ಹೆಂಡತಿ ವಿರೋಧ ಕಟ್ಟಿಕೊಂಡ ತಾಂಡವ್‌ಗೆ ಅಹಂ ಅಡ್ಡಿ ಬರುತ್ತಿದೆ. ಕನಸಿನಲ್ಲಿಯೂ ಪತ್ನಿ ಕಾಡಲು ಶುರು ಮಾಡಿದ್ದಾಳೆ. ಏನಿದು ವಿಷಯ?
ತಾಂಡವ್ ಕನಸಿನಲ್ಲಿಯೂ ಭಾಗ್ಯ ಕಾಡುತ್ತಿದ್ದಾಳೆ. ತಾಂಡವ್‌ಗೆ ಪತ್ನಿ ಎದುರು ಸೋಲನ್ನು ಅನುಭವಿಸಿದ ಹಾಗಾಗುತ್ತಿದೆ. ಗಂಡಸಾಗಿ ತಾನು ಸೋತೆ ಎನ್ನುವ ಅಹಂ ಅಡ್ಡ ಬರುತ್ತಿದೆ. ಏನೂ ಅರಿಯದ ಪೆದ್ದು ಪತ್ನಿಯನ್ನು ಸುಲಭದಲ್ಲಿ ಮನೆಯಿಂದ ಹೊರಕ್ಕೆ ಹಾಕಬಹುದು ಎಂದುಕೊಂಡಿದ್ದ ತಾಂಡವ್‌ಗೆ ಅದು ಸಾಧ್ಯವೇ ಆಗದ ಸ್ಥಿತಿ. ಪತ್ನಿಗೆ ಎಷ್ಟು ಟಾರ್ಚರ್ ಕೊಡಬೇಕೋ ಅಷ್ಟನ್ನೆಲ್ಲಾ ಕೊಟ್ಟಾಯ್ತು. ಈತನ ಟಾರ್ಚರ್ ತಾಳದೇ ಖುದ್ದು ಭಾಗ್ಯಳ ಮಾವನೇ ತನ್ನ ಮಗನಿಗೆ ಡಿವೋರ್ಸ್ ಕೊಟ್ಟುಬಿಡಮ್ಮಾ, ನಿನ್ನ ಈ ಕಷ್ಟ ನೋಡಲು ಆಗ್ತಿಲ್ಲ ಎಂದೂ ಹೇಳಿ ಆಯ್ತು. ಆದರೆ ಈಕೆ ಭಾಗ್ಯ. ಪತ್ನಿಗಿಂತ ಹೆಚ್ಚಾಗಿ ಇಬ್ಬರು ಮಕ್ಕಳ ಅಮ್ಮ ಈಕೆ. ಸುಲಭದಲ್ಲಿ ಸೋಲನ್ನು ಒಪ್ಪಿಕೊಳ್ತಾಳಾ? ಸಾಧ್ಯವೇ ಇಲ್ಲ. ಇದೀಗ ತಾಂಡವ್‌ಗೆ ಕನಸಿನಲ್ಲಿಯೂ ಭಾಗ್ಯ ಕಾಡುತ್ತಿದ್ದಾಳೆ.
ಇದೇ ಸಿಟ್ಟಿನಲ್ಲಿ ಕನ್ನಡಿ ಒಡೆದು ಕೈಗೆ ಗಾಯ ಮಾಡಿಕೊಂಡಿದ್ದಾನೆ ತಾಂಡವ್. ಅದೇ ಇನ್ನೊಂದೆಡೆ, ಭಾಗ್ಯಳನ್ನು ಸೋಲಿಸಲೇಬೇಕು ಎನ್ನುವ ಕಾರಣಕ್ಕೆ ಮನೆ ಹೇಗೋ ಎರಡು ಭಾಗವಾಗಿದೆಯಲ್ಲ, ಇಎಂಐ ನಾನೊಬ್ಬನೇ ಹೇಗೆ ಕಟ್ಟುವುದು ಎಂದು ಕೇಳುತ್ತಿದ್ದಾನೆ ತಾಂಡವ್. ಅದಕ್ಕೆ ಭಾಗ್ಯ ಹೆದರಬೇಡಿ. ಅರ್ಧ ಇಎಂಐ ನಾನು ಕಟ್ಟುತ್ತೇನೆ ಎನ್ನುವ ಮೂಲಕ ತಾಂಡವ್‌ಗೆ ಶಾಕ್ ಕೊಟ್ಟಿದ್ದಾಳೆ. ಅಷ್ಟಕ್ಕೂ ಹೆಣ್ಣನ್ನು ಎದುರಿಸುವುದು, ಹೆದರಿಸುವುದು ಎರಡೂ ಸುಲಭದ ಕೆಲಸವಲ್ಲ ಎನ್ನುತ್ತಿದ್ದಾರೆ ನೆಟ್ಟಿಗರು.
ಒಬ್ಬಳು ಸಿಡಿದೆದ್ದಳು, ಇನ್ನೊಬ್ಬಳು ಅತಿ ಬುದ್ಧಿ ಉಪಯೋಗಿಸಿದಳು! ತವರು ಸೇರಿದ ಮಕ್ಕಳು: ಏನಾಗ್ತಿದೆ ಇಲ್ಲಿ?
