
ಕಳೆದ ಎರಡ್ಮೂರು ವಾರಗಳಿಂದ ನಂಬರ್ 1 ಟಿಆರ್‌ಪಿ ಪಡೆದುಕೊಳ್ಳುತ್ತಿರುವ ಧಾರಾವಾಹಿ ಶ್ರಾವಣಿ ಸುಬ್ರಮಣ್ಯ ಸಂಚಿಕೆಯಿಂದ ಸಂಚಿಕೆ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಸುಬ್ಬು ತನ್ನ ಗಂಡನೆಂದು ಹೇಳಿರುವ ಶ್ರಾವಣಿಗೆ ಪ್ರತಿದಿನವು ಹೊಸ ಸವಾಲುಗಳು ಎದುರಾಗುತ್ತಿವೆ. ಶ್ರಾವಣಿಯಿಂದ ತನ್ನ ಮದುನೆ ಮುರಿದು ಬಿತ್ತು ಎಂದು ಮುನಿಸಿಕೊಂಡಿದ್ದ ವರಲಕ್ಷ್ಮೀ ಈಗ ಕೂಲ್ ಆಗಿದ್ದಾಳೆ. ತನ್ನಿಂದ ನಿಂತಿದ್ದ ವರದ-ವರಲಕ್ಷ್ಮೀ ಮದುವೆಯನ್ನು ಶ್ರಾವಣಿಯೇ ಮುಂದೆ ನಿಂತು ಮಾಡಿಸಿದ್ದಾಳೆ. ಮದುವೆ ಬಳಿಕ ಗೆಳತಿ ಶ್ರಾವಣಿಯನ್ನು ಅತ್ತಿಗೆ ಎಂದು ವರಲಕ್ಷ್ಮೀ ಒಪ್ಪಿಕೊಂಡಿದ್ದಾಳೆ. ಇತ್ತ ಸುಬ್ಬು ಹಿರಿಯ ಅಕ್ಕ ಧನಲಕ್ಷ್ಮೀ ಮತ್ತು ತಾಯಿ ವಿಶಾಲಕ್ಷಿ ಕೋಪವೂ ಸ್ವಲ್ಪ ಕಡಿಮೆಯಾಗಿದೆ. ಈ ಎಲ್ಲದರ ನಡುವೆ ಕಾಂತಮ್ಮ ಮತ್ತು ಸುಂದರ ಇಬ್ಬರು ಶ್ರಾವಣಿಯನ್ನು ಕುಟುಕುವ ಕೆಲಸ ಮುಂದುವರಿಸಿದ್ದಾರೆ. ಇತ್ತ ಮಾವ ಪದ್ಮನಾಭ್ ಮೊದಲಿನಿಂದಲೂ ಸೊಸೆ ಪರವಾಗಿಯೇ ನಿಂತಿದ್ದಾನೆ.
ಇದೀಗ ಶ್ರಾವಣಿ-ಸುಬ್ರಮಣ್ಯ ಧಾರಾವಾಹಿಯಲ್ಲಿ ಶಿವರಾತ್ರಿಯ ಸಂಭ್ರಮ ಮನೆ ಮಾಡಿದೆ. ಈ ಸಂಭ್ರಮದಲ್ಲಿಯೇ ಸುಬ್ಬುಗೆ ಶ್ರಾವಣಿಯಿಂದ ಒಲವಿನ ಉಡುಗೊರೆ ಸಿಕ್ಕಿದೆ. ಅದು ಎಲ್ಲರ ಮುಂದೆಯೇ ಸುಬ್ಬುಗೆ ಶ್ರಾವಣಿ ಸಿಹಿ ಮುತ್ತೊಂದದನ್ನು ನೀಡಿದ್ದಾಳೆ. ಇದನ್ನು ನೋಡಿ ವಿಶಾಲಕ್ಷಿ ಶಾಕ್ ಆದ್ರೆ, ಪದ್ಮನಾಭ್ ಫುಲ್ ಖುಷಿಯಾಗಿದ್ದಾನೆ. ಸುಬ್ಬುಗೆ ಶ್ರಾವಣಿ ಮುತ್ತು ನೀಡುವ ದೃಶ್ಯವನ್ನು ಇಂದಿನ ಪ್ರೋಮೋದಲ್ಲಿ ತೋರಿಸಲಾಗಿದೆ.
ನಾವು ಸಹ ಶಿವರಾತ್ರಿ ಆಚರಣೆ ಮಾಡೋಣವಾ ಎಂದು ಮಾವನಿಗೆ ಶ್ರಾವಣಿ ಕೇಳುತ್ತಾಳೆ. ಹಾಗೆ ನೈವೇದ್ಯಕ್ಕೆ ಸಿಹಿ ಮಾಡೋಣ್ವಾ ಅಂತಾನೂ ಕೇಳುತ್ತಾಳೆ. ನಂತರ ಮಾವ-ಸೊಸೆ ಜೊತೆಯಾಗಿ ನೈವೇದ್ಯ ತಯಾರಿಸುತ್ತಾರೆ. ಪೂಜೆ ಸಮಯದಲ್ಲಿಯೂ ಶ್ರಾವಣಿಯೇ ಆರತಿ ಮಾಡಲಿ ಎಂದು ಪದ್ಮನಾಭ್ ಹೇಳುತ್ತಾನೆ. ಮಾವನ ಸೂಚನೆಯಂತೆಯೇ ಶ್ರಾವಣಿಯೇ ಪೂಜೆ ನೆರವೇರಿಸಿ, ಆರತಿ ಮಾಡುತ್ತಾಳೆ. ಆಗ ಎಲ್ಲರಿಗೂ ಪ್ರಸಾದ ಕೊಡಬೇಕು. ನಾನು ತೆಗೆದುಕೊಂಡು ಬರುತ್ತೇನೆ ಎಂದು ಹೇಳಿ ಪದ್ಮನಾಭ್ ಏಳುತ್ತಾನೆ. ಆದ್ರೆ ಶ್ರಾವಣಿ, ನೀವು ಕುಳಿತುಕೊಳ್ಳಿ, ನಾನೇ ಪ್ರಸಾದ ತರುವೆ ಎಂದು ಶ್ರಾವಣಿ ಒಳ ಹೋಗುತ್ತಾಳೆ.
