ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ, ಸೈಕೋ ಗಂಡನ ಕಿರುಕುಳ ತಾಳಲಾರದೆ ಚಿನ್ನುಮರಿ ಸಮುದ್ರಕ್ಕೆ ಹಾರಿದ್ದಾಳೆ. ಆಕೆ ಬದುಕಿದ್ದಾಳೋ, ಸತ್ತಳೋ ಎಂಬುದು ತಿಳಿದಿಲ್ಲ. ಆದರೆ ಜಯಂತ್ ಹುಚ್ಚನಂತೆ ವರ್ತಿಸುತ್ತಿದ್ದಾನೆ.
ಲಕ್ಷ್ಮೀ ನಿವಾಸ ಧಾರವಾಹಿಯಲ್ಲಿ ಗಂಡ ಸೈಕೋ ಜಯಂತ್‌ನ ಕಿರುಕುಳ ಹಾಗೂ ಅತಿಯಾದ ಪ್ರೀತಿಯಿಂದಾಗಿ ಭಾರೀ ನೋವು ಅನುಭವಿಸಿದ ಜಾಹ್ನವಿ ಅಲಿಯಾಸ್ ಚಿನ್ನುಮರಿಯನ್ನು ಶ್ರೀಲಂಕಾಗೆ ಕರೆದುಕೊಂಡು ಹೋಗಿದ್ದು, ಗಂಡನ ಅತಿಯಾದ ಪ್ರೀತಿ ಸಹಿಸಿಕೊಳ್ಳಲಾಗದೇ ಸಮುದ್ರಕ್ಕೆ ಹಾರಿದ್ದಾಳೆ. ಇದೀಗ ಜಾಹ್ನವಿ ಬದುಕಿದ್ದಾಳಾ? ಸತ್ತಿದ್ದಾಳಾ? ಎಂಬ ಕ್ಲಾರಿಟಿ ಸಿಕ್ಕಿಲ್ಲ. ಆದರೆ, ಅಪ್ಪ-ಅಮ್ಮನಿಗೆ ಸಾರಿ ಹೇಳಿ ಸಮುದ್ರಕ್ಕೆ ಜಿಗಿದ ಚಿನ್ನುಮರಿ ಸತ್ತಿದ್ದಾಳೆಂದು ಸೈಕೋ ಜಯಂತ ಕಣ್ಣೀರಿಟ್ಟು ಗೋಳಾಡುತ್ತಿದ್ದಾನೆ. ಹುಚ್ಚನಂತೆ ಆಡುತ್ತಿದ್ದಾನೆ.
ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ (Lakshmi Nivasa) ಧಾರಾವಾಹಿ ಇದೀಗ ರೋಚಕತೆ ಪಡೆದುಕೊಂಡಿದೆ. ಹೆಂಡತಿಗೆ ಪ್ರೀತಿ ಕೊಡುವುದಾಗಿ ಅತ್ಯಂತ ಕ್ರೂರವಾಗಿ ಕಿರುಕುಳ ಕೊಡುತ್ತಿದ್ದ ಸೈಕೋ ಗಂಡ ಜಯಂತನಿಗೆ ಹೇಗಾದರೂ ಮಾಡಿ ಬುದ್ಧಿ ಕಲಿಸಬೇಕೆಂದು ಜಾಹ್ನವಿ ತುಂಬಾ ಪ್ರಯತ್ನ ಮಾಡುತ್ತಿರುತ್ತಾಳೆ. ಆದರೆ, ಈ ನಡುವೆ ಹೆಂಡತಿಯ ಕೋಪ ತಣಿಸಲು ಗಂಡ ಜಯಂತ್ ಶ್ರೀಲಂಕಾ ಪ್ರವಾಸಕ್ಕೆ ಕರೆದುಕೊಂಡು ಹೋಗಿರುತ್ತಾನೆ.
ಇದೇ ಜಾಗಕ್ಕೆ ಜಾಹ್ನವಿ ಅಕ್ಕ ಭಾವನಾ ಹಾಗೂ ಆಕೆ ಗಂಡ ಸಿದ್ದೇಗೌಡ ಕೂಡ ಬಂದಿರುತ್ತಾರೆ. ಅವರನ್ನು ಮಾತನಾಡಿಸಿ ಖುಷಿಯಾದರೂ ಅವರೊಂದಿಗೆ ಇರಲು ಗಂಡ ಬಿಡುವುದಿಲ್ಲ ಎಂದರಿತು ಗಂಡನೊಂದಿಗೆ ಹೋಗುತ್ತಾಳೆ. ಪ್ರವಾಸದಲ್ಲಿ ಗಂಡನ ಮೇಲೆ ಮುನಿಸಿಕೊಂಡಿದ್ದ ಜಾಹ್ನವಿಗೆ ಅಣ್ಣ ಮೂಗ ವೆಂಕಿಯ ಜೀವನದ ಸತ್ಯವನ್ನು ಸಚಿನ್ ಹೇಳುತ್ತಾನೆ. ಆಗ ಗಂಡನ ಮೇಲೆ ಮತ್ತಷ್ಟು ಅಸಹ್ಯ ಹುಟ್ಟುತ್ತದೆ. ಗಂಡನ ವಿಕೃತಿಗೆ ಕೊನೆ ಹಾಡಬೇಕು ಎಂದು ನಿರ್ಧರಿಸುತ್ತಾಳೆ. ಹೀಗಾಗಿ, ಗಂಡನೊಂದಿಗೆ ರಾಜಿಯಾದಂತೆ ಕ್ಷಮೆ ಕೇಳಿ ನಗುತ್ತಲೇ ನಾಟಕ ಆರಂಭಿಸಿದ ಜಾಹ್ನವಿ ಪ್ಲ್ಯಾನ್ ಮಾಡಿ ಗಂಡನ ಜೊತೆಗೆ ಬೋಟಿಂಗ್ ಔಟ್ ಕರೆದುಕೊಂಡು ಹೋಗುತ್ತಾಳೆ.
