ಮಹಾನಟಿಯಲ್ಲಿ ಹಿರಿಯಜ್ಜಿ: ಮಗನಿಗೆ ಇಳಿವಯಸ್ಸಲ್ಲೂ ಕಿಡ್ನಿ ನೀಡಿ ಕಾಪಾಡಿದಳು... ಆದರೆ.. ಕ್ರೂರ ವಿಧಿಯಾಟ...

By Suvarna News  |  First Published Apr 20, 2024, 12:36 PM IST

ಇಳಿ ವಯಸ್ಸಿನಲ್ಲಿಯೂ ಸ್ವಾಭಿಮಾನದ ಬದುಕು ಬಾಳುತ್ತಿರುವ, ಇರುವ ಮಗನನ್ನು ಕಳೆದುಕೊಂಡರೂ ಗಟ್ಟಿಗಿತ್ತಿಯಾಗಿ ನಿಂತಿರುವ ಹಿರಿಯಜ್ಜಿಯ ಜೀವನಗಾಥೆ ಮಹಾನಟಿಯಲ್ಲಿ...
 


ಇಳಿ ವಯಸ್ಸಿನಲ್ಲಿಯೂ ಈ ರೀತಿ ಬೀದಿ ಬದಿ ವ್ಯಾಪಾರ ಮಾಡುವವರು, ಯಾರ ಹಂಗಿಲ್ಲದೇ ಜೀವಿಸುವವರು ಕಾಣಸಿಗುತ್ತಾರೆ. ಆದರೆ ಅದೆಷ್ಟೋ ಬಾರಿ ನಾವು ಅವರನ್ನು ಕಡೆಗಣಿಸಿ ಬಿಡುತ್ತೇವೆ. ಇಲ್ಲವಾದರೆ ಒಮ್ಮೆ ಅಯ್ಯೋ ಪಾಪ ಎಂದುಕೊಂಡು ಹೇಳಿ ಸುಮ್ಮನಾಗುತ್ತೇವಷ್ಟೇ. ಆದರೆ ಇಂಥವರನ್ನು ಮಾತನಾಡಿದರೆ ಅವರ ಬದುಕಿನ ಒಂದೊಂದು ಕರಾಳ ಅಧ್ಯಾಯವೂ ತೆರೆದುಕೊಳ್ಳುತ್ತದೆ. ಎಷ್ಟೋ ಬಾರಿ ಇಂಥವರು ಭಿಕ್ಷೆ ಬೇಡುವುದೂ ಇದೆ. ಆದರೆ ಇಂದು ಭಿಕ್ಷಾಟನೆ ಎನ್ನುವುದು ಒಂದು ದಂಧೆಯಾಗಿರುವ ಈ ಹೊತ್ತಿನಲ್ಲಿ, ಇಂಥ ಇಳಿ ವಯಸ್ಸಿನವರನ್ನೂ ಕಡೆಗಣಿಸುವುದು ಸಹಜ. ಆದರೆ ಅವರ ಬದುಕಿನ ಕಥೆಗಳೇ ಬೇರೆಯಾಗಿರುತ್ತದೆ.

ರಸ್ತೆ ಮೇಲೆ ಬಂದು ಟ್ರಾಫಿಕ್​ ಸಿಗ್ನಲ್​ನಲ್ಲಿ ಚಿಕ್ಕಪುಟ್ಟ ವಸ್ತುಗಳನ್ನು ಮಾರಿಕೊಂಡು ಬಕುತ್ತಿದ್ದಾರೆ ಹಿರಿಯಜ್ಜಿ. ಇಳಿ ವಯಸ್ಸಿನಲ್ಲಿಯೂ ಯಾರ ಹಂಗೂ ಬೇಡವೆಂದು ವಸ್ತುಗಳನ್ನು ಮಾರುತ್ತಾರೆ. ಬಂದ ದುಡಿಮೆಯೇ ಇವರಿಗೆ ಜೀವನಾಧಾರ. ಆದರೆ ಇವರ ಬದುಕಿನ ಕಥೆ ಕೇಳಿದರೆ ಎಂಥವರ ಕಲ್ಲು ಹೃದಯವೂ ಕರಗದೇ ಇರಲಾರದು. ಇವರ ಬಾಳಿನ ಕಥೆಯನ್ನು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಮಹಾನಟಿ ಕಾರ್ಯಕ್ರಮದಲ್ಲಿ ನಟಿಸಿ ತೋರಿಸಿದ್ದಾರೆ ರಿಯಾ ಬಗರೆ.

Tap to resize

Latest Videos

ಆ ಭಾಗ್ಯ ಸತ್ತೋದ್ಲು ಕಣ್ರೀ... ಪತ್ನಿಯನ್ನು ಕಟ್ಟುಹಾಕಿದಂತೆ, ತಾಯಿಯನ್ನು ಕಟ್ಟಿಹಾಕಲು ಆಗಲ್ಲ!

