
Lakshmi Nivasa: ಮಗಳನ್ನು ನೋಡಲು ಶ್ರೀನಿವಾಸ್, ಲಕ್ಷ್ಮೀ, ವೆಂಕಿ ಮತ್ತು ಚೆಲುವಿ ಮನೆಗೆ ಬಂದಿದ್ದಾರೆ. ಜಾಹ್ನವಿಯನ್ನು ಸ್ಕ್ಯಾನಿಂಗ್ ಕರೆದುಕೊಂಡು ಹೋಗಿದ್ದೆ ಎಂದು ಜಯಂತ್ ಸುಳ್ಳು ಹೇಳಿದ್ದಾನೆ. ಪತ್ನಿ ಜಾಹ್ನವಿಗೆ ಅಬಾರ್ಷನ್ ಆಗಿರೋ ವಿಷಯ ಹೇಳಿದ್ರೆ ಏನು ಆಗುತ್ತೆ ಆತಂಕ ಜಯಂತ್‌ಗೆ ಉಂಟಾಗಿದೆ. ಜಾಹ್ನವಿಗೆ ರೆಸ್ಟ್ ಬೇಕೆಂದು ವೈದ್ಯರು ಹೇಳಿದರೂ ಜಯಂತ್ ಬಲವಂತವಾಗಿ ಪತ್ನಿಯನ್ನು ಡಿಸ್ಚಾರ್ಜ್ ಮಾಡಿಸಿಕೊಂಡು ಮನೆಗೆ ಬಂದಿದ್ದಾನೆ. ಆದ್ರ ಎಲ್ಲಿ ತನ್ನ ಚಿನ್ನುಮರಿ ತಂದೆ-ತಾಯಿ ಬಳಿ ಎಲ್ಲಾ ವಿಷಯವನ್ನು ಹೇಳ್ತಾಳೆ ಅಂತ ಜಯಂತ್‌ಗೆ ನಡುಕ ಶುರುವಾಗಿದೆ. ಮಗಳ ಮುಖ ನೋಡುತ್ತಲೇ ಆಕೆ ಆರೋಗ್ಯ ಸರಿ ಇಲ್ಲ ಅನ್ನೋದು ತಾಯಿ ಲಕ್ಷ್ಮೀಗೆ ಗೊತ್ತಾಗಿದೆ. ಚೆಲುವಿ ಮತ್ತು ಲಕ್ಷ್ಮೀ ಕೇಳಿದ ಒಂದು ಪ್ರಶ್ನೆಗೆ ಜಯಂತ್‌ನ ಹೃದಯ ಪುಕ ಪುಕ ಅಂತಿದೆ.
ಮನೆಗೆ ಬರುತ್ತಿದ್ದಂತೆ ಅಪ್ಪ-ಅಮ್ಮ, ಅಣ್ಣ-ಅತ್ತಿಗೆಯನ್ನು ನೋಡಿದ ಕೂಡಲೇ ಜಾಹ್ನವಿ ಎಲ್ಲರನ್ನು ತಬ್ಬಿಕೊಂಡು ಖುಷಿಯಾಗಿದ್ದಾಳೆ. ಡಾಕ್ಟರ್ ಹೇಳದ್ರು ಮಗಳೇ, ನಿನ್ನನ್ನು ನೋಡ್ತಿದ್ದರೆ ತುಂಬಾ ಸುಸ್ತಾದಂತೆ ಕಾಣಿಸುತ್ತಿದೆ ಎಂದು ಲಕ್ಷ್ಮಿ ಮಗಳಿಗೆ ಪ್ರಶ್ನೆ ಮಾಡುತ್ತಾಳೆ. ಇದಕ್ಕೆ ಏನು ತೊಂದರೆ ಆಗಿಲ್ಲ, ಚೆನ್ನಾಗಿದ್ದೇನೆ, ಜನರಲ್ ಚೆಕಪ್‌ಗೆ ಹೋಗಿದ್ದೆ ಎಂದು ಗರ್ಭಪಾತ ಆಗಿರುವ ವಿಷಯವನ್ನು ಪೋಷಕರಿಂದ ಮರೆ ಮಾಡಿದ್ದಾಳೆ ಜಾಹ್ನವಿ. ಪತ್ನಿಯ ಮಾತು ಕೇಳುತ್ತಿದ್ದಂತೆ ಜಯಂತ್ ಮುಖದಲ್ಲಿನ ಭಯ ಕಡಿಮೆಯಾಗಿದೆ. ಮುಖ ತುಂಬಾನೇ ಸಪ್ಪೆಯಾಗಿದೆ. ನಗುವೇ ಇಲ್ಲವಲ್ಲಾ ಏನಾಯ್ತು ಅಂತ ಶ್ರೀನಿವಾಸ್ ಸಹ ಅನುಮಾನ ವ್ಯಕ್ತಪಡಿಸಿದ್ದಾರೆ.
