ಬಿಗ್ಬಾಸ್ ಖ್ಯಾತಿಯ ನಿವೇದಿತ ಗೌಡ ಇಂಗ್ಲಿಷ್ ಹಾಡಿಗೆ ಚೆನ್ನಾಗಿಯೇ ರೀಲ್ಸ್ ಮಾಡಿದ್ದಾರೆ. ಆದರೆ ಇದನ್ನು ನೋಡಿದವರು ಏನೆಲ್ಲಾ ಹೇಳ್ತಿದ್ದಾರೆ ನೋಡಿ!
ಬಿಗ್ಬಾಸ್ ಖ್ಯಾತಿಯ ನಿವೇದಿತಾ ಗೌಡ, ಡಿವೋರ್ಸ್ ಬಳಿಕ ರೀಲ್ಸ್ ಮಾಡುವುದು ಹೆಚ್ಚಾಗಿದೆ. ಅದರಲ್ಲಿಯೂ ಇಂಗ್ಲಿಷ್ ಹಾಡಿಗೆ ಇವರ ಹಲವು ರೀತಿಯಲ್ಲಿ ಸ್ಟೆಪ್ ಹಾಕುತ್ತಾರೆ. ಆದರೆ ಗಾಯಕ, ರ್ಯಾಪರ್ ಚಂದನ್ ಶೆಟ್ಟಿ ಜೊತೆ ನಿವೇದಿತಾ ಗೌಡ ಡಿವೋರ್ಸ್ ಆದ್ಮೇಲೆ ಹೊಸ ಹೊಸ ರೂಪದಲ್ಲಿ ರೀಲ್ಸ್ ಮಾಡುವುದು ಹೆಚ್ಚಿದೆ. ಹಿಂದಿಗಿಂತಲೂ ಅತಿ ಎನ್ನುವಷ್ಟು ದೇಹ ಪ್ರದರ್ಶನ ಮಾಡುತ್ತಿರುವಿರಿ ಎಂದು ನೆಟ್ಟಿಗರು ಈಗ ತರಾಟೆಗೆ ತೆಗೆದುಕೊಳ್ಳುವುದು ಹೆಚ್ಚುತ್ತಲೇ ಇದೆ. ಈ ಹಿಂದೆ ಕೂಡ ದಿನವೂ ಬೇರೆ ಬೇರೆ ಥರನಾಗಿ ಪೋಸ್ ಕೊಡುತ್ತಲೇ ಬಾರ್ಬಿಡಾಲ್, ಗೊಂಬೆ ಎಂದೆಲ್ಲಾ ಹೊಗಳಿಸಿಕೊಳ್ಳುತ್ತಿದ್ದರು ನಿವೇದಿತಾ. ಡಿವೋರ್ಸ್ ಬಳಿಕವೂ ದಿನಕ್ಕೊಂದರಂತೆ ರೀಲ್ಸ್ ಮಾಡುತ್ತಿದ್ದರೂ ಕಮೆಂಟಿಗರು ಕಮೆಂಟ್ ಮಾಡುವ ವಿಧಾನ ಬೇರೆಯಾಗಿದೆಯಷ್ಟೇ. ಮೊದಲೆಲ್ಲಾ ಹುಡುಗಾಟ ಬಿಡು, ಮಕ್ಕಳು ಮಾಡಿಕೋ ಎನ್ನುವವರೇ ಹೆಚ್ಚಾಗಿದ್ದರು. ಆದರೆ ಇದೀಗ ಪ್ರತಿ ಬಾರಿಯೂ ಚಂದನ್ ಶೆಟ್ಟಿ ಹೆಸರು ಎಳೆದು ತಂದು ನಿವೇದಿತಾ ಅವರನ್ನು ಟ್ರೋಲ್ ಮಾಡಲಾಗುತ್ತಿದೆ.
