ಚಿಗೆದ್ದ ಜನತೆ
BBK 12: ಏನ್ರೀ ಇದು ತೆವಲು? ರಜತ್‌, ಅಶ್ವಿನಿ ಗೌಡ, ರಘು ಯಾಕೆ ಹೀಗೆಲ್ಲ ಮಾಡಿದ್ರು?