
ಮುಂಬೈ (ನ.02) ಧಾರವಾಹಿಗಳ ಮೂಲಕ ಮನೆ ಮಾತಾಗಿದ್ದ ಯುವ ನಟ ನಿದ್ದೆಯಲ್ಲಿರುವಾಗ ಫಿಟ್ಸ್ ಸಂಭವಿಸಿ ಮೃತಪಟ್ಟ ದುರಂತ ಘಟನೆ ನಡೆದಿದೆ. 33ರ ಹರೆಯದ ಅನೂಜ್ ಠಾಕೂರ್ ಆಕಸ್ಮಿಕ ಸಾವಿಗೆ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ರಾತ್ರಿ ನಿದ್ದೆಗೆ ಜಾರಿದ ಸಂದರ್ಬದಲ್ಲಿ ಫಿಟ್ಸ್ ಸಂಭವಿಸಿದೆ. ಹೀಗಾಗಿ ಕುಟುಂಬ ಸದಸ್ಯರಿಗೂ ಗೊತ್ತೇ ಆಗಲಿಲ್ಲ. ಹಿಂದಿ ದಾರವಾಹಿಗಳ ಮೂಲಕ ಜನಪ್ರಿಯರಾಗಿದ್ದ ಅನೂಜ್ ಠಾಕೂರ್ ನಿಧನಕ್ಕೆ ಟಿವಿ ಲೋಕದ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
33ರ ಹರೆಯದ ಅನೂಜ್ ಠಾಕೂರ್ ಮುಂಬೈನ ಒಶಿವಾರಾದ ನಿವಾಸಿಯಾಗಿದ್ದರು. ಮನೆಯಲ್ಲಿ ಪೋಷಕರೊಂದಿಗಿದ್ದ ಅನೂಜ್ ಎಂದಿನಂತೆ ಮನೆಯಲ್ಲಿ ಊಟ ಮುಗಿಸಿ ಕೆಲ ಹೊತ್ತು ಮಾತುಕತೆ ನಡೆಸಿ ಮಲಗಿದ್ದಾರೆ. ಅನೂಜ್ ತಮ್ಮ ಕೋಣೆಯಲ್ಲಿ ಮಲಗಿದ್ದಾರೆ. ಮರುದಿನ ಬೆಳಗ್ಗೆ ಎಷ್ಟು ಹೊತ್ತಾದರೂ ಮಗ ಎದ್ದಿಲ್ಲ ಯಾಕೆ ಎಂದು ಅನುಮಾನಗೊಂಡ ತಾಯಿ ಕೋಣೆಗೆ ತೆರಳಿ ನೋಡಿದ್ದಾರೆ. ಈ ವೇಳೆ ಅನೂಜ್ ಪ್ರಜ್ಞಾಹೀನ ಸ್ಥಿತಿಯಲ್ಲಿ ಮಲಗಿದ್ದರು. ಮಗನ ಎಬ್ಬಿಸಲು ಪ್ರಯತ್ನಿಸಿದ ತಾಯಿ ಅನುಮಾನ ಹೆಚ್ಚಾಗಿತ್ತು. ತಕ್ಷಣವೆ ಕುಟುಂಬ ಸದಸ್ಯರ ಕೂಗಿದ್ದಾರೆ.
ಕುಟುಂಬ ಸದಸ್ಯರು ಕೋಣೆಯತ್ತ ಧಾವಿಸಿ ಬಂದಿದ್ದಾರೆ. ಅನೂಜ್‌ನ ಎತ್ತಿ ಕಾರಿನ ಮೂಲಕ ಆಸ್ಪತ್ಪೆ ದಾಖಲಿಸಿದ್ದಾರೆ. ಅನೂಜ್‌ನ ಪರಿಶೀಲಿಸಿದ ವೈದ್ಯರು ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ. ರಾತ್ರಿ ವೇಳೆ ಫಿಟ್ಸ್ ಸಂಭವಿಸಿ ಮೆದುಳು ಡ್ಯಾಮೇಜ್ ಆಗಿದೆ. ನಿದ್ದೆಯಲ್ಲಿ ಫಿಟ್ಸ್ ಸಂಭವಿಸಿದ ಕಾರಣ ಯಾರಿಗೂ ಗೊತ್ತಾಗಲಿಲ್ಲ. ರಾತ್ರಿ ವೇಳೆಯೇ ಅನೂಜ್ ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ದಾರೆ.
ಅನೂಜ್ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದ್ದರು. ಬೆಳಗ್ಗೆ 4.30ಕ್ಕೆ ಎದ್ದು ಜಿಮ್ ಅಭ್ಯಾಸ ಮಾಡುತ್ತಿದ್ದರು. ಆಹಾರದಲ್ಲೂ ಹೆಚ್ಚಿನ ಕಾಳಜಿ ವಹಿಸಿದ್ದರು. ಎಂದಿನಂತೆ 4.30ಕ್ಕೆ ಅಲರಾಂ ಬಡಿದುಕೊಳ್ಳಲು ಆರಂಭಿಸಿದೆ. ಕೆಲ ಹೊತ್ತು ಅಲರಾಂ ಬಡಿದು ಸೈಲೆಂಟ್ ಆಗಿದೆ. 5 ರಿಂದ 10 ನಿಮಿಷದ ಬಳಿಕ ಮತ್ತೆ ಅಲರಾಂ ಬಡಿದುಕೊಳ್ಳಲು ಆರಂಭಿಸಿದೆ. ಪ್ರತಿ ದಿನ ಒಂದು ಬಾರಿ ಅಲರಾಂ ಶಬ್ದಕ್ಕೆ ಏಳುತ್ತಿದ್ದ ಮಗ ಇನ್ನು ಯಾಕೆ ಎದ್ದಿಲ್ಲ ಎಂದು ಅನುಮಾನಗೊಂಡ ತಾಯಿ ಕೋಣೆಗೆ ತೆರಳಿ ಅಲರಾಂ ಆಫ್ ಮಾಡಿದ್ದಾರೆ. ಬಳಿಕ ಅನೂಜ್ ಎಬ್ಬಿಸಲು ಮುಂದಾಗಿದ್ದಾರೆ. ಆದರೆ ಅನೂಜ್ ಏಳಲೇ ಇಲ್ಲ. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಅನೂಜ್‌ನ ಆಸ್ಪತ್ರೆ ದಾಖಲಿಸಿದ್ದರೂ ಪ್ರಯೋಜನವಾಗಲಿಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.