Bigg Bossನಿಂದ ಕುಮಾರಿ ಔಟ್​: ದೊಡ್ಮನೆಗೆ ಹೋಗದಿದ್ರೇನೇ ಹೆಸರು ಉಳೀತಾ ಇತ್ತು ಅಂತಿದ್ದಾರೆ ಫ್ಯಾನ್ಸ್​

Published : Nov 02, 2026, 02:13 PM IST
Bigg Boss Lavanya Kumari

ಸಾರಾಂಶ

ಸಾಮಾಜಿಕ ಜಾಲತಾಣದಲ್ಲಿ ಫೇಮಸ್ ಆಗಿದ್ದ ಲಾವಣ್ಯ ಕುಮಾರಿ ಬಿಗ್‌ಬಾಸ್ ಮನೆಯಲ್ಲಿ ವೀಕ್ಷಕರ ನಿರೀಕ್ಷೆ ಹುಸಿ ಮಾಡಿದ್ದಾರೆ. ಸಿಂಪಥಿ ಗಿಟ್ಟಿಸಿಕೊಳ್ಳಲು ಪ್ರಯತ್ನಿಸಿದರು ಎಂಬ ಆರೋಪದ ನಡುವೆ ಅವರು ಎಲಿಮಿನೇಟ್ ಆಗಿದ್ದಾರೆ. ದೊಡ್ಮನೆಗೆ ಹೋಗಿ ಅವರು ತಪ್ಪು ಮಾಡಿದರು ಎಂದು ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಬಿಂದಾಸ್​​ ಆಗಿಮಾತನಾಡುತ್ತಾ, ಚಿನಕುರುಳಿಯಂತೆ ಪಟಾಪಟಾ ಎಂದು ಉತ್ತರಿಸುತ್ತಾ ಬಹುತೇಕ ವೀಕ್ಷಕರ ಮನಗೆಲ್ಲುವುದಕ್ಕೂ, ಟಾಸ್ಕ್​ ಎಂದು ಬಂದಾಗ ಬೇರೆಯವರ ಜೊತೆ ಸ್ಪರ್ಧಿಯಾಗಿ ನಿಲ್ಲುವುದಕ್ಕೂ ಅಜಗಜಾಂತರ ವ್ಯತ್ಯಾಸ ಇದೆ. ಕೋಟಿಗಟ್ಟಲೆ ಫ್ಯಾನ್ಸ್​ ಹೊಂದಿರುವ ಸ್ಟಾರ್​ ನಟರು, ಚುನಾವಣೆಗೆ ನಿಂತಾಗ ಒಂದಷ್ಟು ಸಾವಿರ ವೋಟುಗಳೂ ಬರಲ್ಲ ಎನ್ನುತ್ತಾರಲ್ಲ, ಇದು ಕೂಡ ಅದೇ ರೀತಿ. ಯಾರಿಗೂ ಕ್ಯಾರೇ ಮಾಡದೇ ಒಂದಿಷ್ಟು ಡೈಲಾಗ್​ ಹೇಳಿ ಎಲ್ಲರಮನಸ್ಸನ್ನು ಗೆದ್ದಂತೆ ಬಿಗ್​ಬಾಸ್​ ಮನೆಯಲ್ಲಿ ಸ್ಪರ್ಧಿಸೋದು ಸುಲಭ ಅಲ್ಲ ಎನ್ನುವ ಮಾತಿದೆ. ಅದರಂತೆಯೇ, ಬಿಗ್​ಬಾಸ್​ಗೆ ಬಹು ನಿರೀಕ್ಷೆಯೊಂದಿಗೆ ಹೋಗಿದ್ದ ಕುಮಾರಿ ಎಂದೇ ಫೇಮಸ್​ ಆಗಿದ್ದ ಲಾವಣ್ಯ ಕುಮಾರಿ ಔಟ್​ ಆಗಿದ್ದಾರೆ.