ಆದರೆ ಬಳಕುವ ಬಳ್ಳಿಯಂತೆ ಇರುವ ನಿವೇದಿತಾ, ದೇಹಕ್ಕೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾರಾ ಎನ್ನುವ ಮಾತು ಇತ್ತೀಚಿಗೆ ಹೆಚ್ಚಾಗುತ್ತಿದೆ. ಅದಕ್ಕೆ ಈಗ ಹಾಕಿರುವ ಹೊಸ ವಿಡಿಯೋ ಸಾಕ್ಷಿಯಾಗಿದೆ. ಈ ವಿಡಿಯೋ ನೋಡಿದರು ನೇರವಾಗಿಯೇ ದೇಹದ ಭಾಗದ ಮೇಲೆ ಕಮೆಂಟ್ ಮಾಡುತ್ತಿದ್ದಾರೆ. ಸಾಮಾನ್ಯವಾಗಿ, ಇತ್ತೀಚಿನ ದಿನಗಳಲ್ಲಿ ಎದೆಗೆ ಕತ್ತರಿ ಹಾಕಿಕೊಳ್ಳುತ್ತಿದ್ದಾರೆ ನಟಿ ಮಣಿಗಳು. ಮುಖದ ಯಾವುದೋ ಒಂದು ಅಂಗವನ್ನು ಪ್ಲಾಸ್ಟಿಕ್ ಸರ್ಜರಿ ಮೂಲಕ ಅಂದಗೊಳಿಸಿಕೊಳ್ಳುವುದು ಶ್ರೀದೇವಿ ಕಾಲದಿಂದಲೂ ನಡೆದೇ ಇದೆ. ಬಾಲಿವುಡ್ ಆಳಿದ್ದ ಶ್ರೀದೇವಿ ತಮ್ಮ ಮೂಗಿನ ಸರ್ಜರಿ ಬಳಿಕವಷ್ಟೇ ಅಷ್ಟು ಸೌಂದರ್ಯವತಿಯಾಗಿ ಕಾಣಿಸಿಕೊಂಡು, ಬಾಲಿವುಡ್‌ನಲ್ಲಿ ಸ್ಥಾನ ಗಳಿಸಿದ್ದರು. ಅದೇ ರೀತಿ ಹಲವರು ಎದೆ ಭಾಗಕ್ಕೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾರೆ. ಚಿಕ್ಕ ವಯಸ್ಸಿನ ನಿವೇದಿತಾ ನೋಡಿ ಇದೇ ಪ್ರಶ್ನೆಯನ್ನು ಅಸಭ್ಯ ಎನ್ನುವ ರೀತಿಯಲ್ಲಿ ಪದೇ ಪದೇ ಪ್ರಶ್ನಿಸಲಾಗುತ್ತಿದೆ.
ಬಳಕುವ ಬಳ್ಳಿಯಂತಿರೋ ನಿವೇದಿತಾ ಆ ಭಾಗಕ್ಕೆ ಕತ್ತರಿ ಹಾಕಿಸಿಕೊಂಡ್ರಾ? ಫ್ಯಾನ್ಸ್‌ಗೆ ಇದೆಂಥ ಡೌಟು?
ಆದರೆ ಇದೀಗ ನಟಿ ಶೇರ್ ಮಾಡಿರೋ ವಿಡಿಯೋ ನೋಡಿ ಫ್ಯಾನ್ಸ್ ಶಾಕ್ ಆಗಿದ್ದಾರೆ. ಏಕೆಂದರೆ, ಇದರಲ್ಲಿ ನಿವೇದಿತಾ ವಿಚಿತ್ರವಾಗಿ ಆಡುತ್ತಿದ್ದಾಳೆ ಎನ್ನುವುದು ನೆಟ್ಟಿಗರ ಅಭಿಮತ. ಮಬ್ಬುಕತ್ತಲಿನಲ್ಲಿ ಎನ್ನುವಂತೆ ಈ ವಿಡಿಯೋ ಶೂಟ್ ಮಾಡಲಾಗಿದೆ. ಇದರಲ್ಲಿ ನಿವೇದಿತಾ ಕೂದಲನ್ನು ಹಿಡಿದುಕೊಂಡು ಜಗ್ಗುತ್ತಲೇ ಸ್ಟೆಪ್ ಹಾಕಿದ್ದಾರೆ. ಕೆಲವೊಂದು ವಿಚಿತ್ರ ಎನಿಸುವ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ. ನಿನ್ನೆಯವರೆಗೂ ಚೆನ್ನಾಗಿದ್ದ ನಟಿಗೆ ಇದೇನಾಯ್ತು ಎಂದು ಫ್ಯಾನ್ಸ್ ಗಾಬರಿ ಬಿದ್ದಿದ್ದಾರೆ. ಅದು ಕೂಡ ಅಷ್ಟು ಕ್ಲಾರಿಟಿ ಇಲ್ಲದ ವಿಡಿಯೋದ ಜೊತೆಗೆ, ಇಂಗ್ಲಿಷ್ ಹಾಡೊಂದಕ್ಕೆ ಮಾಡಿರುವ ರೀಲ್ಸ್ ನೋಡಿ ನಿವೇದಿತಾ ನಾರ್ಮಲ್ ಇದ್ದಂತೆ ಕಾಣುತ್ತಿಲ್ಲ ಎಂದೆಲ್ಲಾ ಕಮೆಂಟ್ ಮಾಡುತ್ತಿದ್ದಾರೆ.
