ಥ್ರಿಲ್ಲರ್ ಸೀರಿಯಲ್ ಲಕ್ಷ್ಮೀ ಬಾರಮ್ಮಾ ಶೂಟಿಂಗ್​ನಲ್ಲಿ ಏನೇನಾಯ್ತು? ಮೇಕಿಂಗ್​ ವಿಡಿಯೋ ಶೇರ್​ ಮಾಡಿದ ಗಂಗಾ

By Suchethana D  |  First Published Sep 9, 2024, 11:31 AM IST

ಕಲರ್ಸ್ ಕನ್ನಡ ವಾಹಿನಿಯಲ್ಲಿ ಥ್ರಿಲ್ಲರ್​ ರೂಪ ಪಡೆದಿರುವ  ಲಕ್ಷ್ಮೀ ಬಾರಮ್ಮಾ ಶೂಟಿಂಗ್​ನಲ್ಲಿ ಏನೇನಾಯ್ತು? ಇದರ ಫುಲ್​ ಡಿಟೇಲ್ಸ್​ ಕೊಟ್ಟಿದ್ದಾರೆ ಗಂಗಾ ಪಾತ್ರಧಾರಿ ಹರ್ಷಿತಾ
 


ಕಲರ್ಸ್​ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಲಕ್ಷ್ಮೀ ಬಾರಮ್ಮಾ ಸಕತ್​ ಟ್ವಿಸ್ಟ್​ ಪಡೆದುಕೊಂಡಿದೆ. ಭೂತ, ಪಿಶಾಚಿ, ಆತ್ಮ, ಮಾಟ ಮಂತ್ರ ಇಂಥ ಸೀನ್​ಗಳು ಸಹಜವಾಗಿ ಪ್ರೇಕ್ಷಕರನ್ನು ಹೆಚ್ಚು ಕುತೂಹಲಕ್ಕೆ ತಳ್ಳುತ್ತವೆ, ಇಂಥದ್ದನ್ನು ನೋಡುವ ದೊಡ್ಡ ವರ್ಗವೇ ಇದೆ. ಅದಕ್ಕೆ ಸಾಕ್ಷಿಯೇ ಲಕ್ಷ್ಮೀ ಬಾರಮ್ಮಾ ಸೀರಿಯಲ್​. ಕೀರ್ತಿ ಮತ್ತು ಲಕ್ಷ್ಮಿಯ ಅದ್ಭುತ ಅಭಿನಯಕ್ಕೆ ಪ್ರೇಕ್ಷಕರು ಭೇಷ್​ ಭೇಷ್​ ಎನ್ನುತ್ತಿದ್ದಾರೆ.  ಕೀರ್ತಿಯನ್ನು ಬೆಟ್ಟದ ಮೇಲಿಂದ ನೂಕಿ ಸಾವಿನ ದವಡೆಗೆ ನೂಕಿದ್ದಾಳೆ ಕಾವೇರಿ. ಆದರೆ ಎಲ್ಲರೆದುರು ಒಳ್ಳೆಯವಳಾಗಿ ಇರಲು ನೋಡಿದ್ದಾಳೆ. ಆದರೆ ಎಲ್ಲವೂ ಎಡವಟ್ಟಾಗಿದೆ.  ಲಕ್ಷ್ಮೀ ಮೈಮೇಲೆ ಕೀರ್ತಿ ಆತ್ಮ ಸೇರಿಕೊಂಡಿದೆ. ಇದರಿಂದ ಕಾವೇರಿಗೆ ಇನ್ನಿಲ್ಲದ ಸಂಕಟವಾಗಿವೆ. 

ಈ ಸಂದರ್ಭದಲ್ಲಿ, ರಕ್ತದಲ್ಲಿ ಗೋಡೆಯ ಮೇಲೆ ನಾನು ನಿನ್ನನ್ನು ಬಿಡುವುದಿಲ್ಲ ಎನ್ನುವ ಬರಹಗಳೆಲ್ಲಾ ಕಾಣಿಸಿಕೊಳ್ಳುತ್ತಿದ್ದು, ಕಾವೇರಿಯ ಜೀವನ ನಜ್ಜುಗುಜ್ಜಾಗಿ ಹೋಗಿದೆ. ಕಾವೇರಿ ಆತ್ಮ ಇನ್ನಿಲ್ಲದ ತೊಂದರೆ ಕೊಡುತ್ತಿದೆ. ಹಾಗಿದ್ದರೆ ಈ ಸಂಪೂರ್ಣ ಕಥೆಯ ಶೂಟಿಂಗ್​ ಹೇಗೆ ಮಾಡಿದರು ಎನ್ನುವ ಬಗ್ಗೆ ಸೀರಿಯಲ್​ನಲ್ಲಿ ಗಂಗಾ ಪಾತ್ರಧಾರಿ ಹರ್ಷಿತಾ ಅವರು ಶೇರ್​ ಮಾಡಿದ್ದಾರೆ.  ಕಾವೇರಿಗೆ ಆತ್ಮ ಸಿಕ್ಕಾಪಟ್ಟೆ  ತೊಂದರೆ ಕೊಡುತ್ತಿದೆ. ಇದರಿಂದ ಹೆದರಿದ ಕಾವೇರಿ, ಲಕ್ಷ್ಮಿಯನ್ನು ಕರೆದುಕೊಂಡು ಆಶ್ರಮಕ್ಕೆ ಬಂದಿದ್ದಾಳೆ.    ಕೀರ್ತಿಯ ಆತ್ಮವನ್ನು ಬಿಡಿಸುವ ಎಲ್ಲಾ ತಯಾರಿ ನಡೆಯುತ್ತಿದೆ.  ಅನ್ಯಾಯ ಮಾಡಿರೋದು ನನಗೆ ನನ್ನ ಮುಂದೆ ಸತ್ಯ ಹೇಳಬೇಕು, ನನ್ನ ಬಳಿ ಕ್ಷಮೆ ಕೇಳಬೇಕು ಎನ್ನುತ್ತಾಳೆ ಲಕ್ಷ್ಮೀ. ಮಗನಿಗಾಗಿ ಕಾವೇರಿ ಎಲ್ಲರ ಮುಂದೆ ಸತ್ಯ ಹೇಳಲೇಬೇಕಾದ ಪರಿಸ್ಥಿತಿ ಬಂದಿದೆ. ಲಕ್ಷ್ಮೀಯ ಮೈಯಿಂದ ಕೀರ್ತಿಯ ದೆವ್ವವನ್ನು ಓಡಿಸಲು ಬಂದಿದ್ದ ಕಾವೇರಿಗೆ, ಲಕ್ಷ್ಮೀಯ ಈ ಹೊಸ ಆಟ ನಡುಕ ಹುಟ್ಟಿಸಿದೆ.  