ದೊಡ್ಡ ಆಫರ್​

ಅಗ್ನಿಪರೀಕ್ಷೆಯಲ್ಲಿ ಎಲ್ಲರ ಮನಸ್ಸನ್ನು ಗೆದ್ದ ಕುಮಾರಿ ಅನಾರೋಗ್ಯದಿಂದ ಒಳಗೆ ಹೋಗಲು ಆಗಿರಲಿಲ್ಲ. ಇವರನ್ನು ಒಳಗೆ ಕಳುಹಿಸಲು ಆಗಲಿಲ್ಲ, ಇವರು ಹೋಗಿದ್ದರೆ ಖಂಡಿತಾ ಬಿಗ್​ಬಾಸ್​ಗೆ ಕಳೆ ಬರುತ್ತಿತ್ತು ಎಂದೆಲ್ಲಾಅಂದುಕೊಂಡು ಅವರಿಗೆ ಭರ್ಜರಿ ಉಡುಗೊರೆಗಳೂ ಸಿಕ್ಕಿವೆ. ಐದು ಲಕ್ಷ ಬಹುಮಾನದ ಜೊತೆ ಜಾಬ್ ಆಫರ್​ ಕೂಡ ಸಿಕ್ಕಿತ್ತು.ಕೊನೆಗೆ ಈ ಬಾರಿಯ ಬಿಗ್​ಬಾಸ್ ಪ್ರೇಕ್ಷಕರನ್ನು ರಂಜಿಸದ ಕಾರಣ, ಒಂದಿಷ್ಟು ಮನೋರಂಜನೆ ಇರಬೇಕು, ಇದು ಕುಮಾರಿಯಿಂದಲೇ ಸಾಧ್ಯ ಎಂದುಕೊಂಡೋ ಏನೋ, ಬಿಗ್​ಬಾಸ್​ ವೀಕ್ಷಕರನ್ನು ಸೆರೆ ಹಿಡಿಟ್ಟುಕೊಳ್ಳಲು ಆಕೆಯನ್ನು ಒಳಗೆ ಕಳುಹಿಸಲಾಗಿತ್ತು.

ನಿರೀಕ್ಷೆ ಸುಳ್ಳು ಮಾಡಿದ್ರಾ ಕುಮಾರಿ?

ಆದರೆ, ಕುಮಾರಿ ಅವರು ಹೊರಗಡೆ ಇದ್ದಾಗ ಯಾವ ಪ್ರಮಾಣದಲ್ಲಿ ನಿರೀಕ್ಷೆ ಹುಟ್ಟಿಸಿದ್ದರೋ ಅವೆಲ್ಲವೂ ಹುಸಿಯಾಯಿತು. ಚಟಚಟ ಅಂತಮಾತಾಡ್ತಿದ್ದೋರು ಮೌನಕ್ಕೆ ಜಾರಿದರು. ​​ಇದೀಗ ಅವರು ಎಲಿಮಿನೇಟ್​ ಆಗಿದ್ದಾರೆ. ಈ ವಾರ ಆಸಿಯಾ, ಕಿರಣ್, ಕುಮಾರಿ, ಪ್ರಶಾಂತ್, ಧನುಶ್, ಗಗನ್, ಜಗದೀಶ್, ಪ್ರಶಾಂತ್ ಅವರುಗಳು ನಾಮಿನೇಟ್ ಆಗಿದ್ದರು. ಅವರಲ್ಲಿ ಮೊದಲಿಗೆ ಆಸಿಯಾ ಅವರನ್ನು ಸೇಫ್ ಮಾಡಲಾಯ್ತು. ಬಳಿಕ ಗಗನ್, ಬಳಿಕ ಧನುಶ್, ಬಳಿಕ ಕಿರಣ್ ಅವರುಗಳು ಸೇಫ್ ಆದರು. ಅಂತಿಮವಾಗಿ ಜಗದೀಶ್, ಪ್ರಶಾಂತ್ ಮತ್ತು ಕುಮಾರಿ ಉಳಿದಿದ್ದರು. ಕೊನೆಗೆ ಕುಮಾರಿ ಹೊರಕ್ಕೆ ಬಂದಿದ್ದಾರೆ.

