
ಬಿಗ್ಬಾಸ್ ಖ್ಯಾತಿಯ ತನಿಷಾ ಕುಪ್ಪಂಡ ಈಗ ಕಿರುತೆರೆ, ಹಿರಿತೆರೆ ಎಲ್ಲಾ ಕಡೆಯೂ ಫೇಮಸ್ ಆಗಿದ್ದಾರೆ. ಅದರಲ್ಲಿಯೂ ಬಿಗ್ಬಾಸ್ ಇವರಿಗೆ ಸಾಕಷ್ಟು ಖ್ಯಾತಿ ತಂದುಕೊಟ್ಟಿದೆ. ಪೆಂಟಗನ್ ಚಿತ್ರದ ಮೂಲಕ ಎಂಥ ಪಾತ್ರಕ್ಕೂ ಸೈ ಎನ್ನುವಂಥ ನಟನೆ ಮಾಡಿದ್ದಾರೆ ತನಿಷಾ. ಇಲ್ಲಿ ಹಸಿಬಿಸಿ ದೃಶ್ಯದಲ್ಲಿ ಕಾಣಿಸಿಕೊಂಡು ಅಭಿಮಾನಿಗಳಿಗೆ ಕಚಗುಳಿ ನೀಡಿದ್ದಾರೆ. . ‘ಮಂಗಳಗೌರಿ ಮದುವೆ’, ‘ಇಂತಿ ನಿಮ್ಮ ಆಶಾ’ ಮುಂತಾದ ಸೀರಿಯಲ್‌ಗಳಲ್ಲಿ ನಟಿಸುವ ಮೂಲಕ ಮನೆಮಾತಾಗಿರುವ ನಟಿ ಇದೀಗ ತಮ್ಮ ಮುಂಬರುವ ಪೆನ್ಡ್ರೈವ್ ಸಿನಿಮಾದ ತಯಾರಿಯಲ್ಲಿದ್ದಾರೆ. ಇಲ್ಲಿ ಅವರು ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದು, ಅವರನ್ನು ಈ ಪಾತ್ರದಲ್ಲಿ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಇದೀಗ ತನಿಷಾ ಅವರು ರಾಜೇಶ್ ಗೌಡ ಅವರ ಯೂಟ್ಯೂಬ್ ಚಾನೆಲ್ನಲ್ಲಿ ಕೆಲವೊಂದು ವಿಷಯಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಅದರಲ್ಲಿ ಅವರು, ಮದುವೆ, ಮಗುವಿನ ಕನಸಿನ ಬಗ್ಗೆ ಮಾತನಾಡಿದ್ದಾರೆ. ನನಗೆ ಮಗು ಮಾಡಿಕೊಳ್ಳುವ ಆಸೆ ಹುಟ್ಟಿದ್ದು ತುಂಬಾ ಚಿಕ್ಕ ವಯಸ್ಸಿನಲ್ಲಿ. ಕಾಲೇಜಿನಲ್ಲಿ ಇರುವಾಗಲೇ ಈ ಆಸೆ ಹುಟ್ಟಿತ್ತು. ಆಗ ರಿಲೇಷನ್ನಲ್ಲಿಯೂ ಇದ್ದೆ. ನನಗೆ ಮಗು ಮಾಡಿಕೊಳ್ಳುವ ಆಸೆ ಇಂದಿಗೂ ತುಂಬಾ ಇದೆ. ನನಗೆ ಮದುವೆಯಾಗುವ ಆಸೆ ಇದೆ. ಆದರೆ ಅದು ಯಾವಾಗ ಎಂದು ಗೊತ್ತಿಲ್ಲ. ದೇವರು ಯಾವಾಗ ಕೊಡ್ತಾನೋ ಆವಾಗ, ಅದು ಈ ವರ್ಷವೂ ಆಗಿರಬಹುದು, ಮುಂದೆ ಯಾವಾಗ್ಲೂ ಇರಬಹುದು. ಒಟ್ಟಿನಲ್ಲಿ ಮದುವೆಯಾಗಬೇಕು, ಮಕ್ಕಳನ್ನು ಮಾಡಿಕೊಳ್ಳಬೇಕು, ತಾಯ್ತನ ಅನುಭವಿಸಬೇಕು ಎನ್ನುವ ಆಸೆ ಇದೆ ಎಂದು ತನಿಷಾ ತಮ್ಮ ಆಸೆಯನ್ನು ತೆರೆದಿಟ್ಟಿದ್ದಾರೆ.
ಇಂಥ ಹುಡುಗ ಸಿಕ್ರೆ ಮಾತ್ರ ಮದ್ವೆಯಾಗಿ, ಇಲ್ಲದಿದ್ರೆ ಮತ್ತೊಬ್ರನ್ನ ಹುಡುಕಿ ಅಷ್ಟೇ- ಯುವತಿಯರಿಗೆ ತನಿಷಾ ಕಿವಿಮಾತೇನು?