Tap to resize

Latest Videos

ಶಮಿಕಾ ಭೈರಾದೇವಿಗೆ ಕೊಟ್ಟ ಆಡಿಷನ್ ನೋಡಿ ಅತ್ತುಬಿಟ್ಟೆ... ಸಿನಿಮಾಕ್ಕೆ ಪುತ್ರಿ ಎಂಟ್ರಿಗೆ ರಾಧಿಕಾ ಹೇಳಿದ್ದೇನು?

ಇದರ ಶೂಟಿಂಗ್​ ಹೇಗೆ ನಡೆದಿದೆ ಎನ್ನುವುದನ್ನು ಹರ್ಷಿತಾ ತಮ್ಮ ಯೂಟ್ಯೂಬ್​ ಚಾನೆಲ್​ನಲ್ಲಿ ತೋರಿಸಿದ್ದಾರೆ. ಶೂಟಿಂಗ್​ ಸಮಯದಲ್ಲಿ ಯಾವ ರೀತಿಯ ಸೆಟ್​ಅಪ್​ ಇರುತ್ತದೆ ಎನ್ನುವುದನ್ನು ಅವರು ತೋರಿಸಿದ್ದಾರೆ. ಈ ಸೀರಿಯಲ್​ನಲ್ಲಿ, ಸದಾ ಸೀರೆಯುಟ್ಟು, ಕಿವಿಗೆ ಇಯರ್ ಫೋನ್ ಇಟ್ಕೊಂಡು, ಕೈಯಲ್ಲಿ ಸೌಟ್ ಇಡ್ಕೊಂಡು, ಎಲ್ಲರನ್ನೂ ನಗಿಸುತ್ತಿರುವ ಹಾಗೂ ಲಕ್ಷ್ಮೀಗೆ ಧೈರ್ಯ ತುಂಬುವ ಪಾತ್ರ ಗಂಗಾಳದ್ದು. 

ಅಷ್ಟಕ್ಕೂ ವೈಷ್ಣವ್ ಮತ್ತು ಲಕ್ಷ್ಮೀಯನ್ನು ಒಂದು ಮಾಡಿದ್ದೇ ಈಕೆ. ಈ ದಂಪತಿ ಮನೆಯವರ ಬಲವಂತಕ್ಕೆ ಮದುವೆಯಾಗಿದ್ದು. ಆದರೆ, ಅವರಿಬ್ಬರೂ ಹೊಂದಿಕೊಂಡು ಹೋಗುವ ನಿರ್ಧಾರ ಮಾಡಿರೋದಕ್ಕೆ ಕಾರಣ  ಗಂಗಾ. ಇಬ್ಬರೂ ದೂರ ದೂರವೇ ಇದ್ದರು. ಆದರೆ ಇದನ್ನೆಲ್ಲ ಗಮನಿಸಿದ ಗಂಗಾ, ಇಬ್ಬರ ನಡುವೆ ಸ್ನೇಹತ್ವ ಬೆಳೆತುವಂತೆ ಮಾಡಿದರು. ಗಂಗಾ ಜೊತೆಗೆ ಅಂಕಿತ್ ಕೂಡ ಜೊತೆಯಾಗಿದ್ದಾನೆ. ಲಕ್ಷ್ಮೀ ಅಂತು ಏನು ಸಂಬಂಧವೇ ಇಲ್ಲ ಎಂಬಂತೆಯೇ ಇದ್ದಳು. ಈಗ ಗಂಗಾಳ ಮಾತುಗಳು ಲಕ್ಷ್ಮೀಯನ್ನು ಬದಲಾಯಿಸಿತ್ತು. ಇದೀಗ ಇವರು ಶೂಟಿಂಗ್​ ವಿಡಿಯೋ ಶೇರ್​ ಮಾಡಿದ್ದಾರೆ. 

13 ದಿನದ ಶಮಿಕಾಳ ಉಸಿರು ನಿಂತಾಗ ನಡೆದಿತ್ತು ಪವಾಡ: ವಿಚಿತ್ರ ಘಟನೆ ನೆನಪಿಸಿದ ರಾಧಿಕಾ ಕುಮಾರಸ್ವಾಮಿ

click me!