ಶ್ರೀರಸ್ತು ಶುಭಮಸ್ತು ಪೂರ್ಣಿ ಪತಿ, ಅಮೃತಧಾರೆ ಜೀವಾಗೆ ಹುಟ್ಟುಹಬ್ಬದ ಸಂಭ್ರಮ: ಇಂಟರೆಸ್ಟಿಂಗ್​ ಸ್ಟೋರಿ ಇಲ್ಲಿದೆ

By Suchethana D  |  First Published Jun 9, 2024, 1:25 PM IST

ಅಮೃತಧಾರೆ ಸೀರಿಯಲ್​ನಲ್ಲಿ  ಜೀವನ್​ ಪಾತ್ರಧಾರಿಯಾಗಿರುವ ಶಶಿ ಹೆಗ್ಡೆಯವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಪತ್ನಿ ಲಾವಣ್ಯ ವಿಶೇಷ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. 
 


ಅಮೃತಧಾರೆಯ ನಾಯಕಿ ಭೂಮಿಕಾಳ ಸಹೋದರನಾಗಿ ಸೀರಿಯಲ್​ನಲ್ಲಿ ಮಿಂಚುತ್ತಿರುವ ಜೀವನ್ ಈ ಸೀರಿಯಲ್​ನಲ್ಲಿ ಮಹಿಮಾ ಪತಿ. ಆದರೆ ಅಸಲಿಗೆ ಇವರು ಶ್ರೀರಸ್ತು ಶುಭಮಸ್ತುವಿನಲ್ಲಿ ಅವಿಯ ಪತ್ನಿಯಾಗಿ ನಟಿಸುತ್ತಿರೋ ಪೂರ್ಣಿಯ ರಿಯಲ್​ ಪತಿ. ಹೌದು. ಇವರ ನಿಜವಾದ ಹೆಸರು ಶಶಿ ಹೆಗ್ಡೆ. ಪೂರ್ಣಿ ಅರ್ಥಾತ್​ ಲಾವಣ್ಯ ಭಾರಧ್ವಾಜ್​ ಅವರ ರಿಯಲ್​ ಪತಿ. ಅಂದಹಾಗೆ ಇಂದು ಅಂದರೆ ಜೂನ್​ 9, ಶಶಿ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಈ ಸಂದರ್ಭದಲ್ಲಿ ಜೀ ಕನ್ನಡ ವಾಹಿನಿ ಅವರಿಗೆ ವಿಶೇಷವಾಗಿ ಹುಟ್ಟುಹಬ್ಬದ ಸಂಭ್ರಮ ಹೇಳಿದರೆ,  ಲಾವಣ್ಯ ಭಾರಧ್ವಾಜ್​ ಅವರು ತಮ್ಮ ಇನ್​ಸ್ಟಾಗ್ರಾಮ್​  ಖಾತೆಯಲ್ಲಿ ನಗುವ ನಯನ ಹಾಡಿನ ಹಿನ್ನೆಲೆಯಲ್ಲಿ ವಿಡಿಯೋ ಒಂದನ್ನು ಶೇರ್​ ಮಾಡಿಕೊಂಡಿದ್ದಾರೆ. 

ಇನ್ನು ಈ ಜೋಡಿಯ ಕುರಿತು ಇಂಟರೆಸ್ಟಿಂಗ್​ ವಿಷ್ಯವೂ ಇದೆ. ಕೆಲ ದಿನಗಳ ಹಿಂದಷ್ಟೇ ಶಶಿ ಮತ್ತು ಲಾವಣ್ಯ ಅವರು ತಮ್ಮ ಎರಡನೆಯ ಮದುವೆ ವಾರ್ಷಿಕೋತ್ಸವವನ್ನು ಆಚರಿಸಿಕೊಂಡರು. ಮದುವೆಯಾದ ಮೇಲೆ ಹನಿಮೂನ್​ಗೆ ಹೋಗಲು ಸಾಧ್ಯವಾಗದಿದ್ದ ಹಿನ್ನೆಲೆಯಲ್ಲಿ ಇದೀಗ ಆ ಆಸೆಯನ್ನು ಜೋಡಿ ಮನಾಲಿಗೆ ಹೋಗಿ ತೀರಿಸಿಕೊಂಡಿದೆ. ಇದಾಗಲೇ ದಂಪತಿ ಮನಾಲಿಯ ಹಲವಾರು ಸ್ಥಳಗಳ ವಿಡಿಯೋಗಳನ್ನು ಶೇರ್​ ಮಾಡಿಕೊಂಡಿದ್ದಾರೆ. 

