ಲಕ್ಷ್ಮಿನಿವಾಸ ಶೂಟಿಂಗ್​ ಸೆಟ್​ನಲ್ಲಿ ಮೊಲ ತಂದಾಗ ಏನಾಗಿತ್ತು? ತೆರೆಮರೆಯ ಸ್ಟೋರಿ ಇಲ್ಲಿದೆ...

By Suchethana D  |  First Published Nov 16, 2024, 6:06 PM IST

ಲಕ್ಷ್ಮಿನಿವಾಸ ಶೂಟಿಂಗ್​ ಸೆಟ್​ನಲ್ಲಿ ಮೊಲ ತಂದಾಗ ಏನಾಗಿತ್ತು?  ಶೂಟಿಂಗ್ ಸಮಯದಲ್ಲಿ ನಡೆದ ಘಟನೆಯ ತೆರೆಮರೆ ಸ್ಟೋರಿ ವಿಡಿಯೋ ವೈರಲ್ ಆಗಿದೆ. 


ಜಯಂತ್​ ಎನ್ನುವ ಹೆಸ್ರು ಕೇಳಿದ್ರೇನೇ ಸೀರಿಯಲ್​ ಪ್ರೇಮಿ ಮಹಿಳೆಯರಿಗೆ ಭಯ ಹುಟ್ಟೋಕೆ ಶುರುವಾಗತ್ತೆ.  ತಮ್ಮನ್ನು ಹುಚ್ಚನಂತೆ ಪ್ರೀತಿಸೋ ಗಂಡ ಬೇಕು ಎಂದು ಬಯಸುವ ಹೆಣ್ಣುಮಕ್ಕಳು ಈ ಜಯಂತ್​ನನ್ನು ಒಮ್ಮೆ ನೋಡಿಬಿಟ್ಟರೆ ಲೈಫ್​ನಲ್ಲಿ ಮದ್ವೆನೇ ಬೇಡಪ್ಪಾ ಎನ್ನುತ್ತಾರೆ. ಆದರೆ ಈಗ ಜಯಂತ್​ನ ಹಿಂದಿನ ಕಥೆ ಕೇಳಿ, ಅವನು ಸೈಕೋ ಆಗಿದ್ದು ಯಾಕೆ ಅನ್ನೋದನ್ನು ಕೇಳಿ ಅಯ್ಯೋ ಪಾಪ ಎನ್ನುತ್ತಿದ್ದಾರೆ! ಅಂದಹಾಗೆ ಇದು ಜೀ ಕನ್ನಡದ ಲಕ್ಷ್ಮೀ ನಿವಾಸ ಸೀರಿಯಲ್​.  ಈ ಸೀರಿಯಲ್​ ನಾಯಕ ಜಯಂತ್​ ಸೈಕೋಪಾತ್​ ಎನ್ನುವುದು ಈ ಸೀರಿಯಲ್​ ವೀಕ್ಷಕರಿಗೆ ಗೊತ್ತು. ಈತನಿಗೆ ಪತ್ನಿಯ ಮೇಲೆ ಅದೆಷ್ಟು ಪ್ರೀತಿ ಎಂದರೆ ಅದೇ ಮುಳ್ಳಾಗುತ್ತಿದೆ. ಏಕೆಂದರೆ, ಈತನಿಗೆ ಪತ್ನಿಯ ಮೇಲೆ ಇರುವುದು ಕೇವಲ ಪ್ರೀತಿ ಅಲ್ಲ, ಇದು Obsessive Love Disorder. ಇದೇ ಕಾರಣಕ್ಕೆ ಪ್ರತಿ ಕ್ಷಣವೂ ಆತನಿಗೆ ಪತ್ನಿಯ ಮೇಲೆ ಸಂಶಯ. ಹಾಗೆಂದು ಸಂಶಯದ ಪಿಶಾಚಿ ಎಂದಲ್ಲ. ಕೆಲವು ಗಂಡಸರಿಗೆ ಮತ್ತು ಹೆಂಗಸರಿಗೆ ಕೂಡ ಸಂಶಯ ಎನ್ನುವುದು ಇರುತ್ತದೆ. ಪತಿ ಅಥವಾ ಪತ್ನಿ ಯಾರ ಜೊತೆಯಾದ್ರೂ ನಗುತ್ತಾ ಮಾತನಾಡಿದ್ರೆ ಅದನ್ನು ಇನ್ನೊಬ್ಬರು ಸಹಿಸುವುದಿಲ್ಲ. ಆದರೆ ಇಲ್ಲಿ ಜಯಂತ್​ ಕ್ಯಾರೆಕ್ಟರ್​ ಹಾಗಲ್ಲ. ಈತನಿಗೆ ಇರುವುದು ಪ್ರೇಮದ ಗೀಳು. ಪತ್ನಿಗೆ ಏನು ಬೇಕೋ ಎಲ್ಲವನ್ನೂ ಮಾಡುತ್ತಾನೆ. ಆದರೆ ಆಕೆ ಮಾತ್ರ ತನ್ನವಳಾಗಿಯೇ ಇರಬೇಕು ಎನ್ನುವ ಸ್ಥಿತಿ. ಅಂದ್ರೆ ಗಂಡಸರಷ್ಟೇ ಅಲ್ಲ, ಪತ್ನಿ ಯಾರ ಬಳಿಯೂ ಚೆನ್ನಾಗಿ ಮಾತನಾಡಬಾರದು. ಅದು ಮನುಷ್ಯರಷ್ಟೇ ಅಲ್ಲ, ಪ್ರಾಣಿ-ಪಕ್ಷಿಗಳ ಮೇಲೂ ಆಕೆ ಅತಿಯಾದ ಪ್ರೀತಿ ತೋರಬಾರದು! ಆಕೆ ಏನಿದ್ದರೂ ತನ್ನವಳಷ್ಟೇ. ಇದಕ್ಕೆ ಆತನ ಬಾಲ್ಯ ಕಾರಣ ಎನ್ನುವ ಸತ್ಯ ಈಗ ಬಯಲಾಗಿದೆ.