ಅಷ್ಟಕ್ಕೂ ಭಾಗ್ಯಲಕ್ಷ್ಮಿ ಬದಲಾಗಿದ್ದಾಳೆ. ಅಳುಮುಂಜಿಯಲ್ಲ ಈಕೆ. ಡಿವೋರ್ಸ್ ವಿಷಯ ಕೇಳಿ ಕುಗ್ಗಿದ್ದ ಭಾಗ್ಯ ಅಳುಮುಂಜಿ ಆದರೆ ಆಗಲ್ಲ ಎನ್ನುವ ಸತ್ಯವನ್ನು ಅರಿತಿದ್ದಾಳೆ. ಆ ಟೈಮೂ ಬಂದುಬಿಟ್ಟಿದೆ. ಭಾಗ್ಯಲಕ್ಷ್ಮಿ ಕೊನೆಗೂ ಗಂಡ ತಾಂಡವ್ ಎದುರು ನಿಂತು ಮಾತನಾಡುವಷ್ಟು ಗಟ್ಟಿಗಿತ್ತಿಯಾಗಿದ್ದಾಳೆ. ಗಂಡನೇ ಸರ್ವಸ್ವ, ಆತ ಏನು ಮಾಡಿದರೂ ತಾಳ್ಮೆಯಿಂದ ಇರಬೇಕು, ಪತಿಯೇ ಪರದೈವ ಎಂದೆಲ್ಲಾ ಎಂದುಕೊಂಡು ಇಲ್ಲಿಯವರೆಗೆ ಸಹನಾಮೂರ್ತಿಯಂತಿದ್ದ ಭಾಗ್ಯ ಪತಿಗೇ ದುರುಗುಟ್ಟು ನೋಡಿ ನೋಡುವಷ್ಟರ ಮಟ್ಟಿಗೆ ಬೆಳೆದು ನಿಂತಿದ್ದಾಳೆ. ಮನೆ ನನ್ನದು, ಮನೆಬಿಟ್ಟು ಹೋಗು, ಡಿವೋರ್ಸ್ ಕೊಡುವೆ ಎಂದೆಲ್ಲಾ ಹೇಳಿ ಪೌರುಷ ಮೆರೆಯುತ್ತಿದ್ದ ತಾಂಡವ್, ಪತ್ನಿಯ ಈ ರೂಪಕ್ಕೆ ಸುಸ್ತು ಹೊಡೆದಿದ್ದಾನೆ.
ಪತ್ನಿಯನ್ನು ನೀವು ಕಟ್ಟಿಹಾಕ್ಬೋದು, ಆದರೆ ತಾಯಿಯನ್ನು ಕಟ್ಟಿ ಹಾಕೋಕೆ ಆಗಲ್ಲ ಎಂದು ಡೈಲಾಗ್ ಮೇಲೆ ಡೈಲಾಗ್ ಹೊಡೆದಿದ್ದಾಳೆ ಭಾಗ್ಯ. ಕೊನೆಯ ಪಕ್ಷ ಮಕ್ಕಳ ಎದುರಾದರೂ ಒಳ್ಳೆಯ ತಂದೆ ಎನ್ನಿಸಿಕೊಳ್ಳಿ. ನಾಳೆ ನಿಮ್ಮನ್ನೇ ಅವರು ಫಾಲೋ ಮಾಡಿ, ಕೆಟ್ಟ ನಡತೆ ಕಲಿತರೆ ಅದಕ್ಕೆ ಯಾರೂ ಜವಾಬ್ದಾರರಲ್ಲ, ನಾನು ಸುಮ್ಮನೇ ಇರೋಳಲ್ಲ ಎಂದು ಗಂಡನಿಗೆ ಧಮ್ಕಿ ಹಾಕಿದ್ದಾಳೆ. ಇದನ್ನು ಕೇಳಿ ತಾಂಡವ್‌ಗೆ ಶಾಕ್ ಆಗಿದೆ. ಭಾಗ್ಯಲಕ್ಷ್ಮಿ ಸೀರಿಯಲ್ ಅಭಿಮಾನಿಗಳಿಗೆ ಹಬ್ಬವೋ ಹಬ್ಬ. ಇಷ್ಟು ದಿನ ನಿನ್ನ ಅಳುಮುಂಜಿ ಮುಖ ನೋಡಿ ಸಾಕಾಗಿತ್ತು, ನಿನ್ನಂಥ ಹೆಣ್ಣಿದ್ದರೆ ಎಲ್ಲವೂ ಸಾಧ್ಯ. ನೀನು ನಿನ್ನಂಥ ಮನಸ್ಥಿತಿ ಇರುವ ಎಲ್ಲಾ ಮಹಿಳೆಯರಿಗೆ ಸ್ಫೂರ್ತಿ, ಪತಿ ದೌರ್ಜನ್ಯ ಎಸಗಿದಾಗ, ಸಹಿಸಿಕೊಳ್ಳದೇ ಎದುರು ಮಾತನಾಡುವ ಶಕ್ತಿ ಪ್ರತಿ ಹೆಣ್ಣಿಗೂ ಬರಬೇಕು ಎನ್ನುತ್ತಿದ್ದಾರೆ ಅಭಿಮಾನಿಗಳು. ಇದೇ ವೇಳೆ ಇದು ಸಾಧ್ಯವಾಗುವುದು ಕುಸುಮಾನಂಥ ಅತ್ತೆಯಿದ್ದರೆ ಮಾತ್ರ ಎಂದೂ ಸೇರಿಸುತ್ತಿದ್ದಾರೆ.
ಹೆಣ್ಣುಮಕ್ಕಳು ಮೊದಲೇ ಲವ್ ಫೀಲಿಂಗ್ಸ್ ಹೇಳಿಕೊಂಡು ಬಿಟ್ರೆ ತುಂಬಾ ಚಿಕ್ಕವರಾಗಿಬಿಡ್ತಾರಂತೆ! ನಿಜನಾ?