ಹೆಣ್ಣುಮಕ್ಕಳು ಮೊದಲೇ ಲವ್‌ ಫೀಲಿಂಗ್ಸ್‌ ಹೇಳಿಕೊಂಡು ಬಿಟ್ರೆ ತುಂಬಾ ಚಿಕ್ಕವರಾಗಿಬಿಡ್ತಾರಂತೆ! ನಿಜನಾ?

Published : Apr 19, 2024, 02:52 PM IST
ಹೆಣ್ಣುಮಕ್ಕಳು ಮೊದಲೇ ಲವ್‌ ಫೀಲಿಂಗ್ಸ್‌ ಹೇಳಿಕೊಂಡು ಬಿಟ್ರೆ ತುಂಬಾ ಚಿಕ್ಕವರಾಗಿಬಿಡ್ತಾರಂತೆ! ನಿಜನಾ?

ಸಾರಾಂಶ

ಹೆಣ್ಣುಮಕ್ಕಳು ಮೊದಲೇ ಲವ್‌ ಫೀಲಿಂಗ್ಸ್‌ ಹೇಳಿಕೊಂಡು ಬಿಟ್ರೆ ತುಂಬಾ ಚಿಕ್ಕವರಾಗಿಬಿಡ್ತಾರಂತೆ ಎನ್ನುತ್ತಿದ್ದಾಳೆ ಭೂಮಿಕಾ. ಏನಿದು ವಿಷ್ಯ?   

ಗೌತಮ್‌ ಮತ್ತು ಭೂಮಿಕಾ ನಡುವೆ ಲವ್‌ ಶುರುವಾಗಿದೆ. ಆದರೆ ಇಬ್ಬರೂ ಒಬ್ಬರಿಗೊಬ್ಬರು ಈ ವಿಷಯವನ್ನು ಹೇಳಿಕೊಂಡಿಲ್ಲ. ಆನಂದ್‌ ಮತ್ತು ಪತ್ನಿ ಇವರಿಬ್ಬರನ್ನು ಹೇಗಾದರೂ ಒಂದು ಮಾಡಲು ನೋಡುತ್ತಿದ್ದಾರೆ. ಭೂಮಿಕಾಳಿಗೆ ಆನಂದ್‌ ಪತ್ನಿ ಬಂದು ಎಲ್ಲಿಗೆ ಬಂತು ಲವ್‌ಸ್ಟೋರಿ ಎಂದಿದ್ದಾಳೆ. ಅದಕ್ಕೆ ಭೂಮಿಕಾ, ಗೌತಮ್‌ ನನ್ನನ್ನು ತುಂಬಾ ಪ್ರೀತಿಸ್ತಾರೆ. ಅವರೇ ಮೊದಲು ಹೇಳಲಿ ಎಂದುಕೊಂಡು ಸುಮ್ಮನಿದ್ದೇನೆ. ನಾನು ಹೇಳಲು ಹೋಗುವುದಿಲ್ಲ ಎಂದಿದ್ದಾಳೆ. ಹೀಗೆ ಮೊದಲೇ ಹೆಣ್ಣುಮಕ್ಕಳ ಲವ್‌ ಫೀಲಿಂಗ್ಸ್‌ ಹೇಳಿಕೊಂಡು ಬಿಟ್ರೆ ತುಂಬಾ ಚಿಕ್ಕವರಾಗಿಬಿಡ್ತಾರೆ. ಅದಕ್ಕೇ ಅವರೇ ಮೊದಲು ಹೇಳಲಿ. ಅವರಿಗೆ ನನಗಿಂತಲೂ ಹೆಚ್ಚಾಗಿ ನನ್ನ ಮೇಲೆ ಲವ್‌ ಇದೆ ಅದಕ್ಕಾಗಿಯೇ ಅವರೇ ಮೊದ್ಲು ಹೇಳಿ ಎನ್ನುತ್ತಿದ್ದಾರೆ.

ಇದರ ಬಗ್ಗೆ ಈಗ ವಾದ-ಪ್ರತಿವಾದ ಶುರುವಾಗಿದೆ. ನೀವು ಹೀಗೆ ಅವರು ಹೇಳಲಿ, ಇವರು ಹೇಳಲಿ ಎಂದುಕೊಳ್ಳುತ್ತಾ ಕೂತರೆ ಇಬ್ಬರೂ ಹೇಳಿಕೊಳ್ಳಲ್ಲ. ಹೀಗೆ ಸೀರಿಯಲ್‌ ಎಳೆಯುತ್ತಾ ಸಾಗುತ್ತದೆ ಅಷ್ಟೇ ಎನ್ನುತ್ತಿದ್ದಾರೆ. ಇನ್ನು ಕೆಲವರು ನಿಜ ನಿಜ. ಹೆಣ್ಣುಮಕ್ಕಳೇ ಖುದ್ದಾಗಿ ಲವ್‌ ಪ್ರಪೋಸ್‌ ಮಾಡಬಾರದು ಎನ್ನುತ್ತಿದ್ದಾರೆ. 

ಒಬ್ಬಳು ಸಿಡಿದೆದ್ದಳು, ಇನ್ನೊಬ್ಬಳು ಅತಿ ಬುದ್ಧಿ ಉಪಯೋಗಿಸಿದಳು! ತವರು ಸೇರಿದ ಮಕ್ಕಳು: ಏನಾಗ್ತಿದೆ ಇಲ್ಲಿ?

