
ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ (Lakshmi Nivasa) ಗಂಡನ ಸೈಕೋ ಕೃತ್ಯಗಳಿಂದಾಗಿ ತನ್ನ ಮಗುವನ್ನೆ ಕಳೆದುಕೊಂಡಿರುವ ಚಿನ್ನುಮರಿ ಜಾಹ್ನವಿ, ಜಯಂತ್ ವಿರುದ್ಧ ತಿರುಗಿ ಬಿದ್ದಿದ್ದಾಳೆ. ಇನ್ನು ಮುಂದೆ ತನಗೂ, ಗಂಡನಿಗೂ ಯಾವುದೇ ಸಂಬಂಧ್ ಇಲ್ಲ ಎಂದು ಸಹ ಹೇಳಿದ್ದಾಳೆ ಜಾನ್ವಿ. ಹೆಂಡ್ತಿಯ ಈ ವರ್ತನೆ ನೋಡಿ ಜಯಂತ್ ಕನ್ಫ್ಯೂಸ್ ಆಗಿದ್ದಾನೆ. ತನ್ನ ಪ್ರೀತಿಯ ಚಿನ್ನುಮರಿ (Chinnumari) ಈ ರೀತಿ ಆಡುತ್ತಿರುವುದನ್ನು ನೋಡಿ ಜಯಂತ್ ಶಾಕ್ ಆಗಿದ್ದಾನೆ. ತಾನು ಇಷ್ಟ ಪಟ್ಟಿದ್ದ ಚಿನ್ನುಮರಿನೇ ಈ ರೀತಿ ಮಾಡುತ್ತಿದ್ದರೆ, ಮುಂದೆ ಏನು ಮಾಡಬಹುದು ಜಯಂತ್ ಎನ್ನುವ ಪ್ರಶ್ನೆಯೂ ಮೂಡಿದೆ. ಪ್ರೊಮೋ ನೋಡಿ ಜನರು ಕೂಡ ಕಾಮೆಂಟ್ ಮೂಲಕ ತಮ್ಮ ಅನಿಸಿಕೆಗಳನ್ನು ತಿಳಿಸುತ್ತಿದ್ದಾರೆ.
ಚಿನ್ನುಮರಿ ಬಾಳಿಗೆ ಬೆಳಕಾಗ್ತಾನಾ ಗೆಳೆಯ ವಿಶ್ವ? ಸೈಕೋ ಜಯಂತ್‌ಗೆ ಕಾದಿದೆ ಮಾರಿಹಬ್ಬ!
ಈಗಾಗಲೇ ಸೀರಿಯಲ್ ಕಥೆ ನಿಮಗೆ ಗೊತ್ತಿದ್ದರೆ, ಜಾಹ್ನವಿಗೆ ಏನು ಆಗಿದೆ ಅನ್ನೋದು ಗೊತ್ತಿರುತ್ತೆ. ತನ್ನ ಅಜ್ಜಿಯ ಕೋಮಾಕ್ಕೆ ಹೋಗೋದಕ್ಕೆ ಜಯಂತ್ ಕಾರಣ ಅನ್ನೋದನ್ನು ತಿಳಿದ ಜಾಹ್ನವಿ, ಗಂಡನ ಸೈಕೋ ಅವತಾರಕ್ಕೆ ಹೆದರಿ ನರ್ವ್ಸ್ ಬ್ರೇಕ್ ಡೌನ್ (nervous breakdown) ಆಗಿ, ಆಸ್ಪತ್ರೆಗೆ ದಾಖಲಾಗಿದ್ದಳು, ಆಕೆಯ ಮಗು ಹೊಟ್ಟೆಯಲ್ಲಿಯೇ ಸಾವನ್ನಪ್ಪಿತ್ತು. ಇದರಿಂದ ಜಾಹ್ನವಿ ತುಂಬಾನೆ ನೊಂದಿದ್ದಾಳೆ. ಇದೀಗ ರಿಲೀಸ್ ಆಗಿರುವ ಪ್ರೊಮೋದಲ್ಲಿ ತೋರಿಸಿರುವಂತೆ, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಬಂದಿರುವ ಜಾನು ತುಂಬಾನೆ ಡಿಸ್ಟರ್ಬ್ ಆಗಿರುತ್ತಾಳೆ, ಜಾಹ್ನವಿಯನ್ನು ಮಾತನಾಡಿಸಲು ಬಳಿ ಬರುವ ಜಯಂತ್, ಚಿನ್ನು ಮರಿ ಎಂದು ಕರೆಯುವಾಗ, ಕೋಪಗೊಳ್ಳುವ ಜಾನು ಚಿನ್ನುಮರಿ ಅಂತ ಕರೆಯೋ ಯಾವ ಅರ್ಹತೆನೂ ನಿಮಗಿಲ್ಲ, ಇನ್ನು ಮುಂದೆ ಹಾಗೆ ಕರೆಯಬೇಡಿ ಎನ್ನುತ್ತಾಳೆ. ನನ್ನ ಮಗುನ ಕಳೆದುಕೊಂಡು ನಾನು ಹೇಗೆ ನಾರ್ಮಲ್ ಆಗಿರ್ಲಿ, ನೀವು ಸರಿಯಾಗಿ ಇದ್ದಿದ್ರೆ ಯಾಕ್ರೀ ಹೀಗೆಲ್ಲಾ ಆಗ್ತಿತ್ತು, ಹತ್ರ ಬರ್ಬೇಡಿ ಮುಟ್ಟಬೇಡಿ. ಇನ್ನು ಮೇಲೆ ನಮ್ಮಿಬ್ಬರ ಮಧ್ಯೆ ಯಾವುದೇ ಮಾತುಕತೆ ಇಲ್ಲ, ಇಲ್ಲಿಗೆ ಎಲ್ಲಾ ಮುಗಿದು ಹೋಯ್ತು ಎಂದು ಕಡ್ಡಿ ತುಂಡು ಮಾಡಿದ ಹಾಗೆ ಉತ್ತರಿಸುತ್ತಾಳೆ ಜಾಹ್ನವಿ.
