Lakshmi Nivasa Serial: ಎಣ್ಣೆ ಬಾಟಲ್ ಓಪನ್‌ ಮಾಡೇಬಿಟ್ರು ಲಕ್ಷ್ಮೀ ನಿವಾಸ ಮೆಂಬರ್ಸ್, ಜಯಂತ್ ಇಲ್ಲೂ ಬಿಡಲ್ವಾ ಜಾಹ್ನವೀನ!

Published : Sep 06, 2024, 05:05 PM ISTUpdated : Sep 06, 2024, 05:18 PM IST
Lakshmi Nivasa Serial: ಎಣ್ಣೆ ಬಾಟಲ್ ಓಪನ್‌ ಮಾಡೇಬಿಟ್ರು ಲಕ್ಷ್ಮೀ ನಿವಾಸ ಮೆಂಬರ್ಸ್, ಜಯಂತ್ ಇಲ್ಲೂ ಬಿಡಲ್ವಾ ಜಾಹ್ನವೀನ!

ಸಾರಾಂಶ

ಲಕ್ಷ್ಮೀ ನಿವಾಸ ಸೀರಿಯಲ್‌ ಮೆಂಬರ್ಸ್‌ ಬಾಟಲ್‌ ಓಪನ್‌ ಮಾಡಿ ಫುಲ್‌ ಕಿಕ್‌ನಲ್ಲಿದ್ದಾರೆ, ಇಲ್ಲಾದ್ರೂ ಜಾಹ್ನವಿನ ಫ್ರೀಯಾಗಿ ಬಿಟ್ಬಿಡಪ್ಪಾ ಜಯಂತಾ ಅಂತ ನೆಟ್ಟಿಗರು ಕಾಲೆಳೀತಿದ್ದಾರೆ..  

ಜೀ ಕನ್ನಡದ ಲಕ್ಷ್ಮೀ ನಿವಾಸ ಸೀರಿಯಲ್ ಈಗ ಸಖತ್ ಫೇಮಸ್. ಇದು ಸದ್ಯ ಕನ್ನಡ ಕಿರುತೆರೆಯ ನಂಬರ್‌ 1 ಧಾರಾವಾಹಿಯಾಗಿದೆ. ಒಂದು ಗಂಟೆಯ ಕಾಲ ಪ್ರಸಾರ ಕಾಣುವ ಲಕ್ಷ್ಮೀ ನಿವಾಸ ಸೀರಿಯಲ್‌ನಲ್ಲಿ ಐದಾರು ಕಥೆಗಳು ಕವಲುಗಳಾಗಿ ವೀಕ್ಷಕನಿಗೆ ನೋಡಲು ಸಿಗುತ್ತಿದೆ. ಪ್ರತಿ ಕಥೆಯನ್ನೂ ಅಷ್ಟೇ ರೋಚಕವಾಗಿಯೇ ನಿರ್ದೇಶಕರು ಕಟ್ಟಿಕೊಡುತ್ತಿದ್ದಾರೆ. ಇಂತಿಪ್ಪ ಸೀರಿಯಲ್‌ ಈ ವಾರ ಬರೋಬ್ಬರಿ 9.5 ಟಿಆರ್‌ಪಿ ಪಡೆದು ಮೊದಲ ಸ್ಥಾನದಲ್ಲಿಯೇ ಮುಂದುವರಿದಿದೆ. ಈ ಸೀರಿಯಲ್‌ ಅಭಿಮಾನಿಗಳು ಶುಭ ಸಮಾಚಾರ ಕೇಳಿ ಖುಷ್ ಖುಷಿಯಾಗಿದ್ದಾರೆ. ಆದರೆ ಈ ಖುಷಿಯನ್ನು ಹಾಗೆ ಬಿಡೋದಕ್ಕಾಗುತ್ತಾ, ಇಲ್ಲ ತಾನೇ? ಅದಕ್ಕಾಗಿ ಇಡೀ ಸೀರಿಯಲ್‌ ಟೀಮ್‌ ಎಣ್ಣೆ ಬಾಟಲ್‌ಗೆ ಜೈ ಅಂದಿದೆ. ಟೀಮ್‌ ಮೆಂಬರ್ಸ್‌ ಎಲ್ಲರೂ ಒಟ್ಟಾಗಿ ಎಣ್ಣೆ ಬಾಟಲ್ ಓಪನ್ ಮಾಡಿದ್ದಾರೆ. ಅಷ್ಟೇ ಅಲ್ಲ, ಅದಕ್ಕೆ ಸರಿಯಾಗಿ ಹಾಡೂ ಹೇಳಿ ಮಸ್ತ್‌ ಮಜಾ ಮಾಡಿದ್ದಾರೆ. ವೆಂಕಿ ಮತ್ತು ಸಂತೋಷ್‌ ಒಟ್ಟೊಟ್ಟಿಗೇ ಸಂಜೆ ಹೊತ್ತಿನ ಸಂಕಟವನ್ನ ತೋಡ್ಕೊಂಡಿದ್ದಾರೆ. 'ಏಳೂವರೆಗೇ ತುಟಿ ಒಣಗತ್ತೆ ಏನು ಮಾಡಾಣ..' ಅಂತ ವರಾತ ತೆಗ್ದಿದ್ದಾರೆ. ಅವರ ಕಷ್ಟ ಅವರದ್ದು ಅಂತ ಅವ್ರನ್ನು ಅವ್ರ ಪಾಡಿಗೆ ಬಿಡಬೇಕು ತಾನೇ ಆದರೆ ಇವರಿಬ್ಬರ ನೋವಿಗೆ ಪರಿಹಾರವನ್ನ ವೀಣಕ್ಕ ಮತ್ತು ಜಾಹ್ನವಿ ಕೊಟ್ಟಿದ್ದಾರೆ. 'ಹಾಳು ಎಣ್ಣೆ ಚಟ ಬಿಡಬೇಕು, ಬನ್ನಿ ಕುಡಿಯಾಣ' ಅಂದುಬಿಟ್ಟಿದ್ದಾರೆ. ಆಮೇಲಿನ ಕಥೆ ಇನ್ನೂ ಇಂಟರೆಸ್ಟಿಂಗ್‌!