ಅಂದಹಾಗೆ ಹಿರಿಯಜ್ಜಿ ಅವರು ಟ್ರಾಫಿಕ್​ನಲ್ಲಿ ವಸ್ತುಗಳನ್ನು ಮಾರಾಟ ಮಾಡುವುದನ್ನು ನೋಡಿ ಇನ್​ಸ್ಪೈರ್​ ಆಗಿ ಅವರ ಕಥೆಯನ್ನೇ  ಮಾಡೋಣ ಎಂದುಕೊಂಡು ನಟಿಸುತ್ತಿರುವುದಾಗಿ ರಿಯಾ ಹೇಳಿದ್ದಾರೆ. ಅಸಲಿಗೆ ಈ ಅಜ್ಜಿಯ ಕಥೆ ನೋವಿನಿಂದ ಕೂಡಿದೆ. ಬೆಳೆದು ನಿಂತ ಮಗನಿಗೆ ಎರಡೂ ಕಿಡ್ನಿಗಳು ಫೇಲ್​  ಆದಾಗ, ಒಂದು ಕಿಡ್ನಿ ಕೊಟ್ಟು ಕಾಪಾಡಿದ್ದರು ಹಿರಿಯಜ್ಜಿ. ಮಗನೇನೋ ಹುಷಾರಾದ. ಇನ್ನು ಎಲ್ಲವೂ ಚೆನ್ನಾಗಿದೆ ಎನ್ನುವಾಗಲೇ ಅವರ ಜೀವನದಲ್ಲಿ ಬರಸಿಡಿಲು ಬಡಿದಿತ್ತು. ಆಪರೇಷನ್​ ಆಗಿ ಎರಡೇ ವರ್ಷಕ್ಕೆ ಮಗ ಅಪಘಾತದಲ್ಲಿ ಸಾವನ್ನಪ್ಪಿದ. ಈ ಹಿರಿಯ ಜೀವ ನಲುಗಿ ಹೋಗಿತ್ತು. 

ಆದರೆ ಯಾರ ಮುಂದೆಯೂ ಕೈಚಾಚಲಿಲ್ಲ ಹಿರಿಯಜ್ಜಿ. ಚಿಕ್ಕಪುಟ್ಟ ವಸ್ತುಗಳನ್ನು ಮಾರಿ ಜೀವನ ಸಾಗಿಸುತ್ತಿದ್ದಾರೆ. ಎಲ್ಲವೂ ಸರಿಯಿದ್ದರೂ ಏನೂ ಇಲ್ಲ ಎಂದು ಕೊರಗುವವರು, ಜೀವನದಲ್ಲಿ ಚಿಕ್ಕಪುಟ್ಟ ಸಮಸ್ಯೆ ಎದುರಾದಾಗ ಏನೋ ಜೀವವೇ ಹೋಗಿಬಿಟ್ಟಿತು ಎಂದು ನರಳಾಡುವವರ, ಚಿಕ್ಕದೊಂದು ಸಮಸ್ಯೆ ಬಂದರೂ ಜೀವನವನ್ನು ಎದುರಿಸಲಾಗದೇ ಆತ್ಮಹತ್ಯೆಗೆ ಮುಂದಾಗುವವರ ಎದುರು ಹಿರಿಯಜ್ಜಿ ಆದರ್ಶವಾಗಿ ನಿಲ್ಲುತ್ತಾರೆ. ಅದೆಷ್ಟು ಹಿರಿಯಜ್ಜಿಯರು ನಮ್ಮ ಕಣ್ಣೆದುರೇ ಇದ್ದರೂ ಅವರನ್ನು ಕಡೆಗಣಿಸುವ, ಹಲವೊಮ್ಮೆ ನೋಡಿಯೂ ನೋಡದಂತೆ ಹೋಗುವ ನಾವೆಲ್ಲರೂ ಸ್ವಲ್ಪ ಅತ್ತ ಗಮನ ಹರಿಸಬಾರದೆ ಎನ್ನುವ ಒಂದು ಚಿಕ್ಕ ಸಂದೇಶವೂ ಈ ಮಹಾನಟಿ ವೇದಿಕೆಯಲ್ಲಿ ಸ್ಪರ್ಧಿ ತೋರಿಸಿಕೊಟ್ಟಿದ್ದಾರೆ. ಈ ಕಾರ್ಯಕ್ರಮದಲ್ಲಿ ಖುದ್ದು ಹಿರಿಯಜ್ಜಿಯೂ ಹಾಜರು ಇದ್ದರು. ರಿಯಾ ಅವರ ನಟನೆ ನೋಡಿ ತೀರ್ಪುಗಾರರಾದಿಯಾಗಿ ಅಲ್ಲಿದ್ದವರು ಅಕ್ಷರಶಃ ಕಣ್ಣೀರಾದರು. 

ಅಮೃತಧಾರೆ ಗೌತಮ್‌ಗೆ ಹುಟ್ಟುಹಬ್ಬವಿಂದು: ನಟನ ರಿಯಲ್‌ ಜೀವನದ ಇಂಟರೆಸ್ಟಿಂಗ್‌ ವಿಷ್ಯದ ಜೊತೆ ವಿಡಿಯೋ ರಿಲೀಸ್‌


click me!