ಸೀತಾರಾಮ ಸೀರಿಯಲ್‌ನ ಸಿಹಿ ಮುದ್ದು ರೀತು ಸಿಂಗ್‌ ಕನ್ನಡದವಳಲ್ಲ, ಭಾಷೆ ಕಲಿತಿದ್ದು ಹೇಗೆ?

Published : Jul 27, 2023, 02:49 PM IST
ಸೀತಾರಾಮ ಸೀರಿಯಲ್‌ನ ಸಿಹಿ ಮುದ್ದು ರೀತು ಸಿಂಗ್‌ ಕನ್ನಡದವಳಲ್ಲ, ಭಾಷೆ ಕಲಿತಿದ್ದು ಹೇಗೆ?

ಸಾರಾಂಶ

ಸೀತಾರಾಮ ಸೀರಿಯಲ್‌ನ ಮುದ್ದು ಕಂದ ಸಿಹಿ. ಸೀರಿಯಲ್ ಇಷ್ಟ ಪಡದವರೂ ಐದು ವರ್ಷದ ಈ ಪುಟ್ಟ ಕಂದಮ್ಮನಿಗಾಗಿ ಸೀತಾರಾಮ ಸೀರಿಯಲ್ ನೋಡ್ತಿದ್ದಾರೆ. ಅಷ್ಟಕ್ಕೂ ಈ ಪುಟಾಣಿ ಸೀತಾರಾಮ ಸೀರಿಯಲ್‌ಗೆ ಬಂದದ್ದು ಹೇಗೆ?

ಜೀ ಕನ್ನಡ ವಾಹಿನಿಯಲ್ಲಿ ಒಂಭತ್ತೂವರೆಗೆ ಪ್ರಸಾರ ಆಗುತ್ತಿರುವ ಸೀರಿಯಲ್ 'ಸೀತಾರಾಮ'. ಇದರಲ್ಲಿ ಸೀತೆ ಮತ್ತು ರಾಮ ನಾಯಕಿ, ನಾಯಕಿ. ಇವರಿಬ್ಬರ ನಡುವೆ ದೇವತೆಯಂತಿರುವ ಪುಟಾಣಿ ಹುಡುಗಿ ಒಂದಿದೆ. ಆ ಪಾತ್ರದ ಹೆಸರು ಸಿಹಿ. ಈ ಪಾತ್ರದ ಹೆಸರಿನ ಹಾಗೆ ಈ ಪುಟಾಣಿ ಮಾತು, ವರ್ತನೆ, ಆಟ, ತುಂಟಾಟ, ಹಠ ಎಲ್ಲವೂ ನೋಡುವವರಿಗೆ ಸಿಹಿಯೇ. ಈ ಪುಟಾಣಿ ಈ ಕಾಲದ ಮಕ್ಕಳ ಪ್ರತಿನಿಧಿ ಅನ್ನೋದಕ್ಕೆ ಒಂದು ಮೇಜರ್ ಅಂಶವನ್ನು ತಂದಿದ್ದಾರೆ. ಅದು ಮತ್ತೇನಲ್ಲ, ಈ ಪಾಪುಗೆ ಶುಗರ್‌ ಇದೆ. ಈ ಕಾಲದ ಬಹಳಷ್ಟು ಮಕ್ಕಳು ಡಯಾಬಿಟಿಕ್ ಆಗಿರೋದು ಎಲ್ಲರಿಗೂ ಗೊತ್ತಿರೋದು. ಅದರಂತೆ ಈ ಪುಟಾಣಿಯೂ ಡಯಾಬಿಟಿಕ್. ಶುಗರ್‌ಗೆ ಈಕೆ ಪ್ರತಿದಿನ ಇಂಜೆಕ್ಷನ್ ತಗೋಬೇಕು. ಹಾಗೆ ಇವಳಿಗೆ ಇಂಜೆಕ್ಷನ್ ಕೊಡುವಾಗ ಇವಳ ಅಮ್ಮ ಸೀತಮ್ಮ ಅಳ್ತಾಳೆ, ಅವಳ ಜೊತೆ ಈ ಸೀರಿಯಲ್ ನೋಡೋ ಪ್ರೇಕ್ಷಕರೂ ಕಣ್ಣೀರು ಹಾಕ್ತಾರೆ. ಆದರೆ ಈ ಪುಟಾಣಿ ಮಾತ್ರ ತಾಯಂತೆ ಅಮ್ಮನನ್ನು ಸಮಾಧಾನ ಮಾಡ್ತಾಳೆ.