ಮಗು ಬೆಳವಣಿಗೆ ಹೇಗಿದೆ? ಸ್ಕ್ಯಾನಿಂಗ್ ಮಾಡಿಸಿದ್ದೀರಿ ಅಲ್ಲವಾ? ಅದರ ರಿಪೋರ್ಟ್ ಕೊಡಿ. ನಾವು ಮಗುವಿನ ಬೆಳವಣಿಗೆ ನೋಡುತ್ತೇವೆ ನಮಗೆ ಸ್ಕ್ಯಾನಿಂಗ್ ರಿಪೋರ್ಟ್ ಕೊಡಿ ಎಂದು ಚೆಲುವಿ ಕೇಳಿದ್ದಾಳೆ. ಆಗ ಲಕ್ಷ್ಮೀ ಸಹ ಸ್ಕ್ಯಾನಿಂಗ್ ರಿಪೋರ್ಟ್ ಕೊಡು ಎಂದು ಮಗಳಿಗೆ ಕೇಳುತ್ತಾಳೆ. ಸ್ಕ್ಯಾನಿಂಗ್ ರಿಪೋರ್ಟ್ ಕೇಳಿದ ಕೂಡಲೇ ಜಾಹ್ನವಿಗೆ ಏನು ಹೇಳಬೇಕೆಂದು ಗೊತ್ತಾಗದೇ ಸುಮ್ಮನೇ ನಿಂತುಕೊಳ್ಳುತ್ತಾಳೆ. ಈ ವೇಳೆ ಮಧ್ಯ ಪ್ರವೇಶಿಸಿದ ಜಯಂತ್, ಸ್ಕ್ಯಾನಿಂಗ್ ರಿಪೋರ್ಟ್ ಇನ್ನು ಕೊಟ್ಟಿಲ್ಲ. ನಾಳೆ ಕೊಡ್ತೀನಿ ಅಂತ ಹೇಳಿದ್ದಾರೆ. ಸಿಕ್ಕಿದ ತಕ್ಷಣ ನಿಮಗೆ ತಂದು ತೋರಿಸುತ್ತೇನೆ ಎಂದು ಮತ್ತೊಂದು ಸುಳ್ಳು ಹೇಳಿದ್ದಾನೆ.
ಮಗಳಿಗೆ ಅಬಾರ್ಷನ್ ಆಗಿರೋ ವಿಷಯ ತಿಳಿಯದ ಮುಗ್ಧೆ ಲಕ್ಷ್ಮೀ, ನಿಶ್ಯಕ್ತಿ ಹೋಗಬೇಕಾದ್ರೆ ದಿನಕ್ಕೆ ಎರಡು ಹೊತ್ತು ಹಾಲು ಕುಡಿಯಬೇಕು. ಹಾಲು ಕುಡಿದ್ರೆ ಮೂಳೆಗಳಿಗೆ ಶಕ್ತಿ ಬುರತ್ತದೆ ಎಂದು ಸಲಹೆ ನೀಡಿದ್ದಾಳೆ. ಅಪ್ಪ ಶ್ರೀನಿವಾಸ್ ಸಹ, ಮನೆಯಲ್ಲಿ ಅಜ್ಜಿ ಇರೋದರಿಂದ ಸ್ವಲ್ಪ ಕೆಲಸ ಜಾಸ್ತಿ ಇರುತ್ತೆ. ಮೆಟ್ಟಿಲು ಹತ್ತೋದು ಮತ್ತು ಇಳಿಯೋದನ್ನು ಕಡಿಮೆ ಮಾಡು ಎಂದು ಮಗಳಿಗೆ ಹೇಳಿದ್ದಾನೆ. ಮಗು ಬೆಳವಣಿಗೆ ಚೆನ್ನಾಗಿದೆ ಅಲ್ಲವಾ? ಯಾವುದೇ ತೊಂದರೆ ಇಲ್ಲಾ ಎಂದು ತಾಯಿ ಕೇಳಿದರೂ ಜಾನು ಯಾವುದೇ ಉತ್ತರ ನೀಡಿಲ್ಲ.
ಇದನ್ನೂ ಓದಿ: ಬೆಸ್ಕಾಂ ಕೃಪೆಯಿಂದ ಸಬ್ಬುಗೆ ಸಿಕ್ತು ಶ್ರಾವಣಿಯ ಸಿಹಿ ಚುಂಬನ; ವಿಶಾಲಕ್ಷಿ ಶಾಕ್, ಪದ್ಮನಾಭ್ ಫುಲ್ ಖುಷ್!
ಇಂದು ಬಿಡುಗಡೆಯಾದ ಮತ್ತೊಂದು ಕಿರು ಪ್ರೋಮೋದಲ್ಲಿ ಜಯಂತ್‌ನ ಚಿನ್ನುಮರಿ ಉಗ್ರಾವತಾರ ತಾಳಿರೋದನ್ನು ನೋಡಬಹುದು. ಇನ್ಮುಂದೆ ನಮ್ಮಿಬ್ಬರ ಮಧ್ಯೆ ಯಾವುದೇ ಮಾತು ಬೇಡ ಎಂದು ಖಡಕ್ ಆಗಿ ಹೇಳಿದ್ದಾಳೆ. ಜಾನು ಮಾತು ಕೇಳಿ ಒಂದು ಕ್ಷಣ ಜಯಂತ್ ಶಾಕ್ ಆಗಿದ್ದಾನೆ. ಮತ್ತೊಂದೆಡೆ ಜಾನು ಗೆಳೆಯ ವಿಶ್ವ ಕಮ್ ಬ್ಯಾಕ್ ಮಾಡಿರೋದು ವೀಕ್ಷಕರಿಗೆ ಸಂತೋಷವನ್ನುಂಟು ಮಾಡಿದೆ. ಮುಂದೆ ಜಾಹ್ನವಿ, ಜಯಂತ್ ಮತ್ತು ವಿಶ್ವನ ಸ್ಟೋರಿ ತ್ರಿಕೋನ ಪ್ರೇಮಕಥೆಯಾಗಿ ಬದಲಾಗಬಹುದು ಎಂದು ವೀಕ್ಷಕರು ಊಹಿಸಿದ್ದಾರೆ.
ಇದನ್ನೂ ಓದಿ: ಚಿನ್ನುಮರಿ ಬಾಳಿಗೆ ಬೆಳಕಾಗ್ತಾನಾ ಗೆಳೆಯ ವಿಶ್ವ? ಸೈಕೋ ಜಯಂತ್‌ಗೆ ಕಾದಿದೆ ಮಾರಿಹಬ್ಬ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.