ಭಾರತದಲ್ಲಿ ಅತೀ ದೀರ್ಘ ಕಾಲದಿಂದ ಪ್ರಸಾರವಾಗುತ್ತಿರುವ ಟಿವಿ ಶೋ ಯಾವುದು ಅಂತ ನೋಡಿದರೆ ನಿಮಗೆ ಆಶ್ಚರ್ಯ ಆಗದೇ ಇರದು. ಅದು ದೂರದರ್ಶನದಲ್ಲಿ ಪ್ರಸಾರ ಆಗ್ತಾ ಇದೆ ಮತ್ತು ಅದು ಬಿಗ್ ಬಾಸ್, ಕೌನ್ ಬನೇಗಾ ಕರೋಡ್‌ಪತಿಗಳಷ್ಟು ಜನಪ್ರಿಯ ಕೂಡ ಅಲ್ಲ! ಹಾಗಿದ್ರೆ ಯಾವುದು?
ಭಾರತದಲ್ಲಿ ಅತೀ ದೀರ್ಘಾವಧಿಯಿಂದ ಪ್ರಸಾರವಾಗುತ್ತಲೇ ಇರುವ ಟಿವಿ ಶೋ ಒಂದಿದೆ. ಅದು 57 ವರ್ಷಗಳಿಂದ ಪ್ರಸಾರವಾಗುತ್ತಿದೆ ಎಂದರೆ ನಂಬಿ! ಹೌದು. ಅದು 16000 ಸಂಚಿಕೆಗಳಲ್ಲಿ ಪ್ರಸಾರವಾಗಿದೆ. ಮತ್ತದು ಕೌನ್ ಬನೇಗಾ ಕರೋಡ್‌ಪತಿಯಲ್ಲ. ಸಿಐಡಿ ಶೋ ಕೂಡ ಅಲ್ಲ. ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ, ಬಿಗ್ ಬಾಸ್ ರಿಯಾಲಿಟಿ ಶೋ ಕೂಡ ಅಲ್ಲ. ಭಾರತದ ಅತ್ಯಂತ ದೀರ್ಘಾವಧಿಯ ಟಿವಿ ಕಾರ್ಯಕ್ರಮ 'ಕೃಷಿ ದರ್ಶನ್. ಇದು ದೂರದರ್ಶನದಲ್ಲಿ ಪ್ರಸಾರವಾಗುತ್ತಿದೆ. ಇದು ಕೃಷಿ ತಿಳಿವಳಿಕೆ ನೀಡುವ ಕಾರ್ಯಕ್ರಮ.
ಇದುವರೆಗೆ ಕೃಷಿ ದರ್ಶನದ 16,780 ಸಂಚಿಕೆಗಳು 57 ವರ್ಷಗಳಿಗೂ ಹೆಚ್ಚು ಕಾಲದಿಂದ ಪ್ರಸಾರವಾಗಿವೆ. ಈ ಶೋದಲ್ಲಿ ಕೃಷಿ ಪದ್ಧತಿಗಳು, ಪಶುಸಾಕಣೆ, ಮೀನುಗಾರಿಕೆ ಮತ್ತು ಗ್ರಾಮೀಣಾಭಿವೃದ್ಧಿಗೆ ಸಂಬಂಧಿಸಿದ ಮಾಹಿತಿ ಹಂಚಿಕೊಳ್ಳಲಾಗುತ್ತದೆ. ರಾಷ್ಟ್ರದಾದ್ಯಂತ ಪ್ರಸಾರವಾಗುತ್ತದೆ. ಯಾವುದೇ ಕೌನ್ ಬನೇಗಾ ಕರೋಡ್‌ಪತಿ ತಲುಪದ ಹಳ್ಳಿಗಳನ್ನು ಈ ಕಾರ್ಯಕ್ರಮ ತಲುಪಿದೆ.
ಕೃಷಿ ದರ್ಶನವನ್ನು ಆಗಿನ ಪ್ರಧಾನಿ ಇಂದಿರಾ ಗಾಂಧಿ ಅವರು ಉದ್ಘಾಟಿಸಿದರು. ಕಾರ್ಯಕ್ರಮದ ಮೊದಲ ಎಪಿಸೋಡ್ ಭಾರತಕ್ಕೆ ಸ್ವಾತಂತ್ರ್ಯ ದೊರೆತ ನಂತರದ ಇಪ್ಪತ್ತನೇ ವರ್ಷದ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಅಂದರೆ ಜನವರಿ 26, 1967ರಂದು ಪ್ರಸಾರವಾಯಿತು. ಕಳೆದ 57 ವರ್ಷಗಳಿಂದ ಈ ಕಾರ್ಯಕ್ರಮ ಡಿಡಿ ನ್ಯಾಷನಲ್‌ನಲ್ಲಿ ಪ್ರಸಾರವಾಗುತ್ತಿದೆ. 2015ರಲ್ಲಿ ಇದನ್ನು ಡಿಡಿ ಕಿಸಾನ್ ಪ್ರಸಾರ ಮಾಡಲು ಪ್ರಾರಂಭಿಸಿತು. ಪ್ರತಿ ಸಂಚಿಕೆ ಸುಮಾರು 30 ನಿಮಿಷ ಇರುತ್ತದೆ. ಇದರ ಮೊದಲ ಸಂಚಿಕೆಯ ಪ್ರಸಾರ ದೆಹಲಿಯ ಸುತ್ತಮುತ್ತಲಿನ 80 ಹಳ್ಳಿಗಳಿಗೆ ಸೀಮಿತವಾಗಿತ್ತು. ಆದರೆ ಶೀಘ್ರದಲ್ಲೇ ಅದು ದೇಶದಾದ್ಯಂತ ಹಬ್ಬಿತು.