ಇಂಥದ್ದೊಂದು ಪಾತ್ರಕ್ಕೆ ಬೇರ್ಯಾವ ಮಗು ಬಂದಿದ್ದರೂ ಇಷ್ಟು ಅದ್ಭುತವಾಗಿ ನಟಿಸುತ್ತಿತ್ತೋ ಇಲ್ವೋ ಗೊತ್ತಿಲ್ಲ. ಬಹುಶಃ ಕಷ್ಟ ಅನಿಸುತ್ತೆ. ಆದರೆ ಈ ಪುಟ್ಟ ಕಲಾವಿದೆಯ ಅಭಿನಯಕ್ಕೆ ಮಾರು ಹೋಗದವೇ ಇಲ್ಲ ಅನ್ನಬಹುದು. ಅಂದಹಾಗೆ ಈ ಪಾತ್ರಕ್ಕೆ ಬಣ್ಣ ಹಚ್ಚಿರೋ ಪುಟಾಣಿ ಇಲ್ಲಿಯವಳಲ್ಲ. ಬದಲಿಗೆ ನೇಪಾಳದವಳು. ಇವರ ಪಟ್ಟ ಫ್ಯಾಮಿಲಿ ಈಗ ಬೆಂಗಳೂರಲ್ಲಿ ವಾಸವಾಗಿದ್ದರೂ ಇವರ ಮೂಲ ಮನೆ ಇರೋದು ನೇಪಾಳದಲ್ಲಿ. ಇಷ್ಟಕ್ಕೂ ಸಿಹಿಯಾಗಿ ಈಕೆ ಸೀತಾರಾಮ ಪ್ರೊಮೋದಲ್ಲಿ ಕಾಣಿಸಿಕೊಂಡಾಗ ಈ ಮಗುವನ್ನ ಎಲ್ಲೋ ನೋಡಿದ್ದಾವಲ್ಲಾ ಅಂದುಕೊಂಡರು ಒಂದಿಷ್ಟು ಪ್ರೇಕ್ಷಕರು. ಮರುಕ್ಷಣ ಅವರಿಗೆ ಹೊಳೆದ ಹೆಸರೇ ರಿತು ಸಿಂಗ್.

ಅಮ್ಮ- ಅಪ್ಪನೇ ಮಕ್ಕಳ ಸರಿ ಮಾಡಲ್ಲ ಅಂದ್ರೆ, ಹಾಸ್ಟೆಲ್‌‌ಗೆ ಆಗುತ್ತಾ? ಭಾಗ್ಯ ಹೇಳಿದ ಕಿವಿಮಾತು!

ಹೌದು, ಜೀ ಕನ್ನಡದಲ್ಲಿ ಪ್ರಸಾರ ಆಗ್ತಿದ್ದ ಡ್ರಾಮಾ ಜ್ಯೂನಿಯರ್ಸ್‌ನಲ್ಲಿ ರಿತೂ ಸಿಂಗ್ ಕನ್ನಡಿಗರ ಗಮನ ಸೆಳೆದಿದ್ದಳು. ರವಿಚಂದ್ರನ್‌ ಅವರನ್ನು ಬಹಳ ಬಹಳ ಇಷ್ಟಪಡ್ತಿದ್ದ ಈ ಪುಟಾಣಿ ಈಗ ಸೀತಾರಾಮದ ಕೇಂದ್ರಬಿಂದು. ಇನ್ನೂ 5 ವರ್ಷ ತುಂಬದ ಈ ಪುಟ್ಟ ಪೋರಿ ನಟನೆಗೆ, ಮುದ್ದು ಮುದ್ದಾದ ಮಾತಿಗೆ ವೀಕ್ಷಕರು ಮನ ಸೋತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅನೇಕರು ಸಿಹಿ ನಟನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ತಾಯಿ ಬಳಿ ದೃಷ್ಟಿ ತೆಗೆಸಿಕೋ ಎಂದು ಕೂಡ ಹೇಳಿದ್ದಾರೆ.

