
ಬಿಗ್ ಬಾಸ್ ಖ್ಯಾತಿಯ ನಟ ಕಿಶನ್ ಬಿಳಗುಲಿ ಕನ್ನಡ ಚಿತ್ರರಂಗದ ಹಲವು ನಟಿಯರು ಹಾಗೂ ಕನ್ನಡ ಕಿರುತೆರೆಯ ಹಲವು ನಟಿಯರೊಂದಿಗೆ ಡ್ಯಾನ್ಸ್ ಮಾಡಿದ್ದಾರೆ. ಕಿಶನ್ ಬಿಳಗಲಿ ಒಳ್ಳೆಯ ದೇಹದಾರ್ಡ್ಯವನ್ನು ಹೊಂದದ್ದು, ಉತ್ತಮ ಡ್ಯಾನ್ಸರ್ ಕೂಡ ಆಗಿದ್ದಾನೆ. ಈ ಹಿನ್ನೆಲೆಯಲ್ಲಿ ಹಲವು ನಟಿಯರು, ರೀಲ್ಸ್ ಸ್ಟಾರ್‌ಗಳೊಂದಿಗೆ ಕಿಶನ್ ಹೆಜ್ಜೆ ಹಾಕುತ್ತಾ ವಿಡಿಯೋಗಳನ್ನು ಮಾಡಿ ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಿದ್ದಾರೆ.
ಆದರೆ, ಇತ್ತೀಚೆಗೆ ಬಿಗ್ ಬಾಸ್ ಖ್ಯಾತಿಯ ನಟಿ ತನಿಷಾ ಕುಪ್ಪಂಡ ಅವರೊಂದಿಗೂ ಕಿಶನ್ ಬಿಳಗಲಿ ಭರ್ಜರಿಯಾಗಿ ಸ್ಟೆಪ್ಸ್ ಹಾಕಿದ್ದರು. ಈ ವಿಡಿಯೋವನ್ನು ಜೂನ್ ತಿಂಗಳಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೋ 13 ಮಿಲಿಯನ್‌ಗೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ಇದೀಗ ಸುಮಾರು ನಾಲ್ಕೈದು ತಿಂಗಳ ಬಳಿಕ ವಿಡಿಯೋ ಮಾಡುವಾಗ ಆಗಿದ್ದ ಎಡವಟ್ಟೊಂದನ್ನು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಕೂಡ ಕೆಲವೇ ಗಂಟೆಗಳಲ್ಲಿ 9 ಮಿಲಿಯನ್‌ಗೂ ಹೆಚ್ಚು ವೀಕ್ಷಣೆ ಪಡೆದಿದೆ.
ಇನ್ನು ಈ ಮೇಕಿಂಗ್ ವಿಡಿಯೋದಲ್ಲಿ ತನಿಷಾ ಕುಪ್ಪಂಡ ಅವನ್ನು ಎತ್ತಿಕೊಳ್ಳಲು ಹೋದಾಗ ಅವರ ಕೈಲಾಗದೇ ಕೆಳಗೆ ಬಿದ್ದಿರುವ ಘಟನೆ ನಡೆದಿದೆ. ಇಬ್ಬರೂ ಸ್ಟೆಪ್ಸ್ ಹಾಕುತ್ತಾ ಇರುವಾಗ ತನಿಷಾ ಕುಪ್ಪಂಡ ಕಿಶನ್ ಬಿಳಗಲಿ ಸೊಂಟದ ಮೇಲೆ ಎಗರಿ ಕುಳಿತುಕೊಳ್ಳಬೇಕು. ಆದರೆ, ಕಿಶನ್ ಬಿಳಗಲಿ ಕೆಳಗೆ ಸಪೋರ್ಟ್‌ಗೆ ತನಿಷಾ ಅವರನ್ನು ಹಿಡಿದುಕೊಳ್ಳುವ ಮೊದಲೇ ಮೇಲಕ್ಕೆ ಹೆಗರಿದ್ದು, ಬ್ಯಾಲೆನ್ಸ್ ಸಾಲದೇ ಕೆಳಗೆ ಬೀಳುತ್ತಾರೆ. ಈ ವೇಳೆ ದೊಡ್ಡದಾಗಿ ಗಾಯವೇನೂ ಆಗಿಲ್ಲ. ಪ್ರಾಕ್ಟೀಸ್ ಮಾಡುವಾಗ ಉಂಟಾದ ಸಣ್ಣ ಎಡವಟ್ಟನ್ನು ಹಂಚಿಕೊಂಡಿದ್ದು, ಸಾವಿರಾರು ಲೈಕ್ಸ್ ಹಾಗೂ ಕಮೆಂಟ್ಸ್‌ಗಳು ಬಂದಿವೆ.
ಈ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಕಿಶನ್ ಬಿಳಗಲಿ ಅವರು ತನಿಷಾ ಕುಪ್ಪಂಡ ಅವರಿಗೂ ಕೊಲ್ಯಾಬ್ ಮಾಡಿದ್ದಾರೆ. "ನಮ್ಮದೂ ಒಂದು ಟ್ರೆಂಡ್ ಇರಲಿ!" ಎಂದು ಟ್ಯಾಗ್‌ಲೈನ್ ಬರೆದುಕೊಂಡಿದ್ದಾರೆ. ಇನ್ನು ನೆಟ್ಟಿಗರು 'ಕನ್ನಡ ಚಿತ್ರರಂಗ ಹಾಗೂ ಕಿರುತೆರೆಯಲ್ಲಿ ನೀನೊಬ್ಬನೇ ಬಹುತೇಕ ನಟಿಯರೊಂದಿಗೆ ಡ್ಯಾನ್ಸ್ ಮಾಡುವುದು. ನೀನು ಸೊಂಟ ಮುರಿದುಕೊಂಡು ಬೀಳಬೇಡ ಹುಷಾರು' ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಟ್ರೆಂಡ್ ಮಾಡೋಕೆ ಹೋಗಿ ಹೀಗೆ ಬಿದ್ದೋಗಿದ್ದೀರಾ? ಎಂದು ಕೆಲವರು ಮರುಕ ವ್ಯಕ್ತಪಡಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.