ಇದನ್ನೂ ಓದಿ: ಜಾಹ್ನವಿ ಜಾಲದಲ್ಲಿ ಜಯಂತ್ ಬಂಧಿ.., ಗಂಡನ ಮೇಲಿನ ಕೋಪಕ್ಕೆ ಒಂದು ಪ್ರಾಣನೇ ಹೋಗುತ್ತಾ?
ಸಮುದ್ರದ ಮಧ್ಯದಲ್ಲಿ ಬೋಟ್‌ನ ಮಧ್ಯ ಭಾಗ ಗಂಡನನ್ನು ಚೇರಿನಲ್ಲಿ ಕೂರಿಸಿ ಕಟ್ಟಿಹಾಕಿ, ತನ್ನ ಅಳಲನ್ನು ತೋಡಿಕೊಳ್ಳುತ್ತಾಳೆ. ನೀವು ನನ್ನನ್ನು ಹೀಗೆಯೇ ಪ್ರೀತಿಯಲ್ಲಿ ಕಟ್ಟಿ ಹಾಕಿದ್ದೀರಿ. ಪ್ರೀತಿ ಅಂದ್ರೆ ಹೂವು ಅಂದ್ಕೊಂಡಿದ್ದೆ, ಅದರಲ್ಲಿ ಅಷ್ಟು ಮುಳ್ಳು ಇರುತ್ತೆ ಅಂತ ಗೊತ್ತೇ ಇರಲಿಲ್ಲ ಎನ್ನುತ್ತಾಳೆ. ಆಗ ಚಾಕು ಹಿಡಿದು ಗಂಡನಿಗೆ ಚುಚ್ಚಿ ಕೊಲೆ ಮಾಡಲು ಮುಂದಾಗುತ್ತಾಳೆ. ಆದರೆ, ಆಕೆಯ ಮನಸ್ಸೊಪ್ಪದೇ ಗಂಡನನ್ನು ಬಿಟ್ಟು ತಾನೇ ಬೋಟ್‌ನ ತುದಿಗೆ ಹೋಗುತ್ತಾಳೆ. ಅಲ್ಲಿ ಅಪ್ಪ-ಅಮ್ಮ ದಯವಿಟ್ಟು ಕ್ಷಮಿಸಿ ಎಂದು ಕೂಗುತ್ತಾ, ಇವರ ಹುಚ್ಚು ಪ್ರೀತಿ ಸಹಿಸಿಕೊಳ್ಳಲಾಗುತ್ತಿಲ್ಲವೆಂದು ಹೇಳುತ್ತಾ ಸಮುದ್ರಕ್ಕೆ ಹಾರಿ ಪ್ರಾಣ ಬಿಟ್ಟಿದ್ದಾಳೆ.
ಸಮುದ್ರದಲ್ಲಿ ಬಿದ್ದ ಬಿದ್ದ ಜಾಹ್ನವಿಯನ್ನು ಯಾರಾದರೂ ಕಾಪಾಡಿದರೇ ಅಥವಾ ನೀರಿನ ಪಾಲಾದಳೇ ಎಂಬುದು ಗೊತ್ತಾಗಿಲ್ಲ. ಆದರೆ, ಚಿನ್ನುಮರಿ ಸಮುದ್ರಕ್ಕೆ ಬಿದ್ದ ನಂತರವೂ ಚೇರಿನಲ್ಲಿ ಬಂಧಿಯಾಗಿದ್ದ ಜಯಂತ್ ಹೆಂಡತಿಯನ್ನು ಕಾಪಾಡಲಾಗದೇ ಅಸಹಾಯಕನಾಗುತ್ತಾನೆ. ಬೋಟ್ ತುಂಬಾ ದೂರ ಚಲಿಸುತ್ತದೆ. ಇದೀಗ ಚಿನ್ನುಮರಿ ಸಮುದ್ರಕ್ಕೆ ಬಿದ್ದು ಸತ್ತು ಹೋಗಿದ್ದಾಳೆ ಎಂದು ಜಯಂತ್ ಗೋಳಾಡುತ್ತಾ ಹುಚ್ಚನಂತಾಗಿದ್ದಾನೆ. ಸಮುದ್ರ ತೀರದ ಮರಳಿನ ಮೇಲೆ ಚಿನ್ನುಮರಿ ಎಂದು ಬರೆಯುತ್ತಾ ಹುಚ್ಚನಂತೆ ವರ್ತಿಸುತ್ತಿದ್ದಾನೆ. ಹಾಗಾದರೆ, ಜಾಹ್ನವಿ ಕಥೆ ಮುಗೀತಾ, ಕಾಲೇಜಿನಲ್ಲಿ ಪ್ರೀತಿ ಮಾಡುತ್ತಿದ್ದ ವಿಶ್ವನ ಕಥೆ ಏನಾಗುತ್ತದೆ? ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: ಅಂದ-ಚೆಂದ, ಆಸ್ತಿ, ಗುಣ ಇದೆ ಅಂತ ಮದುವೆ ಆಗೋಕೆ ಒಪ್ತೀರಾ? ಸಂಗಾತಿಯಲ್ಲಿ ಈ ಚಟ ಇರೋದು ಗೊತ್ತೇ ಆಗಲ್ಲ! ಹುಷಾರ್