ಕಲರ್ಸ್ ಕನ್ನಡ ವಾಹಿನಿಯ ಅನುಬಂದ ಅವಾರ್ಡ್ ಕಾರ್ಯಕ್ರಮಕ್ಕೆ ನಿವೇದಿತಾ ಅವರನ್ನು ನಿರೂಪಕಿಯನ್ನಾಗಿ ಮಾಡಲಾಗಿದ್ದು, ಈ ಬಗ್ಗೆ ಕೂಡ ಹಲವರು ಆಕ್ಷೇಪ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಈ ಕಾರ್ಯಕ್ರಮದ ಪ್ರೊಮೋ ಬಿಡುಗಡೆ ಮಾಡಿದಾಗಲೆಲ್ಲಾ ಅದರಲ್ಲಿ ನಿವೇದಿತಾರನ್ನು ಬೈಯುವುದೇ ದೊಡ್ಡ ಉದ್ಯೋಗ ಮಾಡಿಕೊಳ್ಳಲಾಗಿದೆ. ಅದರಲ್ಲಿಯೂ ಅದು ಕುಟುಂಬದ ಅವಾರ್ಡ್ ಆಗಿದ್ದು, ಅನವಶ್ಯಕವಾಗಿ ಒಳ್ಳೆಯ ಹುಡುಗನಿಗೆ ಡಿವೋರ್ಸ್ ಕೊಟ್ಟು ಕುಟುಂಬದ ಅರ್ಥವೇ ಗೊತ್ತಿಲ್ಲದವಳಿಗೆ ಈ ಫಂಕ್ಷನ್ನಲ್ಲಿ ನಿರೂಪಕಿ ಮಾಡಲಾಗಿದೆ ಎಂದು ಭಾರಿ ಟ್ರೋಲ್ ಕೂಡ ಆಗುತ್ತಿದೆ. ಅದೇನೇ ಇರಲಿ. ನಿವೇದಿತಾರನ್ನು ಯಾಕೋ ಟ್ರೋಲ್ ಮಾಡುವವರ ಸಂಖ್ಯೆ ಜಾಸ್ತಿಯಾಗುತ್ತಿದೆ. ಆದರೆ , ಹೀಗೆಯೇ ಫೇಮಸ್ ಆಗಲಿ ಎನ್ನುವ ಕಾರಣಕ್ಕೋ ಏನೋ ಜಿದ್ದಿಗೆ ಬಿದ್ದವರಂತೆ ಈಕೆ ರೀಲ್ಸ್ ಹಾಕುತ್ತಲೇ ಇದ್ದಾರೆ.
ಕಚ್ಚಿ ಕಚ್ಚಿ ತಿನ್ನೋದೆಂದ್ರೆ ಇಷ್ಟ ಅಂತ ನಿವೇದಿತಾ ರಾಗಿಮುದ್ದೆ ಹೀಗೆ ತಿನ್ನೋದಾ? 'ಸೀತೆ'ಯೂ ಸಾಥ್!