 

ಅಂದಹಾಗೆ ಈ ಸೀರಿಯಲ್‌ನಲ್ಲಿ ಸದ್ಯ ಜಯಂತ್ ಮತ್ತು ಜಾಹ್ನವಿ ಮನೆಗೆ ಅಕ್ಕ ಭಾವನಾ ತನ್ನ ಮಗಳು ಖುಷಿ ಜೊತೆಗೆ ಬಂದಿದ್ದವಳು ವಾಪಾಸ್ ಹೋಗಿದ್ದಾಳೆ. ಇದರಿಂದ ಜಯಂತ್‌ಗೆ ಒಳಗೊಳಗೆ ನಿರಾಳವಾಗಿದೆ. ಇವರಿಬ್ಬರಿಗೆ ಭರ್ಜರಿ ಗಿಫ್ಟ್‌ ಕೊಟ್ಟು, ತಾನು ಭಾರೀ ಒಳ್ಳೆಯವನು ಅನ್ನೋ ಥರ ನಟನೆ ಮಾಡಿ ಅವರನ್ನು ಕಳಿಸಿಕೊಟ್ಟಿದ್ದಾನೆ. ಇದಕ್ಕೂ ಮೊದಲು ಇವರಿಬ್ಬರು ಬಂದಿದ್ದು  ಜಯಂತ್‌ಗೆ ಇರಿಟೇಟ್ ಆಗಿತ್ತು. ಅದನ್ನು ಹೇಗೋ ಕಷ್ಟಪಟ್ಟು ಸಹಿಸಿಕೊಂಡಿದ್ದ. ಆದರೆ ಖುಷಿ ಜಾಹ್ನವಿಯನ್ನು ತಬ್ಬಿ ಮಲಗಿದ್ದು ಅವನೊಳಗಿನ ಸೈಕೋನನ್ನು ಬಡಿದೆಬ್ಬಿಸಿತ್ತು. ಅದಕ್ಕಾಗಿ ಅವನ ಸಿಹಿ ಮಾತಿನಿಂದ ಖುಷಿಯನ್ನು ಮರಳು ಮಾಡಿ ತನ್ನ ಆಫೀಸಿಗೆ ಕರೆದುಕೊಂಡು ಹೊರಟಿದ್ದ. ಜೊತೆಗೆ ತನ್ನ ಹೆಂಡತಿಯನ್ನು ಮುಟ್ಟಿದ ನಿನ್ನನ್ನು ಸುಮ್ನೆ ಬಿಡಲ್ಲ ಅಂತ ಹಲ್ಲು ಕಡಿದಿದ್ದ. ಇವರ ಈ ವರ್ತನೆ ವೀಕ್ಷಕರಲ್ಲಿ ಭಯ ಹುಟ್ಟಿಸಿತ್ತು. ಈ ಹುಚ್ಚನಿಂದ ಪುಟ್ಟ ಮಗುವನ್ನು ಕಾಪಾಡಪ್ಪ ದೇವ್ರೇ ಅಂತ ಅಂತ ಬೇಡ್ಕೊಂಡಿದ್ರು. ಆದರೆ ಸದ್ಯ ಸೇಫಾಗಿ ಕರ್ಕೊಂಡು ಬಂದು ಬಿಟ್ಟಿದ್ದು ವೀಕ್ಷಕರಿಗೂ ನಿರಾಳವಾಗಿತ್ತು. 