ಅಷ್ಟಕ್ಕೂ ಸೋಷಿಯಲ್​ಮೀಡಿಯಾದಲ್ಲಿ ಕುಮಾರಿ ಕುರಿತು ವೀಕ್ಷಕರು ಅಸಮಾಧಾನ ಹೊರ ಹಾಕುತ್ತಲೇ ಇದ್ದರು. ಅವರು ಸಿಂಪಥಿ ಕಾರ್ಡ್​ ಪ್ಲೇ ಮಾಡ್ತಿದ್ದಾರೆ ಎನ್ನುತ್ತಿದ್ದರು. ಅವರಿಗೆ ಐದು ಲಕ್ಷ ಬಹುಮಾನ, ಉದ್ಯೋಗದ ಆಫರ್​ ಎಲ್ಲಾ ಕೊಟ್ಟಿದ್ದರೂ ಅದೇ ಹಳೆಯ ಬಟ್ಟೆ ಹಾಕಿಕೊಂಡು ಸಿಂಪಥಿ ಗಿಟ್ಟಿಸಿಕೊಳ್ಳಲು ನೋಡ್ತಿದ್ದಾರೆ ಅಂದರು. ಬಿಗ್​ಬಾಸ್​ನಿಂದ ಹೊರಕ್ಕೆ ಬಂದವರು ಕುಮಾರಿ ಸ್ನಾನನೇ ಮಾಡ್ತಿರಲಿಲ್ಲ ಎಂದೆಲ್ಲಾ ಆರೋಪಿಸಿದ್ದು ಉಂಟು. ಒಟ್ಟಿನಲ್ಲಿ, ಸೋಷಿಯಲ್​ ಮೀಡಿಯಾದಲ್ಲಿ ಮಾತುಗಳಿಂದ ಎಲ್ಲರನ್ನೂ ನಗಿಸುವುದಕ್ಕೂ, ಸ್ಪರ್ಧಿಯಾಗಿ ಆಟ ಆಡುವುದಕ್ಕೂ ಬಹಳಷ್ಟು ವ್ಯತ್ಯಾಸ ಇದೆ ಎನ್ನುತ್ತಿದ್ದಾರೆ ವೀಕ್ಷಕರು. ಇನ್ನು ಈಕೆ ಬಿಗ್​ಬಾಸ್​​ಗೆ ಹೋಗದೇ ಇದ್ದಿದ್ದರೆ ಅವರಿಗೆ ಮೊದಲಿಗೆ ಇದ್ದ ಮರ್ಯಾದೆ ಉಳೀತಾ ಇತ್ತು. ಬಿಗ್​ಬಾಸ್​​ಗೆ ಹೋಗಿದ್ದರೆ ಕುಮಾರಿ ಗೆಲ್ಲುತ್ತಿದ್ದರು ಎನ್ನುತ್ತಾ ಇದ್ದ ವೀಕ್ಷಕರು ಅದನ್ನೇ ಮನಸ್ಸಿನಲ್ಲಿ ಇಟ್ಟುಕೊಳ್ಳುತ್ತಿದ್ದರು. ದೊಡ್ಮನೆಗೆ ಹೋಗಿ ತಪ್ಪು ಮಾಡಿದರು ಎನ್ನುತ್ತಿದ್ದಾರೆ ಕುಮಾರಿ ಫ್ಯಾನ್ಸ್​.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಮರಾಠಿ ಆಯ್ತು, ಈಗ ಒಡಿಯಾ ಭಾಷೆಗೂ ಡಬ್ ಆಗಿದೆ ಕನ್ನಡಿಗರ ಮನಗೆದ್ದ ಆ ಬ್ಲಾಕ್ ಬಸ್ಟರ್ ಸೀರಿಯಲ್‌!
‘ಆನಂದ ನಿಲಯ’ ಭುವನ್‌ಗೆ ಜಗ್ಗೇಶ್ ಜೊತೆ ಆಕಸ್ಮಿಕ ಭೇಟಿ: ಬಾ ಪಾ, ಕುತ್ಕೋ.. ಎಂದು ಏನೆಲ್ಲಾ ಹೇಳಿದ್ರು?