ಇದನ್ನೂ ಓದಿ: ಶ್ರಾವಣಿ ಸುಬ್ರಮಣ್ಯ ಸಿನಿಮಾ ಸ್ಟೈಲಲ್ಲಿ ಸೇಡು: ಯುವಕನಿಗೆ ಬರೋಬರಿ ದಂಡ ವಿಧಿಸಿದ ಕೋರ್ಟ್
ಶ್ರಾವಣಿ ಒಳಗೆ ಹೋಗುವ ಸಂದರ್ಭದಲ್ಲಿ ದಿಢೀರ್ ಅಂತ ಕರೆಂಟ್ ಹೋಗುತ್ತದೆ. ಹಾಸಿಗೆಗೆ ಶ್ರಾವಣಿಗೆ ಕಾಲು ತಾಗಿದ್ದರಿಂದ ಎಡವಿ ಸುಬ್ಬು ಮೇಲೆ ಬೀಳುತ್ತಾಳೆ. ಆಗ ಸುಬ್ಬುವಿನ ಕೆನ್ನೆಗೆ ಶ್ರಾವಣಿ ತುಟಿ ತಾಗುತ್ತದೆ. ಶ್ರಾವಣಿಯಿಂದ ಮುತ್ತು ಸಿಗುತ್ತಿದ್ದಂತೆ ಒಂದು ಕ್ಷಣ ಸುಬ್ಬು ಸಹ ದಿಗ್ಬ್ರಮೆಗೊಳ್ಳುತ್ತಾನೆ. ಮಗನಿಗೆ ಸೊಸೆ ಮುತ್ತು ಕೊಟ್ಟಿರೋದನ್ನು ನೋಡಿ ವಿಶಾಲಕ್ಷಿಯೂ ಶಾಕ್ ಆಗಿದ್ದಾಳೆ.
ಶ್ರಾವಣಿ ಸುಬ್ರಮಣ್ಯ ಸೀರಿಯಲ್ ಪ್ರೋಮೋ ನೋಡಿದ ನೆಟ್ಟಿಗರು, ಇದು ಬೆಸ್ಕಾಂ ಕೃಪೆ ಅಂತ ಮಾತನಾಡಿಕೊಳ್ಳುತ್ತಿದ್ದಾರೆ. ಭಾನುವಾರ ಭಾರತ ಮತ್ತು ಪಾಕಿಸ್ತಾನ ಪಂದ್ಯದ ವೇಳೆ ಬೆಂಗಳೂರು ಸೇರಿದಂತೆ ಬೆಸ್ಕಾಂ ವ್ಯಾಪ್ತಿಯಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಜನರು ಟ್ವೀಟ್ ಮಾಡಿ, ಇಂದು IndVsPak ಪಂದ್ಯವಿದೆ ಎಂದು ಬರೆದು ಬೆಸ್ಕಾಂಗೆ ಟ್ಯಾಗ್ ಮಾಡಿದ್ದರು. ಕೆಲವರು ಪ್ರಮುಖವಾಗಿರುವ ದಿನಗಳಲ್ಲಿ ಕರೆಂಟ್ ಹೋಗುತ್ತೆ ಅಂದಿದ್ದರು. ಇದೀಗ ಶ್ರಾವಣಿ ಸುಬ್ರಮಣ್ಯ ಧಾರಾವಾಹಿಯಲ್ಲಿಯೂ ಪೂಜೆ ವೇಳೆ ಕರೆಂಟ್ ಹೋಗಿದ್ದಕ್ಕೆ ಬೆಸ್ಕಾಂ ಕಾರಣ ಎಂದು ವೀಕ್ಷಕರು ತಮಾಷೆ ಮಾಡಿದ್ದಾರೆ. ಕರೆಂಟ್ ಹೋಗಿದ್ದರಿಂದಲೇ ಸುಬ್ಬುಗೆ ಸಿಹಿಯಾದ ಮುತ್ತು ಸಿಕ್ಕಿದೆ. ಹಾಗಾಗಿ ಬೆಸ್ಕಾಂಗೆ ಥ್ಯಾಂಕ್ಸ್ ಹೇಳಬೇಕು ಎಂದು ವೀಕ್ಷಕರು ಮಾತನಾಡಿಕೊಳ್ಳುತ್ತಿದ್ದಾರೆ. ಬೆಸ್ಕಾಂ ವಿದ್ಯುತ್ ಕಡಿತಗೊಳಿಸಿದ್ದು ಸುಬ್ಬುಗೆ ಲಾಭವಾಗಿದೆ.
ಇದನ್ನೂ ಓದಿ: ನನ್ನ ಮನಸ್ಸಲ್ಲಿರೋದು ನೀವೇ ಮೇಡಂ! ಸುಬ್ಬು, ಶ್ರಾವಣಿಗೆ ಹೇಳಿರುವ ಈ ಮಾತು ಯಾಕೋ ಮಿಸ್ ಹೊಡೀತಿದ್ಯಲ್ಲಾ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.