ಮತ್ತೊಮ್ಮೆ ಸೈಕೋ ಜಯಂತನ ಸೈಕೋ ನಟನೆಗೆ ವೀಕ್ಷಕರು ಫಿದಾ .... ಕಿಡಿ ಕಾರುತ್ತಲೇ ಅಭಿನಯಕ್ಕೆ ಮೆಚ್ಚುಗೆ!
ಜಾಹ್ನವಿಯ ಈ ಹೊಸ ಅವತಾರ ನೋಡಿ ವೀಕ್ಷಕರು ಫುಲ್ ಖುಷಿಯಾಗಿದ್ದಾರೆ. ಈ ವಾರದ ಕಿಚ್ಚನ ಚಪ್ಪಾಳೆ ನಮ್ಮ ಜಾನುಗೆ , ಚಿನ್ನು ಮರಿ ಜಾನ್ವಿಗೆ ಬರಲೇ ಲೈಕ್, ಹೊಡಿರಿ ಚಪ್ಪಾಳೆ , ಜಯಂತ್ full confused ಚಿನ್ನು ಮರಿ ಯಾಕೆ ನನ್ ತರ ಆಡ್ತಿದಳೆ ಅಂತ, ಚಿನ್ನುಮರಿ ನಾಗವಲ್ಲಿಯಾಗಿ ಬದಲಾಗೋದು ನೋಡಿ ಜನ್ರೆ , ಸೂಪರ್ ಜಾನ್ವಿ ಮರಿ ಇನ್ಮೇಲೆ ಧಾರವಾಹಿ ಸೂಪರ್ ಆಗಿರುತ್ತೆ ಎಂದು ಕಾಮೆಂಟ್ ಮಾಡಿದ್ದಾರೆ. ಅಷ್ಟೇ ಅಲ್ಲ ಇನ್ನೂ ಕೆಲವರು ಅಯ್ಯೋ ಇದೇ ಕೋಪಕ್ಕೆ ಸೈಕೋ ಚಿನ್ನು ಮರೀನಾ ಏನಾದ್ರು ಮಾಡ್ಬಿಟ್ರೆ ? ನೀರಿನ ಟ್ಯಾಂಕ್ ಗೇ ಎತ್ತಿ ಬಿಸಾಕೋ ಮೊದ್ಲು ಬೇಗ ಎಸ್ಕೇಪ್ ಅಗು ಚಿನ್ನು ಮರಿ ಎಂದಿದ್ದಾರೆ. ಅಲ್ಲದೇ ಇನ್ನು ಸ್ಟ್ರಾಂಗ್ ಆಗು ಜಾನು ಆ ಜಯಂತ್ ನ ಕಣ್ಣೀರಿಗೆ ಕರಗಬೇಡಿ ಎಂದು ಸಹ ಕಾಮೆಂಟ್ ಮಾಡಿದ್ದಾರೆ.
ಲಕ್ಷ್ಮೀ ನಿವಾಸ ಧಾರಾವಾಹಿ ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದು, ಇದು ಲಕ್ಷ್ಮೀ ಶ್ರೀನಿವಾಸರ ಕೂಡು ಕುಟುಂಬದ ಕಥೆಯಾಗಿದೆ. ಲಕ್ಷ್ಮೀಯ ಎಲ್ಲಾ ಮಕ್ಕಳ ಜೀವನದ ಕಥೆ ಇದು. ಈ ಧಾರಾವಾಹಿಯಲ್ಲಿ ನಟಿ ಶ್ವೇತಾ, ಚಂದನ ಅನಂತಕೃಷ್ಣ (Chandana Anantakrishna), ದಿಶಾ ಮದನ್, ಅಶೋಕ್ ಜಂಬೆ, ಅಜಯ್ ರಾಜ್, ಮಧು ಹೆಗಡೆ, ಲಕ್ಷ್ಮೀ ಹೆಗಡೆ, ದೀಪಕ್ ಸುಬ್ರಹ್ಮಣ್ಯ ಮೊದಲಾದ ಘಟಾನುಘಟಿ ನಟರು ಅಭಿನಯಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.