ಇನ್ನು ಕೆಲವು ಎಪಿಸೋಡ್​ನಲ್ಲಿ  ಪತ್ನಿ ಒಂಟಿಯಾಗಿ ಮನೆಯಲ್ಲಿ ಇದ್ದರೆ ತನ್ನ ಸಂಬಂಧಿಕರ ಜೊತೆ ಫೋನ್​ನಲ್ಲಿ ಮಾತನಾಡುತ್ತಾ ಇರುತ್ತಾಳೆ ಎನ್ನುವ ಕಾರಣಕ್ಕೆ ಮುದ್ದಾದ ಮೊಲ ಒಂದನ್ನು ತರಿಸಿಕೊಟ್ಟಿದ್ದ. ಇನ್ನು ಈ ಪೆದ್ದು ಚಿನ್ನುಮರಿ ಕೇಳಬೇಕೆ? ಅವಳು ಆ ಮುದ್ದಾದ ಮೊದಲ ಜೊತೆ ದಿನಪೂರ್ತಿ ಕಳೆಯ ತೊಡಗಿದಳು. ಗಂಡ ಬಂದರೂ ಅವನ ಮೇಲೆ ಗಮನ ಇಲ್ಲ. ಅವಳ ಗಮನ ಎಲ್ಲಾ ಮೊಲದ ಮೇಲೆ ಇದನ್ನು, ಚಿನ್ನುಮರಿಯ ಈ ಜಯಂತ್​ ಸಹಿಸಿಕೊಳ್ತಾನಾ? ಈ ಚಿನ್ನುಮರಿಗೆ ಹೊರಗಡೆ ಬಂದಾಗ ಮೊಲ ಕಾಣಿಸ್ಲೇ ಇಲ್ಲ. ಎಲ್ಲಿ ಹೋಯ್ತು ನನ್ನ ಮೊಲ ಎಂದು ಕೇಳಿದಾಗ, ಜಯಂತ್​ ಕುಕ್ಕರ್​ ಬಳಿ ನೋಡ್ತಾನೆ. ಅಲ್ಲಿ ಕುಕ್ಕರ್​ ಸೀಟಿಯಾಗುತ್ತಿದೆ. ಅಲ್ಲಿಗೆ ಕುಕ್ಕರ್​ ಒಳಗೆ ಮೊಲ ಬೇಯುತ್ತಿದೆ ಎಂದು ಜಾಹ್ನವಿ ಅಂದುಕೊಳ್ಳುತ್ತಾಳೆ.  ಆದರೆ ಅದನ್ನು ಜಯಂತ್​ ಪೆಟ್​ಕೇರ್​ನಲ್ಲಿ ಬಿಟ್ಟು ಬಂದಿದ್ದ. 