ಮದುವೆ, ಮನೆ, ಸಂಸಾರ ಎನ್ನುವುದು ನನಗೆ ತುಂಬಾ ಖುಷಿ. ಅಮ್ಮಾ ಎನಿಸಿಕೊಳ್ಳಬೇಕು ಎನಿಸುತ್ತಿದೆ. ನನ್ನನ್ನು ನನಗಿಂತಲೂ ಚೆನ್ನಾಗಿ ಯಾರಾದರೂ ನೋಡಿಕೊಳ್ಳುವವರು ಇದ್ದರೆ ನಾನು ಮದುವೆಯಾಗಲು ರೆಡಿ ಇದ್ದೇನೆ. ಗೃಹಿಣಿಯಾಗಿ ಬಾಳಬೇಕು. ಮಕ್ಕಳನ್ನು ಮಾಡಿಕೊಂಡು ಅವರಿಗೆ ರೆಡಿ ಮಾಡಿ ಕಳುಹಿಸಬೇಕು ಎಂದಿರುವ ನಟಿ, ನನ್ನ ಅಮ್ಮನೇ ನನಗೆ ಸರ್ವಸ್ವ. ಆದ್ದರಿಂದ ನನ್ನ ಅಮ್ಮನ ಜೊತೆ ಇರುವವರು ಇದ್ದರೆ ತುಂಬಾ ಒಳ್ಳೆಯದು. ಅದನ್ನು ಬಿಟ್ಟರೆ, ಬೇರೇನೂ ಆಸೆ ಇಲ್ಲ ಎಂದು ಹೇಳಿದ್ದಾರೆ.
ಅಷ್ಟಕ್ಕೂ ತನಿಷಾ ಪ್ರೀತಿ ವಿಚಾರದಲ್ಲಿ ಬಹಳಷ್ಟು ನೋವನ್ನು ಅನುಭವಿಸಿದವರು. ತನಿಷಾ ಒಬ್ಬರನ್ನು ಪ್ರೀತಿಸುತ್ತಿದ್ದರು. ಅದರ ಬಗ್ಗೆಯೂ ಇದೇ ಷೋನಲ್ಲಿ ಹೇಳಿಕೊಂಡಿರೋ ನಟಿ, ಆತನನ್ನು ತುಂಬಾ ಇಷ್ಟಪಟ್ಟಿದ್ದೆ. ಅವರನ್ನೇ ಮದುವೆಯಾಗುವ ಯೋಚನೆ ಮಾಡಿದ್ದೆ ಎಂದಿದ್ದರು. ಆದರೆ, ಅವರಿಬ್ಬರ ನಡುವೆ ಬಿರುಕು ಶುರುವಾದದ್ದು, ಆ ಯುವಕ, 'ನಿನಗೆ ನಾನು ಮುಖ್ಯನಾ ಧಾರಾವಾಹಿ ಮುಖ್ಯನಾ' ಕೇಳಿದಾಗ. ನಟನೆ ಎಂದರೆ ಪಂಚಪ್ರಾಣವಾಗಿದ್ದ ತನಿಷಾ ತನ್ನ ಹುಡುಗನಿಗಾಗಿ ನಟನೆಯನ್ನೂ ಬಿಡಲು ರೆಡಿ ಆಗಿದ್ದರು. ಬಿಟ್ಟರು ಕೂಡ. ನಟನೆ ಬಿಟ್ಟು ಮತ್ತೆ ಹುಡುಗನ ಬಳಿ ಹೋದಾಗ ಮತ್ತೆ ಕಿರಿಕ್ ಶುರುವಾಗಿತ್ತು. ಒಂದು ಹಂತದವರೆಗೆ ಸಹಿಸಿಕೊಂಡ ತನಿಷಾ, ಕೊನೆಗೆ ಯುವಕನ ಜೊತೆ ಬ್ರೇಕಪ್ ಆದರು. ಈಗ ಮತ್ತೆ ಬದುಕು ಕಟ್ಟಿಕೊಳ್ಳುವ ಆಸೆ ಅವರಿಗೆ. ಅದಕ್ಕಾಗಿಯೇ ಈಗ ಮದುವೆ, ಮನೆ, ಕುಟುಂಬದ ಆಸೆಯನ್ನು ನಟಿ ವ್ಯಕ್ತಪಡಿಸಿದ್ದಾರೆ.
ಹಸಿಬಿಸಿ ದೃಶ್ಯದ ಬಳಿಕ 'ಪೆನ್ಡ್ರೈವ್'ನಲ್ಲಿ ಬಿಗ್ಬಾಸ್ ತನಿಷಾ! ಥೋ ಥೋ... ವಿಡಿಯೋ ವೈರಲ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.