ದಿವ್ಯಾ ವಸಂತ 'ಗೌರಿ-ಗಣೇಶ' ಹಬ್ಬಕ್ಕೆ ವಿಶ್ ಮಾಡಿ, ವೀಡಿಯೋದಲ್ಲಿ ಹೇಳಿದ್ದೇನು ನೋಡಿ!

ಆದರೂ ಈ ಸೀರಿಯಲ್‌ ವೀಕ್ಷಕರಿಗೆ ಸೈಕೋ ಜಯಂತ್‌ ಮೇಲೆ ಅದೇನೋ ಅಟ್ರಾಕ್ಷನ್‌. ಆ ಪಾತ್ರವನ್ನು ಬೈಕೊಂಡು ಬೈಕೊಂಡೇ ಮೆಚ್ಕೊಳ್ತಿದ್ದಾರೆ. ಈ ಕಾರಣಕ್ಕೋ ಏನೋ ಈ ಸೀರಿಯಲ್‌ ಕನ್ನಡ ಕಿರುತೆರೆಯಲ್ಲೇ ನಂ.೧ ಆಗಿದೆ. ಇರಲಿ, ಈಗ ಈ ಸೀರಿಯಲ್‌ ಟೀಮ್‌ ಎಲ್ಲೋ ಔಟಿಂಗ್ ಹೊರಟಿದೆ. ಆ ವೇಳೆ ಟೀಮ್‌ ಮೆಂಬರ್ಸ್‌ ಎಲ್ಲ ಸಖತ್ ಮಜಾ ಮಾಡಿದ್ದಾರೆ. ಎಣ್ಣೆ ಬಾಟಲ್ ಓಪನ್ ಹಾಡು ಹಾಡ್ಕೊಂಡು ರೀಲ್ಸ್ ಮಾಡಿದ್ದಾರೆ. ಇಲ್ಲೂ ಜಯಂತ್ ಪಾತ್ರ ಮಾಡೋ ಆರ್ಟಿಸ್ಟ್ ದೀಪಕ್‌ ಸುಬ್ರಹ್ಮಣ್ಯ ಅವರ ಕಾಲೆಳೆದಿದ್ದಾರೆ ಫ್ಯಾನ್ಸ್. 'ಜಯಂತಾ, ಇಲ್ಲಾದ್ರೂ ನಿನ್ನ ಚಿನ್ನೂಮರಿನ ಹಾಯಾಗಿರೋದಕ್ಕೆ ಬಿಟ್ಬಿಡಪ್ಪಾ.. ' ಅಂತ ಸಾಕಷ್ಟು ಜನ ಕಾಮಿಡಿ ಮಾಡಿದ್ದಾರೆ. ಹೈಯೆಸ್ಟ್ ಕಾಮೆಂಟ್‌ ಬಂದಿರೋದೂ ಸೈಕೋ ಜಯಂತ್‌ಗೇ ಅನ್ನೋದು ವಿಶೇಷ.

ಬಿಗ್ ಬಾಸ್ ಆರಂಭಕ್ಕೂ ಮುನ್ನವೇ ಮತ್ತೆ ಕೈಬಳೆ ಎತ್ತಿ ತೋರಿಸಿದ ಸಂಗೀತಾ ಶೃಂಗೇರಿ!
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?
Naa Ninna Bidalaare: ಗಂಡ ಬೇರೊಬ್ಬಳನ್ನು ಅಪ್ಪಿಕೊಂಡ್ರೆ ಖುಷಿ ಪಡುವ ಜಗತ್ತಿನ ಏಕೈಕ ಹೆಂಡ್ತಿ ಈಕೆ!