Tap to resize

Latest Videos

undefined

ಹಾಸನದ ಹುಡ್ಗೀರು ನಟ ಜೆಕೆಗೆ ಚಿವುಟಿ, ಕಚ್ಚಿ, ಹರಿದು ತಿಂದೇಬಿಟ್ರು! ಆ ದಿನ ನೆನೆದ ನಿರ್ದೇಶಕ ಆರೂರು ಜಗದೀಶ್​

ಇದು ಸೀರಿಯಲ್​ ಕಥೆಯಾಯ್ತು. ಆದರೆ ನಿಜಕ್ಕೂ ಶೂಟಿಂಗ್​ ಸೆಟ್​ನಲ್ಲಿ ಮೊಲ ತಂದಾಗ ಏನಾಗಿತ್ತು? ಅದರ ಶೂಟಿಂಗ್​ ಹೇಗೆ ನಡೆದಿತ್ತು ಎನ್ನುವ ತೆರೆ ಮರೆಯ ಕಥೆಯನ್ನು ಪ್ರಭು ಕ್ರಿಯೇಷನ್ಸ್​ ಯೂಟ್ಯೂಬ್​ನಲ್ಲಿ ಶೇರ್​ ಮಾಡಿಕೊಳ್ಳಲಾಗಿದೆ. ಮೊದಲಿಗೆ ಆ ಮೊಲ ತುಂಬಾ ಗಾಬರಿಯಾಗಿದ್ದನ್ನು ನೋಡಬಹುದು. ಮೊಲದ ಮಾಲೀಕ ಕ್ಯಾರೆಟ್​ ತಿನ್ನಿಸಿದಾಗ ಅದು ತಿಂದರೂ ಜಾಹ್ನವಿಯನ್ನು ಕಂಡು ಭಯಪಟ್ಟುಕೊಂಡಿದೆ. ಆದರೆ ಈ ಸೀರಿಯಲ್​ನಲ್ಲಿ ಜಾಹ್ನವಿ ಅದಕ್ಕೆ ಮುದ್ದು ಮಾಡಬೇಕು. ಆದ್ದರಿಂದ ಮೊಲದ ಭಯ ಹೋಗಿಸಲು ನಟಿ ಪ್ರಯತ್ನ ಪಟ್ಟಿದ್ದಾರೆ. ಅಂತೂ ಮೊಲಕ್ಕೆ ಮುತ್ತು ಕೊಡುವಲ್ಲಿ ನಟಿ ಯಶಸ್ವಿಯಾದರು. ಇದಾಗ ಬಳಿ ನಡೆದ ಶೂಟಿಂಗ್ ದೃಶ್ಯಗಳನ್ನು ಈ ವಿಡಿಯೋದಲ್ಲಿ ತೋರಿಸಲಾಗಿದೆ. 