ಭಾರತದ ಎರಡನೇ ಅತಿ ಹೆಚ್ಚು ದೀರ್ಘಾವಧಿಯ ಟಿವಿ ಶೋ ಯಾವುದು ಗೊತ್ತೆ? ಅದು ಚಿತ್ರಹಾರ್. ಇದು 42 ವರ್ಷಗಳಿಂದ ಡಿಡಿ ನ್ಯಾಷನಲ್‌ನಲ್ಲಿ ಪ್ರಸಾರವಾಗುತ್ತಿದೆ. 12,000 ಸಂಚಿಕೆಗಳು ಪ್ರಸಾರವಾಗಿವೆ. ಬಾಲಿವುಡ್ ಚಲನಚಿತ್ರಗಳ ಹಾಡುಗಳನ್ನು ಪ್ರಸಾರ ಮಾಡುವ ಇದರ ಮೊದಲ ಸಂಚಿಕೆಯನ್ನು 1982ರ ಆಗಸ್ಟ್ 15ರಂದು ಸ್ವಾತಂತ್ರ್ಯ ದಿನದಂದು ಪ್ರಸಾರ ಮಾಡಲಾಯಿತು.
ಸಾನ್ಯಾ ಅಯ್ಯರ್ ಸ್ಟೈಲಿಶ್ ಲುಕ್ ನೋಡಿ ಹಾಟ್ ಬಾಂಬ್ ಅಂತಿದ್ದಾರೆ ಫ್ಯಾನ್ಸ್
ಭಾರತದ ಮೂರನೇ ದೀರ್ಘಾವಧಿಯ ಟಿವಿ ಶೋ ರಂಗೋಲಿ. ಇದು ಮತ್ತೊಂದು ಸಂಗೀತ ಕಾರ್ಯಕ್ರಮ ರಂಗೋಲಿ. ಇದು 1989ರಿಂದ ಆರಂಭವಾಗಿ 35 ವರ್ಷಗಳ ಕಾಲ ಪ್ರಸಾರವಾಗಿ 11,500 ಸಂಚಿಕೆಗಳು ಆಗಿವೆ. ಹೇಮಾ ಮಾಲಿನಿ, ಶರ್ಮಿಳಾ ಟ್ಯಾಗೋರ್ ಮತ್ತು ಶ್ವೇತಾ ತಿವಾರಿಯಂತಹ ಹಲವಾರು ಜನಪ್ರಿಯ ನಟಿಯರು ರಂಗೋಲಿಯನ್ನು ಮುನ್ನಡೆಸಿದ್ದಾರೆ.
ಇನ್ನು ಜನಪ್ರಿಯ ಟಿವಿ ಶೋಗಳು ಎಷ್ಟು ಸಂಚಿಕೆಗಳಾಗಿವೆ ಅಂತ ನೋಡಬೇಕೆ? ಕೌನ್ ಬನೇಗಾ ಕರೋಡ್‌ಪತಿ 2000ರಿಂದ 1,230 ಸಂಚಿಕೆಗಳು ಆಗಿವೆ. CID ತನ್ನ 20 ವರ್ಷಗಳ ಅವಧಿಯಲ್ಲಿ 1,547 ಸಂಚಿಕೆಗಳನ್ನು ಪ್ರಸಾರ ಮಾಡಿದೆ. ಬಿಗ್ ಬಾಸ್ 17 ವರ್ಷಗಳಲ್ಲಿ 1,864 ಸಂಚಿಕೆಗಳನ್ನು ಪ್ರಸಾರ ಮಾಡಿದೆ. ತಾರಕ್ ಮೆಹ್ತಾ ಕಾ ಊಲ್ತಾ ಚಶ್ಮಾ 2008 ರಿಂದ 4,180 ಸಂಚಿಕೆಗಳಲ್ಲಿ ನಡೆಯುತ್ತಿದೆ.
ಪುಟ್ಟ ತಂಗಿಗೆ ಮೊದಲ ಪೀರಿಯೆಡ್ಸ್, ಹಬ್ಬದಂತೆ ಸೆಲೆಬ್ರೇಟ್ ಮಾಡ್ತಿರೋ ಅಣ್ಣಯ್ಯ ಇದೀಗ ಹೆಣ್ಮಕ್ಕಳ ಫೇವರಿಟ್