Lakshmi Nivasa Serial: ದಿಶಾ ಮದನ್ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್. ಖಾಸಗಿ ಮತ್ತು ವೃತ್ತಿ ಜೀವನದ ವಿಷಯಗಳನ್ನು ಸೋಶಿಯಲ್ ಮೀಡಿಯಾ ಮೂಲಕವೇ ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಿರುತ್ತಾರೆ. ದಿಶಾ ಮದನ್ ಒಳ್ಳೆಯ ಕಲಾವಿದೆ ಅನ್ನೋದು ಎಲ್ಲರಿಗೂ ಗೊತ್ತು.
ರಾತ್ರಿ ಎಂಟು ಗಂಟೆ ಆಗುತ್ತಿದ್ದಂತೆ ಜನರು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗೋ ಲಕ್ಷ್ಮಿ ನಿವಾಸ ಧಾರಾವಾಹಿ (Lakshmi Nivasa Serial) ನೋಡಿಕೊಳ್ಳಲು ಕುಳಿತುಕೊಳ್ಳುತ್ತಾರೆ. ಅಷ್ಟರಮಟ್ಟಿಗೆ ಲಕ್ಷ್ಮಿ ನಿವಾಸ ಧಾರಾವಾಹಿ ಚೆನ್ನಾಗಿ ಮೂಡಿ ಬರುತ್ತಿದೆ. ಎಲ್ಲಾ ಧಾರಾವಾಹಿಗಳು 30 ನಿಮಿಷ ಪ್ರಸಾರವಾದ್ರೆ, ಲಕ್ಷ್ಮಿ ನಿವಾಸ ಮಾತ್ರ ಬರೋಬ್ಬರಿ ಒಂದು ಗಂಟೆ ಅಂದ್ರೆ ಸೋಮವಾರದಿಂದ ಶುಕ್ರವಾರ ರಾತ್ರಿ 8 ರಿಂದ 9ರವರೆಗೆ ಪ್ರಸಾರ ಆಗುತ್ತದೆ. ನಟಿ ದಿಶಾ ಮದನ್ ಸಹ ಲಕ್ಷ್ಮಿ ನಿವಾಸ ಧಾರಾವಾಹಿಯಲ್ಲಿ ಭಾವನಾ ಪಾತ್ರದಲ್ಲಿ (Bhavana Role)ಳ್ಳುತ್ತಿದ್ದಾರೆ. ಸೌಮ್ಯ ಸ್ವಭಾವ, ತಾನು ಆಯ್ತು ತನ್ನ ಕೆಲಸ ಅಂತಿರೋ ಮುಗ್ದ ಪಾತ್ರದಲ್ಲಿ ಭಾವನಾ ಕಾಣಿಸಿಕೊಂಡಿದ್ದಾರೆ. ಆದ್ರೆ ನಿಜ ಜೀವನದಲ್ಲಿ ದಿಶಾ ಮದನ್ ಫುಲ್ ಡಿಫರೆಂಟ್. ಇದೀಗ ಅಭಿಮಾನಿಗಳ ಆಸೆಯನ್ನು ದಿಶಾ ಮದನ್ ಪೂರೈಸಿದ್ದಾರೆ.
ದಿಶಾ ಮದನ್ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್. ಖಾಸಗಿ ಮತ್ತು ವೃತ್ತಿ ಜೀವನದ ವಿಷಯಗಳನ್ನು ಸೋಶಿಯಲ್ ಮೀಡಿಯಾ ಮೂಲಕವೇ ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಿರುತ್ತಾರೆ. ದಿಶಾ ಮದನ್ ಒಳ್ಳೆಯ ಕಲಾವಿದೆ ಅನ್ನೋದು ಎಲ್ಲರಿಗೂ ಗೊತ್ತು. ಇದರ ಜೊತೆಯಲ್ಲಿ ನೃತ್ಯಗಾರ್ತಿಯೂ ಹೌದು. ಆಗಾಗ ಡ್ಯಾನ್ಸ್ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ.