ಅಂದಹಾಗೆ ಜಯಂತ್​ ಬಗ್ಗೆ ಬೇರೆ ಹೇಳಲೇಬೇಕಲ್ಲ ಅಲ್ವಾ? ಅಪ್ಪ-ಅಮ್ಮ ಸತ್ತಿದ್ದರಿಂದ ಅಜ್ಜನ ನೆರಳಲ್ಲಿ ಬೆಳೆದ ಜಯಂತ್​ಗೆ ಅಜ್ಜ ಎಂದರೆ ಭಯ. ಏಕೆಂದ್ರೆ ಅಜ್ಜನಿಗೆ ಜಯಂತ್​ ಏನು ಮಾಡಿದ್ರೂ ತಪ್ಪು. ಅವನೂ ಒಂದು ರೀತಿ ಸೈಕೋ. ಯಾರ ಜೊತೆಯೂ ಇರಲು ಕೊಡುತ್ತಿರಲಿಲ್ಲ. ಒಂಟಿಯಾಗಿ ಇದ್ದೂ ಇದ್ದೂ ಜಯಂತ್​ ಸೈಕೋ ಆಗಿದ್ದಾರೆ. ಅದನ್ನೀಗ ಪತ್ನಿ ಬಳಿಯೂ ಹೇಳಿಕೊಂಡಿದ್ದಾನೆ. ಆದರೆ ಜಯಂತ್​ನ ಹುಚ್ಚು ಹೋಗತ್ತಾ ಎನ್ನುವುದು ಈಗಿರುವ ಕುತೂಹಲ. ಅದು ಬೇರೆ ಜಾಹ್ನವಿ ತಾಯಿ ಆಗ್ತಿದ್ದಾಳೆ. ಆ ವಿಷಯವನ್ನು ಇನ್ನೂ ಪತಿಗೆ ತಿಳಿಸಿಲ್ಲ. ಮಗು ಬಂದ್ರೆ ಮಗುವಿಗೆ ಅವನು ಏನು ಮಾಡಿ ಬಿಡ್ತಾನೋ ಎನ್ನುವ ಭಯ ಸೀರಿಯಲ್​ ಪ್ರೇಮಿಗಳಿಗೆ.  ಏಕೆಂದ್ರೆ, ಜಯಂತ್​ನ ಹುಚ್ಚು  ಮನುಷ್ಯರ ಮೇಲಷ್ಟೇ ಅಲ್ಲ, ಕ್ರಿಮಿ ಕೀಟಗಳಿಗೂ ವಿಸ್ತರಿಸಿರೋ ಬಗ್ಗೆ ಈ ಚಿನ್ನುಮರಿಗೆ ಗೊತ್ತಿಲ್ಲದಿದ್ರೂ ವೀಕ್ಷಕರಿಗೆ ಗೊತ್ತಲ್ಲ! ಒಮ್ಮೆ ಜಿರಳೆ ಒಂದು ಜಾಹ್ನವಿಯ ಮೈಮೇಲೆ ಹರಿದಾಡಿತು ಎನ್ನುವ ಕಾರಣಕ್ಕೆ ಅದನ್ನು ಎತ್ತಿ ನನ್ನ ಹೆಂಡತಿ ಮೈಯನ್ನೇ ಮುಟ್ಟುತ್ತಿಯಾ ನೀನು, ತಡಿ ನಿನಗೆ ಪನಿಷ್​ಮೆಂಟ್​ ಕೊಡುತ್ತೇನೆ ಎಂದು ಅದನ್ನು ಬಿಸಿಯಾಗಿರೋ ಹಾಲಿಗೆ ಹಾಕಿ ಸಾಯಿಸಿದ್ದಾನೆ. ನಂತರ ಅದನ್ನೇ ಕುಡಿದಿದ್ದ.  ಅದಕ್ಕೆ ಮಗು ಹುಷಾರಾಗಿ ಇರಲಪ್ಪ ಎನ್ನುತ್ತಿದ್ದಾರೆ ವೀಕ್ಷಕರು. 

ನಾಲ್ಕು ಸೆಕೆಂಡ್​ಗೆ ಸ್ಟಾಪ್​ ಆಗತ್ತಾ? ಅಣ್ಣಯ್ಯ ಸೀರಿಯಲ್​ ನಟಿಯ ಈ ಚಾಲೆಂಜ್​ ಸ್ವೀಕರಿಸುವಿರಾ?

click me!