ಅಷ್ಟಕ್ಕೂ ಈ ಪೋರಿ ಈ ಸೀರಿಯಲ್‌ಗೆ ಆಯ್ಕೆ ಆದದ್ದು ಹೇಗೆ ಅನ್ನೋ ಪ್ರಶ್ನೆ ಕೆಲವರದು. ಡ್ರಾಮಾ ಜ್ಯೂನಿಯರ್ಸ್‌ನಲ್ಲಿ ಈಕೆಯ ಪರ್ಫಾಮೆನ್ಸ್‌ ನೋಡಿ ಈಕೆಗೆ ಸೀತಾರಾಮದಲ್ಲಿ ಸಿಹಿ ಪಾತ್ರ ಸಿಕ್ಕಿದೆ ಎನ್ನುವುದು ಬಲ್ಲ ಮೂಲಗಳಿಂದ ತಿಳಿದ ಮಾಹಿತಿ. ಆದರೆ ಸಿಕ್ಕ ಅವಕಾಶವನ್ನು ಮಾತ್ರ ಈ ಪುಟಾಣಿ ಚೆನ್ನಾಗಿ ಬಳಸಿಕೊಂಡಿದ್ದಾಳೆ. ಪಾತ್ರಕ್ಕೆ ಜೀವ ತುಂಬಿದ್ದು ಮಾತ್ರ ಅಲ್ಲ ಆಕೆಯಿಂದಲೇ ಸೀರಿಯಲ್ ಗೆಲ್ಲುತ್ತಿದೆ ಅನ್ನುವಷ್ಟರ ಮಟ್ಟಿಗೆ ಕನ್ನಡಿಗರಿಗೆ ಮೋಡಿ ಮಾಡಿದ್ದಾಳೆ.

ಗಂಡನಿಂದ ದೂರ ಆಗಿರುವ ಸೀತಾಗೆ ಸಿಹಿ ಎಂಬ ಪುಟ್ಟ ಮಗಳಿದ್ದಾಳೆ. ಗಂಡ ಮಾಡಿದ ಸಾಲದ ಜೊತೆಗೆ ಶುಗರ್ ಕಾಯಿಲೆ ಇರುವ ಮಗಳನ್ನು ಸೀತಾ ಸಾಕಬೇಕಿದೆ. ಇನ್ನೊಂದು ಕಡೆ ಚಿಕ್ಕಮ್ಮ ಭಾರ್ಗವಿಯ ಮೋಸ, ಕುತಂತ್ರ ಅರಿಯದೆ ನಾಯಕ ರಾಮ್ ಜೀವನ ನಡೆಸುತ್ತಿದ್ದಾನೆ. ಒಮ್ಮೆ ಪ್ರೀತಿ ಕಳೆದುಕೊಂಡಿರುವ ರಾಮ್ ಮತ್ತೆ ಪ್ರೀತಿ ಹುಡುಕಿಕೊಳ್ಳುತ್ತಾನಾ? ಸಿಹಿ ಸೀತಾ-ರಾಮ್‌ರನ್ನು ಒಂದು ಮಾಡುತ್ತಾಳಾ ಅಂತ ಕಾದು ನೋಡಬೇಕಿದೆ.

ಫ್ರೆಂಡ್ ಫ್ರೆಂಡ್ ಅನ್ನುತ್ತಲೆ ರಾಮನಿಗೆ ಹತ್ತಿರವಾಗಿರುವ ಸಿಹಿ ಸೀತೆಗೂ ಮುದ್ದಿನ ಮಗಳು. ಸದ್ಯಕ್ಕೀಗ ಸೀತೆ ಮತ್ತು ರಾಮ ಅಕ್ಕಪಕ್ಕದ ಸೀಟಲ್ಲೇ ಕೂರ್ತಿದ್ದಾರೆ. ಮಂದೆ ಮನಸ್ಸಲ್ಲೂ ಹತ್ತಿರವಾಗ್ತಾರ ಅನ್ನೋದನ್ನು ನೋಡ್ಬೇಕಿದೆ.

ಮಲ್ಲೇಶ್ವರಂ ಬೀದಿಯಲ್ಲಿ ಚಪ್ಪಲಿ ಖರೀದಿಸಿದ ಲಕ್ಷಣ ಶ್ವೇತಾ; ದುಡ್ಡುಳಿಸಲು ಒಳ್ಳೆ ಉಪಾಯ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Amruthadhaare: ಅಜ್ಜಿ-ಮೊಮ್ಮಕ್ಕಳ ಮಿಲನದ ಅಪೂರ್ವ ಮಿಲನ; ವೀಕ್ಷಕರು ನಿರೀಕ್ಷಿಸುತ್ತಿದ್ದ ಘಳಿಗೆ ಬಂತು, ಆದ್ರೆ...
ಬಿಗ್ ಬಾಸ್ 19 ವಿನ್ನರ್ ಹೆಸರು ಆನ್‌ಲೈನ್‌ನಲ್ಲಿ ಲೀಕ್? ಹರಿದಾಡುತ್ತಿದೆ ಸ್ಕ್ರೀನ್‌ಶಾಟ್