ಏನ್ ಸಣ್ಣ ಆಗ್ಬೇಕು ಅಂತ ಜಿಮ್ ಮಾಡ್ತಿದ್ಯಾ ಅಕ್ಕಾ?; 'ಲಕ್ಷ್ಮಿ ನಿವಾಸ' ನೀಲು ಕಾಲೆಳೆದ ನೆಟ್ಟಿಗರು
ಈಡೇರಿತು ಅಭಿಮಾನಿಗಳ ಆಸೆ
ಧಾರಾವಾಹಿಯಲ್ಲಿ ಭಾವನಾಗೆ ಸಿದ್ದೇಗೌಡರು ಪೇರ್ ಆಗಿದ್ದಾರೆ. ಆದ್ರೆ ಇದುವರೆಗೂ ಸಿದ್ದೇಗೌಡರು ಮತ್ತು ಭಾವನಾ ನಡುವೆ ರೊಮ್ಯಾಂಟಿಕ್ ಸೀನ್ ಬಂದಿಲ್ಲ. ಸಿದ್ದೇಗೌಡರನ್ನ ಕಂಡ್ರೆ ಭಾವನಾ ಸಿಡಿಯುತ್ತಾರೆ. ಮದುವೆ ಎಲ್ಲಾ ಬೇಡ ಎಂದು ನಿರ್ಧರಿಸಿರುವ ಭಾವನಾ, ಮಗಳಂತಿರೋ ಖುಷಿ ಜೊತೆ ಮುಂದಿನ ಜೀವನ ಕಳೆಯಲು ನಿರ್ಧರಿಸಿದ್ದಾರೆ. ಆದರೆ ಸಿದ್ದೇಗೌಡರಿಗೆ ಮಾತ್ರ ಭಾವನಾ ಮೇಲೆ ಸಿಕ್ಕಾಪಟ್ಟೆ ಲವ್ ಆಗಿದೆ. ಇತ್ತ ಸಿದ್ದೇಗೌಡರಿಗೆ ಮನೆಯಲ್ಲಿ ಮದುವೆ ನಿಶ್ಚಯ ಮಾಡಿದ್ದಾರೆ. ಧಾರಾವಾಹಿಯ ಬ್ಯುಸಿ ನಡುವೆ ಭಾವನಾ ಅಭಿಮಾನಿಗಳ ಆಸೆಯನ್ನು ಈಡೇರಿಸಿದ್ದಾರೆ.
ಗೌಡರ ಜೊತೆ ಹೆಜ್ಜೆ ಹಾಕಿದ ಭಾವನಾ
ಅಭಿಮಾನಿಗಳು ರೀಲ್ಸ್‌ನಲ್ಲಿ ಸಿದ್ದೇಗೌಡರ ಜೊತೆ ಬನ್ನಿ ಎಂದು ಕಮೆಂಟ್ ಮಾಡುತ್ತಿದ್ದಾರೆ. ಅಭಿಮಾನಿಗಳ ಒತ್ತಾಸೆಯಂತೆ ಭಾವನಾ ಮತ್ತು ಸಿದ್ದೇಗೌಡರು ಹಾಗೂ ಜಾಹ್ನವಿ ಮತ್ತು ಜಯಂತ್ ಪುಷ್ಪಾ ಸಿನಿಮಾದ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಇದೀಗ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಭಾವನಾ ಮತ್ತು ಸಿದ್ದೇಗೌಡರು ಜೊತೆಯಾಗಿ ಹೆಜ್ಜೆ ಹಾಕಿರೋದನ್ನು ಕಂಡು ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಡಬಲ್ ಜೋಡಿಯ ಡಾನ್ಸ್ ಕಂಡು ಅಭಿಮಾನಿಗಳು ಡಬಲ್ ಖುಷಿಯಲ್ಲಿದ್ದಾರೆ.
ಜಯಂತ್ ಬಂಗಾರದ ಪಂಜರದಿಂದ ಹೊರ ಬಂದ ಚಿನ್ನುಮರಿ; ಹಿಂದಿರುಗಿ ಬರ್ತಾಳಾ ಜಾಹ್ನವಿ?
ಅಭಿಮಾನಿಗಳು ಹೇಳಿದ್ದೇನು?
ವಿಡಿಯೋ ನೋಡಿದ ಅಭಿಮಾನಿಗಳು, ನಾಲ್ವರನ್ನು ಜೊತೆಯಾಗಿ ನೋಡಲು ಸಂತೋಷವಾಗುತ್ತಿದೆ. ನಮಗೆ ದಿಶಾ ಅಂದ್ರೆ ಇಷ್ಟ. ನಮ್ ಗೌಡರು ಮತ್ತು ಭಾವನಾ ಜೋಡಿ ಸೂಪರ್, ಲವ್ ಯು. ಭಾವನಾ ಅಮ್ಮ ಯಾವಗಲೂ ಸೂಪರ್ ಎಂದು ಕಮೆಂಟ್ ಮಾಡಿದ್ದಾರೆ. ಅದೇ ರೀತಿ ಜಯಂತ್ ನಟನೆ ಬಗ್ಗೆಯೂ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಅಪ್ಪಾ.. ಜಯಂತ್ ಏನ್ ಆಕ್ಟಿಂಗ್ ಗುರು ನಿಂದು. ನಿಜವಾಗಲೂ ಸಿಟ್ಟು ಬರುತ್ತದೆ. ನಿಮ್ಮ ಆಕ್ಟಿಂಗ್ ತುಂಬಾ ರಿಯಲ್ ಆಗಿರುತ್ತದೆ. ನಿಮಗೆ ದೊಡ್ಡ ನಮಸ್ಕಾರ ಕಣಪ್ಪೋ. ನೀವು ಬೆಂಕಿ ಎಂದು ಕಮೆಂಟ್ ಮಾಡಿದ್ದಾರೆ.