Tap to resize

Latest Videos

ಕೈತುಂಬಾ ಬಳೆತೊಟ್ಟು ಬಳೆಗಾರನಿಗೆ ಅಮೃತಧಾರೆ ಭೂಮಿಕಾ ಕೊಟ್ಟಳು ಈ ಸಂದೇಶ- ಸೂಪರ್​ ಎಂದ ಫ್ಯಾನ್ಸ್

ಅಷ್ಟಕ್ಕೂ ಈ ಜೋಡಿಯ ಮದುವೆ ಕೂಡ ತುಂಬಾ ಇಂಟರೆಸ್ಟಿಂಗ್​ ಆಗಿದೆ. ಇವರಿಬ್ಬರ ಲವ್ ಸ್ಟೋರಿ ಸ್ಟಾರ್ಟ್ ಆಗಿದ್ದೇ ಸೀರಿಯಲ್ ಸೆಟ್ ನಲ್ಲಿ (serial set). ಶಶಿ ಮತ್ತು ಲಾವಣ್ಯ ಇಬ್ಬರು ರಾಜಾ ರಾಣಿ ಸೀರಿಯಲ್​ನಲ್ಲಿ ನಟಿಸುತ್ತಿದ್ದರು. ಈ ಸೀರಿಯಲ್ ನಲ್ಲಿ ಇಬ್ಬರು ಅಣ್ಣ - ತಂಗಿಯಾಗಿ ನಟಿಸಿದ್ದರು. ಲಾವಣ್ಯ ಅವರು ಶಶಿ ಅವರನ್ನು ಬ್ರೋ ಎಂದೇ ಕರೆಯುತ್ತಿದ್ದರು. ‘ರಾಜಾ ರಾಣಿ’ ಮೂಲಕವೇ ಶಶಿ ಹೆಗ್ಡೆ ಮತ್ತು ಲಾವಣ್ಯ ಅವರಿಗೆ ಪರಿಚಯವಾಯಿತು. ಪರಿಚಯ ಸ್ನೇಹಕ್ಕೆ ತಿರುಗಿತು. ಆತ್ಮೀಯ ಸ್ನೇಹಿತರಾಗಿದ್ದ ಶಶಿ ಹೆಗ್ಡೆ ಮತ್ತು ಲಾವಣ್ಯ ಮಧ್ಯೆ ಪ್ರೀತಿ ಚಿಗುರಿತು. ವರ್ಷಗಳಿಂದ ಪ್ರೀತಿಸುತ್ತಿದ್ದ ಶಶಿ ಹೆಗ್ಡೆ ಮತ್ತು ಲಾವಣ್ಯ ಕುಟುಂಬಸ್ಥರನ್ನು ಒಪ್ಪಿಸಿ ಮದ್ವೆನೂ ಆದ್ರೂ. 

ಮದುವೆಯ ಬಳಿಕದ ಫಸ್ಟ್​ ನೈಟ್​ ಲವ್​ ಸ್ಟೋರಿಯನ್ನು ಜೋಡಿ ನಂ.1ನಲ್ಲಿ ಈ ಜೋಡಿ ಶೇರ್​ ಮಾಡಿಕೊಂಡಿತ್ತು.  ಫಸ್ಟ್ ನೈಟ್‌ನಲ್ಲಿ ಈಕೆಯ  ಕಸಿನ್ಸ್  ನನ್ನನ್ನು ಅಡ್ಡಗಟ್ಟಿ ಒಳಗೆ ಹೆಂಡತಿಯನ್ನ ಬಿಡಬೇಕೆಂದರೆ ಒಬ್ಬೊಬ್ಬರಿಗೆ 4 ಸಾವಿರ ಕೊಡಬೇಕು ಅಂತ ಕೇಳಿದ್ದರು,  ಆಮೇಲೆ ಸೆಟಲ್‌ಮೆಂಟ್ ಮಾಡಿಕೊಂಡಿದ್ದರು. ನಾನು ಒಳಗೆ ಹೋದ್ಮೇಲೆ ಅಲ್ಲಿ ಬೆಡ್‌ ಬದಲು ಥರ್ಮೊಕಾಲ್ ಬಬಲ್ಸ್ ಹಾಕಿದ್ದರು. ಕೂತಾಗ ಬಬಲ್ಸ್ ಹಾರಿಬಿಡ್ತು. ಮಧ್ಯರಾತ್ರಿ 3 ಗಂಟೆವರೆಗೂ ಅದನ್ನೆಲ್ಲಾ ಕ್ಲೀನ್ ಮಾಡ್ತಿದ್ವಿ ಎಂದು ನೆನಪಿಸಿಕೊಂಡಿದ್ದರು.  ಅದೇ ರೀತಿ  ಹನಿಮೂನ್‌ಗೆ ಮಾಲ್ದೀವ್ಸ್‌ ಹೋಗುವ ಕನಸನ್ನು ಇನ್ನೂ ಪತಿ ನೆರವೇರಿಸಿಲ್ಲ ಎಂದು ಲಾವಣ್ಯ ವೇದಿಕೆಯ ಮೇಲೆ  ಬೇಸರ ವ್ಯಕ್ತಪಡಿಸಿದ್ದರು. ಇದೀಗ ಮನಾಲಿಗೆ ಹೋಗಿ ಬರುವ ಮೂಲಕ ಸ್ವಲ್ಪ ಮಟ್ಟಿನ ಆಸೆಯನ್ನು ಈಡೇರಿಸಿಕೊಂಡಿದ್ದಾರೆ. 

ಹನಿಮೂನ್​ಗೆ ಹೋಗಲು ಆಗಿಲ್ವಾ? ಇಲ್ಲಿಂದ್ಲೇ ನೋಡಿ ಮನಾಲಿ ಸಿಸ್ಸು ವಾಟರ್​ಫಾಲ್ಸ್​ ಅಂತಿದೆ ಈ ತಾರಾ ಜೋಡಿ!

 

click me!