ಅಷ್ಟಕ್ಕೂ ಇವರಿಬ್ಬರನ್ನೂ ಬೇರೆ ಮಾಡಲು ಅತ್ತೆ ಶಕುಂತಲಾ ಮಾಡಿದ ತಂತ್ರಕ್ಕೆ ಎಲ್ಲೆಯೇ ಇಲ್ಲ.  ಗೌತಮ್​ ಮತ್ತು ಭೂಮಿಕಾ ಹತ್ತಿರವಾಗುತ್ತಿರುವ ವಿಷಯ ತಿಳಿಯುತ್ತಲೇ ಶಕುಂತಲಾ ದೇವಿ  ಜ್ಯೋತಿಷಿಯನ್ನು ಕರೆತಂದು ಆತನ ಬಾಯಲ್ಲಿ ಸುಳ್ಳು ಹೇಳಿಸಿದ್ದಳು. ಜ್ಯೋತಿಷಿಯೊಬ್ಬ ಮನೆಗೆ ಬಂದು ಗೌತಮ್​ ಮತ್ತು ಭೂಮಿಕಾ ಪತಿ-ಪತ್ನಿಯಂತೆ ದೈಹಿಕ ಸಂಪರ್ಕ ಹೊಂದಿದರೆ ಭೂಮಿಕಾ ಜೀವಕ್ಕೆ ಅಪಾಯವಿದೆ ಎಂದಿದ್ದ. ಇದನ್ನು ಕೇಳಿ ಗೌತಮ್​ಗೆ ಶಾಕ್​ ಆಗಿತ್ತು.  ಪತ್ನಿ ಭೂಮಿಕಾಳಿಗಾಗಿ  ಗೌತಮ್​, ಉರುಳು ಸೇವೆ ಮಾಡಿದ್ದಾನೆ, ನೆಲದ ಮೇಲೆ ಊಟ ಮಾಡಿದ್ದಾನೆ. ಭೂಮಿಕಾ ಇದೆಲ್ಲಾ ಏನು ಎಂದು ಕೇಳಿದಾಗ, ಮನೆಯವರಿಗಾಗಿ ಎಂದು ಗೌತಮ್​ ಹೇಳಿದ್ದಾನೆ.  ಪತಿಯ ಈ ಸ್ಥಿತಿ ಕಂಡು ಭೂಮಿಕಾ ಕಣ್ಣೀರಾಗಿದ್ದಳು. ಕೊನೆಗೆ ಅತ್ತೆಯ ಕಂತ್ರಿ ಬುದ್ಧಿ ತಿಳಿದಿತ್ತು.

ತಮ್ಮ ಜಾತಕದಲ್ಲಿ ಯಾವುದೇ ದೋಷವಿಲ್ಲ ಎಂದು ಸಾಬೀತು ಮಾಡಲು ಮನೆಯ ಗುರುಗಳನ್ನು ಕರೆಸಿ ಪಂಚಾಂಗ ಶ್ರವಣ ಮಾಡಿಸೋ ಪ್ಲ್ಯಾನ್​ ಮಾಡಿದ್ದಳು. ಏಕೆಂದರೆ ಏಕಾಏಕಿ ಶಕುಂತಲಾ ದೇವಿಯ ಕುತಂತ್ರವನ್ನು ಬಯಲು ಮಾಡುವುದು ಸುಲಭವಲ್ಲ. ಹೀಗೆ ಮಾಡಿದರೆ, ಗೌತಮ್​ ಪತ್ನಿಯ ಮೇಲೇ ಸಿಟ್ಟು ಮಾಡಿಕೊಳ್ಳುವ ಸಾಧ್ಯತೆ ಹೆಚ್ಚು. ಇದೇ ಕಾರಣಕ್ಕೆ ಈ ಪ್ಲ್ಯಾನ್​ ಮಾಡಿದ್ದಾಳೆ.  ಮನೆಗೆ ಗುರೂಜಿಯನ್ನು ಕರೆಸಿದ್ದು, ಇವರಿಬ್ಬರ ಜಾತಕ ಸಿಕ್ಕಾಪಟ್ಟೆ ಚೆನ್ನಾಗಿದೆ ಎಂದು ಗುರೂಜಿ ಹೇಳಿದ್ದಾರೆ. ಈ ಮೂಲಕ ಗೌತಮ್​ಗೆ ಫುಲ್​ ಖುಷ್​ ಆಗಿದೆ. ಅತ್ತೆ ಶಕುಂತಲಾ ಮತ್ತು ನಾದಿನಿ ಮಾತ್ರ ಇಂಗು ತಿಂದ ಮಂಗನಂತಾಗಿದ್ದಾರೆ. 

ಆ ಭಾಗ್ಯ ಸತ್ತೋದ್ಲು ಕಣ್ರೀ... ಪತ್ನಿಯನ್ನು ಕಟ್ಟುಹಾಕಿದಂತೆ, ತಾಯಿಯನ್ನು ಕಟ್ಟಿಹಾಕಲು ಆಗಲ್ಲ!
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಮನೆಗೆ ಬಂದಿರೋ ಅಕ್ಕನ ಮುಂದೆ ನಡೆಯಿತು ಸ್ವಯಂವರ: ರಘುನಲ್ಲಿ ಮಗು ಕಂಡ ಅಶ್ವಿನಿ ಗೌಡ
'ವೃಷಭ' ಸಿನಿಮಾ ರಿಲೀಸ್;‌ ಕಣ್ಣು ಕಳೆದುಕೊಳ್ಳೋ ಸ್ಥಿತಿ ಬಂದಿದ್ರೂ, ಬೆಲೆ ಇಲ್ಲ ಎಂದ Bigg Boss ರಘು